• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ರಾಜಕಾರಣ ಹೊರಗೆ ಮಾಡೋಣ, ಇಲ್ಲಿ ಜನ ಸೇವೆ ಮಾಡೋಣ: ಸಿಎಂ ಡಿ ಕೆ ಶಿವಕುಮಾರ್

ಕವಿತಾ by ಕವಿತಾ
August 14, 2026 - 7:06 pm
in ಕರ್ನಾಟಕ
0 0
0
Untitled design (50)

ಬೆಂಗಳೂರು, ಆ 14: “ನನಗೆ ರಾಜ್ಯದ ಜನರ ಸೇವೆ ಮಾಡಲು ಅನೇಕ ಕನಸುಗಳಿವೆ. ಈ ಕನಸುಗಳನ್ನು ಈಡೇರಿಸಲು ನೀವೆಲ್ಲರೂ ಸಹಕಾರ ನೀಡಿ. ರಾಜಕಾರಣ ಹೊರಗೆ ಮಾಡೋಣ. ಇಲ್ಲಿ ಸೇವೆ ಮಾಡೋಣ. ರಾಜ್ಯದ ಯಶಸ್ಸಿಗೆ ಒಟ್ಟಾಗಿ ನಡೆಯೋಣ. ಜನರು ಕೊಟ್ಟ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳೋಣ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವಿಧಾನಪರಿಷತ್ ನಲ್ಲಿ ಶುಕ್ರವಾರ ಮಾತನಾಡಿದರು.

“ಈ ಹಿಂದೆ ಆಡಳಿತ ನಡೆಸಿದ ಅನೇಕರ ಸಾಕ್ಷಿಗುಡ್ಡೆಗಳನ್ನು ಅಳಿಸಲು ಆಗುತ್ತದೆಯೇ? ಎಲ್ಲರೂ ಸೇರಿ ಇತಿಹಾಸ ನಿರ್ಮಾಣ ಮಾಡೋಣ. ಅಧಿಕಾರ ಶಾಶ್ವತವಲ್ಲ. ಇಂದು ಬರುತ್ತದೆ, ನಾಳೆ ಹೋಗುತ್ತದೆ. ನಾವು ಮಾಡಿದ ಸಾಧನೆ ಮಾತ್ರ ಸಾಕ್ಷಿಗುಡ್ಡೆಯಾಗಿ ಉಳಿಯುತ್ತದೆ. ಜನರು ನಮ್ಮನ್ನು ನೆನಪಿಟ್ಟುಕೊಳ್ಳುವುದು ಅಧಿಕಾರದಿಂದಲ್ಲ, ನಾವು ಮಾಡಿದ ಕೆಲಸದಿಂದ” ಎಂದರು.

RelatedPosts

ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿಯಲ್ಲಿ ಹೊಸ ವ್ಯವಸ್ಥೆಗೆ ಚಾಲನೆ

ಉ.ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿ, ಚರ್ಚೆಗೆ ಒತ್ತು ಕೊಡುತ್ತೀರೆಂಬ ವಿಶ್ವಾಸ ಇದೆ; ಲಕ್ಷ್ಮೀ ಹೆಬ್ಬಾಳ್ಕರ್

ಆ. 31ರವರೆಗೆ ಬೆಳೆ ವಿಮೆ ನೋಂದಣಿ ದಿನಾಂಕ ವಿಸ್ತರಿಸಲು ಕೇಂದ್ರಕ್ಕೆ ಶಿಫಾರಸು

ತಂದೆಯ ಸಾಲಕ್ಕೆ SSLC ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ

ADVERTISEMENT
ADVERTISEMENT

“ಬಿಜೆಪಿ, ಕಾಂಗ್ರೆಸ್ ನಲ್ಲಿ ಇದ್ದವರು ಈಗ ಅಂದರ್ ಬಾಹರ್ ಆಗಿದ್ದಾರೆ. ಅಧಿಕಾರ ಹೇಗೆಂದು ಅಳೆಯಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರನ್ನು ಪಕ್ಷೇತರರು ಸೇರಿ ಮುಖ್ಯಮಂತ್ರಿ ಮಾಡಿದರು. ಅಧಿಕಾರದ ಆಟ ಸಾಕಷ್ಟು ನಡೆಯಿತು. ‌ಅಂತಿಮವಾಗಿ ಉಳಿದದ್ದು ಅಧಿಕಾರವಲ್ಲ. ಮನುಷ್ಯತ್ವ. ಮಾಡಿದ ಕೆಲಸ” ಎಂದರು.

