• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಬಂಡೆಗೆ ಎಂದಾದರೂ ಭಾವನೆ ಬರುತ್ತಾ? ಸಿಎಂಗೆ ನಿಖಿಲ್ ಕುಮಾರಸ್ವಾಮಿ ಟಾಂಗ್

ಕವಿತಾ by ಕವಿತಾ
September 22, 2026 - 3:32 pm
in ಕರ್ನಾಟಕ
0 0
0
Untitled design (8)

ಬೆಂಗಳೂರು: ರಾಜ್ಯದಲ್ಲಿ ರೈತರು ಭೀಕರ ಬರಗಾಲದಿಂದ ಕಣ್ಣೀರು ಹಾಕುತ್ತಿದ್ದರೆ, ರಾಜ್ಯ ಸರ್ಕಾರದ ಸಚಿವರು ಜನಸೇವೆ ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಯಾರಿಗೆ ಹೆಚ್ಚು ವ್ಯೂಸ್ ಬರುತ್ತೆ ಎಂದು ರೀಲ್ಸ್ ಕಾಂಪಿಟೇಷನ್ ನಲ್ಲಿ ತೊಡಗಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜನರ ಭಾವನೆ ಮೇಲೆ ಅಲ್ಲ, ಬದುಕಿನ ಮೇಲೆ ರಾಜಕಾರಣ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಬಂಡೆಗೆ ಎಂದಾದರೂ ಭಾವನೆ ಬರುತ್ತಾ? ರೈತರ ಬದುಕು ಉಳಿಸಬೇಕಾದರೆ ತಕ್ಷಣ ಎಕರೆಗೆ 25 ಸಾವಿರ ಪರಿಹಾರ ಕೊಡಿ” ಎಂದು ಆಗ್ರಹಿಸಿದರು.

RelatedPosts

ಕಾಗವಾಡವನ್ನು ಬರಪೀಡಿತ ತಾಲೂಕು ಮಾಡಿ: ರೈತರ ಆಕ್ರೋಶ

ಗ್ರಾಹಕರಿಗೆ ಮತ್ತೆ ಶಾಕ್: ಕರ್ನಾಟಕದಲ್ಲಿ ಅಕ್ಕಿ ದರ ಸತತ ಎರಡನೇ ಬಾರಿ ಏರಿಕೆ

“ತಪ್ಪಾಯ್ತು, ಸಾರಿ”..ಲೇಡಿ ಪಿಎಸ್‌ಐಗೆ ಕ್ಷಮೆ ಕೇಳಿದ ಸುರೇಶ್‌ಗೌಡ ಪುತ್ರಿ ಐಶ್ವರ್ಯ

ರಾಯಚೂರಿನಲ್ಲಿ ಮಹಿಳೆ ಹತ್ಯೆ ಕೇಸ್: ಪ್ರಿಯಕರ ಸೇರಿ ಇಬ್ಬರ ಬಂಧನ

ADVERTISEMENT
ADVERTISEMENT

ರೈತರು ಮಳೆ-ಬೆಳೆ ಇಲ್ಲದೆ, ವಿದ್ಯುತ್ ಅಭಾವದಿಂದ ಮತ್ತು ಸಾಲದ ಸುಳಿಯಲ್ಲಿ ಸಿಲುಕಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರೂ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದು ವೈಯಕ್ತಿಕವಾಗಿ ಹೆಚ್ಚು ನೋವು ತಂದಿದೆ. ಈ ಹಿನ್ನೆಲೆಯಲ್ಲಿ ಸೆ.28 ರಿಂದ ರಾಜ್ಯದ ಬರಪೀಡಿತ ತಾಲ್ಲೂಕುಗಳ ರೈತರನ್ನು ಭೇಟಿ ಮಾಡಿ, ಅವರ ನೋವನ್ನು ಆಲಿಸಿ, ನಿಷ್ಕ್ರಿಯ ಸರ್ಕಾರವನ್ನು ಎಚ್ಚರಿಸಲು ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.

ಕಳೆದ ಮೂರೂವರೆ ವರ್ಷದಲ್ಲಿ 3500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಶೇ.85 ಅಂದರೆ 3,014 ರೈತರು ಸಾಲಬಾಧೆ ಮತ್ತು ಬೆಳೆ ನಷ್ಟದಿಂದಲೇ ಸಾವನ್ನಪ್ಪಿದ್ದಾರೆ. ಈ ವರ್ಷ ರೈತರು ಹಾಕಿದ ಬೆಳೆ ಸಂಪೂರ್ಣ ಹಾಳಾಗಿದೆ. ಮಲೆನಾಡಿನಲ್ಲಿಯೂ ನಿರೀಕ್ಷೆಯಂತೆ ಮಳೆ ಆಗಿಲ್ಲ. ಮಳೆಯ ನಿರೀಕ್ಷೆಯಲ್ಲಿ ರೈತರು ಎರಡು ಬಾರಿ ಬಿತ್ತನೆ ಮಾಡಿ ತಮ್ಮ ಸಂಪೂರ್ಣ ಬಂಡವಾಳ ಕಳೆದುಕೊಂಡಿದ್ದಾರೆ ಎಂದರು.

