2025 ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷದೊಂದಿಗೆ ಸಾರ್ವಜನಿಕರ ದಿನನಿತ್ಯದ ಆರ್ಥಿಕ ವ್ಯವಹಾರಗಳು, ಉಳಿತಾಯ, ಮತ್ತು ಖರ್ಚುಗಳಲ್ಲಿ ಗಮನಾರ್ಹ ಬದಲಾವಣೆಗಳು ಬರಲಿವೆ. ಎಟಿಎಂ ಶುಲ್ಕಗಳಿಂದ ಹಿಡಿದು ಕರ್ನಾಟಕದ ವಿದ್ಯುತ್ ದರ ಹೆಚ್ಚಳದವರೆಗೆ, ಗ್ರಾಹಕರ ಜೇಬಿನ ಮೇಲೆ ಪರಿಣಾಮ ಬೀರುವ ಪ್ರಮುಖ ನಿಯಮ.
2025 ಏಪ್ರಿಲ್ 1 ರಂದು ಹೊಸ ಹಣಕಾಸು ವರ್ಷ ಪ್ರಾರಂಭವಾಗುತ್ತಿದ್ದಂತೆ, ಎಲ್ಲಾ ಕ್ಷೇತ್ರಗಳಲ್ಲಿ ಹಲವಾರು ಹೊಸ ಹಣಕಾಸು ನಿಯಮಗಳು ಜಾರಿಗೆ ಬರಲಿವೆ. ಈ ನಿಯಮಗಳು ಗ್ರಾಹಕರ ದೈನಂದಿನ ಆರ್ಥಿಕ ವ್ಯವಹಾರಗಳ ಮೇಲೆ ನೇರವಾಗಿ ಪರಿಣಾಮ ಬೀರಲಿದ್ದು, ವಿಶೇಷವಾಗಿ ಎಟಿಎಂ ಬಳಕೆ, ಉಳಿತಾಯ ಖಾತೆಗಳು, ಯುಪಿಐ ವ್ಯವಹಾರಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಗಮನಾರ್ಹ ಬದಲಾವಣೆಗಳನ್ನು ತರುತ್ತವೆ. ಹೊಸ ನಿಯಮಗಳು ಮತ್ತು ಅವು ಗ್ರಾಹಕರ ಜೇಬಿಗೆ ಹೇಗೆ ಕತ್ತರಿ ಬೀಳಿಸುತ್ತವೆ ಎಂಬುದನ್ನು ವಿವರವಾಗಿ ತಿಳಿಯೋಣ.
ಎಟಿಎಂ ಹಣ ತೆಗೆಯುವಿಕೆಯ ಶುಲ್ಕ ಬದಲಾವಣೆ :
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಗಸೂಚಿಗಳ ಪ್ರಕಾರ, ಎಟಿಎಂ ಮೂಲಕ ಹಣ ತೆಗೆದುಕೊಳ್ಳುವ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಈಗಾಗಲೇ ಉಚಿತವಾಗಿ ಹಣ ತೆಗೆಯುವ ಸೌಲಭ್ಯವನ್ನು ಬ್ಯಾಂಕುಗಳು ಕಡಿಮೆ ಮಾಡಿವೆ.ಈಗ ಗ್ರಾಹಕರಿಗೆ ಇತರ ಬ್ಯಾಂಕ್‌ಗಳ ಎಟಿಎಂಗಳಿಂದ ಕೇವಲ ಒಂದು ಬಾರಿಗೆ ಮಾತ್ರ ಉಚಿತವಾಗಿ ಹಣ ಹೊರತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ. ಒಂದು ಬಾರಿ ಉಚಿತದ ನಂತರ, ಪ್ರತಿ ಹೆಚ್ಚುವರಿ ವಿತ್ ಡ್ರಾ ಗೆ 20 ರಿಂದ 25 ರೂಪಾಯಿಗಳ ಶುಲ್ಕ ವಿಧಿಸಲಾಗುವುದು. ಮೂರಕ್ಕಿಂತ ಹೆಚ್ಚು ಬಾರಿಗೆ ಬೆರೆ ಬ್ಯಾಂಕ್‌ನ ಎಟಿಎಂಗಳಿಂದ ಹಣ ತೆಗೆದುಕೊಂಡರೆ ಪ್ರತೀ ಬಾರಿಗೆ ಶುಲ್ಕವನ್ನು ನೀಡಬೇಕಾಗುತ್ತದೆ.
