• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 31, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾವಣನಾಗಿ ಯಶ್ ಅಬ್ಬರ: ಕನ್ನಡದಲ್ಲಿ ರಾವಣನಾಗಿ ಅಬ್ಬರಿಸಿದ ಸ್ಟಾರ್‌ಗಳು ಯಾರು ಗೊತ್ತಾ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 31, 2026 - 2:17 pm
in ಸಿನಿಮಾ
0 0
0
ಕೈಗೊಳ್ಳಲಿರುವ (36)

ಲಂಕಾಧಿಪತಿ ರಾವಣ.. ನಮಗೆಲ್ಲಾ ಈತ ಬರೀ ರಾಮಾಯಣದ ಖಳನಾಯಕ ಅಂತಷ್ಟೇ ಗೊತ್ತು. ಆದ್ರೆ ಆತ ಎಷ್ಟು ಪರಾಕ್ರಮಿ..? ಮಹಾಜ್ಞಾನಿ, ಶಿವನ ಭಕ್ತ, ಸಂಗೀತಗಾರ, ಸಾಹಿತಿ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ರಾಕಿಂಗ್ ಸ್ಟಾರ್ ಯಶ್ ರಾಮಾಯಣದ ಮೂಲಕ ಸದ್ಯ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ ರಾವಣನ ಪಾತ್ರ.

‘ಮಾಸ್ಟರ್‌ಪೀಸ್‌’‌ನಲ್ಲೇ ಯಶ್ ಹಿಂಟ್.. ರಾವಣ ಫೇವರಿಟ್

RelatedPosts

‘ರಾಮಾಯಣ’ ಟ್ರೇಲರ್ ಬೆನ್ನಲ್ಲೇ ರಾಧಿಕಾ ಪಂಡಿತ್ ಪೋಸ್ಟ್ ವೈರಲ್

ರಾಮನ ಯುಗದ ಆರಂಭ: ಯಶ್ ಐತಿಹಾಸಿಕ ದಾಖಲೆ!

ಶಬರಿ ಚಿತ್ರದ `ತಂದಾನಿ ತಾನೋ’ ವೀಡಿಯೋ ಸಾಂಗ್ ಅನಾವರಣ!

ರಣಬೀರ್‌ ಕಪೂರ್‌, ಯಶ್‌ ನಟನೆಯ ‘ರಾಮಾಯಣ ಪಾರ್ಟ್-1’ ಚಿತ್ರದ ಗ್ರ್ಯಾಂಡ್‌ ಟ್ರೈಲರ್ ಬಿಡುಗಡೆ

ADVERTISEMENT
ADVERTISEMENT

ಲಂಕೇಶ್ವರನ ಜಪದಲ್ಲಿ ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ..!

ಎಲ್ಲೆಲ್ಲೂ ರಾಮಾಯಣ ರಂಗು.. ರಾಕಿಂಗ್ ರಾವಣನದ್ದೇ ಟಾಕ್

ವಿಶ್ವದ ಮೂಲೆ ಮೂಲೆಯಲ್ಲಿ ಕನ್ನಡಿಗ ಯಶ್‌ಗೆ ಬಹುಪರಾಕ್..!

ರಾಮಾಯಣ.. ಇದೇ ದೀಪಾವಳಿಗೆ ತೆರೆಗೆ ಬರ್ತಿರೋ ಮಹಾ ದೃಶ್ಯಕಾವ್ಯ. ನಮ್ಮ ಹೆಮ್ಮೆಯ ಕನ್ನಡಿಗ ಯಶ್ ರಾವಣ ಪಾತ್ರದಲ್ಲಿ ನಟಿಸುವುದರ ಜೊತೆಗೆ ಸಹ ನಿರ್ಮಾಣ ಕೂಡ ಮಾಡಿದ್ದು, ಟ್ರೈಲರ್‌‌ ದೃಶ್ಯಗುಚ್ಚ ಸದ್ಯ ಟಾಕ್ ಆಫ್ ದಿ ಸಿನಿದುನಿಯಾ ಆಗಿದೆ. ಹೌದು.. ವಿಶ್ವದ ಮೂಲೆ ಮೂಲೆಯಲ್ಲಿ ರಾಮಾಯಣ ಟ್ರೈಲರ್‌ ಕುರಿತು ಜನ ಮಾತನಾಡುವಂತಾಗಿದೆ. ಅದ್ರಲ್ಲೂ ರಾಕಿಂಗ್ ರಾವಣ ಪಾತ್ರಧಾರಿ ಯಶ್‌ಗೆ ಬಹುಪರಾಕ್ ಅಂತಿದ್ದಾರೆ ಚಿತ್ರಪ್ರೇಮಿಗಳು.