ಬಂಗಾರಪ್ಪ ಅವರು ನುಡಿದ ಭವಿಷ್ಯ ನಿಜವಾಗಿದೆ

“ಬಂಗಾರಪ್ಪ ಅವರು ಧರಂಸಿಂಗ್ ಅವರ ಬಳಿಯಿದ್ದ ಬಂಧೀಖಾನೆ ಖಾತೆಯನ್ನು ನನಗೆ ನೀಡಿದರು. ಆಗ ಅವರು ನಾನೂ ಈ ಖಾತೆ ನಿರ್ವಹಿಸಿ ಈಗ ಸಿಎಂ ಆಗಿದ್ದೀನಿ. ನೀನೂ ಒಂದಲ್ಲ‌ ಒಂದು ದಿನ ಸಿಎಂ‌ ಆಗುವೆ ಎಂದಿದ್ದರು.‌ ಈಗ ಅವರ ಭವಿಷ್ಯ ನಿಜವಾಗಿದೆ ನಾನು ಮಾನವೀಯತೆ ನಂಬುತ್ತೇನೆ. ನನ್ನ ಗುರುಗಳು ನನಗೆ ಇದನ್ನೇ ಹೇಳಿಕೊಟ್ಟಿದ್ದಾರೆ. ಮಾನ ಧರ್ಮಕ್ಕೆ ಜಯವಾಗಲಿ. ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ನಾನು ಒಕ್ಕಲಿಗನಾದರೂ ನಂಬುವುದು ರಂಭಾಪುರಿ ಶ್ರೀಗಳನ್ನು” ಎಂದು ಹೇಳಿದರು.

“ಈ ರಾಜ್ಯದ ಜನರ ಆಶೀರ್ವಾದ, ಪಕ್ಷದ ವರಿಷ್ಠರ ತೀರ್ಮಾನದಿಂದ, ನಮ್ಮ ಪಕ್ಷದ ಶಾಸಕರಿಂದ, ನಾನು ನಂಬಿದ ಗುರುಪೀಠ, ಮಠ, ಸರ್ವಧರ್ಮದ ಗುರುಗಳು ಹಾಗೂ ನನ್ನ ಪರವಾಗಿ ನಿಂತ,‌ ಹರಕೆ ಕಟ್ಟಿದ ಜನರ ಪ್ರಾರ್ಥನೆಯಿಂದ ಸಿಎಂ ಸ್ಥಾನವನ್ನು ಅಲಂಕರಿಸಿದ್ದೇನೆ. ನಾನು ಈಗ ಜನರ ಪ್ರತಿನಿಧಿ. ನಾವೆಲ್ಲರೂ ಸೇರಿ ರಾಜ್ಯದ ಜನರ ಸೇವೆಯನ್ನು ಮಾಡೋಣ” ಎಂದರು.

“ಇಂದು ದುಃಖ ಮತ್ತು ಸಂತೋಷ ಎರಡೂ ಸಂದರ್ಭದಲ್ಲಿ ನಾವು ನಿಂತಿದ್ದೇವೆ.‌ ಬಸರಾಜ ಹೊರಟ್ಟಿ ಅವರು ಬಹಳ ಘನತೆಯಿಂದ ವಿಧಾನಪರಿಷತ್ತನ್ನು ನಡೆಸಿಕೊಟ್ಟು ಮಾದರಿಯಾಗಿದ್ದಾರೆ‌. ಅವರು ನಮಗೆಲ್ಲಾ ಕೃತಜ್ಞತೆ ಸಲ್ಲಿಸಬೇಕು ಎಂದು ಆಸೆಪಟ್ಟಿದ್ದರು. ಆದರೆ ಪರಿಸ್ಥಿತಿಯ ನಿರ್ಣಯ ಬೇರೆಯೇ ಇತ್ತು. ಈಗ ಆ ಘಟನೆಯನ್ನು ಮರೆಯೋಣ” ಎಂದರು.

