• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, November 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು ಉತ್ತರ ಕನ್ನಡ

ಶಿರಸಿಯಲ್ಲಿ ವಿಚಿತ್ರ ಘಟನೆ: ಬಾವಿಯಲ್ಲಿ ಆಯಿಲ್‌ ಮಿಶ್ರಿತ ನೀರು ಪತ್ತೆ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 8, 2026 - 4:36 pm
in ಉತ್ತರ ಕನ್ನಡ, ಕರ್ನಾಟಕ
0 0
0
Untitled Design 2026 11 08T163617.350

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮದ ಓಂಕಾರ ನಗರದಲ್ಲಿ ವಿಚಿತ್ರ ಹಾಗೂ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕುಡಿಯುವ ನೀರಿಗಾಗಿ ಬಳಸುವ ಬಾವಿಗಳಲ್ಲಿ ನೀರಿನ ಬದಲು ಕಪ್ಪು ಬಣ್ಣದ ತೈಲದ ಪದರ ಕಾಣಿಸಿಕೊಂಡಿದ್ದು, ಬೆಂಕಿಕಡ್ಡಿ ಗೀರಿದರೆ ನೀರು ಪೆಟ್ರೋಲ್‌ನಂತೆ ಹೊತ್ತಿ ಉರಿಯುತ್ತಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ.

ಓಂಕಾರ ನಗರದ ಸುಮಾರು 10 ಮನೆಗಳ ಬಾವಿಗಳಲ್ಲಿ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಾವಿಯ ನೀರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದು, ಡೀಸೆಲ್ ಅಥವಾ ಪೆಟ್ರೋಲ್‌ನಂತಹ ತೀವ್ರ ವಾಸನೆ ಬರುತ್ತಿದೆ. ನೀರಿನ ಮೇಲ್ಭಾಗದಲ್ಲಿ ದಪ್ಪನೆಯ ಎಣ್ಣೆಯ ಪದರ ತೇಲುತ್ತಿದೆ.

RelatedPosts

ದೇವಿರಮ್ಮ ಬೆಟ್ಟದಲ್ಲಿ ಅವಘಡ: ಹೃದಯಾಘಾತಕ್ಕೆ ಓರ್ವ ಸಾವು, ಕಂಬಿ ಮುರಿದು 20ಕ್ಕೂ ಹೆಚ್ಚು ಭಕ್ತರಿಗೆ ಗಾಯ

ಹಾಸನ ಡಿಸಿ, ಸಚಿವ ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ: ಹೆಚ್‌‌ಡಿಕೆ ಹೊಸ ಬಾಂಬ್‌‌

ಕುಟುಂಬ ಸಮೇತ ಹಾಸನಾಂಬೆ ದರ್ಶನ ಪಡೆದ ಡಿಸಿಎಂ ಡಿಕೆ ಶಿವಕುಮಾರ್‌

ಏಳು ಮಂದಿ ಹ*ತ್ಯೆ ಕೇಸ್‌: ಕೊ*ಲೆಗೂ ಮುನ್ನ ಕ್ರೈಂ ಥ್ರಿಲ್ಲರ್‌ ಸಿನಿಮಾ ನೋಡಿದ್ದ ಆರೋಪಿ

ADVERTISEMENT
ADVERTISEMENT

ಬಾವಿಗಳಲ್ಲಿನ ನೀರಿನ ಬಣ್ಣ ಮತ್ತು ವಾಸನೆಯಲ್ಲಿ ಬದಲಾವಣೆ ಕಂಡುಬಂದ ಹಿನ್ನೆಲೆ ಗ್ರಾಮಸ್ಥರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನೀರಿನಲ್ಲಿ ಕಾಗದವನ್ನು ಅದ್ದಿ ಬೆಂಕಿ ಹಚ್ಚಿದಾಗ ಅದು ಕ್ಷಣಾರ್ಧದಲ್ಲೇ ಜ್ವಾಲೆಯಾಗಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಬೆಂಕಿ ನಂದಿಸಲು ಬಳಸುವ ನೀರೇ ಬೆಂಕಿಗೆ ಆಹುತಿಯಾಗುತ್ತಿರುವ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಆರಂಭದಲ್ಲಿ ಒಂದೆರಡು ಬಾವಿಗಳಲ್ಲಿ ಕಾಣಿಸಿಕೊಂಡಿದ್ದ ಸಮಸ್ಯೆ ಬಳಿಕ ಸುತ್ತಮುತ್ತಲಿನ ಹಲವು ಮನೆಗಳ ಬಾವಿಗಳಿಗೂ ವ್ಯಾಪಿಸಿದೆ ಎನ್ನಲಾಗಿದೆ.

