ಇಂದಿನ ದಿನವು ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ, ಅನ್ಯರ ಮೇಲೆ ಕರುಣೆ, ಹಳೆಯ ಘಟನೆಯ ಸ್ಮರಣೆ, ಆದಾಯದಲ್ಲಿ ವಂಚನೆ, ಅನ್ಯರಿಂದ ತ್ಯಕ್ತವಾದುದರ ಪ್ರಾಪ್ತಿ ಇವೆಲ್ಲವನ್ನೂ ಒಳಗೊಂಡಿದೆ. ಪ್ರತಿಯೊಬ್ಬರ ಜೀವನದಲ್ಲೂ ವಿಭಿನ್ನ ಘಟನೆಗಳು ಸಂಭವಿಸಲಿವೆ. ಇಂದಿನ ರಾಶಿಭವಿಷ್ಯವು ನಿಮ್ಮ ಮುಂದಿನ 24 ಗಂಟೆಗಳಿಗೆ ಮಾರ್ಗದರ್ಶನ ನೀಡುತ್ತದೆ.
ಮೇಷ ರಾಶಿ: ಆತ್ಮವಿಶ್ವಾಸದ ದಿನ
ನಿಮ್ಮದಾದ ಕೆಲಸಗಳನ್ನು ಇಂದು ಬಾಕಿ ಉಳಿಸಿಕೊಳ್ಳಬೇಡಿ. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ನೀವು ಒಬ್ಬರೇ ತೆಗೆದುಕೊಳ್ಳಬೇಡಿ. ಹಳೆಯ ನೋವುಗಳು ಕಾಣಿಸಿಕೊಳ್ಳಬಹುದು. ವಾದವು ಸಂಘರ್ಷವಾಗಿ ಬದಲಾಗಲಿದೆ. ಸೂಕ್ತ ಚಿಕಿತ್ಸೆ ಅವಶ್ಯಕ. ಯಾರನ್ನೂ ನೀವು ನಿಮಗಿಂತ ಕೆಳಗೆಂದು ಭಾವಿಸುವುದು ಬೇಡ. ನಿಮಗೇ ಗೊತ್ತಿಲ್ಲದೇ ಅನಾರೋಗ್ಯವು ಸರಿಯಾಗುವುದು. ಸಣ್ಣ ಮಟ್ಟಿನ ಗೌರವಕ್ಕೆ ಪಾತ್ರರಾಗುವಿರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು.
ವೃಷಭ ರಾಶಿ: ಆಲಸ್ಯದಿಂದ ದೂರವಿರಿ
ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆಲಸ್ಯತನವನ್ನು ತೋರಿಸುವರು. ನಿಮ್ಮ ಆಲೋಚನೆಗಳು ನಕಾರಾತ್ಮಕವಾಗಿ ಇರಲಿದೆ. ನೀವು ಇಂದು ಕುಲದೇವರ ದರ್ಶನಕ್ಕೆ ತೆರಳಲಿದ್ದೀರಿ. ನಿಮ್ಮ ಆಸಕ್ತಿಯ ಕೆಲಸವನ್ನು ಇಂದು ಮಾಡಲಾಗದೇ ಇದ್ದೀತು. ನಿಕ್ಷೇಪವಾಗಿ ಕೊಟ್ಟ ವಸ್ತುವನ್ನು ಪಡೆಯಲು ಸಾಧ್ಯವಾಗದು. ನಿಮ್ಮನ್ನೇ ಹೋಲುವಂತಹವರು ನಿಮಗೆ ಸಿಗಬಹುದು. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ.
ಮಿಥುನ ರಾಶಿ: ಜಾಗರೂಕತೆ ಅಗತ್ಯ
ಯಾರದೋ ಆಡಿದ ಮಾತಿನಿಂದ ನೀವು ನಿಮ್ಮವರನ್ನು ಕಳೆದುಕೊಳ್ಳಬಹುದು. ನೀವು ಮಾಡಲು ಹೊರಟ ಕೆಲಸಕ್ಕೆ ಹಿತಶತ್ರುಗಳಿಂದಲೇ ತೊಂದರೆಯಾಗಬಹುದು. ಪರರು ಕೇಳಿದ ಸಹಾಯವನ್ನು ಮಾಡಿ. ಸರ್ಕಾರಿ ಕಾರ್ಯಕ್ಕೆ ನಿಮಗೆ ಅವಕಾಶಗಳು ಸಿಗದೇ ಹೋಗಬಹುದು. ತಿಳಿವಳಿಕೆ ಇಲ್ಲದೇ ಕಾರ್ಯವನ್ನು ಮಾಡಿ ಕೈ ಸುಟ್ಟುಕೊಳ್ಳಬೇಡಿ. ದೂರದ ಪ್ರಯಾಣಕ್ಕೆ ನೀವು ಮೊದಲು ಮಾನಸಿಕ ಸಿದ್ಧತೆಯನ್ನು ಮಾಡಿಕೊಳ್ಳುವಿರಿ.