ಯಶ್ ಎಂಟ್ರಿ, ಸ್ವ್ಯಾಗ್, ಕಾಸ್ಟ್ಯೂಮ್, ಡೈಲಾಗ್ ಡೆಲಿವರಿ, ಆ ಗತ್ತು, ಪರಾಕ್ರಮ.. ಹೀಗೆ ಎಲ್ಲಾ ಆ್ಯಂಗಲ್‌‌ನಿಂದ ವ್ಹಾವ್ ಫೀಲ್ ತರಿಸುತ್ತಾರೆ. ಹಾಗಾಗಿಯೇ ರಾಮಾಯಣ ಟ್ರೈಲರ್‌‌ನಲ್ಲಿ ಯಶ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅನಿಸಿದ್ದಾರೆ. ಅಂದಹಾಗೆ ರಾಕಿಂಗ್ ಸ್ಟಾರ್‌ ಯಶ್‌ಗೆ ರಾವಣ ಪಾತ್ರ ಎಷ್ಟು ಫೇವರಿಟ್ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಈ ಹಿಂದೆ ಯಶ್ ತಮ್ಮ ಮಾಸ್ಟರ್‌ಪೀಸ್ ಚಿತ್ರದಲ್ಲಿ ಕೃಷ್ಣನ ವೇಷಕ್ಕಿಂತ ಗದೆ ಹಿಡಿದ ರಾವಣನ ಮೇಲೆ ಇದ್ದ ಒಲವು ಎಂಥದ್ದು ಅನ್ನೋದಕ್ಕೆ ಡೈಲಾಗ್ ಒಂದು ಸಾಕ್ಷಿ ಆಗಿತ್ತು.

ಅಲ್ಲದೆ ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಕೂಡ ಆ ರಾವಣಾಸುರನ ಜಪ ಮಾಡ್ತಿದ್ದಾರೆ. ಹೌದು.. ರಾಮಾಯಣದಲ್ಲಿ ಇವನದು ರಾವಣ ಪಾತ್ರ ಅನ್ನೋ ಹಾಡಿನ ಮೂಲಕ ಗೋವಾದ ಇನ್ಕಾರ್ನೇಷನ್ ಪಾರ್ಕ್ ನಲ್ಲಿ ರಾವಣನ ಆಕೃತಿ ಮುಂದೆ ನಿಂತು ಪೋಸ್ ನೀಡಿರೋ ರಾಧಿಕಾ, ಫೋಟೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಿಮಗೆ ಗೊತ್ತಿದ್ರೆ.. ಗೊತ್ತಿರುತ್ತೆ ಅಂತ ಬರೆದುಕೊಂಡಿದ್ದಾರೆ. ಇದರ ಅರ್ಥ ನನ್ನ ಪತಿ ಯಶ್ ರಾಮಾಯಣ ಚಿತ್ರದ ರಾವಣ ಅನ್ನೋದನ್ನ ಪರೋಕ್ಷವಾಗಿ ಹೇಳಿದ್ದಾರೆ ರಾಕಿಂಗ್ ಸ್ಟಾರ್ ಎವರ್ ಚಾರ್ಮಿಂಗ್ ಮಡದಿ ರಾಧಿಕಾ ಪಂಡಿತ್.