ಬಾವಿ ಖಾಲಿ ಮಾಡಿದರೂ ಮತ್ತೆ ಬರುತ್ತಿದೆ ಕಪ್ಪು ನೀರು

ಸ್ಥಳೀಯರು ಮೋಟಾರ್ ಬಳಸಿ ಬಾವಿಗಳಲ್ಲಿದ್ದ ನೀರನ್ನು ಸಂಪೂರ್ಣವಾಗಿ ಹೊರತೆಗೆದಿದ್ದಾರೆ. ಆದರೆ, ಕೆಲವೇ ಸಮಯದಲ್ಲಿ ಮತ್ತೆ ಒರತೆಯ ಮೂಲಕ ಕಪ್ಪು ಬಣ್ಣದ ತೈಲಮಿಶ್ರಿತ ನೀರು ಬಾವಿಗಳಿಗೆ ಹರಿದುಬರುತ್ತಿದೆ ಎಂದು ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಬಾವಿಗಳ ನೀರನ್ನು ಕುಡಿಯಲು, ಅಡುಗೆ ಮಾಡಲು ಅಥವಾ ಇತರ ಗೃಹಬಳಕೆಗೆ ಬಳಸಲು ಸಾಧ್ಯವಾಗದ ಕಾರಣ ಪರ್ಯಾಯ ನೀರಿನ ವ್ಯವಸ್ಥೆಗಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಿಡ್‌ನಿಂದ ಆಯಿಲ್ ಸೋರಿಕೆಯಾಯಿತೇ?

ಬಾವಿಗಳಲ್ಲಿ ತೈಲದಂತಹ ಪದಾರ್ಥ ಕಾಣಿಸಿಕೊಂಡಿರುವ ಹಿನ್ನೆಲೆ ವಿದ್ಯುತ್ ಗ್ರಿಡ್‌ನಿಂದ ಆಯಿಲ್ ಸೋರಿಕೆಯಾಗಿದೆಯೇ ಅಥವಾ ಸಮೀಪದ ಪೆಟ್ರೋಲ್ ಬಂಕ್‌ಗಳಿಂದ ಯಾವುದಾದರೂ ಸೋರಿಕೆ ಸಂಭವಿಸಿದೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೆ. ಆದರೆ, ಗ್ರಿಡ್‌ನಿಂದ ಯಾವುದೇ ಆಯಿಲ್ ಸೋರಿಕೆಯಾಗಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಬಾವಿಗಳಲ್ಲಿ ತೈಲದ ಅಂಶ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಭೂಮಿಯ ಒಳಭಾಗದಿಂದ ತೈಲ ಮಿಶ್ರಿತ ದ್ರವ ಬರುತ್ತಿದೆಯೇ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದಿರುವ ಯಾವುದಾದರೂ ಸೋರಿಕೆಯಿಂದ ಈ ಸಮಸ್ಯೆ ಉಂಟಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕಿದೆ.

ನೀರಿನ ಮಾದರಿ ಲ್ಯಾಬ್‌ಗೆ: ಟ್ಯಾಂಕರ್ ಮೂಲಕ ನೀರು ಪೂರೈಕೆ

ವಿಚಾರ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಈ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ತಿಳಿದುಬಂದಿದೆ ಎಂದು ವರದಿಯಾಗಿದೆ. ಅಂತಿಮ ಪ್ರಯೋಗಾಲಯ ವರದಿ ಬಂದ ಬಳಿಕ ನೀರಿನಲ್ಲಿ ಯಾವ ರೀತಿಯ ರಾಸಾಯನಿಕ ಅಥವಾ ತೈಲ ಅಂಶಗಳಿವೆ ಎಂಬುದು ಸ್ಪಷ್ಟವಾಗಲಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮಸ್ಥರಿಗೆ ಬಾವಿಗಳ ನೀರನ್ನು ಕುಡಿಯಲು ಅಥವಾ ಗೃಹಬಳಕೆಗೆ ಬಳಸಬಾರದು ಎಂದು ಸೂಚಿಸಲಾಗಿದೆ. ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು ಪಂಚಾಯಿತಿ ವ್ಯವಸ್ಥೆ ಮಾಡಿದೆ.

