ಬೆಂಗಳೂರು: ಬೆಂಗಳೂರಿನ ಕಾಡುಗೋಡಿಯಲ್ಲಿ (Kadugodi) ಮಗಳು ವೆನ್ನೀಲಾ ಕೊಲೆ ಪ್ರಕರಣದಲ್ಲಿ (Murder Case) ಆರೋಪಿ ತಾಯಿ ಪ್ರಿಯಾಂಕಾಗೆ (Priyanka) ಬೆಂಗಳೂರು ಜಿಲ್ಲಾ ಸತ್ರ ನ್ಯಾಯಾಲಯ (District Sessions Court) ಜಾಮೀನು ಮಂಜೂರು ಮಾಡಿದೆ.
ಏನು ಪ್ರಕರಣ?
ಕಳೆದ ಮಾರ್ಚ್ 24 ರಂದು ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿ ವೆನ್ನೀಲಾ (Venneela) ಶವವಾಗಿ ಪತ್ತೆಯಾಗಿತ್ತು. ಪ್ರಕರಣದಲ್ಲಿ ಬಾಲಕಿಯ ತಾಯಿ ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಮೋಹನ್ (Mohan) ಅವರನ್ನು ಬಂಧಿಸಲಾಗಿತ್ತು. ಜೂನ್ 11 ರಂದು ಪ್ರಿಯಾಂಕಾಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ (Judicial Custody) ಜೈಲಿಗೆ ಕಳುಹಿಸಿದ್ದರು.
ಕೊಲೆಯ ಹಿಂದಿನ ಕಥೆ
ಬೆಂಗಳೂರು ಮೂಲದ ಪ್ರಿಯಾಂಕಾ ಮತ್ತು ದಾವಣಗೆರೆಯ (Davanagere) ಪ್ರವೀಣ್ (Praveen) 2007 ರಲ್ಲಿ ವಿವಾಹವಾಗಿದ್ದರು. ದಂಪತಿಗೆ 17 ವರ್ಷ ಮತ್ತು 5 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಕೆಲವು ವರ್ಷಗಳ ಹಿಂದೆ ಪ್ರಿಯಾಂಕಾಗೆ ತನ್ನ ಕಾಲೇಜು ಗೆಳೆಯ ಮೋಹನ್ ಪರಿಚಯವಾಗಿದ್ದ. ಇಬ್ಬರ ನಡುವೆ ಸಲುಗೆ ಬೆಳೆದು ಅಂತಿಮವಾಗಿ ಅಕ್ರಮ ಸಂಬಂಧಕ್ಕೆ (Illicit Relationship) ತಿರುಗಿತ್ತು.
ಈ ವಿಷಯ ಪ್ರಿಯಾಂಕಾ ಪತಿ ಪ್ರವೀಣ್ ಅವರ ಕಿವಿಗೆ ಬಿದ್ದಿತ್ತು. ಪತಿ ಪ್ರಶ್ನಿಸಿದಾಗ ಪ್ರಿಯಾಂಕಾ ತನಗೆ ಡಿವೋರ್ಸ್ (Divorce) ಕೊಡುವಂತೆ ಪ್ರವೀಣ್ ಅವರಿಗೆ ಪಟ್ಟು ಹಿಡಿದಿದ್ದಳು. ಆದರೆ, ಇದು ಸಾಲದೆಂದು ತನ್ನ ಪ್ರಿಯಕರನ ಜೊತೆ ಸೇರಿ ತಾನೇ ಹೆತ್ತ ಮಗುವನ್ನೇ ಕೊಲೆಗೈದು ವಿಕೃತಿ ಮೆರೆದಿದ್ದಾಳೆ ಎಂಬುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿತ್ತು.
ಬಿರಿಯಾನಿ ತಿಂದು ಸಾವಿನ ಕಥೆ
ಕೊಲೆಯ ಬಳಿಕ ಪ್ರಿಯಾಂಕಾ ಮತ್ತು ಮೋಹನ್ ಬಿರಿಯಾನಿ ತಿಂದು (Biryani) ಸಾವನ್ನಪ್ಪಿರುವುದಾಗಿ ಸುಳ್ಳು ಕಥೆಯನ್ನು ರೂಪಿಸಿದ್ದರು. ಆದರೆ, ಪೊಲೀಸ್ ತನಿಖೆಯಲ್ಲಿ ಈ ಕಥೆಯು ಸುಳ್ಳು ಎಂದು ಸಾಬೀತಾಯಿತು. ಪೊಲೀಸರು ಘಟನಾ ಸ್ಥಳದಲ್ಲಿನ ಫೋರೆನ್ಸಿಕ್ (Forensic) ಸಾಕ್ಷ್ಯಗಳನ್ನು ಸಂಗ್ರಹಿಸಿ, ಪ್ರಿಯಾಂಕಾ ಮತ್ತು ಮೋಹನ್ ವಿರುದ್ಧ ಕೊಲೆಯ ಆರೋಪ ಸಾಬೀತುಪಡಿಸಿದ್ದರು.
ಜಾಮೀನು ಮಂಜೂರಾದದ್ದು ಹೇಗೆ?
ಆರೋಪಿ ಪ್ರಿಯಾಂಕಾ ಪರವಾಗಿ ವಕೀಲ ಪ್ರಸನ್ನ (Prasanna) ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು. “ಕೊಲೆಯಲ್ಲಿ ತಾಯಿ ಪ್ರಿಯಾಂಕಾ ನೇರವಾಗಿ ಭಾಗಿಯಾಗಿಲ್ಲ. ಕೊಲೆಯ ಮುಖ್ಯ ಆರೋಪಿ ಮೋಹನ್ ಆಗಿದ್ದಾನೆ” ಎಂದು ವಕೀಲರು ವಾದಿಸಿದರು. ಈ ವಾದವನ್ನು ಆಧರಿಸಿ ಬೆಂಗಳೂರು ಜಿಲ್ಲಾ ಸತ್ರ ನ್ಯಾಯಾಲಯದ (ACJM Court) ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದರು.





