• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, August 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಆ.16ರಿಂದ ‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ ಆರಂಭ: ಸಾಮಾನ್ಯ ಜನರ ಕನಸಿಗೆ ಸಿಗುತ್ತಾ ಬಿಗ್‌ಬಾಸ್‌ ಮನೆಯ ಬಾಗಿಲು?

ದಿಶಾ ಕೆ. ಎಸ್. by ದಿಶಾ ಕೆ. ಎಸ್.
August 10, 2026 - 8:33 pm
in ಸಿನಿಮಾ
0 0
0
ಬಲಿಷ್ಠ (57)

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್‌ ಕನ್ನಡ’ ಸೀಸನ್‌ 13ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಸಾಮಾನ್ಯ ಜನರಿಗೂ ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸುವ ಅವಕಾಶ ಕಲ್ಪಿಸಲಾಗಿದ್ದು, ಆ ಅವಕಾಶ ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಸಾಮಾನ್ಯ ಜನರ ಆಯ್ಕೆ ಪ್ರಕ್ರಿಯೆಗೆ ‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ ಎಂದು ಹೆಸರಿಡಲಾಗಿದ್ದು, ಆಗಸ್ಟ್‌ 16ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ.

ಪ್ರತಿ ಸೀಸನ್‌ನಲ್ಲೂ ಹೊಸತನದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಬಿಗ್‌ಬಾಸ್‌, ಈ ಬಾರಿ ಸಾಮಾನ್ಯ ಜನರಿಗೂ ತನ್ನ ವೇದಿಕೆಯಲ್ಲಿ ಅವಕಾಶ ನೀಡುವ ಮೂಲಕ ಮತ್ತಷ್ಟು ವಿಶೇಷತೆ ಪಡೆದುಕೊಂಡಿದೆ. ಇದಕ್ಕಾಗಿ ಈಗಾಗಲೇ ಸಾಮಾನ್ಯ ಜನರಿಂದ ಮೂರು ನಿಮಿಷಗಳ ವಿಡಿಯೋಗಳನ್ನು ಆಹ್ವಾನಿಸಲಾಗಿತ್ತು. ತಮ್ಮನ್ನು ಬಿಗ್‌ಬಾಸ್‌ ಮನೆಗೆ ಏಕೆ ಆಯ್ಕೆ ಮಾಡಬೇಕು, ತಮ್ಮ ವಿಶೇಷತೆ ಏನು ಎಂಬುದನ್ನು ವಿಡಿಯೋದಲ್ಲಿ ತಿಳಿಸುವಂತೆ ಸೂಚಿಸಲಾಗಿತ್ತು.

RelatedPosts

ದರ್ಶನ್‌ಗೆ ಬಿಗ್ ಶಾಕ್: ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲೇ ಗತಿ?

‘ಟಾಕ್ಸಿಕ್’ನಲ್ಲಿ ಯಾರಿಗೆ ಎಷ್ಟು ಕೋಟಿ? ನಯನತಾರಾನೇ ಮೀರಿಸಿದ ಕಿಯಾರಾ ಸಂಭಾವನೆ!

ಪ್ರೊಡ್ಯೂಸರ್ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೀರೋ ಆಗಿ ಎಂಟ್ರಿ

ಮತದಾರರ ಪಟ್ಟಿಯಿಂದ ಪ್ರಕಾಶ್ ರಾಜ್ ಹೆಸರು ಡಿಲೀಟ್: ಬೇಸರ ಹೊರಹಾಕಿದ ನಟ

ADVERTISEMENT
ADVERTISEMENT

ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳುವ ಉದ್ದೇಶದಿಂದ ಲಕ್ಷಾಂತರ ಮಂದಿ ವಿಡಿಯೋಗಳನ್ನು ಕಳುಹಿಸಿ, ಆಯ್ಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇವರಲ್ಲಿ 60 ಸ್ಪರ್ಧಿಗಳನ್ನು ಆಯ್ಕೆ ಮಾಡಿ, ಇದೀಗ ಅವರನ್ನು ‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ಗೆ ಒಳಪಡಿಸಲಾಗುತ್ತಿದೆ.

ಈ ಸಾಮಾನ್ಯ ಜನರ ಸಾಮರ್ಥ್ಯ ಪರೀಕ್ಷಿಸುವ ಜವಾಬ್ದಾರಿಯನ್ನು ಬಿಗ್‌ಬಾಸ್‌ನ ಮಾಜಿ ಸ್ಪರ್ಧಿಗಳೇ ಹೊತ್ತಿದ್ದಾರೆ. ಖ್ಯಾತ ನಟಿ ಶೃತಿ, ವಿನಯ್‌ ಗೌಡ, ನಿರಂಜನ್‌ ದೇಶಪಾಂಡೆ, ಚಂದನ್‌ ಶೆಟ್ಟಿ ಹಾಗೂ ಸಂಗೀತಾ ಶೃಂಗೇರಿ ಅಗ್ನಿಪರೀಕ್ಷೆಯ ತೀರ್ಪುಗಾರರಾಗಿ ಸ್ಪರ್ಧಿಗಳ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದ್ದಾರೆ.

