ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ಕೊಲೆ ಬೆದರಿಕೆ ಹಾಕಿದ್ದ ದರ್ಶನ್ ಫ್ಯಾನ್ ಪುನೀತ್ ಇದೀಗ ಮತ್ತಿಬ್ಬರ ಹೆಸರು ಬಾಯಿ ಬಿಟ್ಟಿದ್ದಾನೆ. ಆ ಆಸಾಮಿಗಳು ಯಾರು..? ಸದ್ಯ ಎಲ್ಲಿದ್ದಾರೆ ಏನು ಮಾಡ್ತಿದ್ದಾರೆ..? ಅವರಿಗೆ ಹೇಳಿಕೊಟ್ಟು ಮಾಡಿಸಿದ ಮಾಸ್ಟರ್‌ಮೈಂಡ್ ಯಾರು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ನಿಮಗಾಗಿ ಕಾಯ್ತಿದೆ. ಈ ಸ್ಟೋರಿ ಒಮ್ಮೆ ನೋಡಿ
- ‘D’ ಸಾಕ್ಷ್ಯನಾಶ ಕೇಸ್‌ಗೆ ಟ್ವಿಸ್ಟ್.. ಗೌರವ್, ಕಿರಣ್ ಎಸ್ಕೇಪ್
- ಮತ್ತಿಬ್ಬರ ಹೆಸರು ಬಯಲು.. ಅರೆಸ್ಟ್‌ಗೂ ಮೊದ್ಲೇ ನಾಪತ್ತೆ..!
- ಇವ್ರೆಲ್ಲರಿಗೂ ಒಬ್ನೇ ಮಾಸ್ಟರ್‌ಮೈಂಡ್.. ಸದ್ಯದಲ್ಲೇ ಗುಟ್ಟು ರಟ್ಟು
- ಜೈಲಲ್ಲಿರೋ ದಾಸನಿಗೆ ಡವ ಡವ.. ಅಲ್ಲೇ ಪರ್ಮನೆಂಟ್ ಲಾಕ್
ಒಂದೇ ಒಂದು ತಪ್ಪು.. ಒಬ್ಬ ದೊಡ್ಡ ಸೂಪರ್ ಸ್ಟಾರ್ ಲೈಫ್‌ನ ಪಾತಾಳಕ್ಕೆ ತುಳಿಯಬಲ್ಲದು ಅನ್ನೋದಕ್ಕೆ ರೇಣುಕಾಸ್ವಾಮಿ ಮರ್ಡರ್ ಕೇಸ್ ಹಾಗೂ ನಟ ದರ್ಶನ್‌ಗಿಂತ ಜ್ವಲಂತ ಸಾಕ್ಷಿ ಮತ್ತೊಂದಿಲ್ಲ. ಎಲ್ಲವೂ ಇದ್ದು.. ಏನೂ ಇಲ್ಲದಂತೆ ಜೈಲಲ್ಲಿ ನಾಲ್ಕು ಗೋಡೆ, ಕಂಬಿ ಹಿಂದೆ, ಮುಂದೆ ಮುರಿಯುವಂತಾಗಿದೆ ನಟ ದರ್ಶನ್‌ಗೆ. ಹೌದು.. ಸುಪ್ರೀಂ ಕೋರ್ಟ್ ಪ್ರಕಾರ ಇನ್ನೊಂದು ವರ್ಷ ಬೇಲ್‌ಗೂ ಅಪ್ಲೈ ಮಾಡುವಂತಿಲ್ಲ ದಾಸ ದರ್ಶನ್. ಹಾಗಾಗಿ ಸದ್ಯಕ್ಕಂತೂ ಬಿಡುಗಡೆ ಭಾಗ್ಯವಾಗಲಿ, ಹೊರ ಪ್ರಪಂಚದ ದರ್ಶನವಾಗಲಿ ದಾಸನಿಗಿಲ್ಲ.