ಇತಿಹಾಸ ನೆನಪಿಸಿಕೊಂಡ ಸಿಎಂ

“ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಾಗ ಬಳಸಿಕೊಳ್ಳಬೇಕು. ಕೆಂಗಲ್ ‌ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿಸಿದರು. ಆಗ ಇದನ್ನು ಖೈದಿಗಳು ಕಟ್ಟಿದರು. ಒಂದು ದಿನ ಕಟ್ಟಡ ಕಾಮಗಾರಿ ವೀಕ್ಷಣೆಗೆ ಬಂದ ಕೆಂಗಲ್ ‌ಹನುಮಂತಯ್ಯ ಅವರ ಮೇಲೆ ಖೈದಿಗಳು ಸಿಟ್ಟಿನಿಂದ ಚಪ್ಪಲಿ ಎಸೆದಿದ್ದು ಇತಿಹಾಸ. ಇಷ್ಟೆಲ್ಲ ಆಗಿ, ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಅವರಿಗೇ ಇಲ್ಲಿ ಕುಳಿತುಕೊಳ್ಳಲು ಅವಕಾಶ ಸಿಗಲಿಲ್ಲ. ಕೆಂಪೇಗೌಡರು ಬೆಂಗಳೂರು ಕಟ್ಟಿದರು, ಹನುಮಂತಯ್ಯನವರು ವಿಧಾನಸೌಧ ಕಟ್ಟಿದರು, ನೀವು ಅವರಂತೆಯ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂದು ಎಸ್ ಎಂ ಕೃಷ್ಣ ಅವರಲ್ಲಿ ಚರ್ಚೆ ನಡೆಸಿದೆ. ಅದರ ಫಲವೇ ಈ ವಿಕಾಸಸೌಧ. ವಿಕಾಸಸೌಧದ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಅವರಿಗೆ ಕುರ್ಚಿ ಮೀಸಲಿಡಲಾಗಿತ್ತು. ಆ ಕುರ್ಚಿ ಮೇಲೆ ಲೋಕೋಪಯೋಗಿ ಸಚಿವರಾಗಿದ್ದ ಧರಂಸಿಂಗ್ ಅವರನ್ನು ಕೂರಿಸಿದರು. ಆಗ ನನಗೆ ಭವಿಷ್ಯ ಕಣ್ಣ ಮುಂದೆ ಬಂದಿತು. ನಂತರ ಧರ್ಮಸಿಂಗ್ ಅವರೇ ಮುಖ್ಯಮಂತ್ರಿಯಾದರು” ಎಂದು ಇತಿಹಾಸ ನೆನಪಿಸಿಕೊಂಡರು.

