• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

‘ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್’ ಆರಂಭ: ಮಾರಾಟದಲ್ಲಿ 100% ಏರಿಕೆ, ನಿಮಿಷಗಳಲ್ಲೇ ಡೆಲಿವರಿ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 9, 2026 - 4:56 pm
in ವಾಣಿಜ್ಯ
0 0
0
Untitled design 2026 10 09T165624.926

ಬೆಂಗಳೂರು: ಆನ್‌ಲೈನ್ ಶಾಪಿಂಗ್ ಪ್ರಿಯರು ಕಾತುರದಿಂದ ಕಾಯುತ್ತಿದ್ದ ‘ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2026’ ಭರ್ಜರಿಯಾಗಿ ಆರಂಭವಾಗಿದೆ. ಮಾರಾಟ ಶುರುವಾದ ಕೇವಲ 12 ಗಂಟೆಗಳಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದರೆ ಆರ್ಡರ್‌ಗಳ ಸಂಖ್ಯೆಯಲ್ಲಿ ಬರೋಬ್ಬರಿ ಶೇ. 100ರಷ್ಟು ದಾಖಲೆಯ ಏರಿಕೆ ಕಂಡುಬಂದಿದೆ.

ಭಾರತದ ಪ್ರತಿಯೊಂದು ಪಿನ್-ಕೋಡ್‌ನಿಂದಲೂ ಗ್ರಾಹಕರು ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್ಸ್, ಫ್ಯಾಷನ್, ಬ್ಯೂಟಿ ಮತ್ತು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ್ದು, ಇದು ಅಮೆಜಾನ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಓಪನಿಂಗ್ ಸೇಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

RelatedPosts

ಜಗತ್ತಿನ ‘ಬೆಸ್ಟ್ ವಿಸ್ಕಿ’ ಈಗ ಭಾರತದಲ್ಲಿ: ‘ಇಂದ್ರಿ’ಯ ದೀಪಾವಳಿ ಕಲೆಕ್ಟರ್ಸ್ ಎಡಿಷನ್ 2026 ಮಾರುಕಟ್ಟೆಗೆ ಲಗ್ಗೆ

ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ಇಲ್ಲಿದೆ

ಇಂದು ಬಂಗಾರದ ಬೆಲೆಯಲ್ಲಿ ಕೊಂಚ ಏರಿಕೆ: ಬೆಳ್ಳಿ ಬೆಲೆ ಯಥಾಸ್ಥಿತಿ, ದರ ವಿವರ ಇಲ್ಲಿದೆ

ಗೃಹ ಸಾಲ, ವಾಹನ ಸಾಲ, ಪರ್ಸನಲ್ ಲೋನ್ ಪಡೆದವರಿಗೆ ಶಾಕ್: ರೆಪೋ ದರ ಏರಿಕೆ

ADVERTISEMENT
ADVERTISEMENT
ನಿಮಿಷಗಳಲ್ಲಿ ಡೆಲಿವರಿ, ಇಎಂಐ ಮೂಲಕ ಹೆಚ್ಚು ಖರೀದಿ

ಗ್ರಾಹಕರು ಆರ್ಡರ್ ಮಾಡಿದ ಕೇವಲ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವಸ್ತುಗಳನ್ನು ಡೆಲಿವರಿ ಮಾಡಲಾಗಿದೆ. ‘ಅಮೆಜಾನ್ ನೌ’ ತ್ವರಿತ ಸೇವೆ ಇರುವ 120ಕ್ಕೂ ಹೆಚ್ಚು ನಗರಗಳಲ್ಲಿ, ಆರ್ಡರ್ ಮಾಡಿದ ಪ್ರತಿ 2 ವಸ್ತುಗಳಲ್ಲಿ ಒಂದು ವಸ್ತುವನ್ನು ಕೇವಲ ನಿಮಿಷಗಳಲ್ಲಿಯೇ ಮನೆಬಾಗಿಲಿಗೆ ತಲುಪಿಸಲಾಗಿದೆ.

ದುಬಾರಿ ವಸ್ತುಗಳನ್ನು ಖರೀದಿಸಲು ಗ್ರಾಹಕರು ಇಎಂಐ ಆಯ್ಕೆಯನ್ನು ಹೆಚ್ಚು ಬಳಸುತ್ತಿದ್ದಾರೆ. ಪ್ರತಿ 2 ಗ್ರಾಹಕರಲ್ಲಿ ಒಬ್ಬರು ಇಎಂಐ ಮೂಲಕವೇ ವಸ್ತುಗಳನ್ನು ಖರೀದಿಸಿದ್ದಾರೆ.

