• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, November 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಭಾರತದ ಮೊಟ್ಟಮೊದಲ ‘ಸ್ವದೇಶಿ’ ಕೀಟನಾಶಕ ಬಿಡುಗಡೆ ಮಾಡಿದ ಪಿಐ ಇಂಡಸ್ಟ್ರೀಸ್!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 3, 2026 - 5:48 pm
in ದೇಶ, ವಾಣಿಜ್ಯ
0 0
0
Your paragraph text 2026 11 03T174250.217

ಬೆಂಗಳೂರು: ಖ್ಯಾತ ಲೈಫ್ ಸೈನ್ಸ್ ಸಂಸ್ಥೆಯಾದ ಪಿಐ ಇಂಡಸ್ಟ್ರೀಸ್ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಅನ್ವೇಷಿಸಿ, ಅಭಿವೃದ್ಧಿಪಡಿಸಿದ ಸ್ವದೇಶಿ ಕೀಟನಾಶಕ ಸಂಯುಕ್ತ ‘ಪಯೋಕ್ಸಾನಿಲಿಪ್ರೋಲ್’ ಅನ್ನು ಮಂಗಳವಾರ ಅಧಿಕೃತವಾಗಿ ಜಗತ್ತಿಗೆ ಪರಿಚಯಿಸಿದೆ.

ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ನಿರಂತರ ವೈಜ್ಞಾನಿಕ ಸಂಶೋಧನೆ ಹಾಗೂ ಬೃಹತ್ ಹೂಡಿಕೆಯ ಫಲವಾಗಿ ಈ ಕೀಟನಾಶಕ ರೂಪುಗೊಂಡಿದೆ. ಭಾರತ ಸರ್ಕಾರದ ಕೃಷಿ ಸಚಿವಾಲಯದ ಅಡಿಯಲ್ಲಿ ಬರುವ ‘ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ’ (ಸಿಐಬಿ&ಆರ್‌ಸಿ) ಇದಕ್ಕೆ ಅಧಿಕೃತ ಅನುಮೋದನೆ ನೀಡಿದ್ದು, ‘ಭಾರತದಲ್ಲೇ ಸಂಶೋಧಿಸಲ್ಪಟ್ಟ ಮೊದಲ ಕೀಟನಾಶಕದ ಸಕ್ರಿಯ ಘಟಕ’ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

RelatedPosts

ಆಭರಣ ಪ್ರಿಯರಿಗೆ ಶಾಕ್: ಚಿನ್ನದ ಬೆಲೆ ಮತ್ತೆ ಏರಿಕೆ, ಇಲ್ಲಿದೆ ಇಂದಿನ ದರ ವಿವರ!

ಚೀನಾ-ಪಾಕಿಸ್ತಾನ ಜೊತೆ ಅಮೆರಿಕಾ ಸ್ನೇಹ: ಭಾರತಕ್ಕೆ ಇದು ಎಚ್ಚರಿಕೆಯ ಗಂಟೆಯೇ?

ಗುಜರಾತ್‌ನಲ್ಲಿ ವಾಹನಗಳ ಮೇಲೆ ಜಾತಿ ಹೆಸರು, ಸ್ಟಿಕ್ಕರ್ ಬ್ಯಾನ್‌; ಹೊಸ ರೂಲ್ಸ್ ಜಾರಿ.!

ನೇಪಾಳದ ಅಭಿವೃದ್ಧಿಗೆ ₹15 ಸಾವಿರ ಕೋಟಿ ನೆರವು ಘೋಷಿಸಿದ ಪ್ರಧಾನಿ ಮೋದಿ

ADVERTISEMENT
ADVERTISEMENT
ಭಾರತದ ಮಣ್ಣಿಗೆ, ಭಾರತದ ವಿಜ್ಞಾನ

ಭಾರತದ ಕೃಷಿ ಪರಿಸರ ಅತ್ಯಂತ ವೈವಿಧ್ಯಮಯವಾದದ್ದು. ಇಲ್ಲಿನ ಹವಾಮಾನ ಮತ್ತು ಬೆಳೆಗಳಿಗೆ ತಕ್ಕಂತೆ ಕೀಟಗಳ ಬಾಧೆಯೂ ಬದಲಾಗುತ್ತಿರುತ್ತದೆ. ಕಳೆದ 8 ದಶಕಗಳಿಂದ ರೈತರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲ ಪಿಐ ಇಂಡಸ್ಟ್ರೀಸ್, ದೇಶದ ಕೃಷಿ ವಿಶ್ವವಿದ್ಯಾಲಯಗಳ ಜೊತೆಗೂಡಿ ಈ ಉತ್ಪನ್ನವನ್ನು ಅಭಿವೃದ್ಧಿಪಡಿಸಿದೆ.

