ರೇಣುಕಾಸ್ವಾಮಿ ಮರ್ಡರ್ ಕೇಸ್ ದಿನಕ್ಕೊಂದು ಹೈ-ವೋಲ್ಟೇಜ್ ಟ್ವಿಸ್ಟ್ ತಗೊಳ್ತಿದೆ. ದರ್ಶನ್ ಅಂಡ್ ಗ್ಯಾಂಗ್ ವಿಚಾರಣೆ ಎದುರಿಸ್ತಿರೋ ಈ ಹೈ-ಪ್ರೊಫೈಲ್ ಕೇಸ್‌ನಲ್ಲಿ ಈಗ ಸ್ಯಾಂಡಲ್‌ವುಡ್‌ನ ಇಬ್ಬರು ನಟರಿಗೆ ಕಾನೂನಿನ ಬಿಸಿ ತಾಗಿದೆ. ಕೊಲೆ ನಡೆದ ದಿನವೇ ದರ್ಶನ್ ಜೊತೆ ಪಾರ್ಟಿ ಮಾಡಿದ್ದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಇನ್ನೊಂದೆಡೆ ದರ್ಶನ್ ಪಡೆಗೆ ಸುಪ್ರೀಂ ಕೋರ್ಟ್ ಕೆನ್ನೆಗೊಡೆದಂತೆ ಶಾಕ್ ನೀಡಿದ್ದು, ಈ ಎಲ್ಲಾ ಕಾನೂನು ಸಮರದ ಕಂಪ್ಲೀಟ್ ಮಾಸ್ ರಿಪೋರ್ಟ್ ಇಲ್ಲಿದೆ ನೋಡಿ
- ರೇಣುಕಾಸ್ವಾಮಿ ಮರ್ಡರ್ ಕೇಸ್.. ಚಿಕ್ಕಣ್ಣ, ಯಶಸ್ ಗೆ ಢವ ಢವ
- ಅಕ್ಟೋಬರ್ 13ಕ್ಕೆ ಚಿಕ್ಕಣ್ಣ, ಯಶಸ್ ಸೂರ್ಯ ಕೋರ್ಟ್‌ಗೆ ಹಾಜರ್
- ದರ್ಶನ್ ಗ್ಯಾಂಗ್‌ಗೆ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆ…!
- ಕೊಲೆ ನಡೆದ ದಿನದ ಪಾರ್ಟಿ.. ಈಗ ಕೋರ್ಟ್‌ನಲ್ಲಿ ಸಾಕ್ಷ್ಯ
ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟರಾದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಅವರಿಗೆ ಬೆಂಗಳೂರಿನ 59ನೇ ಸಿಸಿಹೆಚ್ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಸಮನ್ಸ್ ನೀಡಿದೆ. ಘಟನೆಯ ದಿನದಂದು ದರ್ಶನ್ ಆರ್‌ಆರ್ ನಗರದ ‘ಸ್ಟೋನಿ ಬ್ರೂಕ್ಸ್’ ಪಬ್‌ನಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಇವರಿಬ್ಬರು ಭಾಗವಹಿಸಿದ್ದರು. ಪ್ರಕರಣದ ಪ್ರಮುಖ ಸರ್ಕಾರಿ ಸಾಕ್ಷಿಗಳಾಗಿರುವ CW 80, CW 98 ಚಿಕ್ಕಣ್ಣ ಮತ್ತು ಯಶಸ್, ಮುಂಬರುವ ಅಕ್ಟೋಬರ್ 13 ರಂದು ಕೋರ್ಟ್‌ಗೆ ಖುದ್ದು ಹಾಜರಾಗಿ ಅಂದಿನ ಘಟನಾವಳಿಗಳ ಬಗ್ಗೆ ಸಾಕ್ಷ್ಯ ನುಡಿಯಲಿದ್ದು, ಇದು ದರ್ಶನ್ ಭವಿಷ್ಯಕ್ಕೆ ಅತ್ಯಂತ ನಿರ್ಣಾಯಕವೆನಿಸಿದೆ.
ಇತ್ತ ನಟರ ಸಾಕ್ಷ್ಯದ ಬಿಸಿ ನಡುವೆ ನಟ ದರ್ಶನ್ ಪಡೆಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಿ ನೀಡಿರುವ ಹೇಳಿಕೆಯನ್ನು ರದ್ದುಗೊಳಿಸಬೇಕು ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ಪ್ರದೋಶ್ ಸಾಕ್ಷಿ ತಡೆಯಲು ಕೆಳ ನ್ಯಾಯಾಲಯ ಹಾಗೂ ಹೈಕೋರ್ಟ್‌ಗಳಲ್ಲಿ ಹೂಡಿದ್ದ ತಂತ್ರಗಳೆಲ್ಲಾ ವಿಫಲವಾದಾಗ ದರ್ಶನ್ ಪಡೆ ಸುಪ್ರೀಂ ಮೆಟ್ಟಿಲೇರಿತ್ತು. ಆದರೆ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ಕೆಳ ನ್ಯಾಯಾಲಯಗಳ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾನೂನಾತ್ಮಕ ಅಥವಾ ತಾಂತ್ರಿಕ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾ ಮಾಡಿದೆ.
ಸುಪ್ರೀಂ ಕೋರ್ಟ್ ಅರ್ಜಿ ವಜಾಗೊಳಿಸಿದ್ದಕ್ಕೆ ಕೋರ್ಟ್ ನೀಡಿದ ಕಾರಣಗಳನ್ನು ದರ್ಶನ್ ಪರ ವಕೀಲರು ಮಾಧ್ಯಮಗಳ ಮುಂದೆ ವಿವರಿಸಿದ್ದು, ಸದ್ಯ ಪ್ರದೋಶ್ ಹೇಳಿಕೆ ಪ್ರಮುಖ ಸಾಕ್ಷಿಯಾಗಿ ಉಳಿದುಕೊಂಡಿದೆ. ಕೊಲೆಗೆ ಮುನ್ನ ದರ್ಶನ್ ಜೊತೆ ಪಾರ್ಟಿಯಲ್ಲಿದ್ದ ನಟರ ಕೋರ್ಟ್ ಸಾಕ್ಷ್ಯ ನುಡಿಯುವಿಕೆ ಮತ್ತು ಪ್ರದೋಶ್ ನೀಡುತ್ತಿರುವ ಮಾಫಿ ಸಾಕ್ಷಿಯ ತೂಗುಕತ್ತಿ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಅಕ್ಟೋಬರ್ 13 ರಂದು ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ನ್ಯಾಯಾಧೀಶರ ಎದುರು ಏನು ಸಾಕ್ಷಿ ಹೇಳಲಿದ್ದಾರೆ ಎಂಬುದು ಇಡೀ ಕೇಸ್‌ಗೆ ಹೊಸ ತಿರುವು ನೀಡುವ ಸಾಧ್ಯತೆಯಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