ಇನ್ನು ಅಮೆಜಾನ್ ಪ್ರೈಮ್ ಸದಸ್ಯರು ಮೊದಲ 12 ಗಂಟೆಗಳಲ್ಲೇ ಪ್ರೈಮ್-ಓನ್ಲಿ ಆಫರ್‌ಗಳ ಮೂಲಕ ಕಳೆದ ವರ್ಷಕ್ಕಿಂತ ಶೇ. 100ರಷ್ಟು ಹೆಚ್ಚಿನ ಹಣ ಉಳಿತಾಯ ಮಾಡಿದ್ದಾರೆ. ಪ್ರತಿ ಮೂರು ವಸ್ತುಗಳ ಖರೀದಿಯಲ್ಲಿ ಒಂದು ವಸ್ತುವಿಗೆ ಭರ್ಜರಿ ಕ್ಯಾಶ್‌ಬ್ಯಾಕ್ ಸಿಕ್ಕಿದೆ.

ಯಾವ್ಯಾವ ವಸ್ತುಗಳಿಗೆ ಭಾರೀ ಡಿಮ್ಯಾಂಡ್‌?

ಎಂದಿನಂತೆ ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಭಾರೀ ಬೇಡಿಕೆ ಕಂಡು ಬಂದಿದೆ. ಗ್ರಾಹಕರು ಹೊಸ ಫೋನ್‌ಗಳಿಗೆ ಅಪ್‌ಗ್ರೇಡ್ ಆಗುತ್ತಿದ್ದು, ಪ್ರೀಮಿಯಂ ಆಂಡ್ರಾಯ್ಡ್ ಫೋನ್‌ಗಳ ಮಾರಾಟ ಶೇ. 70ರಷ್ಟು ಹೆಚ್ಚಾಗಿದೆ.

ಆಪಲ್ ಐಫೋನ್ 16, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌25 ಅಲ್ಟ್ರಾ, ಒನ್‌ಪ್ಲಸ್ ನಾರ್ಡ್ 6, ಶಿಯೋಮಿ 17 ಮತ್ತು ಐಕ್ಯೂಒಒ 15ಆರ್‌ ಫೋನ್‌ಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಇನ್ನು ಆಪಲ್ ಮ್ಯಾಕ್‌ಬುಕ್ ನಿಯೋ ಲ್ಯಾಪ್‌ಟಾಪ್‌ಗಳ ಮಾರಾಟ ಸಾಮಾನ್ಯ ದಿನಗಳಿಗಿಂತ ಬರೋಬ್ಬರಿ 65 ಪಟ್ಟು ಹೆಚ್ಚಾಗಿದೆ. ಸ್ಮಾರ್ಟ್ ವಾಚ್‌ಗಳ ಮಾರಾಟ 80 ಪಟ್ಟು ಏರಿಕೆಯಾಗಿದೆ.

ಮನೆಯನ್ನು ಸಿನಿಮಾ ಥಿಯೇಟರ್ ಮಾಡಿಕೊಳ್ಳುವ ಕ್ರೇಜ್ ಕೂಡ ಈ ಬಾರಿ ಹೆಚ್ಚಾಗಿದೆ. ಹೋಮ್ ಎಂಟರ್‌ಟೈನ್‌ಮೆಂಟ್ ವಸ್ತುಗಳ ಮಾರಾಟ 77 ಪಟ್ಟು ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ. ಮಾರಾಟವಾದ ಟಿವಿಗಳಲ್ಲಿ ಶೇ. 65ರಷ್ಟು 55-ಇಂಚು ಮತ್ತು ಅದಕ್ಕಿಂತ ದೊಡ್ಡ ಟಿವಿಗಳೇ ಆಗಿವೆ. ಸೋನಿ, ಜೆಬಿಎಲ್‌ನಂತಹ ಪ್ರೀಮಿಯಂ ಹೋಮ್ ಥಿಯೇಟರ್‌ಗಳ ಮಾರಾಟದಲ್ಲಿ 100 ಪಟ್ಟು ಜಿಗಿತ ಕಂಡುಬಂದಿದೆ.

