ಹುಬ್ಬಳ್ಳಿ: ನವೀನ ಪಾರ್ಕ್ ಉತ್ತರ ಕರ್ನಾಟಕ ಭಾಗದಲ್ಲಿಯೇ ಪ್ರಸಿದ್ಧ ಹಾಗೂ ಸುವ್ಯವಸ್ಥಿತ ಬಡಾವಣೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಈ ಹೆಗ್ಗಳಿಕೆಯನ್ನು ಉಳಿಸಿಕೊಂಡು ಹೋಗುವುದು ಬಡಾವಣೆಯ ಪ್ರತಿಯೊಬ್ಬ ನಿವಾಸಿಯ ಜವಾಬ್ದಾರಿಯಾಗಿದೆ. ಸ್ವಚ್ಛತೆ, ಪರಿಸರ ಸಂರಕ್ಷಣೆ, ಶಿಸ್ತು ಹಾಗೂ ಸಾರ್ವಜನಿಕ ಸೌಲಭ್ಯಗಳ ನಿರ್ವಹಣೆಯಲ್ಲಿ ನಿವಾಸಿಗಳು ಸಂಘದೊಂದಿಗೆ ಕೈಜೋಡಿಸಬೇಕು ಎಂದು ಸ್ವರ್ಣ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ್ ಅವರು ಹೇಳಿದರು.
ನಗರದ ನವೀನ ಪಾರ್ಕ್ ರೆಸಿಡೆಂಟ್ಸ್ ಅಸೋಸಿಯೇಷನ್ ವತಿಯಿಂದ ಬಡಾವಣೆಯ ಸಿಎ ಸೈಟ್‍ನಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಅಸೋಸಿಯೇಷನ್ ಅಧ್ಯಕ್ಷ ಡಾ. ಚಿ.ವಿ.ಎಸ್.ವಿ. ಪ್ರಸಾದ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪಾಲಿಕೆಯ ವತಿಯಿಂದ ನವೀನ ಪಾರ್ಕ್‍ನ ಉದ್ಯಾನವನವನ್ನು ಬಡಾವಣೆ ಸಂಘಕ್ಕೆ ಹಸ್ತಾಂತರಿಸಲಾಗಿದ್ದು, ಅದನ್ನು ಅತ್ಯುತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುವ ಹೊಣೆಗಾರಿಕೆ ಸಂಘದ ಮೇಲಿದೆ. ಉದ್ಯಾನವನವನ್ನು ಹಸಿರು, ಸ್ವಚ್ಛ ಹಾಗೂ ಸುಂದರವಾಗಿಸಿ ರಾಜ್ಯದಲ್ಲಿಯೇ ಮಾದರಿ ಪಾರ್ಕ್ ಆಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಮಕ್ಕಳು ಹಾಗೂ ಹಿರಿಯರಿಗೆ ಅನುಕೂಲವಾಗುವಂತೆ ವಾಕಿಂಗ್ ಟ್ರ್ಯಾಕ್, ಹಸಿರು ವಾತಾವರಣ, ಕುಳಿತುಕೊಳ್ಳುವ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಬಡಾವಣೆಯ ಅಭಿವೃದ್ಧಿಗೆ ನಿವಾಸಿಗಳ ಸಹಕಾರ ಅತ್ಯಂತ ಮುಖ್ಯವಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ನವೀನ ಪಾರ್ಕ್ ಮತ್ತಷ್ಟು ಮಾದರಿ ಬಡಾವಣೆಯಾಗಿ ಹೊರಹೊಮ್ಮಲಿದೆ ಎಂದರು. ಅಗಸ್ಟ್ 15. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಹೆಮ್ಮೆ, ಗೌರವ ಮತ್ತು ದೇಶಭಕ್ತಿಯ ಭಾವನೆ ಮೂಡಿಸುವ ಪವಿತ್ರ ದಿನ. ನಮ್ಮ ಭಾರತ ಮಾತೆ ಬ್ರಿಟಿಷರ ಸುಮಾರು ಎರಡು ಶತಮಾನಗಳ ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತವಾದ ಐತಿಹಾಸಿಕ ದಿನ. ಆ ಮಹಾನ್ ದಿನದ ಸ್ಮರಣಾರ್ಥವಾಗಿ ನಾವು ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತೇವೆ. ಹತ್ತು ಹಲವಾರು ಹೋರಾಟಗಳು, ಸತ್ಯಾಗ್ರಹಗಳಿಂದ ಸ್ವಾತಂತ್ರ್ಯ ದೊರೆತಿದೆ. ಹೊರಾಟಗಾರರನ್ನು ಗೌರವಿಸುವುದು, ದೇಶದ ಮೇಲೆ ಪ್ರೇಮವನ್ನು ಹೊಂದುವುದು ನಾಗರೀಕರಾದ ನಮ್ಮೇಲ್ಲರ ಆದ್ಯ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಕಾಪೆರ್Çರೇಟರ್ ಸುವರ್ಣ ಕಲ್ಲಕುಂಟ್ಲಾ, ಸಂಘದ ಕಾರ್ಯದರ್ಶಿ ಕೆ. ರಮಣಮೂರ್ತಿ, ಸುಭಾಷ್ ಬಾಗಲಕೋಟಿ, ಕೃಷ್ಣ ಮಿಸ್ಕಿನ್, ಎನ್.ಆರ್. ಹಬೀಬ್, ಮಹಾಂತೇಶ್ ಕುಮಟಗಿಕರ್ ಸೇರಿದಂತೆ ಅಸೋಸಿಯೇಷನ್‍ನ ಪದಾಧಿಕಾರಿಗಳು, ಸದಸ್ಯರು ಹಾಗೂ ಬಡಾವಣೆ ನಿವಾಸಿಗಳು ಉಪಸ್ಥಿತರಿದ್ದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಭಕ್ತಿ ಗೀತೆಗಳು ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನಿವಾಸಿಗಳಲ್ಲಿ ದೇಶಾಭಿಮಾನ ಮತ್ತು ಸಾಮಾಜಿಕ ಹೊಣೆಗಾರಿಕೆಯ ಸಂದೇಶ ಸಾರಲಾಯಿತು.