ಅಂದಹಾಗೆ ನಮ್ಮ ಚಂದನವನದಲ್ಲಿ ಅದೆಷ್ಟೋ ಮಂದಿ ಸ್ಟಾರ್‌ಗಳು ರಾವಣಾಸುರನಾಗಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಅವರ ಪಾತ್ರಗಳು ಇಂದಿಗೂ ಎವರ್‌ಗ್ರೀನ್ ಅನಿಸಲಿವೆ. ಅದ್ರಲ್ಲೂ ನಟಸಾರ್ವಭೌಮ ಡಾ ರಾಜ್‌‌ಕುಮಾರ್, ವಜ್ರಮುನಿ ಪಾತ್ರಗಳು ಎಕ್ಸಾಂಪಲ್ ಸೆಟ್ ಮಾಡಿವೆ ಅಂದ್ರೆ ತಪ್ಪಾಗಲ್ಲ. ಹಾಗಾದ್ರೆ ಯಾರೆಲ್ಲಾ ರಾವಣನ ಪಾತ್ರಕ್ಕೆ ಇಲ್ಲಿಯ ತನಕ ಜೀವ ತುಂಬಿದ್ದಾರೆ..? ಅವು ಯಾವ್ಯಾವ ಸಿನಿಮಾಗಳು ಅನ್ನೋದ್ರ ಒಂದು ಕ್ವಿಕ್ ರೌಂಡಪ್ ಇಲ್ಲಿದೆ ನೋಡ್ಕೊಂಡ್ ಬನ್ನಿ.

ಭೂಕೈಲಾಸ, ದಶಾವತಾರದಲ್ಲಿ ಅಣ್ಣಾವ್ರ ರಾವಣ ಗತ್ತು, ಗೈರತ್ತು

ರಾಮ, ರಾವಣ, ವಾಲ್ಮೀಕಿ ಪಾತ್ರಗಳ ಏಕೈಕ ನಟ ಡಾ. ರಾಜ್

ಕನ್ನಡ ಚಿತ್ರರಂಗವನ್ನ ಸಮೃದ್ಧಗೊಳಿಸಿದ ನಟಸಾರ್ವಭೌಮ, ಕಲಾ ಕೌಸ್ತುಭ, ಪದ್ಮ ಭೂಷಣ ಡಾ. ರಾಜ್‌‌ಕುಮಾರ್ ಅವರು ಒಂದಲ್ಲ ಎರಡೆರಡು ಬಾರಿ ರಾಮಾಯಣದ ರಾವಣನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. 1958ರಲ್ಲಿ ತೆರೆಕಂಡ ಪ್ರಸಿದ್ಧ ಪೌರಾಣಿಕ ಚಿತ್ರ ಭೂಕೈಲಾಸ ಹಾಗೂ ಮತ್ತೊಂದು ಸಿನಿಮಾ ದಶಾವತಾರದಲ್ಲೂ ರಾವಣನ ಪಾತ್ರದಲ್ಲಿ ಗತ್ತು, ಗೈರತ್ತು ತೋರಿದ್ದರು.

ಚಂದನವನದಲ್ಲಿ ಇಂದಿಗೂ ಸಹ ರಾಮನೆಂದರೂ, ರಾವಣನೆಂದರೂ ಸಹ ನೆನಪಾಗೋದೇ ನಟ ರಾಜ್‌‌ಕುಮಾರ್. ಹೌದು.. ರಾಮ ಹಾಗೂ ರಾವಣನ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದ ಕಲಾ ಯೋಗಿ ಡಾ ರಾಜ್. ಅಷ್ಟೇ ಅಲ್ಲ, ಆ ರಾಮ ಹಾಗೂ ರಾವಣ ಪಾತ್ರಗಳನ್ನ ತಮ್ಮ ರಾಮಾಯಣ ಗ್ರಂಥದಲ್ಲಿ ಬರೆದಂತಹ ವಾಲ್ಮೀಕಿ ಪಾತ್ರದಲ್ಲೂ ಸಹ ಅಣ್ಣಾವ್ರು ನಟಿಸಿದ್ರು ಅನ್ನೋದು ಪರಮ ಅಚ್ಚರಿ. ರಾಮ, ರಾವಣ ಹಾಗೂ ವಾಲ್ಮೀಕಿ.. ಹೀಗೆ ರಾಮಾಯಣದ ಮೂರು ಪ್ರಮುಖ ಪಾತ್ರಗಳನ್ನ ನಿಭಾಯಿಸಿರೋ ಏಕೈಕ ನಟ ಅನ್ನೋ ಗರಿಮೆಗೆ ಪಾತ್ರರಾಗಿದ್ದಾರೆ ಅಣ್ಣಾವ್ರು.