ವಿಶ್ವದರ್ಜೆಯ ವೈಜ್ಞಾನಿಕ ಮಾನದಂಡಗಳೊಂದಿಗೆ ರೂಪುಗೊಂಡಿರುವ ಈ ಕೀಟನಾಶಕವನ್ನು, ಭಾರತದ ಹವಾಮಾನಕ್ಕೆ ತಕ್ಕಂತೆ ಕೃಷಿಭೂಮಿಯ ಪ್ರಾತ್ಯಕ್ಷಿಕೆಗಳು ಹಾಗೂ ಕಟ್ಟುನಿಟ್ಟಿನ ವೈಜ್ಞಾನಿಕ ಮೌಲ್ಯಮಾಪನಗಳಿಗೆ ಒಳಪಡಿಸಿ ತಯಾರಿಸಲಾಗಿದೆ.

ಈ ಬಗ್ಗೆ ವಿವರ ಹಂಚಿಕೊಂಡಿರುವ ಪಿಐ ಇಂಡಸ್ಟ್ರೀಸ್‌ನ ಉಪಾಧ್ಯಕ್ಷ ಹಾಗೂ ಎಂಡಿ ಮಯಾಂಕ್ ಸಿಂಘಾಲ್,
“ಭಾರತದ ಕೃಷಿ ಪದ್ಧತಿಯ ಆಳವಾದ ಅರಿವು ಮತ್ತು ವಿಶ್ವದರ್ಜೆಯ ವಿಜ್ಞಾನದ ಸಮ್ಮಿಲನದಿಂದ ಏನು ಸಾಧಿಸಬಹುದು ಎಂಬುದಕ್ಕೆ ಈ ‘ಪಯೋಕ್ಸಾನಿಲಿಪ್ರೋಲ್’ ಅತ್ಯುತ್ತಮ ಉದಾಹರಣೆ. ಭಾರತದಲ್ಲೇ ಮೂಲ ಕೃಷಿ ವಿಜ್ಞಾನವನ್ನು ಹುಟ್ಟುಹಾಕಬೇಕು ಎಂಬ ನಮ್ಮ 10 ವರ್ಷಗಳ ಹಿಂದಿನ ಕನಸು ಮತ್ತು ಧೈರ್ಯ ಇಂದು ನನಸಾಗಿದೆ. ಜಗತ್ತಿಗಾಗಿ ಭಾರತದಿಂದಲೇ ಬೌದ್ಧಿಕ ಆಸ್ತಿಯನ್ನು ಸೃಷ್ಟಿಸುತ್ತಿರುವುದು ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಚಾರ,” ಎಂದಿದ್ದಾರೆ.

“ಭಾರತೀಯ ಕೃಷಿ ವಿಜ್ಞಾನದ ವಿಕಾಸದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು,” ಎಂದು ಬಣ್ಣಿಸಿರುವ
ಪಿಐ ಇಂಡಸ್ಟ್ರೀಸ್ ಅಧ್ಯಕ್ಷ ನಾರಾಯಣ್ ಕೆ. ಶೇಷಾದ್ರಿ, “ಇಂತಹ ಅದ್ಭುತವನ್ನು ಸೃಷ್ಟಿಸಲು ದೀರ್ಘಕಾಲೀನ ಬದ್ಧತೆ ಮತ್ತು ಹೂಡಿಕೆ ಅತ್ಯಗತ್ಯ. ಜಾಗತಿಕ ಕೃಷಿಗೆ ಅನುಕೂಲವಾಗುವ ಮುಂದಿನ ಪೀಳಿಗೆಯ ಹೊಸ ಸಂಶೋಧನೆಗಳಿಗೆ ಇದು ಭದ್ರ ಬುನಾದಿಯಾಗಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಪಯೋಕ್ಸಾನಿಲಿಪ್ರೋಲ್’ ಒಂದು ಕೀಟನಾಶಕಕ್ಕಿಂತ ಹೆಚ್ಚಾಗಿ ಇದು ಕೃಷಿ ಸಂಶೋಧನೆಯಲ್ಲಿ ಭಾರತ ಸಾಧಿಸುತ್ತಿರುವ ಸ್ವಾವಲಂಬನೆಯ ಸಂಕೇತವಾಗಿದೆ.