ವಾಷಿಂಗ್ ಮೆಷಿನ್ ಮತ್ತು ಫ್ರಿಡ್ಜ್ ವಿಚಾರಕ್ಕೆ ಬರುವುದಾದರೆ, 9 ಕೆ.ಜಿ ಮತ್ತು ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಪ್ರೀಮಿಯಂ ವಾಷಿಂಗ್ ಮೆಷಿನ್‌ಗಳ ಮಾರಾಟ 80 ಪಟ್ಟು ಹೆಚ್ಚಾಗಿದೆ. ಸ್ಯಾಮ್‌ಸಂಗ್, ಎಲ್‌ಜಿ, ಬಾಷ್, ಹೈಯರ್ ಕಂಪನಿಯ ಫ್ರಿಡ್ಜ್‌ಗಳ ಮಾರಾಟ 60 ಪಟ್ಟು ಏರಿಕೆ ಕಂಡಿದ್ದು, ಡೈಕಿನ್, ಪ್ಯಾನಾಸೋನಿಕ್ ಎಸಿಗಳ ಮಾರಾಟವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಫ್ಯಾಷನ್ ಮತ್ತು ಬ್ಯೂಟಿ ವಿಭಾಗದಲ್ಲಿ ಹೊಸ ದಾಖಲೆ

ಬಟ್ಟೆ ಮತ್ತು ಫ್ಯಾಷನ್ ವಸ್ತುಗಳ ಮಾರಾಟ ಸಾಮಾನ್ಯ ದಿನಕ್ಕಿಂತ 7 ಪಟ್ಟು ಹೆಚ್ಚಾಗಿದೆ. ಪ್ರತಿ ಸೆಕೆಂಡಿಗೆ 7 ಜೊತೆ ಶೂಗಳು (ನೈಕ್, ಅಡಿಡಾಸ್, ವುಡ್‌ಲ್ಯಾಂಡ್ ಇತ್ಯಾದಿ) ಮಾರಾಟವಾಗುತ್ತಿವೆ.

ಪುರುಷರ ಜೀನ್ಸ್ ಪ್ಯಾಂಟ್‌ಗಳಿಗೆ (ಲಿವೈಸ್, ರಾಂಗ್) ಭಾರೀ ಬೇಡಿಕೆ ಇದ್ದು, ಪ್ರತಿ ಗಂಟೆಗೆ 1,500 ಜೊತೆ ಜೀನ್ಸ್ ಪ್ಯಾಂಟ್‌ಗಳು ಸೇಲ್ ಆಗುತ್ತಿವೆ. ಮಹಿಳೆಯರ ಕುರ್ತಾಗಳು ಪ್ರತಿ ನಿಮಿಷಕ್ಕೆ 100ರಂತೆ ಮಾರಾಟವಾಗುತ್ತಿವೆ.

ಆನ್‌ಲೈನ್‌ನಲ್ಲಿ ಮಾರಾಟವಾದ ಪ್ರತಿ 4 ವಸ್ತುಗಳಲ್ಲಿ 1 ಬ್ಯೂಟಿ ಪ್ರಾಡಕ್ಟ್ (ಸೌಂದರ್ಯವರ್ಧಕ) ಆಗಿದೆ. ಪ್ರೀಮಿಯಂ ಸ್ಕಿನ್-ಕೇರ್ ಮತ್ತು ಹೇರ್-ಕೇರ್ ಉತ್ಪನ್ನಗಳು ಪ್ರತಿ ನಿಮಿಷಕ್ಕೆ 150ರಂತೆ ಮಾರಾಟವಾಗುತ್ತಿವೆ. ಐಷಾರಾಮಿ ಪರ್ಫ್ಯೂಮ್‌ಗಳು ಪ್ರತಿ ನಿಮಿಷಕ್ಕೆ 12 ಸೇಲ್ ಆಗುತ್ತಿವೆ. ಸ್ನಾನದ ಸೋಪ್ ಮತ್ತು ಶವರ್ ಜೆಲ್‌ಗಳು ಪ್ರತಿ ನಿಮಿಷಕ್ಕೆ ಬರೋಬ್ಬರಿ 800ರಂತೆ ಮಾರಾಟವಾಗುತ್ತಿವೆ.

ಆರೋಗ್ಯದ ಕಡೆಗೂ ಜನರ ಚಿತ್ತ

ಜನರು ಆರೋಗ್ಯದ ಕಡೆಗೂ ಗಮನ ಹರಿಸುತ್ತಿದ್ದಾರೆ. ಗಾಳಿಯನ್ನು ಶುದ್ಧೀಕರಿಸುವ ಏರ್ ಪ್ಯೂರಿಫೈಯರ್ ಮತ್ತು ಎಣ್ಣೆ ಇಲ್ಲದೆ ಕರಿಯುವ ಏರ್ ಫ್ರೈಯರ್‌ಗಳ ಮಾರಾಟ 30 ಪಟ್ಟು ಹಾಗೂ ಜ್ಯೂಸರ್‌ಗಳ ಮಾರಾಟ 23 ಪಟ್ಟು ಹೆಚ್ಚಾಗಿದೆ.