“8 ಸಲ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಬಂಗಾರಪ್ಪ, ಎಸ್ ಎಂ ಕೃಷ್ಣ, ಸಿದ್ದರಾಮಯ್ಯ ಅವರುಗಳ ಜೊತೆ ಕೆಲಸ ಮಾಡಿದ್ದೇನೆ. ಆದರೆ, ಜೆ.ಎಚ್ ಪಟೇಲ್ ಅವರಷ್ಟು ಅತ್ಯಂತ ಹೃದಯ ವೈಶಾಲ್ಯತೆಯಿದ್ದ ನಾಯಕರನ್ನು ಇಂದಿಗೂ ನೋಡಿಲ್ಲ. ಬೊಮ್ಮಾಯಿ ಅವರ ಆಡಳಿತ ಹಾಗೂ ಅವರನ್ನು ಅಧಿಕಾರದ ಕುರ್ಚಿಯಿಂದ ಇಳಿಸಿದ್ದನ್ನು ಕಣ್ಣಾರೆ ನೋಡಿದ್ದೇನೆ. ಬಂಗಾರಪ್ಪ ಅವರ ಕಾಲದಲ್ಲಿ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿ ಬಂತು. ಈಗಲೂ ಅಂದು ಮುಂದುವರಿದಿದೆ. ಆಗ 1 ಸಾವಿರ ಕೋಟಿ ಮೀಸಲಿಡಲಾಗಿತ್ತು. ಈಗ ಅದು 20 ಸಾವಿರ ಕೋಟಿಯಾಗಿದೆ. ಬಂಗಾರಪ್ಪ ಅವರು ಇಂದು ಬದುಕಿಲ್ಲ. ಅವರು ಜಾರಿ ಮಾಡಿದ ಯೋಜನೆ ಜೀವಂತವಾಗಿದೆ. ವೀರಪ್ಪ ಮೊಯ್ಲಿ ಅವರು ಸಿಇಟಿ ಪ್ರಾರಂಭ ಮಾಡಿದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತಂದರು. ಇಂದು ಕರ್ನಾಟಕ ಈ ದೇಶಕ್ಕೆ ಎಂಜಿನಿಯರ್, ಡಾಕ್ಟರ್ ಗಳನ್ನು ನೀಡಿದ ರಾಜ್ಯವಾಗಿದೆ’ ಎಂದು ಬಣ್ಣಿಸಿದರು.

ವಿಧಾನಸ ಸೌಧ ಕಟ್ಟಿಸಿದ ಹನುಮಂತಯ್ಯನವರು ವಿಧಾನಸೌಧದಲ್ಲಿ ಕೂರಲಿಲ್ಲ

“ಕೆಂಗಲ್ ‌ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿಸಿದರು. ಆಗ ಇದನ್ನು ಖೈದಿಗಳು ಕಟ್ಟಿದರು. ಒಂದು ದಿನ ಕಟ್ಟಡ ಕಾಮಗಾರಿ ವೀಕ್ಷಣೆಗೆ ಬಂದ ಕೆಂಗಲ್ ‌ಹನುಮಂತಯ್ಯ ಅವರ ಮೇಲೆ ಖೈದಿಗಳು ಸಿಟ್ಟಿನಿಂದ ಚಪ್ಪಲಿ ಎಸೆದಿದ್ದರು. ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಅವರಿಗೇ ಈ ಇಲ್ಲಿ ಕುಳಿತುಕೊಳ್ಳಲು ಅವಕಾಶ ಸಿಗಲಿಲ್ಲ” ಎಂದರು.

“ಇತಿಹಾಸಗಳು ಬೇಕಾದಷ್ಟು ಸಂದರ್ಭಗಳನ್ನು ಸೃಷ್ಟಿಸುತ್ತವೆ. ವೀರೇಂದ್ರ ಪಾಟೀಲರ ಆಡಳಿತ, ದೇವರಾಜ ಅರಸು ಅವರು ಹೊಸ ನಾಯಕರನ್ನು ಹುಟ್ಟು ಹಾಕಿದರು. ಯುವಕರಿಗೆ ಪ್ರೋತ್ಸಾಹ ನೀಡಿದರು. ಆ ರೀತಿಯ ಅವಕಾಶ ಸೃಷ್ಟಿ ಮಾಡಿದ ನಾಯಕರನ್ನು ನಾನು ನೋಡಿಲ್ಲ. ಗುಂಡೂರಾವ್ ಅವರ ಆಡಳಿತ ದಿಟ್ಟ ನಿರ್ಧಾರಗಳು ಮಾದರಿ. ರಾಮಕೃಷ್ಣ ಹೆಗಡೆ ಅವರದ್ದು ಪರಿಶುದ್ದ ಆಡಳಿತಗಾರರು. ಬೊಮ್ಮಾಯಿ ಅವರ ಆಡಳಿತ ಹಾಗೂ ಅವರನ್ನು ಅಧಿಕಾರದ ಕುರ್ಚಿಯಿಂದ ಇಳಿಸಿದ್ದನ್ನು ಕಣ್ಣಾರೆ ನೋಡಿದ್ದೇನೆ” ಎಂದು ಹೇಳಿದರು.

