ಇಂದು ಆಪ್ತರಿಗೆ ಸ್ಥಾನಾಮಾನ, ಸಂಪತ್ತಿನ ದಾನ, ಸಂಗಾತಿಯ ಕುತೂಹಲ ನಿವಾರಣೆ, ಕೋಪದ ಮಾತು, ಬಂಧುಗಳ ಅಪವಾದ ಇವೆಲ್ಲ ನಿಮ್ಮನ್ನು ತಲುಪಬಹುದು. ಪ್ರತಿ ರಾಶಿಯವರಿಗೂ ಇಂದು ವಿಶೇಷವಾದ ಸಂದೇಶವಿದೆ. ಓದಿ, ತಿಳಿಯಿರಿ ಮತ್ತು ಎಚ್ಚರಿಕೆಯಿಂದ ದಿನವನ್ನು ಸಾಗಿಸಿ.
ಮೇಷ ರಾಶಿ :
ಅವಮಾನವಾಗುವ ಸಂದರ್ಭವಿದ್ದರೆ ಅಲ್ಲಿಂದ ದೂರ ನಡೆಯಿರಿ. ನಿಮ್ಮ ವ್ಯಕ್ತಿತ್ವವನ್ನು ಹುಡುಕಿಕೊಂಡು ಬರುವವರಿದ್ದಾರೆ. ತುರ್ತನ್ನು ಇತರರಿಗೆ ಹೇರಿ ಶಾಂತವಾಗುವಿರಿ. ಯೋಚಿಸದೆ ಮಾತುಗಳನ್ನು ನಂಬಬೇಡಿ. ನೆಚ್ಚಿನವರ ಜೊತೆ ಸಮಯ ಕಳೆಯಿರಿ, ಆದರೆ ಯಾರ ಮೇಲೂ ನಿಮ್ಮ ನಿಲವನ್ನು ಹೇರಬೇಡಿ. ದಿನದಲ್ಲಿ ಬದಲಾವಣೆ ತಂದುಕೊಳ್ಳುವಿರಿ.
ವೃಷಭ ರಾಶಿ :
ಇಂದು ಯಾವುದನ್ನೂ ಪರಿಶೀಲಿಸದೇ ಸ್ವೀಕರಿಸಬೇಡಿ. ಅನಿರೀಕ್ಷಿತ ಹಣ ಸಿಗಬಹುದು. ಶಾಂತತೆ ಮತ್ತು ಬುದ್ಧಿವಂತಿಕೆಯಿಂದ ಮುಂದುವರಿಯಿರಿ. ಇತರರ ವಿಷಯಗಳಲ್ಲಿ ಮಧ್ಯಪ್ರವೇಶ ಬೇಡ. ಖರ್ಚಿನ ಬಗ್ಗೆ ಗಮನ ಕೊಡಿ. ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಸಿಲುಕಬೇಡಿ. ಶ್ರಮಕ್ಕೆ ಫಲ ನಿರೀಕ್ಷಿಸಿ ಸಮಯ ವ್ಯರ್ಥ ಮಾಡಬೇಡಿ.
ಮಿಥುನ ರಾಶಿ :
ನಿಮ್ಮವರೇ ನಕಾರಾತ್ಮಕ ಮಾತುಗಳಿಂದ ಅವಮಾನ ಮಾಡಬಹುದು. ಸದ್ಭಾವವಿದ್ದರೆ ಎಲ್ಲವೂ ತಾನಾಗಿಯೇ ಒಲಿಯುವುದು. ಹೊಸ ಯೋಜನೆಗೆ ಇದು ಒಳ್ಳೆಯ ಸಮಯ. ಕೊರತೆಯೇ ಶಾಪವಾಗಬಹುದು. ಕೇಳಿದಷ್ಟು ಹಣ ಕೊಟ್ಟು ವಸ್ತು ಖರೀದಿಸುವಿರಿ.
ಕರ್ಕಾಟಕ ರಾಶಿ :
ಕೆಲಸಕ್ಕೆ ಹೊಸತನ್ನು ಸೇರಿಸಿಕೊಳ್ಳುವಿರಿ. ಹೊಸ ಕಲಿಕೆಯ ಅವಕಾಶ. ಹಳೆ ತಪ್ಪುಗಳಿಗೆ ತಾಳ್ಮೆಯಿಂದ ಉತ್ತರ ಕೊಡಿ. ಹಣದ ವ್ಯವಹಾರದಲ್ಲಿ ಆತ್ಮವಿಶ್ವಾಸ ಬೇಕು. ಉದ್ವೇಗದ ವರ್ತನೆ ಬೇರೆ ಅರ್ಥ ನೀಡಬಹುದು. ವೈವಾಹಿಕ ಜೀವನ ಬೇಸರ ತರಬಹುದು.
ಸಿಂಹ ರಾಶಿ :
ಮಕ್ಕಳಲ್ಲಿ ಪ್ರೀತಿ ಹೆಚ್ಚಾಗುವುದು. ಸವಾಲುಗಳ ಬಗ್ಗೆ ಆಳವಾಗಿ ಯೋಚಿಸಿ. ಹಣಕಾಸಿನಲ್ಲಿ ಚಿಕ್ಕ ಲಾಭ. ಮನೆಯವರು ಬದಲಾವಣೆ ಮೆಚ್ಚುವರು. ಸ್ನೇಹಿತರ ಪ್ರೋತ್ಸಾಹ, ಆರೋಗ್ಯ ಸುಧಾರಣೆ. ಮಾತುಗಳನ್ನು ಕಡಿಮೆ ಆಡಿ. ಪಾಲುದಾರಿಕೆ ಒಳ್ಳೆಯದು. ನೆರೆಯವರ ಜೊತೆ ಕಲಹವಾಗಬಹುದು.