ಕರ್ಕಾಟಕ ರಾಶಿ: ಪ್ರಶಂಸೆ ಸಿಗುವ ದಿನ
ಉದ್ಯೋಗದಲ್ಲಿ ನಿಮ್ಮ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಪುಣ್ಯ ಸ್ಥಳಗಳಿಗೆ ಹೋಗುವ ಕನಸು ಭಗ್ನವಾಗುವುದು. ಆರ್ಥಿಕತೆಯನ್ನು ಸರಿದೂಗಿಸಲು ನೀವು ಏನಾದರೂ ಹೊಸ ಯೋಜನೆಯನ್ನು ರೂಪಿಸಬಹುದು. ಯಾರೋ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ನಿಮಗೆ ಸಾಕಾಗುವುದು. ಸಮಯವನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ಯಾವುದೇ ಪ್ರೇರಣೆ ನಿಮಗೆ ಸಿಕ್ಕಿ, ಯೋಜನೆ ಬದಲಾಯಿಸುವಿರಿ. ಹೂಡಿಕೆ ನಿಮಗೆ ಪ್ರಶಸ್ತ ಎನಿಸಬಹುದು.
ಸಿಂಹ ರಾಶಿ: ಆಸ್ತಿ ವಿಚಾರದಲ್ಲಿ ಎಚ್ಚರಿಕೆ
ನಿಮ್ಮ ಬಂಧುಮಿತ್ರರು ನಿಮಗೆ ಸಲ್ಲದ್ದನ್ನು ಮಾಡುವರು. ಅವರ ಜೊತೆ ಕಲಹವಾಗುವ ಸಾಧ್ಯತೆ ಇದೆ. ಆಸ್ತಿಯ ವಿಚಾರದಲ್ಲಿ ನಿಮಗೆ ಸಮಪಾಲ ಸಿಗದೇ ಹೋಗಬಹುದು. ನಿಮ್ಮನ್ನು ಯಾರಾದರೂ ರಹಸ್ಯವಾಗಿ ಗಮನಿಸುತ್ತಿದ್ದಾರೆ ಎಂಬ ಸಂದೇಹ ಬರಬಹುದು. ವಿದೇಶದ ಸಂಸ್ಥೆಗಳಿಂದ ಕರೆ ಬರುವ ಸಾಧ್ಯತೆ ಇದೆ. ನಿಮ್ಮ ತಂದೆಯ ಮಾರ್ಗದರ್ಶನದಲ್ಲಿ ಕುಟುಂಬ ವ್ಯವಹಾರವು ಮತ್ತೆ ಬೆಳೆಯುತ್ತದೆ. ವೃತ್ತಿಯಲ್ಲಿ ಜವಾಬ್ದಾರಿಯನ್ನು ಬೇರೆಯವರಿಗೆ ಹಾಕಿ, ಸುಮ್ಮನಾಗುವಿರಿ.
ಕನ್ಯಾ ರಾಶಿ: ಸಜ್ಜನರ ಸಹವಾಸದಿಂದ ಸಂತೋಷ
ಸಜ್ಜನರ ಸಹವಾಸದಿಂದ ಸಂತೋಷ ಸಿಗಲಿದೆ. ನಿಮ್ಮನ್ನು ಗೌರವಿಸಿದವರಿಗೆ ಪ್ರತಿಯಾಗಿ ಗೌರವಿಸಿ. ಅನಾರೋಗ್ಯದ ಕಾರಣ ನೀವು ಸಾಲವನ್ನು ಮಾಡಬೇಕಾಗಬಹುದು. ನಿಮ್ಮ ಕೂಡಿಟ್ಟ ಹಣವು ಆಪತ್ಕಾಲದಲ್ಲಿ ಸಿಗುವುದು ಕಷ್ಟವಾದೀತು. ಭೂಮಿಯ ಖರೀದಿಯು ನಿಮಗೆ ಅನಿವಾರ್ಯವಾಗಲಿದೆ. ಅದನ್ನು ಬದಲಿಸಿಕೊಂಡು ಮುಂದುವರಿಯಿರಿ. ಹೂಡಿಕೆಯಲ್ಲಿ ಅಜ್ಞಾನದ ಕಾರಣದಿಂದ ನಷ್ಟವಾಗುವುದು. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು.
