ಟೀಸರ್ ಹಾಗೂ ಸಾಂಗ್ಸ್‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿರೋ ಉಪ್ಪಿ ಕುಟುಂಬದ ಕುಡಿಯ ಸ್ಪಾರ್ಕ್ ಸಿನಿಮಾದ ಅಂಗಳಕ್ಕೆ ಜಾಕಿ ಭಾವನಾ ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ. ಯೆಸ್.. ಲವ್ಲಿಸ್ಟಾರ್ ಪ್ರೇಮ್ ಜೊತೆ ಭಾವನಾ ಆ ಸಿನಿಮಾದ ಮೈಲೇಜ್ ಹೆಚ್ಚಿಸಿದ್ದು, ಡೇರಿಂಗ್ ಅಡ್ವೊಕೇಟ್ ರೋಲ್‌ನಲ್ಲಿ ಕಮಾಲ್ ಮಾಡಿದ್ದಾರೆ.
ಉಪ್ಪಿ ಕುಟುಂಬದ ಕುಡಿಗೆ ಜಾಕಿ ಭಾವನಾ, ಪ್ರೇಮ್ ‘ಸ್ಪಾರ್ಕ್’
ಡೇರಿಂಗ್ ಅಡ್ವೊಕೇಟ್ ಪಾತ್ರದಲ್ಲಿ ಭಾವನಾ ಮೆನನ್ ಮಿಂಚು
ಟೀಸರ್ ಜೊತೆ ಒಂದಕ್ಕಿಂತ ಒಂದು ಸಾಂಗ್ ಫುಲ್ ಡಿಫರೆಂಟ್
ನಿರಂಜನ್ ಎದುರು ಖಳನಾಯಕನಾಗಿ ಲವ್ಲಿಸ್ಟಾರ್ ಖದರ್..!!
ಜರ್ನಲಿಸಂ ಒಂದು ಯುದ್ಧ. ಸತ್ಯದ ಹುಡುಕಾಟದಲ್ಲಿ ಸೈನ್ಯವೂ ಎದುರಾಗುತ್ತೆ.. ಸಾವೂ ಎದುರಾಗುತ್ತೆ. ಸತ್ಯಕ್ಕಾಗಿ ಈ ಹೊಡೆದಾಟ. ಜನರಿಗೋಸ್ಕರ ಯುದ್ಧಕ್ಕೂ ರೆಡಿ ಅಂತಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ ಅವ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ. ಯೆಸ್.. ಇದು ಸ್ಪಾರ್ಕ್ ಚಿತ್ರದ ಟೀಸರ್‌ನ ಖಡಕ್ & ಪವರ್‌ಫುಲ್ ಡೈಲಾಗ್. ಇಷ್ಟರಲ್ಲೇ ಸಿನಿಮಾದ ಅಸಲಿ ಗತ್ತು, ಗಮ್ಮತ್ತೇನು ಅನ್ನೋದ್ರ ಹಿಂಟ್ ನೀಡಿದ್ದಾರೆ ಡೈರೆಕ್ಟರ್.
ನಿರಂಜನ್‌ಗೆ ರಚನಾ ಇಂದರ್ ಜೋಡಿಯಾಗಿ ಕಾಣಿಸಿಕೊಂಡಿದ್ದು, ಈಗಾಗ್ಲೇ ಅವ್ರ ಶಕಲಕ ಭೂಮ್ ಭೂಮ್ ಡ್ಯಾನ್ಸಿಂಗ್ ನಂಬರ್ ಸಾವಿರಾರು ರೀಲ್ಸ್ ಮೂಲಕ ಸದ್ದು ಮಾಡ್ತಿದೆ. ಮಧುರ ಮುಗುಳುನಗೆ ಸಾಂಗ್ ಕೂಡ ಹೆಂಗೆಳೆಯರ ದಿಲ್ ದೋಚಿದ್ದು, ರಚನಾ-ನಿರಂಜನ್ ಸಿಕ್ಕಾಪಟ್ಟೆ ಮುದ್ದಾಗ ಕಾಣಸಿಗುತ್ತಾರೆ. ಸಚಿನ್ ಬಸ್ರೂರ್ ಸಂಗೀತ ಸಂಯೋಜನೆಯ ಈ ಹಾಡುಗಳಿಗೆ ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ.
ಚಿತ್ರದ ಮತ್ತೊಂದು ಹೈಲೈಟ್ ಅಂದ್ರೆ ಅದು ರಕ ರಕ ರಾಕ್ಷಸ ಸಾಂಗ್. ಅಷ್ಟೇ ಅಲ್ಲ.. ಆ ಸಾಂಗ್‌ನಲ್ಲಿರೋ ಲವ್ಲಿಸ್ಟಾರ್ ಪ್ರೇಮ್ ಕೂಡ ಸ್ಪೆಷಲ್. ಯಾಕಂದ್ರೆ ಇಷ್ಟು ದಿನ ಹೀರೋ ಆಗಿದ್ದ ಪ್ರೇಮ್, ಇದೇ ಮೊದಲ ಬಾರಿಗೆ ಖಳನಾಯಕನಾಗಿ ಖದರ್ ತೋರಲಿದ್ದಾರೆ. ನಿರಂಜನ್ ಹಾಗೂ ಪ್ರೇಮ್ ಕಾದಾಟ ನೋಡೋಕೆ ಕಣ್ಣಿಗೆ ಹಬ್ಬದ ಫೀಲ್ ಕೊಡಲಿದೆ.