ಕನ್ಯಾ ರಾಶಿ :
ಒಳ್ಳೆಯ ಕಾರಣಕ್ಕೆ ದಾನ ಮಾಡುವಿರಿ. ಪ್ರತಿ ಕೆಲಸದಲ್ಲೂ ಯಶಸ್ಸು ಸಾಧಿಸಲಾಗದು. ನಿಮಗೆ ಬೇಕಾದುದನ್ನು ಮಾತ್ರ ಪಡೆಯುವಿರಿ. ಇತರರಿಂದ ಏನನ್ನೂ ನಿರೀಕ್ಷಿಸಬೇಡಿ. ಸ್ತ್ರೀಯರು ನಾಜೂಕಾಗಿ ಕಾರ್ಯ ಮಾಡಿಸಿಕೊಳ್ಳುವರು. ಅಂತಶ್ಶತ್ರುಗಳ ಬಗ್ಗೆ ಎಚ್ಚರವಿರಲಿ.
ತುಲಾ ರಾಶಿ :
ಕೆಲಸದಲ್ಲಿ ಬೆಂಬಲ ಸಿಗುತ್ತದೆ. ಹಳೆಯ ವಿವಾದಗಳು ಬಗೆಹರಿಯುತ್ತವೆ. ವೃತ್ತಿಜೀವನದಲ್ಲಿ ಯಶಸ್ಸು, ಆದಾಯ ಸುಧಾರಣೆ. ತಾಯಿಯ ಆರೋಗ್ಯ ಕೆಡಬಹುದು, ಚಿಕಿತ್ಸೆ ಕೊಡಿಸಿ. ಪೂರ್ವ ನಿಶ್ಚಯ ತಲೆಕೆಳಗಾಗಬಹುದು. ಸುಳ್ಳು ವದಂತಿಗಳಿಂದ ಎಚ್ಚರ.
ವೃಶ್ಚಿಕ ರಾಶಿ :
ಕೆಲಸದ ನಿಮಿತ್ತ ಪ್ರಯಾಣ. ಚಿಂತೆಗಳು ಕೊನೆಗೊಳ್ಳುತ್ತವೆ, ಹಣ ಸಿಗುತ್ತದೆ. ಯೋಜನೆಗಳು ಯಶಸ್ವಿ, ಹೊಸ ಕೆಲಸಗಳು ಲಭ್ಯ. ಗುರಿ ಸಾಧನೆಯಲ್ಲಿ ಯಶಸ್ಸು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಶ್ರಮಿಸಬೇಕು. ವಾಹನದ ದಾಖಲೆ ಪರಿಶೀಲಿಸಿ.
ಧನು ರಾಶಿ :
ಆರೋಗ್ಯದ ಚಿಂತೆ ಬೇಡ, ಸರಿಪಡಿಸಿಕೊಳ್ಳುವತ್ತ ಗಮನ ಕೊಡಿ. ಬಹಳಷ್ಟು ಕೆಲಸ, ಯಶಸ್ಸಿಗೆ ಸಮಯ ಬೇಕು. ನ್ಯಾಯಾಂಗ ಮತ್ತು ಭೂಮಿ ಸಂಬಂಧಿತ ಪ್ರಯೋಜನ. ಅಡೆತಡೆಗಳು ನಿವಾರಣೆ. ಕಳೆದುಕೊಂಡದ್ದನ್ನು ಮತ್ತೆ ಪಡೆಯುವ ಆಸೆ.
ಮಕರ ರಾಶಿ :
ದೂರದ ಊರಿಗೆ ಪ್ರಯಾಣದ ಯೋಜನೆ. ವಿವಾದಗಳಲ್ಲಿ ಜಯ. ಕುಟುಂಬ ವಾತಾವರಣ ಅನುಕೂಲಕರ. ವ್ಯವಹಾರ ಉತ್ತಮ, ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚು. ಮಕ್ಕಳಿಂದ ಒಳ್ಳೆಯ ಸುದ್ದಿ.
ಕುಂಭ ರಾಶಿ :
ಗೆಳೆತನ ಖುಷಿ ಕೊಡುವುದು. ಅತಿಯಾದ ಆಲೋಚನೆ ಮಾನಸಿಕ ನೆಮ್ಮದಿ ದೂರ ಮಾಡುವುದು. ದಿನದ ಆರಂಭದಲ್ಲಿ ಕಷ್ಟ, ನಂತರ ಸಂತೋಷ ಮತ್ತು ಹಣದ ಹರಿವು. ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುವಿರಿ. ಆಕಸ್ಮಿಕ ಧನಲಾಭ. ಮನೆಯ ಹಿರಿಯರ ಸೇವೆ ಮಾಡಬೇಕೆನಿಸುವುದು.
ಮೀನ ರಾಶಿ :
ಮನೆಗೆ ಅಗತ್ಯ ವಸ್ತುಗಳ ಖರೀದಿ. ಸಮಸ್ಯೆ ಪರಿಹಾರಕ್ಕೆ ಬುದ್ಧಿವಂತಿಕೆ ಬಳಸಿ. ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಹಳೆಯ ಸಮಸ್ಯೆ ಪರಿಹಾರಕ್ಕೆ ಅವಕಾಶ. ಸಹೋದರನಿಂದ ಆರ್ಥಿಕ ಸಹಕಾರ. ಆರೋಗ್ಯ ಉತ್ತಮ.