ಪ್ರಚಂಡ ರಾವಣನಾಗಿ ವಜ್ರಮುನಿ ಅಬ್ಬರ, ಆರ್ಭಟ ಅತ್ಯದ್ಭುತ

‘ರಾಬರ್ಟ್’ನಲ್ಲಿ ಡಿಬಾಸ್ ದರ್ಶನ್‌ಗೂ ವಜ್ರಮುನಿ ಸ್ಫೂರ್ತಿ

ರಾವಣನ ಅಸಲಿ ಗೈರತ್ತು ಎಂಥದ್ದು ಅನ್ನೋದಕ್ಕೆ ದಿವಂಗತ ನಟ ವಜ್ರಮುನಿ ಬಣ್ಣ ಹಚ್ಚಿದ್ದ ಪ್ರಚಂಡ ರಾವಣ ನಾಟಕದ ಆ ರಾವಣಾಸುರನ ಪಾತ್ರ ಹಾಗೂ ಆ ಮೈ ರೋಮಾಂಚನಗೊಳಿಸೋ ಡೈಲಾಗ್ ಚಿತ್ರಂಗ ಇರೋ ತನಕ ಅಚ್ಚಳಿಯದೆ ನೆನಪಲ್ಲಿ ಉಳಿದು ಹೋಗಲಿದೆ. ಅಷ್ಟು ಇಂಪ್ಯಾಕ್ಟ್‌ಫುಲ್ ಆಗಿ ರಾವಣನ ಡೈಲಾಗ್ ಡೆಲಿವರಿ ಮಾಡಿದ್ರು ವಜ್ರಮುನಿ. ಅದನ್ನ ನೀವೂ ಒಮ್ಮೆ ಕೇಳೋದ್ರ ಜೊತೆ ಕಣ್ತುಂಬಿಕೊಂಡುಬಿಡಿ.

ಇನ್‌ಫ್ಯಾಕ್ಟ್ ವಜ್ರಮುನಿಯ ಈ ರಾವಣನ ಪಾತ್ರ ಅದೆಷ್ಟೋ ಮಂದಿಗೆ ಸ್ಫೂರ್ತಿ ಆಗಿದೆ. ಡಿಬಾಸ್ ದರ್ಶನ್ ರಾಬರ್ಟ್ ಚಿತ್ರದಲ್ಲಿ ವಜ್ರಮನಿಯ ಅದೇ ಡೈಲಾಗ್‌ನ ರಿಪೀಟ್ ಮಾಡಿದ್ರು. ಹೌದು.. ಕ್ಲೈಮ್ಯಾಕ್ಸ್‌ನಲ್ಲಿ ವಿಲನ್‌‌ ಯಾರೋ ನೀನು ಅಂದಾಗ ದರ್ಶನ್ ಕೊಡೋ ಉತ್ತರವೇ ರಾವಣನ ಈ ಕಂಚಿನ ಕಂಠದ ಡೈಲಾಗ್.

ಲಂಕಾಧೀಶನಾಗಿ ದೇವರಾಜ್, ಶರತ್ ಲೋಹಿತಾಶ್ವ, ಜೆಕೆ..!

ಗದೆ ಹಿಡಿದು ಗರ್ಜಿಸಿದ ಸ್ಟಾರ್‌ಗಳು ಯಾರು ಗೊತ್ತಾ..?!

ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದಲ್ಲಿ ಸುದೀಪ್ ಹಾಗೂ ಶಿವರಾಜ್‌ಕುಮಾರ್ ನಟಿಸಿದ್ರು. ಆದ್ರೆ ಆ ಚಿತ್ರದ ಹಾಡೊಂದರ ಸನ್ನಿವೇಶಕ್ಕಾಗಿ ತಾಯಿ ಮಗುವಿಗೆ ರಣ ರಣ ರಾವಣನ ಕಥೆ ಹೇಳುವ ಸನ್ನಿವೇಶವಿದೆ. ಅದನ್ನ ನಾಟಕದ ಬ್ಯಾಕ್‌‌ಡ್ರಾಪ್‌‌ನಲ್ಲಿ ಕಟ್ಟಿಕೊಟ್ಟಿದ್ದಾರೆ ಡೈರೆಕ್ಟರ್ ಪ್ರೇಮ್. ಸ್ಟೇಜ್ ಮೇಲೆ ನಾಟಕದಲ್ಲಿ ರಾವಣನ ಪಾತ್ರಕ್ಕೆ ಜೀವ ತುಂಬಿರೋದು ಕಂಚಿನ ಕಂಠದ ಕಲಾವಿದ ಶರತ್ ಲೋಹಿತಾಶ್ವ.