ಮಣ್ಣಿನ ಮಗ ಬಿರುದು ಸುಮ್ಮನೆ ಬಂದಿಲ್ಲ; ದೇವಗೌಡರನ್ನು ಹೊಗಳಿದ ಸಿಎಂ

“ಮಾಜಿ ಪ್ರಧಾನಿ ದೇವೇಗೌಡರಿಗೆ ಮಣ್ಣಿನ ಮಗ ಎನ್ನುವ ಬಿರುದು ಸುಮ್ಮನೆ ಬಂದಿಲ್ಲ. ಅವರು ನಾಡಿನ ರೈತರ ಪರವಾಗಿ ಅಪಾರ ಹೋರಾಟ ಮಾಡಿದ್ದಾರೆ. ಅನೇಕ ನೀರಾವರಿ ಯೋಜನೆಗಳನ್ನು ರೂಪಿಸಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಮೇಲ್ಸೇತುವೆ ನಿರ್ಮಾಣ ಮಾಡಿದ್ದು ಕೂಡ ಅವರೇ. ಕುಮಾರಸ್ವಾಮಿ ಹಾಗೂ ನಮ್ಮ ನಡುವೆ ರಾಜಕೀಯ ವೈರುಧ್ಯ ಇರಬಹುದು. ಆದರೆ, ಅವರ ಪೆರಿಫೆರಲ್ ರಿಂಗ್ ರಸ್ತೆ, ಬಿಡದಿ ಸೇರಿದಂತೆ 5 ಟೌನ್ ಶಿಪ್ ನಿರ್ಮಾಣದಂಥ ಯೋಜನೆಗಳನ್ನು ನಾನು ಒಪ್ಪಿಕೊಳ್ಳುತ್ತೇನೆ. ಬೆಂಗಳೂರಿನ ಬೆಳವಣಿಗೆಗೆ ಅವರ ಅಪಾರ ಕೊಡುಗೆ. ಫೆರಿಫೆರಲ್ ರಿಂಗ್ ರೋಡ್ -2 ಯೋಜನೆ ರೂಪಿಸಿದರು. ಅವರಿಗೆ ಸಮಯದ ಅಭಾವವೋ, ತೊಡಕುಗಳು ಎದುರಾಯಿತೋ ಏನೋ ಯೋಜನೆ ಜಾರಿ ಮಾಡಲಾಗಲಿಲ್ಲ” ಎಂದರು.

ಕುಮಾರಸ್ವಾಮಿ ಅವರ ಬಿಡದಿ ಟೌನ್ ಶಿಪ್ ಉತ್ತಮ ಯೋಜನೆ

ತಮ್ಮ ಭಾಷಣದ ಉದ್ದಕ್ಕೂ ಬಿಡದಿ ಟೌನ್ ಶಿಪ್ ಯೋಜನೆಯ ಬಗ್ಗೆ ಅಲ್ಲಲ್ಲಿ ಪ್ರಸ್ತಾಪಿಸಿದ ಸಿಎಂ “ಇದು ಉತ್ತಮ ಯೋಜನೆ” ಎಂದರು.‌ ಆದರೆ ಈಗ ಕೆಲವು ಒತ್ತಡಗಳಿಂದ ಕುಮಾರಸ್ವಾಮಿ ಅವರು ರಾಜಕೀಯ ಮಾತನಾಡುತ್ತಿದ್ದಾರೆ. ಇದಕ್ಕೆಲ್ಲಾ ನಾನು ಬೇಸರಿಸಿಕೊಳ್ಳುವುದಿಲ್ಲ” ಎಂದರು ಜೊತೆಗೆ ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿ ಆಗಿದ್ದ 1 ಸಾವಿರ ಎಕರೆ ಕೈಗಾರಿಕಾ ಪ್ರದೇಶದ ಬಗ್ಗೆಯೂ ಪ್ರಸ್ತಾಪಿಸಿದರು. ದೇವೇಗೌಡರ ನೈಸ್ ರಸ್ತೆ ಯೋಜನೆ ಅತ್ಯುತ್ತಮ” ಎಂದು ಹೊಗಳಿದರು

