• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಓಲಾ-ಉಬರ್ ಬಳಕೆದಾರರಿಗೆ ಗುಡ್ ನ್ಯೂಸ್: ಮುಂಗಡ ಟಿಪ್ಸ್‌ಗೆ ಕೇಂದ್ರ ಬ್ರೇಕ್!

ಕವಿತಾ by ಕವಿತಾ
August 13, 2026 - 8:20 pm
in ದೇಶ
0 0
0
Untitled design (23)

ನವದೆಹಲಿ, ಆ.13: ಆನ್‌ಲೈನ್‌ನಲ್ಲಿ ಕ್ಯಾಬ್ ಅಥವಾ ಆಟೋ ಬುಕ್ ಮಾಡುವ ವೇಳೆ ಚಾಲಕರಿಗೆ ಮುಂಗಡವಾಗಿ ಟಿಪ್ಸ್ ನೀಡುವ ವ್ಯವಸ್ಥೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಓಲಾ, ಉಬರ್, ರ‍್ಯಾಪಿಡೋ ಸೇರಿದಂತೆ ಎಲ್ಲಾ ರೈಡ್-ಹೇಲಿಂಗ್ ಆ್ಯಪ್‌ಗಳು ‘Pre-Ride Tips’ ಅಥವಾ ಬುಕಿಂಗ್‌ಗೂ ಮುನ್ನ ಟಿಪ್ಸ್ ಕೇಳುವ ಆಯ್ಕೆಯನ್ನು ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ದೇಶನ ನೀಡಿದೆ.

ಕ್ಯಾಬ್ ಬುಕ್ ಮಾಡುವಾಗ “ಟಿಪ್ ಸೇರಿಸಿ, ಬೇಗನೆ ರೈಡ್ ಪಡೆಯಿರಿ” ಎಂಬ ಸಂದೇಶ ಈಗ ಇನ್ನು ಮುಂದೆ ಕಾಣಿಸುವುದಿಲ್ಲ. ಪ್ರಯಾಣಿಕರ ಮೇಲೆ ಹೆಚ್ಚುವರಿ ಹಣ ನೀಡುವಂತೆ ಮಾನಸಿಕ ಒತ್ತಡ ಹೇರುವ ಈ ಪದ್ಧತಿಯನ್ನು ಕೇಂದ್ರ ಸರ್ಕಾರ ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ–2025 ಅಡಿಯಲ್ಲಿ ನಿಷೇಧಿಸಿದೆ.

RelatedPosts

ನೇತಾಜಿ ಅವಹೇಳನ: ಪಶ್ಚಿಮ ಬಂಗಾಳದ ಅತ್ಯುನ್ನತ ಗೌರವ ಪ್ರಶಸ್ತಿ ವಾಪಸ್

ಸುಖ್‌ಬೀರ್ ಬಾದಲ್ ಮೇಲೆ ದಾಳಿ: ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ಡ್ರಗ್ಸ್ ಪ್ರಕರಣ: ಎಲ್ಲಾ ಪೈಲಟ್‌ಗಳಿಗೆ ಡ್ರಗ್ಸ್ ಪರೀಕ್ಷೆ ಕಡ್ಡಾಯಗೊಳಿಸಿದ ಏರ್ ಇಂಡಿಯಾ

ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ ಶುದ್ಧೀಕರಣ ಹೋಮ: ಮಲ್ಲಿಕಾರ್ಜುನ ಖರ್ಗೆ ಕಿಡಿ