ಪ್ರಚಂಡ ರಾವಣ ಚಿತ್ರದಲ್ಲಿ ಡೈನಾಮಿಕ್ ಹೀರೋ ದೇವರಾಜ್ ಡೆಡ್ಲಿ & ಡೇರಿಂಗ್ ರಾವಣನ ಪಾತ್ರವನ್ನ ಅದ್ಭುತವಾಗಿ ನಿಭಾಯಿಸಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಸಿಯಾಕೆ ರಾಮ್ ಸೀರೀಸ್‌‌ನಲ್ಲಿ ನಮ್ಮ ಕನ್ನಡದ ನಟ ಜೆಕೆ ಜಯರಾಮ್ ಕಾರ್ತಿಕ್ ರಾವಣ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದರು. ಇಂದಿಗೂ ಆ ಸೀರೀಸ್ ಒನ್ ಆಫ್ ದಿ ಬೆಸ್ಟ್ ಸೀರೀಸ್ ಅನ್ನಬಹುದು. ಜೆಕೆ ರಾವಣ ಪಾತ್ರಕ್ಕಾಗಿ ಪರಕಾಯ ಪ್ರವೇಶ ಮಾಡಿದ್ರು ಅಂದ್ರೆ ತಪ್ಪಾಗಲ್ಲ.

ಇವುಗಳಲ್ಲದೆ ಗದೆ ಹಿಡಿದು ಘರ್ಜಿಸಿದ ಕನ್ನಡದ ಕಲಾವಿದರುಗಳು ಅಂದ್ರೆ ನಮಗೆಲ್ಲಾ ನೆನಪಾಗೋದೇ ಬ್ಲಾಕ್ ಬಸ್ಟರ್ ಮೂವಿ ಭಕ್ತ ಪ್ರಹ್ಲಾದ. ಅದರಲ್ಲಿ ಹಿರಣ್ಯ ಕಶ್ಯಪನಾಗಿ ಡಾ ರಾಜ್‌‌ಕುಮಾರ್ ಒಂದೊಂದು ಎಕ್ಸ್‌‌ಪ್ರೆಷನ್ ಕೂಡ ಅತ್ಯದ್ಭುತ. ಬಾಲನಟ ಅಪ್ಪುನೇ ಶೂಟಿಂಗ್ ವೇಳೆ ತಂದೆ ಬಳಿ ತೆರಳಲು ಭಯ ಪಡ್ತಿದ್ರಂತೆ. ಅಷ್ಟರ ಮಟ್ಟಿಗೆ ರೌದ್ರಾವತಾರದಲ್ಲಿ ಹಿರಣ್ಯ ಕಶ್ಯಪ ಪಾತ್ರ ನಿರ್ವಹಿಸಿದ್ರು ವರನಟ ರಾಜ್‌‌ಕುಮಾರ್.

ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ಆರ್ಭಟ ಶಿಳ್ಳೆ, ಚಪ್ಪಾಳೆ ತರಿಸಲಿದೆ. ಗದೆ ಹಿಡಿದು ದಾಸ ದರ್ಶನ್ ನಡೆದು ಬರುವ ಪರಿ, ಆ ಡೈಲಾಗ್ ಗತ್ತು, ನಗು ಎಲ್ಲವೂ ಅಮೇಜಿಂಗ್.