“ಬೆಂಗಳೂರು ಬೆಳೆಯುತ್ತಿದೆ. ಈಶಾನ್ಯ ಭಾರತದ ಜನ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ಬೆಂಗಳೂರಿಗೆ ಸಾಕಷ್ಟು ‌ಸಂಖ್ಯೆಯಲ್ಲಿ ಬರುತ್ತಿರುವ ಜನಕ್ಕೆ ಮೂಲಸೌಕರ್ಯಗಳನ್ನು ಹೇಗೆ ನೀಡುವುದು. ಹೀಗೆ ಹೊಸ ನಗರಗಳನ್ನು ನಿರ್ಮಾಣ‌ ಮಾಡದೇ ಹೋದರೆ ಅವಕಾಶ ನೀಡುವುದು ಹೇಗೆ?

“ಪಿಜಿಆರ್ ಸಿಂದ್ಯಾ ಕಾಲದಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶ, ದೇವೇಗೌಡರ ಕಾಲದಲ್ಲಿ ಬಿಡದಿ, ವೀರಪ್ಪಮೊಯ್ಲಿ ಅವರ ಕಾಲದಲ್ಲಿ ಎಲೆಕ್ಟ್ರಾನಿಕ್ ಸಿಟಿ, ಪೀಣ್ಯ ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ ಆಯಿತು. ವೀರೇಂದ್ರ ಪಾಟೀಲ್ ಅವರಿಗೆ ಬುದ್ದಿ ಇರಲಿಲ್ಲವೇ?

“ಸುಳ್ಳಿಗೂ ಸತ್ಯಕ್ಕೂ ಅಂತರ ಕೇವಲ ನಾಲ್ಕು ಬೆರಳು.‌ ಕಿವಿಯಲ್ಲಿ ಕೇಳಿದ್ದು ಸತ್ಯವಲ್ಲ. ಕಣ್ಣಲ್ಲಿ ನೋಡಿದ್ದು ಸತ್ಯ. ಎಸ್ ಎಂ‌ ಕೃಷ್ಣ ಅವರ ನೀಲಿ ಕಣ್ಣಿನ ಹುಡುಗ ನಾನಾಗಿದ್ದೆ. ಆದರೂ ಅವರಲ್ಲಿಯೇ ನನ್ನ ಮೇಲೆ ಸಹೋದ್ಯೋಗಿಗಳೇ ಚಾಡಿ ಹೇಳುತ್ತಿದ್ದರು” ಎಂದು ಹೇಳಿದರು.

ಸಭಾಧ್ಯಕ್ಷ ಸಲೀಂ ಅವರ ಬಗ್ಗೆ ಹೆಮ್ಮೆಯಿದೆ

“ಶೇಷಾದ್ರಿಪುರಂ ಕಾಲೇಜು ಚುನಾವಣೆಯಲ್ಲಿ ಸಲೀಂ ಸ್ಪರ್ಧಿಸಿದ್ದರು. ಆಗ ಅವರು ಕುದುರೆ‌ಮೇಲೆ ಕುಳಿತು ಕೈಯಲ್ಲಿ ಹೂ ಹಿಡಿದು ಎಲ್ಲರಿಗೂ ನೀಡುತ್ತಿದ್ದರು.‌ ನಾನು “ಏನಯ್ಯಾ ಹುಡುಗಿಯರಿಗೆ ಹೂ ನೀಡುವಂತೆ ಎಲ್ಲರಿಗೂ ಹೂ ನೀಡುತ್ತಿದ್ದೀಯಾ?” ಎಂದೆ. ಆ ಕಾಲೇಜು ಚುನಾವಣೆಯಲ್ಲಿ ಗೆದ್ದರು.‌ ಈಗ ಬಹಳ ಹೆಮ್ಮೆಯಾಗುತ್ತಿದೆ. ಇಂದು ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದಾರೆ. ಈ ಸ್ಥಾನದಲ್ಲಿ ಕುಳಿತ ಅನೇಕರು ಮುಖ್ಯಮಂತ್ರಿಗಳಾಗಿದ್ದಾರೆ.‌ ಹಣೆಬರಹದ‌ ಬಗ್ಗೆ ಹೇಳಲು ಆಗುವುದಿಲ್ಲ. ಇಲ್ಲಿಗೆ ರಾಜಕಾರಣ ಮುಗಿಯಿತು ಎಂದು ತಿಳಿಯಬೇಡಿ. ಇಂತಹ ಇಳಿವಯಸ್ಸಿನಲ್ಲೂ ದೇವೆಗೌಡರು ಛಲ‌ ಬಿಡದೆ ಹೋರಾಟ ಮಾಡುತ್ತಿದ್ದಾರೆ” ಎಂದರು.