ಇತ್ತೀಚೆಗೆ ಸಾಕ್ಷ್ಯನಾಶ ಆರೋಪದಡಿ ದರ್ಶನ್ ಹುಡ್ಗ ಪುನೀತ್ ಹಾಗೂ ಮತ್ತೊಬ್ಬರು ಲಾಕ್ ಆಗಿದ್ರು. ಇದೀಗ ಮತ್ತಿಬ್ಬರ ಹೆಸರುಗಳು ಬಯಲಾಗಿವೆ. ಹೌದು.. ಬಂಧಿತರು ಗೌರವ್ ಶೆಟ್ಟಿ ಹಾಗೂ ಕಿರಣ್ ರೆಡ್ಡಿ ಹೆಸರು ಬಾಯಿ ಬಿಟ್ಟಿದ್ದು, ಅವರಿಬ್ಬರೂ ಪ್ರಭಾವಿಗಳೇ ಅನ್ನೋದು ಇಂಟರೆಸ್ಟಿಂಗ್. ಗೌರವ್ ಶೆಟ್ಟಿ ಸಂಜಯನಗರದ ಬಾರ್ ಮಾಲೀಕನ ಸ್ನೇಹಿತನಾಗಿದ್ದು, ಯಾವಾಗ ಪುನೀತ್ ಖಾಕಿ ಬಲೆಗೆ ಬಿದ್ದನೋ, ಆಗ್ಲೇ ಇವರಿಬ್ಬರೂ ಎಸ್ಕೇಪ್ ಆಗಿದ್ದಾರೆ. ತಲೆ ಮರೆಸಿಕೊಂಡಿರೋ ಗೌರವ್ ಹಾಗೂ ಕಿರಣ್‌ಗಾಗಿ ಖಾಕಿ ಬಲೆ ಬೀಸಿದ್ದು, ಸದ್ಯದಲ್ಲೇ ಅವರೂ ಸಹ ವಿಚಾರಣೆ ಎದುರಿಸಲಿದ್ದಾರೆ.
ಅಂದಹಾಗೆ ಗೌರವ್ ಶೆಟ್ಟಿ ಹಾಗೂ ಕಿರಣ್ ಹಿಂದೆ ಮತ್ತೊಬ್ಬ ಮಾಸ್ಟರ್‌ಮೈಂಡ್ ಇದ್ದು, ಇವರಿಬ್ಬರೂ ಲಾಕ್ ಆಗ್ತಿದ್ದಂತೆ ಆತ ಕೂಡ ಎಕ್ಸ್‌ಪೋಸ್ ಆಗಲಿದ್ದಾನೆ ಎನ್ನಲಾಗ್ತಿದೆ. ಆತ ದಾಸ ದರ್ಶನ್‌ಗೆ ಬಹಳ ಬೇಕಾದ ವ್ಯಕ್ತಿಯಾಗಿದ್ದು, ಅವರೇ ಇದನ್ನೆಲ್ಲಾ ಮಾಡಿಸಿದ್ದಾರೆ ಎನ್ನಲಾಗ್ತಿದೆ. ಅದು ವಿತ್ ಪ್ರೂಫ್ ಪ್ರೂವ್ ಆಗಬೇಕಿದೆ. ಹಾಗೂ ಅಧಿಕೃತವಾಗಿ ವರದಿ ಕೂಡ ಹೊರಬೇಳಬೇಕಿದೆ. ಒಟ್ಟಾರೆ ಸೆಲೆಬ್ರಿಟೀಸ್ ಸೆಲೆಬ್ರಿಟೀಸ್ ಅಂತ ಫ್ಯಾನ್ಸ್‌ನ ತಲೆಮೇಲೆ ಇಟ್ಕೊಂಡು ಮೆರೆಸುತ್ತಿದ್ದ ದಾಸನಿಗೆ, ಅವ್ರೇ ಖೆಡ್ಡಾ ತೋಡ್ತಾರೆ ಅನ್ನೋದು ಗೊತ್ತಿರಲಿಲ್ಲ ಅನಿಸುತ್ತೆ.
ಕರ್ಮದ ಫಲ ಯಾರೂ ಏನೂ ಮಾಡೋಕೆ ಆಗಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು. ಯಾರು ಯಾವುದೇ ಬಿಲದಲ್ಲಿ ಅಡಗಿದ್ರೂ ಸಹ, ಟೆಕ್ನಿಕಲ್ ಎವಿಡೆನ್ಸ್ ಮೂಲಕ ಹಿಡಿಯೋ ಶಕ್ತಿ ಕ್ರೈಂ, ಸೈಬರ್ ಕ್ರೈಂ ತಂಡಗಳಿಗಿದೆ. ಸೋ.. ತುಂಬಾ ಸೆನ್ಸಿಟೀವ್ ಕೇಸ್ ಆಗಿರೋ ರೇಣುಕಾಸ್ವಾಮಿ ಮರ್ಡರ್ ಕೇಸ್‌ನ ಸಾಕ್ಷ್ಯನಾಶ ಮಾಡಿರೋರನ್ನ ಖಾಕಿ ಬಿಡೋ ಪ್ರಮೇಯವೇ ಇಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