ADVERTISEMENT
ADVERTISEMENT

ಇತ್ತೀಚಿನ ದಿನಗಳಲ್ಲಿ ಓಲಾ, ಉಬರ್ ಹಾಗೂ ರ‍್ಯಾಪಿಡೋ ಆ್ಯಪ್‌ಗಳಲ್ಲಿ ರೈಡ್ ಬುಕ್ ಮಾಡುವಾಗ ಚಾಲಕರು ಬೇಗನೆ ರಿಕ್ವೆಸ್ಟ್ ಸ್ವೀಕರಿಸಲು 20 ರೂ., ರೂ. 50 ಅಥವಾ ಹೆಚ್ಚಿನ ಮೊತ್ತದ ಟಿಪ್ಸ್ ಸೇರಿಸುವಂತೆ ಆಯ್ಕೆ ನೀಡಲಾಗುತ್ತಿತ್ತು. ಅನೇಕ ಪ್ರಯಾಣಿಕರು ಟಿಪ್ಸ್ ನೀಡದಿದ್ದರೆ ರೈಡ್ ಸಿಗುವುದಿಲ್ಲ ಎಂಬ ಆತಂಕದಿಂದ ಹೆಚ್ಚುವರಿ ಹಣ ಪಾವತಿಸುತ್ತಿದ್ದರು. ಈ ಕುರಿತು ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ.

ಹೊಸ ಮಾರ್ಗಸೂಚಿ ಪ್ರಕಾರ, ಬುಕಿಂಗ್ ಮಾಡುವ ಮೊದಲು ಯಾವುದೇ ರೀತಿಯ ಟಿಪ್ಸ್ ಕೇಳುವುದು ಅಥವಾ ಟಿಪ್ಸ್ ನೀಡಿದರೆ ರೈಡ್ ಬೇಗ ಸಿಗುತ್ತದೆ ಎಂದು ಸಂದೇಶ ನೀಡುವುದು ಸಂಪೂರ್ಣ ನಿಷೇಧ. ಇಂತಹ ಆಯ್ಕೆಗಳನ್ನು ಆ್ಯಪ್‌ಗಳಿಂದ ತೆಗೆದುಹಾಕುವುದು ಕಡ್ಡಾಯವಾಗಿದೆ.

ಸರ್ಕಾರ ಮತ್ತೊಂದು ಮಹತ್ವದ ನಿಯಮವನ್ನೂ ಸ್ಪಷ್ಟಪಡಿಸಿದೆ. ಪ್ರಯಾಣಿಕರು ಚಾಲಕರ ಸೇವೆಯಿಂದ ಸಂತೃಪ್ತರಾದರೆ, ಟಿಪ್ಸ್ ನೀಡುವುದು ಸವಾರಿ ಮುಗಿದ ನಂತರ ಮಾತ್ರ ಸಾಧ್ಯ. ಅದು ಸಂಪೂರ್ಣವಾಗಿ ಗ್ರಾಹಕರ ಐಚ್ಛಿಕ ನಿರ್ಧಾರವಾಗಿರಬೇಕು; ಯಾವುದೇ ಒತ್ತಾಯ ಅಥವಾ ಸೂಚನೆ ಇರಬಾರದು.

ಇದಲ್ಲದೆ, ಪ್ರಯಾಣಿಕರು ನೀಡುವ ಟಿಪ್ಸ್‌ನಿಂದ ಓಲಾ, ಉಬರ್ ಅಥವಾ ಇತರ ಕಂಪನಿಗಳು ಯಾವುದೇ ಕಮಿಷನ್ ಕಡಿತ ಮಾಡಬಾರದು. ಟಿಪ್ಸ್‌ನ ಸಂಪೂರ್ಣ ಮೊತ್ತ ನೇರವಾಗಿ ಚಾಲಕರಿಗೆ ತಲುಪಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ಈ ಕ್ರಮದಿಂದ ಪ್ರಯಾಣಿಕರಿಗೆ ನ್ಯಾಯಸಮ್ಮತ ಬುಕ್ಕಿಂಗ್ ಅನುಭವ ದೊರೆಯಲಿದ್ದು, ಟಿಪ್ಸ್ ನೀಡದ ಕಾರಣ ರೈಡ್ ನಿರಾಕರಣೆಯಾಗುವ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ. ಜೊತೆಗೆ ಚಾಲಕರಿಗೆ ದೊರೆಯುವ ಟಿಪ್ಸ್ ಕೂಡ ಸಂಪೂರ್ಣವಾಗಿ ಅವರ ಪಾಲಾಗುವಂತೆ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತಂದಿದೆ.

ಹೊಸ ನಿಯಮಗಳು ಏನು?