ನಿವಾಸಿಗಳಲ್ಲಿ ಬೆಂಕಿ ಅವಘಡದ ಭೀತಿ

ಬಾವಿಗಳ ನೀರಿನಲ್ಲೇ ಬೆಂಕಿ ಹೊತ್ತಿಕೊಳ್ಳುತ್ತಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳು ಬೆಂಕಿ ಅವಘಡ ಸಂಭವಿಸಬಹುದೆಂಬ ಆತಂಕದಲ್ಲಿದ್ದಾರೆ. ತೈಲದ ಮೂಲ ಪತ್ತೆಹಚ್ಚಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled Design 2026 11 08T165418.759

ಮಗ ಹಾಗೂ ಪ್ರೇಯಸಿ ಜೊತೆ ದೀಪಾವಳಿ ಆಚರಿಸಿದ ಹಾರ್ದಿಕ್ ಪಾಂಡ್ಯ

by ಶಾಲಿನಿ ಕೆ. ಡಿ
November 8, 2026 - 4:55 pm
0

Untitled Design 2026 11 08T163617.350

ಶಿರಸಿಯಲ್ಲಿ ವಿಚಿತ್ರ ಘಟನೆ: ಬಾವಿಯಲ್ಲಿ ಆಯಿಲ್‌ ಮಿಶ್ರಿತ ನೀರು ಪತ್ತೆ!

by ಶಾಲಿನಿ ಕೆ. ಡಿ
November 8, 2026 - 4:36 pm
0

ಏರಿಕೆ (1)

ದೇವಿರಮ್ಮ ಬೆಟ್ಟದಲ್ಲಿ ಅವಘಡ: ಹೃದಯಾಘಾತಕ್ಕೆ ಓರ್ವ ಸಾವು, ಕಂಬಿ ಮುರಿದು 20ಕ್ಕೂ ಹೆಚ್ಚು ಭಕ್ತರಿಗೆ ಗಾಯ

by ಶಾಲಿನಿ ಕೆ. ಡಿ
November 8, 2026 - 4:12 pm
0

ಏರಿಕೆ

ವೀಕೆಂಡ್‌ನಲ್ಲಿ ಗೋಲ್ಡ್‌ ಖರೀದಿಸುವವರಿಗೆ ಮತ್ತೆ ಶಾಕ್‌: ಚಿನ್ನ-ಬೆಳ್ಳಿ ಬೆಲೆ ಏರಿಕೆ

by ಶಾಲಿನಿ ಕೆ. ಡಿ
November 8, 2026 - 2:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಗುರ್ಲಾಪುರದಲ್ಲಿ (1)
    ರೈಲ್ವೆ ಕಾಮಗಾರಿ ವೇಳೆ ಮಣ್ಣು ಕುಸಿತ: ಮಣ್ಣಿನಡಿ ಸಿಲುಕಿ ಟೆಕ್ನಿಷಿಯನ್ ಸಾ*ವು
    November 6, 2026 | 0
  • Untitled Design 2026 10 28T083033.476
    ಮೀನುಗಾರಿಕಾ ಬೋಟ್‌ನಲ್ಲಿ ಭೀಕರ ದುರಂತ: ಉಸಿರುಗಟ್ಟಿ ಮೂವರು ಕಾರ್ಮಿಕರು ಸಾವು
    October 28, 2026 | 0
  • ಜ್ಞಾನೇಶ್ (8)
    ದಾಂಡೇಲಿಯಲ್ಲಿ ರಸ್ತೆ ಬದಿಯ ಕಾಡಿಗೆ ಆಕಸ್ಮಿಕ ಬೆಂಕಿ; ತಪ್ಪಿದ ಭಾರೀ ಅನಾಹುತ
    September 25, 2026 | 0
  • ಛಾವಣಿ (3)
    ವಿಷಪೂರಿತ ದ್ರವ್ಯ ಕುಡಿದು ಯುವಕ ಸಾ*ವು
    September 11, 2026 | 0
  • ಪಶ್ಚಾತ್ತಾಪ (4)
    ಹೊಲದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ; ಆಸ್ಪತ್ರೆಗೆ ದಾಖಲು
    August 31, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version