1946ರಲ್ಲಿ ಸ್ಥಾಪನೆಯಾದ ಪಿಐ ಇಂಡಸ್ಟ್ರೀಸ್ ಜಾಗತಿಕ ಲೈಫ್-ಸೈನ್ಸ್ ಸಂಸ್ಥೆಯಾಗಿದ್ದು, 700ಕ್ಕೂ ಹೆಚ್ಚು ವಿಜ್ಞಾನಿಗಳು, 200ಕ್ಕೂ ಹೆಚ್ಚು ಪಿಎಚ್‌ಡಿ ತಜ್ಞರನ್ನು ಹೊಂದಿದೆ. ಕೃಷಿ ವಿಜ್ಞಾನ, ರಾಸಾಯನಿಕ ಹಾಗೂ ಫಾರ್ಮಾ ವಲಯದಲ್ಲಿ 260ಕ್ಕೂ ಅಧಿಕ ಪೇಟೆಂಟ್‌ಗಳನ್ನು ಸಂಸ್ಥೆ ಹೊಂದಿದ್ದು, 4,000ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥೆಯು ಭಾರತ ಮತ್ತು ಅಮೆರಿಕದಲ್ಲಿ ಅತ್ಯಾಧುನಿಕ ಆರ್‌&ಡಿ ಕೇಂದ್ರಗಳನ್ನು ಹಾಗೂ ಭಾರತ ಮತ್ತು ಇಟಲಿಯಲ್ಲಿ ವಿಶ್ವದರ್ಜೆಯ ಉತ್ಪಾದನಾ ಘಟಕಗಳನ್ನು ಹೊಂದಿದೆ. ಕೃಷಿ ರಾಸಾಯನಿಕ ಉತ್ಪಾದನೆಯಲ್ಲಿ ವಿಶ್ವದ ಅಗ್ರ 5 ಕಂಪನಿಗಳಲ್ಲಿ ಒಂದಾಗಿರುವ ‘ಪಿಐ’, 40ಕ್ಕೂ ಹೆಚ್ಚು ದೇಶಗಳ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled Design 2026 11 24T184842.951

ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರ ಬೆನ್ನಿಗೆ ನಿಂತ ನಟಿ ರಮ್ಯಾ

by ಶಾಲಿನಿ ಕೆ. ಡಿ
November 24, 2026 - 6:55 pm
0

Untitled Design 2026 11 24T184216.970

‘ಸುಂದರಿ’ ಹಾಡಿನ ಮೂಲಕ ‘ಮಿಸ್‌ಮ್ಯಾಚ್’ ಚಿತ್ರದ ಪ್ರಚಾರದ ಅಬ್ಬರ

by ಶಾಲಿನಿ ಕೆ. ಡಿ
November 24, 2026 - 6:43 pm
0

Untitled Design 2026 11 24T183320.888

‘ಈ ಮಿಡಿತಕ್ಕೆ ಸೆಳೆತಕ್ಕೆ’ ಹಾಡಿನ ಮೂಲಕ ಸಂಗೀತ ಪ್ರಿಯರ ಮನಗೆಲ್ಲುತ್ತಿರುವ ‘MR ಜಾಕ್’

by ಶಾಲಿನಿ ಕೆ. ಡಿ
November 24, 2026 - 6:37 pm
0

Untitled Design 2026 11 24T183017.751

‘ಸಮುದ್ರ ಮಂಥನ’ ಚಿತ್ರದ ಆಡಿಯೋ ಹಕ್ಕು ‘ರಿಷಬ್ ಶೆಟ್ಟಿ ಮ್ಯೂಸಿಕ್’ ತೆಕ್ಕೆಗೆ

by ಶಾಲಿನಿ ಕೆ. ಡಿ
November 24, 2026 - 6:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 24T111245.069
    ಚೀನಾ-ಪಾಕಿಸ್ತಾನ ಜೊತೆ ಅಮೆರಿಕಾ ಸ್ನೇಹ: ಭಾರತಕ್ಕೆ ಇದು ಎಚ್ಚರಿಕೆಯ ಗಂಟೆಯೇ?
    November 24, 2026 | 0
  • Untitled design 2026 11 23T184529.124
    ಗುಜರಾತ್‌ನಲ್ಲಿ ವಾಹನಗಳ ಮೇಲೆ ಜಾತಿ ಹೆಸರು, ಸ್ಟಿಕ್ಕರ್ ಬ್ಯಾನ್‌; ಹೊಸ ರೂಲ್ಸ್ ಜಾರಿ.!
    November 23, 2026 | 0
  • ನೇಪಾಳದ ಅಭಿವೃದ್ಧಿಗೆ ₹15 ಸಾವಿರ ಕೋಟಿ ನೆರವು ಘೋಷಿಸಿದ ಪ್ರಧಾನಿ ಮೋದಿ
    ನೇಪಾಳದ ಅಭಿವೃದ್ಧಿಗೆ ₹15 ಸಾವಿರ ಕೋಟಿ ನೆರವು ಘೋಷಿಸಿದ ಪ್ರಧಾನಿ ಮೋದಿ
    November 23, 2026 | 0
  • Untitled Design (89)
    2018ರ ಮಾನನಷ್ಟ ಪ್ರಕರಣ: ಯೂಟ್ಯೂಬರ್ ಧ್ರುವ್ ರಾಠೀ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ
    November 23, 2026 | 0
  • Untitled design (82)
    ಬಿಸ್ಲೆರಿ ನೀರು ಕುಡಿಯಲು ಯೋಗ್ಯ; FSSAI ಆರೋಪಕ್ಕೆ ಕಂಪನಿ ಸ್ಪಷ್ಟನೆ
    November 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version