ಹಬ್ಬದ ಸೀಸನ್ನಲ್ಲಿ ಹೊಸ ಸ್ಮಾರ್ಟ್ಫೋನ್, ಲ್ಯಾಪ್ಟಾಪ್ ಅಥವಾ ಇಯರ್ಬಡ್ಸ್ ಖರೀದಿಸುವ ಪ್ಲಾನ್ನಲ್ಲಿದ್ದೀರಾ? ಹಾಗಾದರೆ ನಿಮಗೊಂದು ಸಿಹಿಸುದ್ದಿ. ಪ್ರಸಿದ್ಧ ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್ ‘ಇನ್ಸ್ಟಾಮಾರ್ಟ್’ ತನ್ನ ವರ್ಷದ ಅತಿದೊಡ್ಡ ಸೇಲ್ ಆದ ‘ಕ್ವಿಕ್ ಇಂಡಿಯಾ ಮೂವ್ಮೆಂಟ್ 2026’ (ಕ್ಯೂಐಎಂ 2026) ಅನ್ನು ಘೋಷಿಸಿದೆ.
ಸ್ವಿಗ್ಗಿ ಮತ್ತು ಇನ್ಸ್ಟಾಮಾರ್ಟ್ ಆ್ಯಪ್ಗಳಲ್ಲಿ ಈ ಸೇಲ್ ಲೈವ್ ಆಗಿದ್ದು, ಆಪಲ್, ಸ್ಯಾಮ್ಸಂಗ್ನಂತಹ ಪ್ರೀಮಿಯಂ ಬ್ರ್ಯಾಂಡ್ಗಳಿಂದ ಹಿಡಿದು ಬಜೆಟ್ ಸ್ನೇಹಿ ಗ್ಯಾಜೆಟ್ಗಳವರೆಗೆ ಆಯ್ದ ವಸ್ತುಗಳ ಮೇಲೆ ಬರೋಬ್ಬರಿ ಶೇ. 50 ರಿಂದ 90ರಷ್ಟು ಭಾರಿ ರಿಯಾಯಿತಿ ಘೋಷಿಸಲಾಗಿದೆ. ಈ ಸೇಲ್ನಲ್ಲಿ ಲಭ್ಯವಿರುವ ಬೆಸ್ಟ್ ಡೀಲ್ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ಮಾರ್ಟ್ಫೋನ್ಗಳ ಮೇಲೆ ಬೆರಗುಗೊಳಿಸುವ ಆಫರ್
ಪ್ರೀಮಿಯಂ ಫೋನ್ ಖರೀದಿಸುವವರಿಂದ ಹಿಡಿದು ಬಜೆಟ್ ಫೋನ್ ಹುಡುಕುವವರವರೆಗೆ ಎಲ್ಲರಿಗೂ ಇಲ್ಲಿ ಆಫರ್ಗಳಿವೆ.
* ಆಪಲ್ ಐಫೋನ್ 17 ಪ್ರೊ (256 GB): ಭಾರಿ ಬೇಡಿಕೆಯ ಈ ಫೋನ್ ಈ ಸೇಲ್ನಲ್ಲಿ ಕೇವಲ 1,19,999 ರೂ.ಗೆ ಲಭ್ಯವಿದೆ.
* ಒಪ್ಪೋ K14x (4 GB RAM & 64 GB): ಇದರ ಆಫರ್ ಬೆಲೆ ಕೇವಲ 14,499 ರೂ. ಆಗಿದೆ.
* ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳು ಕೇವಲ 10,999 ರೂ.ನಿಂದ ಆರಂಭವಾಗಲಿವೆ.
* ರೆಡ್ಮಿ A7 ಪ್ರೊ (4 GB RAM & 64 GB): ಇದರ ಬೆಲೆ ಕೇವಲ 10,199 ರೂ.ನಿಂದ ಆರಂಭವಾಗಲಿದೆ.
ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಫೋನ್ ಹುಡುಕುವವರಿಗೆ ಪೊಕೊ C81x ಕೂಡ ಲಭ್ಯವಿದೆ. ಇದರ ಜೊತೆಗೆ ಒನ್ಪ್ಲಸ್, ರಿಯಲ್ಮಿ ಫೋನ್ಗಳ ಮೇಲೂ ಆಕರ್ಷಕ ಡಿಸ್ಕೌಂಟ್ ಇದೆ.
ಲ್ಯಾಪ್ಟಾಪ್ ಮತ್ತು ಮ್ಯಾಕ್ಬುಕ್ ದರದಲ್ಲೂ ಭಾರೀ ಕಡಿತ
ಕೆಲಸ, ವ್ಯಾಸಂಗ ಅಥವಾ ದೈನಂದಿನ ಬಳಕೆಗೆ ಲ್ಯಾಪ್ಟಾಪ್ ಬೇಕೆನ್ನುವವರಿಗೂ ಇಲ್ಲಿ ಭರ್ಜರಿ ಕೊಡುಗೆಗಳಿವೆ. ಟೆಕ್ ಪ್ರಿಯರ ನೆಚ್ಚಿನ ಆಪಲ್ ಮ್ಯಾಕ್ಬುಕ್ ಬೆಲೆ ಈ ಸೇಲ್ನಲ್ಲಿ ಕೇವಲ 66,900 ರೂ.ನಿಂದ ಆರಂಭವಾಗಲಿದೆ. ಇತರ ಬ್ರ್ಯಾಂಡ್ಗಳ ಲ್ಯಾಪ್ಟಾಪ್ಗಳೂ ಲಭ್ಯವಿವೆ.