ಈ ಬದಲಾವಣೆಯಿಂದ ಗ್ರಾಹಕರು ಎಟಿಎಂ ಬಳಕೆಯನ್ನು ಎಚ್ಚರಿಕೆಯಿಂದ ಉಪಯೋಗಿಸಬೇಕಾಗುತ್ತದೆ, ಇಲ್ಲದಿದ್ದರೆ ಹೆಚ್ಚುವರಿ ಶುಲ್ಕದ ಭಾರವನ್ನು ಎದುರಿಸಬೇಕಾಗುತ್ತದೆ.
ಕನಿಷ್ಠ ಬ್ಯಾಲೆನ್ಸ್ ನಿಯಮಗಳಲ್ಲಿ ಪರಿಷ್ಕರಣೆ :
ಉಳಿತಾಯ ಖಾತೆಗಳಿಗೆ ಸಂಬಂಧಿಸಿದಂತೆ ಕನಿಷ್ಠ ಬ್ಯಾಲೆನ್ಸ್ ನಿಯಮಗಳಲ್ಲೂ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು ತಮ್ಮ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಗಳನ್ನು ನವೀಕರಿಸುತ್ತಿವೆ. ಖಾತೆಯು ನಗರ, ಅರೆ-ನಗರ ಅಥವಾ ಗ್ರಾಮೀಣ ಪ್ರದೇಶದಲ್ಲಿದೆಯೇ ಎಂಬುದನ್ನು ಅವಲಂಬಿಸಿ ಅಗತ್ಯವಿರುವ ಬ್ಯಾಲೆನ್ಸ್ ಈಗ ಬದಲಾಗುತ್ತದೆ. ನಿಗದಿತ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ದಂಡ ಶುಲ್ಕ ವಿಧಿಸಬಹುದು.
GST ನಿಯಮಗಳಲ್ಲಿ ಬದಲಾವಣೆ :
ಏಪ್ರಿಲ್ 1 ರಿಂದ ಇನ್ಸುಟ್ ಟ್ರ್ಯಾಕ್ ವಿತರಣಾ (ಐಎಸಿಇ) ವ್ಯವಸ್ಥೆ ಅನ್ವಯಿಸಲಾಗಲಿದೆ. ಈ ಹೊಸ ನಿಯಮದ ಅಡಿಯಲ್ಲಿ, ವ್ಯವಹಾರಗಳಿಗೆ ಇನ್ಸುಟ್ ಟ್ಯಾಕ್ ಕ್ರೆಡಿಟ್ (ಐಟಿಸಿ) ಪಡೆಯಲು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕಾಗಿದೆ.
UPI ಬಳಕೆದಾರರಿಗೆ ಏಪ್ರಿಲ್ 1 ರಿಂದ ಹೊಸ ನಿಯಮ :
ಭಾರತದ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಸೇವೆಗಳನ್ನು ಹೆಚ್ಚು ಸುರಕ್ಷಿತ ಮತ್ತು ಸುಗಮಗೊಳಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಸಿಪಿಐ) ಹೊಸ ನಿರ್ದೇಶನಗಳನ್ನು ಪ್ರಕಟಿಸಿದೆ.
2025ರ ಏಪ್ರಿಲ್ 1ರಿಂದ ಜಾರಿಯಾಗಲಿರುವ ಈ ಮಾರ್ಗಸೂಚಿಗಳು ಬ್ಯಾಂಕುಗಳು, ಪೇಮೆಂಟ್ ಸರ್ವಿಸ್ ಪ್ರೊವೈಡರ್ಗಳು (ಪಿಎಸ್ಪಿಗಳು) ಮತ್ತು ಥರ್ಡ್-ಪಾರ್ಟಿ ಯುಪಿಐ ಆ್ಯಪ್ಗಳಿಗೆ (ಉದಾ: ಫೋನ್ನೇ, ಗೂಗಲ್ ಪೇ, ಪೇಟಿಎಂ) ಗಮನಾರ್ಹ ಬದಲಾವಣೆಗಳನ್ನು ತರಲಿವೆ.