 

  • ಬುಕಿಂಗ್‌ಗೂ ಮುನ್ನ Pre-Ride Tips ಕೇಳುವಂತಿಲ್ಲ

  • “ಟಿಪ್ ಕೊಟ್ಟರೆ ಬೇಗ ರೈಡ್” ಎಂಬ ಸಂದೇಶ ನಿಷೇಧ

  • ಟಿಪ್ಸ್ ನೀಡಲು ಅವಕಾಶ ಸವಾರಿ ಮುಗಿದ ನಂತರ ಮಾತ್ರ

  • ಟಿಪ್ಸ್ ನೀಡುವುದು ಸಂಪೂರ್ಣ ಗ್ರಾಹಕರ ಐಚ್ಛಿಕ

  • ಟಿಪ್ಸ್‌ನ 100% ಹಣ ಚಾಲಕರಿಗೇ, ಕಂಪನಿಗೆ ಕಮಿಷನ್ ಇಲ್ಲ

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (29)

ನೇತಾಜಿ ಅವಹೇಳನ: ಪಶ್ಚಿಮ ಬಂಗಾಳದ ಅತ್ಯುನ್ನತ ಗೌರವ ಪ್ರಶಸ್ತಿ ವಾಪಸ್

by ಕವಿತಾ
August 13, 2026 - 10:01 pm
0

Untitled design (27)

ಸುಖ್‌ಬೀರ್ ಬಾದಲ್ ಮೇಲೆ ದಾಳಿ: ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

by ಕವಿತಾ
August 13, 2026 - 9:23 pm
0

Untitled design (25)

ಡ್ರಗ್ಸ್ ಪ್ರಕರಣ: ಎಲ್ಲಾ ಪೈಲಟ್‌ಗಳಿಗೆ ಡ್ರಗ್ಸ್ ಪರೀಕ್ಷೆ ಕಡ್ಡಾಯಗೊಳಿಸಿದ ಏರ್ ಇಂಡಿಯಾ

by ಕವಿತಾ
August 13, 2026 - 8:31 pm
0

Untitled design (23)

ಓಲಾ-ಉಬರ್ ಬಳಕೆದಾರರಿಗೆ ಗುಡ್ ನ್ಯೂಸ್: ಮುಂಗಡ ಟಿಪ್ಸ್‌ಗೆ ಕೇಂದ್ರ ಬ್ರೇಕ್!

by ಕವಿತಾ
August 13, 2026 - 8:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (29)
    ನೇತಾಜಿ ಅವಹೇಳನ: ಪಶ್ಚಿಮ ಬಂಗಾಳದ ಅತ್ಯುನ್ನತ ಗೌರವ ಪ್ರಶಸ್ತಿ ವಾಪಸ್
    August 13, 2026 | 0
  • Untitled design (27)
    ಸುಖ್‌ಬೀರ್ ಬಾದಲ್ ಮೇಲೆ ದಾಳಿ: ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
    August 13, 2026 | 0
  • Untitled design (25)
    ಡ್ರಗ್ಸ್ ಪ್ರಕರಣ: ಎಲ್ಲಾ ಪೈಲಟ್‌ಗಳಿಗೆ ಡ್ರಗ್ಸ್ ಪರೀಕ್ಷೆ ಕಡ್ಡಾಯಗೊಳಿಸಿದ ಏರ್ ಇಂಡಿಯಾ
    August 13, 2026 | 0
  • ಏರ್ ಪೋರ್ಟ್ ನಲ್ಲಿ (2)
    ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ ಶುದ್ಧೀಕರಣ ಹೋಮ: ಮಲ್ಲಿಕಾರ್ಜುನ ಖರ್ಗೆ ಕಿಡಿ
    August 13, 2026 | 0
  • ಏರ್ ಪೋರ್ಟ್ ನಲ್ಲಿ
    ದೆಹಲಿ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಬ್ಯಾಗ್‌ನಲ್ಲಿ ಪತ್ತೆಯಾಯ್ತು ತಲೆಬುರಡೆ!
    August 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version