ನಿಮ್ಮದು ಯಾವ ನೀತಿ? ನನ್ನದು ಧರ್ಮರಾಯನ ಧರ್ಮತ್ವ

“ಜೀವನದಲ್ಲಿ ಯಶಸ್ಸು ಸಿಗಬೇಕಾದರೆ. ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನ ಗುರಿ ಇರಬೇಕು, ವಿಧುರನ ನೀತಿ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣನ ತಂತ್ರ ಇರಬೇಕು” ಎಂದ ಸಿಎಂ ಗೆ ಪ್ರತಿಪಕ್ಷದವರು ಈ ಮಾತನ್ನು ಯತೀಂದ್ರ ಅವರನ್ನು ನೋಡಿ ಹೇಳುತ್ತಿದ್ದೀರಿ ಎಂದು ಕಾಲೆಳೆದಾಗ,

“ನಾನು ಯತೀಂದ್ರ ‌ಅವರನ್ನು ನೋಡೀ ವಿಧುರನ‌ ನೀತಿ ಎಂದು ಹೇಳಿದೆ. ವಿಧುರನ ನೀತಿಯೂ ಬಹಳ ಮುಖ್ಯ” ಎಂದರು. ಆಗ ನಿಮ್ಮದು ಯಾವ ನೀತಿ ಎಂದು ಪ್ರತಿಪಕ್ಷದವರು ಕೇಳಿದಾಗ, “ನನ್ನದು ಧರ್ಮರಾಯನ ಧರ್ಮತ್ವ. ದಾನಶೂರ ಕರ್ಣನ ದಾನತ್ವ, ಅರ್ಜುನನ ಗುರಿ ಹೀಗೆ ಎಲ್ಲಾ ಗುಣ ಇದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ” ಎಂದು ಪುನರುಚ್ಚರಿಸಿದರು.

“ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಪರಿಚಯಿಸುವಾಗ ಯತೀಂದ್ರ ಅವರ ಹೆಸರನ್ನು ಹೇಳಿ, “ನಮ್ಮ ಹೊಸ ಹೀರೋ. ನಮ್ಮ ನಾಯಕ” ಎಂದು ಸಿಎಂ ಬೆನ್ನುತಟ್ಟಿದರು.

ಸಿಎಸ್ ಆರ್ ದುರ್ಬಳಕೆಗೆ ಕಡಿವಾಣ

“8 ಸಾವಿರ ಕೋಟಿ ಸಿಎಸ್ ಆರ್ ಅನುದಾನವಿದೆ. ಎಲ್ಲವೂ ದುರ್ಬಳಕೆಯಾಗುತ್ತಿದೆ. ಶೇ.50ರಷ್ಟು ಮೊತ್ತ ವಾಪಸ್ಸು ಪಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ರಾಜ್ಯದ ಪ್ರತಿಯೊಬ್ಬರಿಗೂ ಒಳ್ಳೆಯ ಶಿಕ್ಷಣ, ಉದ್ಯೋಗ ವ್ಯವಸ್ಥೆ ಮಾಡುವ ಗುರಿಯೊಂದಿಗೆ, ಈ ಸಿಎಸ್ ಆರ್ ಅನುದಾನವನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ಹೊಸ ಸಿಎಸ್ ಆರ್ ಯೋಜನೆ ಜಾರಿ ಮಾಡಲು ಸರ್ಕಾರ ಮುಂದಾಗಿದೆ” ಎಂದು ಸದನಕ್ಕೆ ವಿವರಿಸಿದರು.