ಎನ್ಸಿಪಿಐ ನಿರ್ದೇಶನದ ಪ್ರಕಾರ, “ಬ್ಯಾಂಕುಗಳು, ಪಿಎಸ್ಪಿ ಅಪ್ಲಿಕೇಶನ್‌ಗಳು ಮೊಬೈಲ್ ನಂಬರ್ ರೆವೊಕೇಶನ್ ಲಿಸ್ಟ್/ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್ಸಾರ್ಮ್ (ಎಂಎನ್‌ಆರ್‌ಎಲ್/ಡಿಐಪಿ) ಅನ್ನು ಬಳಸಬೇಕು ಮತ್ತು ಕನಿಷ್ಠ ವಾರಕ್ಕೊಮ್ಮೆಯಾದರೂ ನಿಯಮಿತವಾಗಿ ತಮ್ಮ ಡೇಟಾಬೇಸ್ ಅನ್ನು ಅದಕ್ಕೆ ಅನುಗುಣವಾಗಿ ನವೀಕರಿಸಬೇಕು.”
2025 ರ ಏಪ್ರಿಲ್ 1 ರಿಂದ ಪ್ರಾರಂಭವಾಗುವ ಹೊಸ ಯುಪಿಐ ಮಾರ್ಗಸೂಚಿಗಳೊಂದಿಗೆ, ನಿಷ್ಕ್ರಿಯ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನಿಮ್ಮ ಬ್ಯಾಂಕ್-ನೋಂದಾಯಿತ ಮೊಬೈಲ್ ಸಂಖ್ಯೆ ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿದ್ದರೆ ನಿಮ್ಮ ಸಂಬಂಧಿತ ಯುಪಿಐ ಐಡಿಯನ್ನು ಲಿಂಕ್ ಮಾಡಲಾಗುವುದಿಲ್ಲ, ಇದು ಯುಪಿಐ ಸೇವೆಗಳನ್ನು ಪ್ರವೇಶಿಸಲಾಗದಂತೆ ಮಾಡುತ್ತದೆ.
ಪಾಸಿಟಿವ್ ಪೇ ಸಿಸ್ಟಮ್ (ಪಿಪಿಎಸ್) :
ಇತ್ತೀಚಿನ ದಿನಗಳಲ್ಲಿ, ಬ್ಯಾಂಕುಗಳು ಗ್ರಾಹಕರ ವಹಿವಾಟುಗಳ ಸುರಕ್ಷತೆ ಮತ್ತು ಉಳಿತಾಯ ಶೀಲತೆ ಹೆಚ್ಚಿಸುವ ದಿಸೆಯಲ್ಲಿ ಹಲವಾರು ಮುಖ್ಯ ಬದಲಾವಣೆಗಳನ್ನು ಪರಿಚಯಿಸಿವೆ. ಇವುಗಳಲ್ಲಿ “ಪಾಸಿಟಿವ್ ಪೇ ಸಿಸ್ಟಮ್” (PPS) ಮತ್ತು ಉಳಿತಾಯ/ಸ್ಥಿರ ಠೇವಣಿ ಬಡ್ಡಿದರಗಳ ಪರಿಷ್ಕರಣೆ ಗಮನಾರ್ಹವಾಗಿವೆ.
ವಹಿವಾಟಿನ ಭದ್ರತೆಯನ್ನು ಹೆಚ್ಚಿಸಲು, ಅನೇಕ ಬ್ಯಾಂಕುಗಳು ಧನಾತ್ಮಕ ಪಾವತಿ ವ್ಯವಸ್ಥೆಯನ್ನು (ಪಿಪಿಎಸ್) ಪರಿಚಯಿಸುತ್ತಿವೆ. ಈ ವ್ಯವಸ್ಥೆಗೆ 5,000 ಕ್ಕಿಂತ ಹೆಚ್ಚಿನ ಚೆಕ್ ಪಾವತಿಗಳಿಗೆ ಪರಿಶೀಲನೆಯ ಅಗತ್ಯವಿದೆ. ಗ್ರಾಹಕರು ಪ್ರಕ್ರಿಯೆಗೊಳಿಸುವ ಮೊದಲು ಚೆಕ್ ಸಂಖ್ಯೆ, ದಿನಾಂಕ, ಪಾವತಿದಾರರ ಹೆಸರು ಮತ್ತು ಮೊತ್ತದಂತಹ ವಿವರಗಳನ್ನು ದೃಢೀಕರಿಸಬೇಕು, ವಂಚನೆ ಮತ್ತು ದೋಷಗಳನ್ನು ಕಡಿಮೆ ಮಾಡಬೇಕು.
