ಡಾರ್ಲಿಂಗ್ ಪ್ರಭಾಸ್ ಸಕ್ಸಸ್ ಹಿಂದಿರೋ ಶಕ್ತಿ, ದೈವ ನಮ್ಮ ಕರುನಾಡಿನ ಕಟೀಲು ದುರ್ಗಾ ಪರಮೇಶ್ವರಿ ದೇವಿ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹೌದು.. ಪ್ರಭಾಸ್ ದುರ್ಗಾ ದೇವಿಯ ಎಷ್ಟು ದೊಡ್ದ ಆರಾಧಕ..? ಅಲ್ಲಿಗೆ ಭೇಟಿ ಮಾಡಿದ ಬಳಿಕ ಆತನ ನಸೀಬು ಬದಲಾಗಿದ್ದು ಹೇಗೆ..?
ಪ್ರಭಾಸ್ ಸಕ್ಸಸ್ ಹಿಂದಿನ ಶಕ್ತಿ.. ಕಟೀಲು ದುರ್ಗಾ ಪರಮೇಶ್ವರಿ
ಸತತ ಸೋಲುಗಳಿಂದ ಪಾರಾಗೋಕೆ ಕಾರಣ ಈ ದುರ್ಗಾದೇವಿ
ಕಟೀಲು ಭೇಟಿ ಬಳಿಕ ಕಲ್ಕಿ ಬ್ಲಾಕ್ಬಸ್ಟರ್.. ಪ್ರಭಾಸ್ ಗತವೈಭವ
ಡಾರ್ಲಿಂಗ್ಗೆ ಅಮ್ಮನ ದರ್ಶನ ಮಾಡಿಸಿದ್ದೇ ನೀಲ್, ವಿಜಯ್
ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ.. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರೋ ಪವರ್ಫುಲ್ ದೇವಿಯ ಆಲಯ. ಮಂಗಳೂರಿನಿಂದ 26 ಕಿಲೋ ಮೀಟರ್ ದೂರದಲ್ಲಿರೋ ಇದು ತುಳುನಾಡಿನ ಐತಿಹಾಸಿಕ ದೇವಾಲಯಗಳಲ್ಲೊಂದು. ಸುತ್ತಲೂ ನೀರು.. ಹರಿಯುವ ನೀರಿನ ಮೇಲೆಯೇ ಆಲಯ ನಿರ್ಮಿಸಲಾಗಿದ್ದು.. ದೇವಿಯ ದರ್ಶನ ಪಡೆಯಲು ವಿಶ್ವದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಟಾಲಿವುಡ್ನ ಸೂಪರ್ ಸ್ಟಾರ್ ಪ್ರಭಾಸ್ ಕೂಡ ಇದರಿಂದ ಹೊರತಾಗಿಲ್ಲ.
ಹೌದು.. ಡಾರ್ಲಿಂಗ್ ಪ್ರಭಾಸ್ ಹಣೆಬರಹ ಬದಲಾಯಿಸಿದ್ದೇ ಈ ದೇವಿ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಬಾಹುಬಲಿ ಚಿತ್ರದ ಬಳಿಕ ಡಾರ್ಲಿಂಗ್ ನಟನೆಯ ಸಾಲು ಸಾಲು ಸಿನಿಮಾಗಳು ನೆಲ ಕಚ್ಚಿದವು. ಸಾಹೋ, ರಾಧೆ ಶ್ಯಾಮ್, ಆದಿಪುರುಷ್.. ಹೀಗೆ ನಿರೀಕ್ಷೆ ಮೂಡಿಸಿದ್ದ ಚಿತ್ರಗಳೆಲ್ಲಾ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆದವು. ಆದ್ರೆ ಯಾವಾಗ ಪ್ರಭಾಸ್ ದುರ್ಗಾ ಪರಮೇಶ್ವರಿ ಅಮ್ಮನ ದರ್ಶನ ಪಡೆದರೋ.. ಆಗ್ಲೇ ಅವ್ರ ನಸೀಬು ಕಂಪ್ಲೀಟ್ ಆಗಿ ಬದಲಾಗಿ ಹೋಯ್ತು.
ಸಲಾರ್, ಕಲ್ಕಿ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆದವು. ಫೌಜಿ, ಸ್ಪಿರಿಟ್, ಕಲ್ಕಿ-2, ಸಲಾರ್-2 ನಂತರ ಚಿತ್ರಗಳು ಸದ್ಯ ಪ್ರಭಾಸ್ ಅಕೌಂಟ್ನಲ್ಲಿವೆ. ಅಂದಹಾಗೆ ಈ ಬಾಹುಬಲಿ ಸ್ಟಾರ್ಗೆ ಕಟೀಲು ದುರ್ಗಾ ಮಾತೆಯ ದರ್ಶನ ಮಾಡಿಸಿದ್ದೇ ನಮ್ಮ ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ಅನ್ನೋದು ವಿಶೇಷ. ಎರಡು ವರ್ಷಗಳ ಹಿಂದೆ ಕಟೀಲು ದುರ್ಗಾ ದೇವಿ ದರ್ಶನ ಪಡೆದು ಹೋಗಿದ್ದ ಪ್ರಭಾಸ್ ವಿಡಿಯೋ ಈಗ ಸಖತ್ ವೈರಲ್ ಆಗ್ತಿದೆ.
ಏಪ್ರಿಲ್ನಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು.. ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಪ್ರಭಾಸ್ ಭಾಗಿಯಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಅಲ್ಲದೆ.. ಸಲಾರ್-2 ಶೂಟಿಂಗ್ಗೆ ಪ್ರಶಾಂತ್ ನೀಲ್ ಬಾಯಿಂದ ಮುಹೂರ್ತ ಕೂಡ ಫಿಕ್ಸ್ ಮಾಡಿಸಿದ ಪ್ರಭಾಸ್.. ಸದ್ಯದಲ್ಲೇ ಮತ್ತೊಮ್ಮೆ ನೀಲ್-ವಿಜಯ್ ಜೊತೆಗೂಡಿ ವಿಸಿಟ್ ಮಾಡಿದ್ರೂ ಅಚ್ಚರಿಯಿಲ್ಲ. ಒಟ್ಟಾರೆ ಕರಾವಳಿ ದೈವಶಕ್ತಿಗಳಲ್ಲಿ ತುಂಬಾ ಪವರ್ಫುಲ್ ಆಗಿರೋ ದುರ್ಗಾ ದೇವಿಯ ಕೃಪೆ ಡಾರ್ಕಿಂಗ್ ಪ್ರಭಾಸ್ ಮೇಲಿದೆ ಅನ್ನೋದು ಸುಳ್ಳಲ್ಲ.