ಆದರೆ ಈ ಅಗ್ನಿಪರೀಕ್ಷೆ ಅಂದುಕೊಂಡಷ್ಟು ಸುಲಭವಲ್ಲ. ಜನಪ್ರಿಯ ಕನ್ನಡ ವಾಹಿನಿ ಕಲರ್ಸ್ ಕನ್ನಡ ಅಗ್ನಿಪರೀಕ್ಷೆಯ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಪರ್ಧಿಗಳ ಧೈರ್ಯ, ತಾಳ್ಮೆ, ಸಾಮರ್ಥ್ಯ ಹಾಗೂ ಯಾವುದೇ ಸಂದರ್ಭವನ್ನು ಎದುರಿಸುವ ಮನಸ್ಥಿತಿಯನ್ನು ಪರೀಕ್ಷಿಸುವಂತಹ ಕಠಿಣ ಸವಾಲುಗಳನ್ನು ನೀಡಲಾಗಿದೆ. ಮುಖಕ್ಕೆ ಸಗಣಿ ಸವರಿಕೊಳ್ಳುವುದು, ತಲೆಯ ಕೂದಲು ಬೋಳಿಸಿಕೊಳ್ಳುವುದು ಸೇರಿದಂತೆ ಹಲವು ಸವಾಲುಗಳನ್ನು ಸ್ಪರ್ಧಿಗಳು ಎದುರಿಸಿರುವುದು ಪ್ರೋಮೋದಲ್ಲಿ ಕಂಡುಬಂದಿದೆ.

ಬಿಗ್‌ಬಾಸ್‌ಗಾಗಿ ಕೆಲವರು ತಮ್ಮ ಮಿತಿಯನ್ನೇ ಮೀರಿ ಸವಾಲುಗಳನ್ನು ಸ್ವೀಕರಿಸಿದ್ದಾರೆ. ಗಿನ್ನಿಸ್‌ ದಾಖಲೆ ನಿರ್ಮಿಸಿರುವ ಸ್ಪರ್ಧಿಯೊಬ್ಬರು ಬಿಗ್‌ಬಾಸ್‌ ಅವಕಾಶಕ್ಕಾಗಿ ತಮ್ಮ ಗಿನ್ನಿಸ್‌ ಪ್ರಮಾಣಪತ್ರವನ್ನೇ ಹರಿದು ಹಾಕಿದ್ದಾರೆ. ಇಂತಹ ಹಲವು ಸವಾಲುಗಳ ಮೂಲಕ ಸ್ಪರ್ಧಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ.

ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿರುವ ಅಮೂಕು ದುಮುಕು ಮಂಜು ಅವರ ಮಾತುಗಳು ಅಗ್ನಿಪರೀಕ್ಷೆಯಲ್ಲಿ ಮತ್ತೊಂದು ತಿರುವು ತಂದಿವೆ. ತೀರ್ಪುಗಾರರಾದ ಸಂಗೀತಾ ಶೃಂಗೇರಿಯನ್ನು ಇಂಪ್ರೆಸ್‌ ಮಾಡಬೇಕು ಎಂಬ ಸವಾಲು ನೀಡಿದಾಗ, “ನಾನು ಹೇಗಿದ್ದೇನೋ ಹಾಗೆಯೇ ಇರುತ್ತೇನೆ. ಯಾರಿಗಾಗಿಯೂ ಬದಲಾಗುವುದಿಲ್ಲ” ಎಂದು ಮಂಜು ಹೇಳಿದ್ದಾರೆ.

ಮಂಜು ಅವರ ಈ ಮಾತಿಗೆ ವಿನಯ್‌ ಗೌಡ ಕೆರಳಿ, “ಆಗಲ್ಲ ಅಂದ್ರೆ ಎದ್ದು ಹೋಗ್ತಾ ಇರು” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಮಂಜು ತಮ್ಮ ನಿಲುವಿನಲ್ಲಿ ಅಚಲವಾಗಿ ನಿಲ್ಲುತ್ತಾರಾ? ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಿಗ್‌ಬಾಸ್‌ ಮನೆಗೆ ಪ್ರವೇಶ ಪಡೆಯುತ್ತಾರಾ? ಅಥವಾ ಕಾರ್ಯಕ್ರಮದಿಂದಲೇ ಹೊರನಡೆಯುತ್ತಾರಾ? ಎಂಬುದು ಕುತೂಹಲ ಮೂಡಿಸಿದೆ.

