ಕರ್ನಾಟಕದ ಹವಾಮಾನದಲ್ಲಿ ಈ ವಾರ ಮಳೆ ಮತ್ತು ಬಿಸಿಲಿನ ಎರಡೂ ಸವಾಲುಗಳನ್ನು ಕಾಣಲಿದ್ದೇವೆ. ಹವಾಮಾನ ಇಲಾಖೆಯ ಪ್ರಕಾರ, ಏಪ್ರಿಲ್ 3ರವರೆಗೂ ಕರಾವಳಿ ಮತ್ತು ಒಳನಾಡಿನ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ-ತಂಪು ಹವೆ ನಿರೀಕ್ಷಿಸಲಾಗಿದೆ. ಆದರೆ, ಬೆಂಗಳೂರು ಸೇರಿದಂತೆ ದಕ್ಷಿಣ ಮತ್ತು ಈಶಾನ್ಯ ಜಿಲ್ಲೆಗಳಲ್ಲಿ ಒಣಹವೆ ಮತ್ತು ಉಷ್ಣಾಂಶ ಏರಿಕೆ ಮುಂದುವರೆಯಲಿದೆ.
ಈ ಜಿಲ್ಲೆಗಳಿಗೆ ಭಾರಿ ಮಳೆ!
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಹಾಸನ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಸ್ಥಳೀಯ ಸುರಿಮಳೆ ಮತ್ತು ಗುಡುಗು-ಮಿಂಚಿನ ಸಾಧ್ಯತೆ ಇದೆ. ಭಾಗಮಂಡಲ, ಸೋಮವಾರಪೇಟೆ, ಶೃಂಗೇರಿ, ಬಾಳೆಹೊನ್ನೂರು, ಹಾರಂಗಿ ಪ್ರದೇಶಗಳಲ್ಲಿ ಈಗಾಗಲೇ ಮಳೆ ದಾಖಲಾಗಿದೆ.
ಈ ಜಿಲ್ಲೆಗಳಲ್ಲಿ ಉಷ್ಣಾಂಶ ಚಾಟಿ!
ತುಮಕೂರು, ವಿಜಯನಗರ, ರಾಮನಗರ, ಕೋಲಾರ, ದಾವಣಗೆರೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ವಿಜಯಪುರ, ರಾಯಚೂರು, ಕಲಬುರಗಿ, ಕೊಪ್ಪಳ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ವರೆಗೆ ಏರಲಿದೆ. ಕಲಬುರಗಿಯಲ್ಲಿ 39.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ರಾಜ್ಯದ ಅತ್ಯಂತ ಬಿಸಿ ಪ್ರದೇಶವಾಗಿದೆ.
ಬೆಂಗಳೂರಿನ ಹವಾಮಾನ:
ನಗರದ ಗರಿಷ್ಠ ಉಷ್ಣಾಂಶ 33-34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20-22 ಡಿಗ್ರಿ ಸೆಲ್ಸಿಯಸ್ ನಡುವೆ ನಿರೀಕ್ಷಿಸಲಾಗಿದೆ. ಹೆಚ್ಚಿನ ಆರ್ದ್ರತೆಯಿಂದ ಸಂಜೆ-ಬೆಳಗಿನ ಸಮಯದಲ್ಲಿ ತಂಪು ಹವೆ ಇರಬಹುದು.
ಹವಾಮಾನ
- ಕಾರವಾರ, ಬಾಗಲಕೋಟೆ: ಗರಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚು.
- ಬೀದರ್, ವಿಜಯಪುರ: ರಾತ್ರಿ-ಬೆಳಗಿನ ಉಷ್ಣಾಂಶ 21-23 ಡಿಗ್ರಿ ಸೆಲ್ಸಿಯಸ್ ನಡುವೆ.
-
ಬೆಳಗಾವಿ: ಕನಿಷ್ಠ 17.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿ, ರಾಜ್ಯದ ಅತ್ಯಂತ ತಂಪಾದ ಪ್ರದೇಶ.
ಹವಾಮಾನ ಇಲಾಖೆ ರೈತರು, ಪ್ರಯಾಣಿಕರು ಮತ್ತು ನಾಗರಿಕರಿಗೆ ಹವೆಯ ಅಪ್ಡೇಟ್ಗಳನ್ನು ನೀಡುತ್ತಿದೆ. ಮಳೆ ಪ್ರದೇಶಗಳಲ್ಲಿ ಮಿಂಚಿನ ಅಪಾಯವನ್ನು ಗಮನಿಸಿ.