ಪಾಸಿಟಿವ್ ಪೇ ಸಿಸ್ಟಮ್ (PPS) :
ವಹಿವಾಟುಗಳ ಭದ್ರತೆ ಹೆಚ್ಚಿಸಲು, ಬ್ಯಾಂಕುಗಳು ಪಾಸಿಟಿವ್ ಪೇ ಸಿಸ್ಟಮ್ ಅನ್ನು ಅನುಷ್ಠಾನಗೊಳಿಸುತ್ತಿವೆ. ಇದರ ಪ್ರಕಾರ, ₹5,000 ಕ್ಕಿಂತ ಹೆಚ್ಚಿನ ಮೊತ್ತದ ಚೆಕ್ ಪಾವತಿಗಳಿಗೆ ಗ್ರಾಹಕರು ಕೆಲವು ಪ್ರಮುಖ ವಿವರಗಳನ್ನು ಮೊದಲೇ ದೃಢೀಕರಿಸಬೇಕು.
ಚೆಕ್ ನೀಡುವ ಮೊದಲು, ಗ್ರಾಹಕರು ತಮ್ಮ ಬ್ಯಾಂಕಿಗೆ ಚೆಕ್‌ನ ಸಂಖ್ಯೆ, ದಿನಾಂಕ, ಪಾವತಿದಾರರ ಹೆಸರು, ಮೊತ್ತ ಮತ್ತು ಖಾತೆ ವಿವರಗಳನ್ನು ಸಲ್ಲಿಸಬೇಕು. ಪಾವತಿದಾರರ ಹೆಸರು ಮತ್ತು ಮೊತ್ತದಂತಹ ವಿವರಗಳನ್ನು ದೃಢೀಕರಿಸಬೇಕು, ವಂಚನೆ ಮತ್ತು ದೋಷಗಳನ್ನು ಕಡಿಮೆ ಮಾಡಬೇಕು.
ಉಳಿತಾಯ ಖಾತೆ :
ಉಳಿತಾಯದ ಆದಾಯವನ್ನು ಬ್ಯಾಂಕುಗಳು ಉಳಿತಾಯ ಖಾತೆಗಳು ಮತ್ತು ಸ್ಥಿರ ಠೇವಣಿಗಳ (FD) ಬಡ್ಡಿದರಗಳನ್ನು ಪರಿಷ್ಕರಿಸಿವೆ.ಉಳಿತಾಯ ಖಾತೆಯ ಬಡ್ಡಿ ಈಗ ಖಾತೆಯ ಬ್ಯಾಲೆನ್ಸ್ ಮೇಲೆ ಅವಲಂಬಿತವಾಗಿರುತ್ತದೆ, ಅಂದರೆ ಹೆಚ್ಚಿನ ಬ್ಯಾಲೆನ್ಸ್ ಗಳು ಉತ್ತಮ ದರಗಳನ್ನು ಗಳಿಸಬಹುದು. ಈ ಹೊಂದಾಣಿಕೆಗಳು ಸ್ಪರ್ಧಾತ್ಮಕ ಆದಾಯವನ್ನು ನೀಡುವ ಮತ್ತು ಉಳಿತಾಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.
ವಿದ್ಯುತ್ ದರ ಹೆಚ್ಚಳ:
ಕರ್ನಾಟಕದಲ್ಲಿ ವಿದ್ಯುತ್ ದರ’ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ. ರಾಜ್ಯದಲ್ಲಿ ‘ವಿದ್ಯುತ್ ದರ’ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ ಮಾಡಿ ಕೆಇಆರ್ ಸಿ ಆದೇಶ ಹೊರಡಿಸಿದ್ದು, ಏ.1 ರಿಂದ ಜಾರಿಗೆ ಬರಲಿದೆ. ಹೌದು, ಪ್ರತಿ ಯೂನಿಟ್‌ಗೆ 36 ಪೈಸೆಯಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ.
ವಿದ್ಯುತ್ ಪ್ರಸರಣ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಣಿ ಗ್ಯ್ರಾಚುಟಿ ಹಣವನ್ನು ಗ್ರಾಹಕರಿಂದ ವಸೂಲಿಗೆ ಮುಂದಾಗಿರುವ ಕೆಇಆರ್ ಸಿ, ವಿದ್ಯುತ್ ದರ 36 ಪೈಸೆ ಹೆಚ್ಚಿಸಿದೆ. ಏಪ್ರಿಲ್ 1ರಿಂದಲೇ ಕೆಇಆರ್ ಸಿ ಹೊಸ ದರ ಜಾರಿಗೆ ಬರಲಿದೆ ಎಂದು ತಿಳಿದು ಬಂದಿದೆ.