ತುಲಾ ರಾಶಿ: ಅಲ್ಪ ಯಶಸ್ಸಿಗೆ ಸಂತೋಷ
ವಿದ್ಯಾರ್ಥಿಗಳು ಅಲ್ಪ ಯಶಸ್ಸಿಗೆ ಸಂತೋಷಪಡಬೇಕಾದೀತು. ಅಧಿಕ ಸಂಪಾದನೆಗೆ ಹೆಚ್ಚು ಶ್ರಮವೂ ಬೇಕು. ವಿದೇಶದಲ್ಲಿ ಇರುವವರಿಗೆ ಅಶುಭವಾರ್ತೆಯು ಬರಬಹುದು. ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ನೀವೇ ಅಪತ್ತಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಅತಿಯಾದ ನಗುವು ಅಪಾಯಕಾರಿ. ನಿಮ್ಮ ಮನಃಸ್ಥಿತಿಯನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳಬಹುದು. ಕಾರ್ಯದಲ್ಲಿ ಎಲ್ಲಿಯೂ ತಪ್ಪಾಗದಂತೆ ನೋಡಿಕೊಳ್ಳಿ.
ವೃಶ್ಚಿಕ ರಾಶಿ: ವಿರೋಧಗಳು ಬರಬಹುದು
ಯಾವುದಾದರೂ ಕಾರ್ಯಕ್ಕೆ ನಿಮ್ಮವರ ವಿರೋಧ ಬರಬಹುದು. ಸಂಗಾತಿಯ ಜೊತೆ ಇಂದು ಹಣದ ವಿಚಾರದಲ್ಲಿ ವೈಮನಸ್ಯ ಉಂಟಾಗಲಿದೆ. ಇಂದು ನಿಮ್ಮ ಉತ್ಸಾಹವು ಕಡಿಮೆ ಇರಲಿದೆ. ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಕಷ್ಟಪಡುವಿರಿ. ನಿಮ್ಮ ಸ್ವಾರ್ಥ ಮನೋಭಾವವು ನಿಮ್ಮನ್ನು ಸಣ್ಣವರನ್ನಾಗಿ ಮಾಡಬಹುದು. ಇಂದು ನಿಮ್ಮ ಸಂಗಾತಿಯಾಗುವನು ನಿಮ್ಮ ಬಗ್ಗೆ ಅತಿಯಾದ ಕಾಳಜಿ ಉಳ್ಳವನು. ನಿಮ್ಮ ವಿಷಯಕ್ಕೆ ಸ್ನೇಹಿತರು ನಗುವರು.
ಧನು ರಾಶಿ: ಆತುರ ಬೇಡ
ಆತುರದ ವ್ಯವಹಾರದಿಂದ ನಿಮಗೆ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು. ನೀವು ಅಂದುಕೊಳ್ಳುವ ವಿಚಾರಗಳು ನಿಮ್ಮದಷ್ಟೇ ಆಗಿರುವುದಿಲ್ಲ. ಶತ್ರುಗಳ ಮೇಲೆ ನಿಮ್ಮ ಗಮನವು ಇರಲಿದೆ. ನಿಮ್ಮ ಅನಾರೋಗ್ಯವನ್ನು ನಕಾರಾತ್ಮಕವಾಗಿ ನೋಡಿಕೊಳ್ಳದೇ ಸಕಾರಾತ್ಮಕವಾಗಿ ಚಿಂತಿಸಿದರೆ ಆರೋಗ್ಯದಲ್ಲಿ ಸುಧಾರಣೆ. ನಿಮ್ಮ ಹಾರಿಕೆಯ ಮಾತುಗಳು ನಿಮ್ಮ ಬಗ್ಗೆ ನಂಬಿಕೆಯು ಇರದಂತೆ ಮಾಡುವುದು. ಯಂತ್ರದಿಂದ ಕೆಲಸ ಮಾಡುವವರಿಗೆ ಕಷ್ಟವಾದೀತು.