ಸಾಮಾನ್ಯ ಜನರ ಬಿಗ್‌ಬಾಸ್‌ ಕನಸು, ಕಠಿಣ ಸವಾಲುಗಳು, ತೀರ್ಪುಗಾರರ ನಿರ್ಧಾರಗಳು ಹಾಗೂ ಬಿಗ್‌ಬಾಸ್‌ ಮನೆ ಪ್ರವೇಶಕ್ಕಾಗಿ ನಡೆಯುವ ರೋಚಕ ಪೈಪೋಟಿಯನ್ನು ನೋಡಲು ಪ್ರೇಕ್ಷಕರು ಸಜ್ಜಾಗಿದ್ದಾರೆ.

‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ — ಆಗಸ್ಟ್‌ 16ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ.

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

ಕೈಗೊಳ್ಳಲಿರುವ 2026 08 11T224602.094

ಫುಕೆಟ್-ದೆಹಲಿ ವಿಮಾನದ ಪೈಲಟ್ ಡ್ರಗ್ಸ್ ಸೇವಿಸಿದ್ದು ದೃಢ: ಏರ್ ಇಂಡಿಯಾ ಸಿಇಒಗೆ ಸರ್ಕಾರದ ಸಮನ್ಸ್

by ದಿಶಾ ಕೆ. ಎಸ್.
August 11, 2026 - 10:48 pm
0

ಕೈಗೊಳ್ಳಲಿರುವ 2026 08 11T215752.236

ಹೋಟೆಲ್‌-ಪಬ್‌ಗಳಿಗೆ ಹೊಸ ಗೈಡ್‌ಲೈನ್ಸ್: ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ!

by ದಿಶಾ ಕೆ. ಎಸ್.
August 11, 2026 - 9:59 pm
0

ಕೈಗೊಳ್ಳಲಿರುವ 2026 08 11T205917.020

ವಂದೇ ಮಾತರಂಗೆ ಅವಮಾನ ಮಾಡಿದ್ರೆ ಕಠಿಣ ಶಿಕ್ಷೆ; ಮಸೂದೆಗೆ ರಾಷ್ಟ್ರಪತಿ ಅಂಕಿತ

by ದಿಶಾ ಕೆ. ಎಸ್.
August 11, 2026 - 9:02 pm
0

ಕೈಗೊಳ್ಳಲಿರುವ 2026 08 11T200300.929

ದರ್ಶನ್‌ಗೆ ಬಿಗ್ ರಿಲೀಫ್: ಆ.18ರವರೆಗೆ ಪ್ರದೂಷ್ ಹೇಳಿಕೆ ದಾಖಲಿಸದಂತೆ ಕೋರ್ಟ್ ಸೂಚನೆ

by ದಿಶಾ ಕೆ. ಎಸ್.
August 11, 2026 - 8:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಕೈಗೊಳ್ಳಲಿರುವ 2026 08 11T164433.099
    ದರ್ಶನ್‌ಗೆ ಬಿಗ್ ಶಾಕ್: ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲೇ ಗತಿ?
    August 11, 2026 | 0
  • ಕೈಗೊಳ್ಳಲಿರುವ (95)
    ‘ಟಾಕ್ಸಿಕ್’ನಲ್ಲಿ ಯಾರಿಗೆ ಎಷ್ಟು ಕೋಟಿ? ನಯನತಾರಾನೇ ಮೀರಿಸಿದ ಕಿಯಾರಾ ಸಂಭಾವನೆ!
    August 11, 2026 | 0
  • ಕೈಗೊಳ್ಳಲಿರುವ (93)
    ಪ್ರೊಡ್ಯೂಸರ್ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೀರೋ ಆಗಿ ಎಂಟ್ರಿ
    August 11, 2026 | 0
  • ಖರೀದಿಸುವವರಿಗೆ (7)
    ಮತದಾರರ ಪಟ್ಟಿಯಿಂದ ಪ್ರಕಾಶ್ ರಾಜ್ ಹೆಸರು ಡಿಲೀಟ್: ಬೇಸರ ಹೊರಹಾಕಿದ ನಟ
    August 11, 2026 | 0
  • ಖರೀದಿಸುವವರಿಗೆ (5)
    ವನ್ಯಜೀವಿ ವಿಡಿಯೋ ಮಾಡಿ ವಿವಾದಕ್ಕೆ ಸಿಲುಕಿದ ತಮಿಳು ನಟ ವಿಕ್ರಮ್
    August 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version