ಕ್ರೆಡಿಟ್ ಕಾರ್ಡ್ ಪ್ರಯೋಜನ :
ಎಸ್ಬಿಐ ಮತ್ತು ಐಡಿಎಫ್ಸಿ ಫಸ್ಟ್ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕುಗಳು ತಮ್ಮ ಕೋ-ಬ್ರಾಂಡೆಡ್ ವಿಸ್ತಾರಾ ಕ್ರೆಡಿಟ್ ಕಾರ್ಡ್‌ಗಳನ್ನು ಬದಲಾಯಿಸುತ್ತಿವೆ. ಟಿಕೆಟ್ ವೋಚರ್‌ಗಳು, ನವೀಕರಣ ಸವಲತ್ತುಗಳು ಮತ್ತು ಮೈಲಿಗಲ್ಲು ಬಹುಮಾನಗಳಂತಹ ಪ್ರಯೋಜನಗಳನ್ನು ನಿಲ್ಲಿಸಲಿದೆ. ಆಕ್ಸಿಸ್ ಬ್ಯಾಂಕ್ ಏಪ್ರಿಲ್ 18 ರಿಂದ ಇದೇ ರೀತಿಯ ಬದಲಾವಣೆಗಳನ್ನು ಜಾರಿಗೆ ತರಲಿದ್ದು, ಇದು ತನ್ನ ವಿಸ್ತಾರಾ ಕ್ರೆಡಿಟ್ ಕಾರ್ಡಾರ ಮೇಲೆ ಪರಿಣಾಮ ಬೀರುತ್ತದೆ.
2025-26ರ ಆದಾಯ ತೆರಿಗೆ ಸ್ಲ್ಯಾಬ್‌ಗಳ – ಹೊಸ ದರಗಳು!
2025-26ರ ಹಣಕಾಸು ವರ್ಷದ ಆದಾಯ ತೆರಿಗೆ ಸ್ಪ್ಯಾಬ್ಬಳು ಬಜೆಟ್ 2025 ರಲ್ಲಿ ಸೆಕ್ಷನ್ 115 ಬಿಎಸಿ ಅಡಿಯಲ್ಲಿ ಹೊಸ ತೆರಿಗೆ ಸ್ಲಾಬ್ ದರಗಳನ್ನು ಪ್ರಸ್ತಾಪಿಸಲಾಗಿದೆ, ಅಂದರೆ ಹೊಸ ತೆರಿಗೆ ಆಡಳಿತ ಅಥವಾ ಡೀಫಾಲ್ಟ್ ತೆರಿಗೆ ಆಡಳಿತ. ವ್ಯಕ್ತಿಗಳು ಹೆಚ್ಚು ಉಳಿತಾಯ ಮಾಡುತ್ತಾರೆ ಮತ್ತು ಅವರ ಖರ್ಚು ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಇದು. ಈ ಪರಿಷ್ಕೃತ ತೆರಿಗೆ ಸ್ಲಾಬ್ ದರಗಳು 2025-26ರ ಹಣಕಾಸು ವರ್ಷದಿಂದ ಗಳಿಸಿದ ಆದಾಯಕ್ಕೆ ಅನ್ವಯವಾಗುತ್ತವೆ.
25 ರ ಏಪ್ರಿಲ್ 1 ರಿಂದ ಜಾರಿಗೆ ಬರುವ ಈ ಹೊಸ ಹಣಕಾಸು ನಿಯಮಗಳು ಗ್ರಾಹಕರ ಜೇಬಿಗೆ ನೇರವಾಗಿ ಪರಿಣಾಮ ಬೀರುತ್ತವೆ. ಎಟಿಎಂ ಶುಲ್ಕಗಳು ಮತ್ತು ಕನಿಷ್ಠ ಬ್ಯಾಲೆನ್ಸ್ ನಿಯಮಗಳ ಬದಲಾವಣೆಗಳು ದೈನಂದಿನ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವ ಅಗತ್ಯವನ್ನು ಒತ್ತಿಹೇಳುತ್ತವೆ. ಈ ಬದಲಾವಣೆಗಳಿಗೆ ತಕ್ಕಂತೆ ತಮ್ಮ ಆರ್ಥಿಕ ನಿರ್ವಹಣೆಯನ್ನು ಸರಿಹೊಂದಿಸಿಕೊಂಡರೆ, ಗ್ರಾಹಕರು ಹೆಚ್ಚುವರಿ ಶುಲ್ಕಗಳ ಭಾರದಿಂದ ಪಾರಾಗಬಹುದು.