ಕಠಾರಿವೀರ ಸುರಸುಂದರಾಂಗಿ ಚಿತ್ರದಲ್ಲಿ ಯಮ ಧರ್ಮರಾಜನಾಗಿ ಅಂಬರೀಶ್ ಗದೆ ಹಿಡಿದು ಗರ್ಜಿಸಿದ್ದಾರೆ. ಪಕ್ಕದ ಟಾಲಿವುಡ್‌‌ನಲ್ಲಿ ಯಮದೊಂಗ ಚಿತ್ರದ ಜೂನಿಯರ್‌ ಎನ್‌ಟಿಆರ್ ಅಟ್ಟೈರ್ ಅಂತೂ ಎದೆ ನಡುಗಿಸುವಂತಿದೆ. ಒಟ್ಟಾರೆ ಎಲ್ಲಾ ಸ್ಟಾರ್‌‌ಗಳು ಅವರವರ ಪಾತ್ರಗಳಿಗೆ ಸಾಮರ್ಥ್ಯ ಮೀರಿ ಜೀವ ತುಂಬುವ ಕಾರ್ಯ ಮಾಡಿದ್ದಾರೆ. ಅವರುಗಳ ಸಾಲಿಗೆ ಈಗ ನಮ್ಮ ರಾಕಿಂಗ್ ಸ್ಟಾರ್ ಯಶ್ ಹೊಸದಾಗಿ ಸೇರ್ಪಡೆ ಆಗಿರೋದು ಖುಷಿಯ ವಿಚಾರ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಕೈಗೊಳ್ಳಲಿರುವ (37)

ಬ್ರಿಕ್ಸ್ ಶೃಂಗಸಭೆಗೆ ಭಾರತಕ್ಕೆ ಬರುತ್ತಾರಾ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್’?

by ದಿಶಾ ಕೆ. ಎಸ್.
July 31, 2026 - 2:49 pm
0

ಕೈಗೊಳ್ಳಲಿರುವ (36)

ರಾವಣನಾಗಿ ಯಶ್ ಅಬ್ಬರ: ಕನ್ನಡದಲ್ಲಿ ರಾವಣನಾಗಿ ಅಬ್ಬರಿಸಿದ ಸ್ಟಾರ್‌ಗಳು ಯಾರು ಗೊತ್ತಾ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 31, 2026 - 2:17 pm
0

ಕೈಗೊಳ್ಳಲಿರುವ (34)

ಕಾವೇರಿ ಕಿಚ್ಚು: ಆ.13 ರಂದು ಕರ್ನಾಟಕ ಬಂದ್!

by ದಿಶಾ ಕೆ. ಎಸ್.
July 31, 2026 - 1:59 pm
0

ಕೈಗೊಳ್ಳಲಿರುವ (33)

‘ರಾಮಾಯಣ’ ಟ್ರೇಲರ್ ಬೆನ್ನಲ್ಲೇ ರಾಧಿಕಾ ಪಂಡಿತ್ ಪೋಸ್ಟ್ ವೈರಲ್

by ದಿಶಾ ಕೆ. ಎಸ್.
July 31, 2026 - 1:34 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಕೈಗೊಳ್ಳಲಿರುವ (33)
    ‘ರಾಮಾಯಣ’ ಟ್ರೇಲರ್ ಬೆನ್ನಲ್ಲೇ ರಾಧಿಕಾ ಪಂಡಿತ್ ಪೋಸ್ಟ್ ವೈರಲ್
    July 31, 2026 | 0
  • ಬಲಿಷ್ಠ (3)
    ರಾಮನ ಯುಗದ ಆರಂಭ: ಯಶ್ ಐತಿಹಾಸಿಕ ದಾಖಲೆ!
    July 30, 2026 | 0
  • ಮುನ್ಸೂಚನೆ (29)
    ಶಬರಿ ಚಿತ್ರದ `ತಂದಾನಿ ತಾನೋ’ ವೀಡಿಯೋ ಸಾಂಗ್ ಅನಾವರಣ!
    July 30, 2026 | 0
  • ಮುನ್ಸೂಚನೆ (25)
    ರಣಬೀರ್‌ ಕಪೂರ್‌, ಯಶ್‌ ನಟನೆಯ ‘ರಾಮಾಯಣ ಪಾರ್ಟ್-1’ ಚಿತ್ರದ ಗ್ರ್ಯಾಂಡ್‌ ಟ್ರೈಲರ್ ಬಿಡುಗಡೆ
    July 30, 2026 | 0
  • ಮುನ್ಸೂಚನೆ (16)
    ‘ರಾಮಾಯಣ’ ಟ್ರೈಲರ್ ರಿಲೀಸ್: ರಾಮನಾಗಿ ರಣಬೀರ್, ರಾವಣನಾಗಿ ಅಬ್ಬರಿಸಿದ ಯಶ್
    July 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version