ಮಕರ ರಾಶಿ: ಸಂಗಾತಿಯ ಜೊತೆ ಸಮಯ
ಕೇಳಿದ್ದನ್ನು ಸಂಗಾತಿಯಿಂದ ಪಡೆಯಲು ಅಸಾಧ್ಯವಾದೀತು. ವಾಯುವಿಹಾರಕ್ಕೆ ನೀವು ಸಂಗಾತಿಯ ಜೊತೆ ಹೋಗಬಹುದು. ಆರೋಗ್ಯವನ್ನು ನೀವು ಗಮನದಲ್ಲಿಟ್ಟುಕೊಂಡು ಆಹಾರವನ್ನು ಸ್ವೀಕರಿಸಿ. ಅನ್ಯರಿಗೆ ಸಹಕಾರ ನೀಡುವ ಗುಣವನ್ನು ಮೆಚ್ಚಿಕೊಳ್ಳುವರು. ಒರಟು ಸ್ವಭಾವವು ಇಷ್ಟವಾಗದು. ಹಿರಿಯ ಅಧಿಕಾರಿಗಳ ಸಹಾಯದಿಂದ ನಿಮ್ಮ ಸಂಕೀರ್ಣ ಕಾರ್ಯಗಳು ಸಹ ಇಂದು ಪೂರ್ಣವಾಗಲಿದೆ. ಹಿರಿಯರಿಂದ ಆಶೀರ್ವಾದ ಸಿಗಲಿದೆ.
ಕುಂಭ ರಾಶಿ: ಸ್ವಾವಲೋಕನದ ದಿನ
ಸಿರಿವಂತರಾಗಲು ನೀವು ಆಯ್ಕೆ ಮಾಡಿಕೊಂಡ ದಾರಿಯು ಸರಿಯಿರದು. ನಿಮ್ಮ ಬಗ್ಗೆಯೇ ನೀವು ಅವಲೋಕನ ಮಾಡಿಕೊಂಡು ನಿರ್ಧಾರವನ್ನು ತೆಗೆದುಕೊಳ್ಳಿ. ನೀವು ಇಂದು ಸ್ವಭಾವವನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಚಿಕಿತ್ಸೆಗೆ ಸಂಬಂಧಿಸಿದಂತೆ ಅನೇಕ ವೈದ್ಯರ ಸಲಹೆಯನ್ನು ಪಡೆಯುವಿರಿ. ಬೆಲೆಯುಳ್ಳ ಅಮೂಲ್ಯ ವಸ್ತುಗಳು ಕಣ್ಮರೆಯಾಗಬಹುದು. ಆರೋಪ ಪ್ರತ್ಯಾರೋಪಗಳಿಂದ ಸಮಯ ವ್ಯರ್ಥವಾಗಲಿದೆ.
ಮೀನ ರಾಶಿ: ಪ್ರೀತಿ ಗೌರವದಿಂದ ವರ್ತಿಸಿ
ದೊಡ್ಡವರ ಜೊತೆ ಸಹಜವಾಗಿ ಪ್ರೀತಿ ಗೌರವದಿಂದ ವರ್ತಿಸಿ. ಕೆಲವು ನಿರ್ಧಾರಗಳಿಂದ ಆರ್ಥಿಕವಾಗಿ ನಷ್ಟವಾಗುವುದು. ಯಾರ ಮೇಲೂ ಒತ್ತಡವನ್ನು ಹೇರುವುದು ಬೇಡ. ಮಾತಿನಿಂದ ಯಾವುದೇ ವ್ಯವಹಾರ ಸಿಂಧುವಾಗದು. ಅವರವರ ಬದುಕು ಅವರವರಿಗೇ ಇರಲಿದೆ. ಸಹಜ ಬೆಳವಣಿಗೆಗೆ ನಿಮ್ಮ ಒತ್ತು ಹೆಚ್ಚಿರಲಿ. ಮಿತ್ರರ ಜೊತೆ ಹೆಚ್ಚು ಕಾಲವನ್ನು ಕಳೆಯುವಿರಿ. ನೀವು ಒಂಟಿಯಾಗೇ ಇರಲು ಇಚ್ಛಿಸುವವರು, ಹಾಗೆಯೇ ಇರುವುದು ಒಳ್ಳೆಯದು.