“ಗ್ರಾಹಕರ ಬೆಂಬಲ ನಮ್ಮ ನಿರೀಕ್ಷೆಯನ್ನೂ ಮೀರಿದೆ. ಕಾಸ್ಮೋಪಾಲಿಟನ್ ನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳವರೆಗೆ, ಇಡೀ ಭಾರತ ಅತ್ಯುತ್ತಮ ಡೀಲ್ ಮತ್ತು ವೇಗದ ಡೆಲಿವರಿಗಾಗಿ ಅಮೆಜಾನ್ ಅನ್ನು ಆಯ್ಕೆ ಮಾಡುತ್ತಿರುವುದು ನಮಗೆ ಅತೀವ ಖುಷಿ ತಂದಿದೆ,” ಎಂದು ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಸೌರಭ್ ಶ್ರೀವಾಸ್ತವ ಹರ್ಷ ವ್ಯಕ್ತಪಡಿಸಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 10 09T185254.761

ನಂದಿಗ್ರಾಮದಲ್ಲಿ ಬಿಜೆಪಿಗೆ ಭರ್ಜರಿ ಜಯ: 1.22 ಲಕ್ಷ ಮತಗಳ ಅಂತರದಿಂದ ಹಸಿರಾಣಿ ಗೆಲುವು

by ಶಾಲಿನಿ ಕೆ. ಡಿ
October 9, 2026 - 6:56 pm
0

Untitled design 2026 10 09T183351.670

ದಳಪತಿ ವಿಜಯ್ ಬೆನ್ನಲ್ಲೇ ಧನುಷ್ ಪಾಲಿಟಿಕಲ್ ಪ್ಲ್ಯಾನ್..?

by ಶಾಲಿನಿ ಕೆ. ಡಿ
October 9, 2026 - 6:28 pm
0

Untitled design 2026 10 09T181344.735

ಬ್ರಿಟಿಷರ ನೆತ್ತರು ಹರಿಸಿದ ‘ರಣಬಾಲಿ’.. ವಿಜಯ್ ರೌದ್ರಾವತಾರ

by ಶಾಲಿನಿ ಕೆ. ಡಿ
October 9, 2026 - 6:08 pm
0

Untitled design 2026 10 09T180239.693

ರಿಷಬ್ ಜೈ ಹನುಮಾನ್ ಸಾಗಾ..ಅದೃಷ್ಟದೇವತೆ ಮಮಿತಾ ಎಂಟ್ರಿ

by ಶಾಲಿನಿ ಕೆ. ಡಿ
October 9, 2026 - 5:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (36)
    ಜಗತ್ತಿನ ‘ಬೆಸ್ಟ್ ವಿಸ್ಕಿ’ ಈಗ ಭಾರತದಲ್ಲಿ: ‘ಇಂದ್ರಿ’ಯ ದೀಪಾವಳಿ ಕಲೆಕ್ಟರ್ಸ್ ಎಡಿಷನ್ 2026 ಮಾರುಕಟ್ಟೆಗೆ ಲಗ್ಗೆ
    October 8, 2026 | 0
  • Your paragraph text 2026 10 08T114933.219
    ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ಇಲ್ಲಿದೆ
    October 8, 2026 | 0
  • Your paragraph text (11)
    ಇಂದು ಬಂಗಾರದ ಬೆಲೆಯಲ್ಲಿ ಕೊಂಚ ಏರಿಕೆ: ಬೆಳ್ಳಿ ಬೆಲೆ ಯಥಾಸ್ಥಿತಿ, ದರ ವಿವರ ಇಲ್ಲಿದೆ
    October 7, 2026 | 0
  • Your paragraph text (9)
    ಗೃಹ ಸಾಲ, ವಾಹನ ಸಾಲ, ಪರ್ಸನಲ್ ಲೋನ್ ಪಡೆದವರಿಗೆ ಶಾಕ್: ರೆಪೋ ದರ ಏರಿಕೆ
    October 7, 2026 | 0
  • ಚಿನ್ನದ ಬೆಲೆ ಮತ್ತೆ ಇಳಿಕೆ
    ಆಭರಣ ಪ್ರಿಯರಿಗೆ ಗುಡ್‌ನ್ಯೂಸ್: ಚಿನ್ನದ ಬೆಲೆ ಮತ್ತೆ ಇಳಿಕೆ
    October 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version