“ಹಳ್ಳಿಯ ಜನರು ತುತ್ತು ಅನ್ನಕ್ಕಾಗಿ ವಲಸೆ ಹೋಗಬಾರದು ಹಾಗೆಯೇ, ಬೆಂಗಳೂರು ಜನತೆ ಹೊರಗೆ ಹೋಗಬಾರದು. ಅದಕ್ಕಾಗಿ ಪಂಚಾಯಿತಿ ಮಟ್ಟದಲ್ಲೇ ಕಂಪನಿಗಳೇ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಿಎಸ್ ನಿಧಿಯನ್ನು ಬಳಸಿ ಅಭಿವೃದ್ಧಿಗೊಳಿಸುವ ಹೊಸ ನೀತಿಯನ್ನು ರೂಪಿಸುತ್ತಿದ್ದೇವೆ” ಎಂದರು.

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (53)

13,000 ಕೋಟಿ ರೂ. ಡ್ರಗ್ಸ್ ಜಾಲದ ಕಿಂಗ್‌ಪಿನ್ ದುಬೈನಿಂದ ಭಾರತಕ್ಕೆ!

by ಕವಿತಾ
August 14, 2026 - 8:19 pm
0

Untitled design (52)

ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿಯಲ್ಲಿ ಹೊಸ ವ್ಯವಸ್ಥೆಗೆ ಚಾಲನೆ

by ಕವಿತಾ
August 14, 2026 - 7:28 pm
0

Untitled design (51)

ಶಾಂತಿ ಕ್ರಾಂತಿ ರೀ-ರಿಲೀಸ್ ಸದ್ಯಕ್ಕೆ ಅಸಾಧ್ಯ..1 ವರ್ಷ ಬೇಕು

by ಕವಿತಾ
August 14, 2026 - 7:14 pm
0

Untitled design (50)

ರಾಜಕಾರಣ ಹೊರಗೆ ಮಾಡೋಣ, ಇಲ್ಲಿ ಜನ ಸೇವೆ ಮಾಡೋಣ: ಸಿಎಂ ಡಿ ಕೆ ಶಿವಕುಮಾರ್

by ಕವಿತಾ
August 14, 2026 - 7:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (52)
    ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿಯಲ್ಲಿ ಹೊಸ ವ್ಯವಸ್ಥೆಗೆ ಚಾಲನೆ
    August 14, 2026 | 0
  • Untitled design (49)
    ಉ.ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿ, ಚರ್ಚೆಗೆ ಒತ್ತು ಕೊಡುತ್ತೀರೆಂಬ ವಿಶ್ವಾಸ ಇದೆ; ಲಕ್ಷ್ಮೀ ಹೆಬ್ಬಾಳ್ಕರ್
    August 14, 2026 | 0
  • Untitled design (48)
    ಆ. 31ರವರೆಗೆ ಬೆಳೆ ವಿಮೆ ನೋಂದಣಿ ದಿನಾಂಕ ವಿಸ್ತರಿಸಲು ಕೇಂದ್ರಕ್ಕೆ ಶಿಫಾರಸು
    August 14, 2026 | 0
  • Untitled design (35)
    ತಂದೆಯ ಸಾಲಕ್ಕೆ SSLC ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ
    August 14, 2026 | 0
  • Untitled design 2026 08 14T133322.858
    ರಾಜ್ಯದಲ್ಲಿ ಶೀಘ್ರವೇ ಗುಟ್ಕಾ ನಿಷೇಧ ಆದೇಶ ವಾಪಸ್‌ ಸಾಧ್ಯತೆ!
    August 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version