234 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು

ಸರ್ಕಾರ ಕೇವಲ 124 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಆದರೆ ಅವರದೇ ಪಕ್ಷದ ಶಾಸಕರು ಮತ್ತು ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರೇ ತಮ್ಮ ಗದಗ ಜಿಲ್ಲೆಯನ್ನು ಘೋಷಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಎಲ್ಲಾ 234 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು. ರೈತರಿಗೆ ಪಂಪ್ ಸೆಟ್ ಓಡಿಸಲು ಕರೆಂಟ್ ಕೊಡುತ್ತಿಲ್ಲ. ಕನಿಷ್ಠ 8 ಗಂಟೆ ಕರೆಂಟ್ ಕೊಡಬೇಕು ಎಂದು ಆಗ್ರಹಿಸಿದರು.

ಸಿಎಂ ರೀಲ್ಸ್ ಪ್ರಚಾರದಲ್ಲೇ ಕಾಲ ಕಳೆಯುತ್ತಿದ್ದಾರೆ

ಮುಖ್ಯಮಂತ್ರಿಗಳ ಬರ ಅಧ್ಯಯನ ಪ್ರವಾಸ ಕೇವಲ ಫೋಟೋ-ಆಪ್ ಮತ್ತು ಪಿಆರ್ ಗೆ ಸೀಮಿತವಾಗಿದೆ. ಸಿಎಂ ಮತ್ತು ಅವರ ಆಡಳಿತ ಯಂತ್ರ ಕೇವಲ ರಿಯಲ್ ಎಸ್ಟೇಟ್ ಹಿತಾಸಕ್ತಿ ಮತ್ತು ರೀಲ್ಸ್ ಪ್ರಚಾರದಲ್ಲೇ ಕಾಲ ಕಳೆಯುತ್ತಿದೆ. ರೀಲ್ಸ್ ಮಾಡಲು ನೀಡುವ ಗಮನದಲ್ಲಿ ಶೇ.50ರಷ್ಟು ರೈತರ ಸಮಸ್ಯೆಗೆ ನೀಡಿದ್ದರೆ ರೈತ ಬೀದಿಗೆ ಬೀಳುತ್ತಿರಲಿಲ್ಲ. ಸಿಎಂ ಅವರು ಭಾವನೆ ಮೇಲೆ ರಾಜಕಾರಣ ಮಾಡಲ್ಲ, ಬದುಕಿನ ಮೇಲೆ ಮಾಡುತ್ತೇನೆ ಎನ್ನುತ್ತಾರೆ. ನೀವೇ ಎಲ್ಲರೂ ಹೆಸರು ಇಟ್ಟಿದ್ದೀರಾ ಸಿಎಂಗೆ – ಬಂಡೆಗೆ ಎಂದಾದರೂ ಭಾವನೆ ಬರುತ್ತಾ ಎಂದು ನಿಖಿಲ್ ಪ್ರಶ್ನಿಸಿದರು.

ಘೋಷಣೆಗಳಿಂದ ರೈತರ ಬದುಕು ಬದಲಾಗುವುದಿಲ್ಲ

ಘೋಷಣೆಗಳಿಂದ ರೈತರ ಬದುಕು ಬದಲಾಗುವುದಿಲ್ಲ. ರೈತರಿಗೆ ತಕ್ಷಣ ಎಕರೆಗೆ 25,000 ಪರಿಹಾರ ಕೊಡಿ. ಕಲಬುರಗಿಗೆ ಹೋಗಿ ವಿಶೇಷ ಘೋಷಣೆ ಮಾಡಿದ್ರು, ಎಲ್ಲಿ ಇದೆ ಅದು? ಮಂಗಳೂರಿಗೆ 34 ಸಾವಿರ ಕೋಟಿ, ಚನ್ನಪಟ್ಟಣಕ್ಕೆ 500 ಕೋಟಿ ಎಂದು ಕೇವಲ ಘೋಷಣೆ ಮಾಡುವುದು ಬೇಡ ಎಂದು ಟೀಕಿಸಿದರು.