ಮ್ಯೂಸಿಕ್ ಪ್ರಿಯರಿಗಾಗಿ ಇಯರ್ಬಡ್ಸ್ ಮತ್ತು ಸ್ಪೀಕರ್ಗಳು ಕೂಡ ಅತ್ಯಂತ ಕಡಿಮೆ ದರಕ್ಕೆ ಸಿಗುತ್ತಿವೆ.
* ರಿಯಲ್ಮಿ ಬಡ್ಸ್ T310: ಕೇವಲ 1,799 ರೂ.ಗೆ ಲಭ್ಯವಿದೆ.
* ಹ್ಯಾಮರ್ ಏರ್ಫ್ಲೋ ಫ್ಲೆಕ್ಸ್ ಇಯರ್ಬಡ್ಸ್: ಇದು ಬ್ಲೂಟೂತ್ 6.0 ಹೊಂದಿದ್ದು, ಬರೋಬ್ಬರಿ 80 ಗಂಟೆಗಳ ಪ್ಲೇಟೈಮ್ ನೀಡುತ್ತದೆ.
* JBL ಗೋ ಎಸೆನ್ಷಿಯಲ್ ಬ್ಲೂಟೂತ್ ಸ್ಪೀಕರ್: ವಾಟರ್ ರೆಸಿಸ್ಟೆಂಟ್ (ನೀರು ಬಿದ್ದರೂ ಹಾಳಾಗದ) ಫೀಚರ್ ಇದರಲ್ಲಿದೆ.
ಪವರ್ ಬ್ಯಾಂಕ್ ಮತ್ತು ಆಕ್ಸೆಸರೀಸ್
ನಿಮ್ಮ ಫೋನ್ಗೆ ಚಾರ್ಜಿಂಗ್ ಬ್ಯಾಕಪ್ ಬೇಕಿದ್ದರೆ, ಮ್ಯಾಗ್ಸೇಫ್ ಪವರ್ ಬ್ಯಾಂಕ್ ಕೇವಲ 999 ರೂ.ಗೆ ಲಭ್ಯವಿದೆ.
22W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವ ಆಂಬ್ರೇನ್ 10,000 mAh ಮ್ಯಾಗ್ಸೇಫ್ ವೈರ್ಲೆಸ್ ಪವರ್ ಬ್ಯಾಂಕ್ ಕೂಡ ಆಕರ್ಷಕ ಬೆಲೆಯಲ್ಲಿದೆ.
ಆಕರ್ಷಕ ಬ್ಯಾಂಕ್ ಆಫರ್
ಇನ್ಸ್ಟಾಮಾರ್ಟ್ ಕೇವಲ ಪ್ರಾಡಕ್ಟ್ಗಳ ಮೇಲಷ್ಟೇ ಅಲ್ಲದೆ, ಬ್ಯಾಂಕ್ ಕಾರ್ಡ್ಗಳ ಮೂಲಕವೂ ಡಿಸ್ಕೌಂಟ್ ನೀಡುತ್ತಿದೆ.
* ಎಚ್ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಶೇ. 10 ಡಿಸ್ಕೌಂಟ್ (5,500 ರೂ.ವರೆಗೆ) ಪಡೆಯಬಹುದು.
* ಇದರ ಜೊತೆಗೆ ಆಕ್ಸಿಸ್ ಬ್ಯಾಂಕ್ ಮೈಜ಼ೋನ್ ಕ್ರೆಡಿಟ್ ಕಾರ್ಡ್ ಮತ್ತು ವೀಸಾ ಡೆಬಿಟ್/ಪ್ಲಾಟಿನಂ ಕಾರ್ಡ್ಗಳ ಮೇಲೂ ಡಿಸ್ಕೌಂಟ್ ಇದೆ.
* ನಿಮ್ಮ ಬಳಿ ‘ಸ್ವಿಗ್ಗಿ ಎಚ್ಡಿಎಫ್ಸಿ ಕ್ರೆಡಿಟ್ ಕಾರ್ಡ್’ ಇದ್ದರೆ ಶೇ. 10ರಷ್ಟು ಕ್ಯಾಶ್ಬ್ಯಾಕ್ ಕೂಡ ಸಿಗಲಿದೆ.
ಬಿಸಿಬಿಸಿ ಊಟ ತರಿಸುವಷ್ಟೇ ವೇಗವಾಗಿ ಈಗ ನಿಮ್ಮ ನೆಚ್ಚಿನ ಗ್ಯಾಜೆಟ್ಗಳನ್ನು ಇನ್ಸ್ಟಾಮಾರ್ಟ್ ಮೂಲಕ ಕ್ಷಣಾರ್ಧದಲ್ಲಿ ಮನೆಗೇ ತರಿಸಿಕೊಳ್ಳಬಹುದು.