ನಾವು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಜೊತೆ ಚರ್ಚೆ ಮಾಡಿದ್ದೇವೆ. ರೈತರ ಬಳಿ ಹೋಗಿ ಅವರ ಜೊತೆ ಸಂವಾದ ಮಾಡಲು ಮತ್ತು ಸರ್ಕಾರವನ್ನು ಎಚ್ಚರಿಸಲು ಇದೇ ತಿಂಗಳ 28ರಿಂದ ರೈತ ಸ್ವಾಭಿಮಾನ ಯಾತ್ರೆಯನ್ನು ಆರಂಭ ಮಾಡುತ್ತೇವೆ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಈ ಯಾತ್ರೆ ನಡೆಯಲಿದ್ದು, ಪ್ರತಿ ಜಿಲ್ಲೆಗೂ ಹೋಗಿ ರೈತರನ್ನು ಒಗ್ಗೂಡಿಸುತ್ತೇವೆ. ಪ್ರತಿ ಜಿಲ್ಲೆಯಲ್ಲೂ ರೈತ ಸಂವಾದ, ಪಾದಯಾತ್ರೆ ಮತ್ತು ಬೃಹತ್ ಸಮಾವೇಶ ಮಾಡುತ್ತೇವೆ ಎಂದು ಘೋಷಿಸಿದರು.

ಎಲ್ಲದಕ್ಕೂ ಕೇಂದ್ರದ ಕಡೆ ಬೊಟ್ಟು ಮಾಡುತ್ತಾರೆ. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದಾಗ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ಇದ್ದಾಗಲೂ ಕೇಂದ್ರದ ಬಳಿ ಹೋಗಿ ಅಂಗಲಾಚಿದ್ರಾ? ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ಅಂದರೆ, ದಿವಾಳಿಯಾಗಿದೆ ಎಂದು ಬಹಿರಂಗವಾಗಿ ಜನರ ಮುಂದೆ ಒಪ್ಪಿಕೊಳ್ಳಿ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಕೋರ್ ಕಮಿಟಿ ಅಧ್ಯಕ್ಷರಾದ ಜೆ.ಕೆ. ಕೃಷ್ಣಾರೆಡ್ಡಿ, ಶಾಸಕರಾದ ಎ. ಮಂಜು, ಜಿ.ಕೆ. ವೆಂಕಟಶಿವಾರೆಡ್ಡಿ, ರಾಜುಗೌಡ ಪಾಟೀಲ್, ಕರೆಮ್ಮ ನಾಯಕ್, ಶಾರದಾ ಪೂರ್ಯಾನಾಯಕ್, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಶರವಣ್, ಟಿ.ಎನ್. ಜವರಾಯಿಗೌಡ ಅವರು ಉಪಸ್ಥಿತರಿದ್ದರು.

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (13)

ಕಾಗವಾಡವನ್ನು ಬರಪೀಡಿತ ತಾಲೂಕು ಮಾಡಿ: ರೈತರ ಆಕ್ರೋಶ

by ಕವಿತಾ
September 22, 2026 - 4:33 pm
0

Untitled design (10)

ಧುರಂಧರ್‌ಗೆ ಮರ್ಮಾಘಾತ.. 3000Cr ಚಿತ್ರಕ್ಕೆ 4 ವೋಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 22, 2026 - 4:01 pm
0

Untitled design (9)

ದುನಿಯಾ ವಿಜಯ್ ಸಿನಿಮಾಗಳೆಲ್ಲಾ ಈ ಸಮಾಜದ ಕೈಗನ್ನಡಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 22, 2026 - 3:49 pm
0

Untitled design (8)

ಬಂಡೆಗೆ ಎಂದಾದರೂ ಭಾವನೆ ಬರುತ್ತಾ? ಸಿಎಂಗೆ ನಿಖಿಲ್ ಕುಮಾರಸ್ವಾಮಿ ಟಾಂಗ್

by ಕವಿತಾ
September 22, 2026 - 3:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (13)
    ಕಾಗವಾಡವನ್ನು ಬರಪೀಡಿತ ತಾಲೂಕು ಮಾಡಿ: ರೈತರ ಆಕ್ರೋಶ
    September 22, 2026 | 0
  • Your paragraph text 2026 09 22T123545.725
    ಗ್ರಾಹಕರಿಗೆ ಮತ್ತೆ ಶಾಕ್: ಕರ್ನಾಟಕದಲ್ಲಿ ಅಕ್ಕಿ ದರ ಸತತ ಎರಡನೇ ಬಾರಿ ಏರಿಕೆ
    September 22, 2026 | 0
  • Your paragraph text 2026 09 22T115237.752
    “ತಪ್ಪಾಯ್ತು, ಸಾರಿ”..ಲೇಡಿ ಪಿಎಸ್‌ಐಗೆ ಕ್ಷಮೆ ಕೇಳಿದ ಸುರೇಶ್‌ಗೌಡ ಪುತ್ರಿ ಐಶ್ವರ್ಯ
    September 22, 2026 | 0
  • Your paragraph text 2026 09 22T113826.843
    ರಾಯಚೂರಿನಲ್ಲಿ ಮಹಿಳೆ ಹತ್ಯೆ ಕೇಸ್: ಪ್ರಿಯಕರ ಸೇರಿ ಇಬ್ಬರ ಬಂಧನ
    September 22, 2026 | 0
  • Untitled design 2026 09 22T105056.107
    ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್-ಚಿನ್ನ ಸೀಜ್
    September 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version