ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಆದರೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಇಳಿಯುವ ಬದಲು ಏರಿಕೆಯಾಗುತ್ತಿದೆ. ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ಹಿನ್ನೆಲೆ ಜಾಗತಿಕ ಕಚ್ಚಾ ತೈಲ ಬೆಲೆ ಕುಸಿದಿದೆ, ಆದರೂ ಭಾರತದಲ್ಲಿ ಇಂಧನ ಬೆಲೆ ಏರಿಕೆಯಾಗುತ್ತಿದೆ. ಇದು ಸಾಮಾನ್ಯ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆ ವರದಿ
ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆಯಲ್ಲಿ ಶೇಕಡಾ 5.99 ರಷ್ಟು ಭಾರೀ ಇಳಿಕೆ ಕಂಡುಬಂದಿದೆ. ಪ್ರಸ್ತುತ ಪ್ರತಿ ಬ್ಯಾರಲ್ WTI ತೈಲದ ದರ 90.81 ಅಮೆರಿಕನ್ ಡಾಲರ್‌ಗೆ ಇಳಿದಿದೆ. ಅಂತೆಯೇ, ಬ್ರೆಂಟ್ ಕ್ರೂಡ್ ಆಯಿಲ್ ದರವೂ ಶೇಕಡಾ 5.88 ರಷ್ಟು ಕುಸಿದು ಪ್ರತಿ ಬ್ಯಾರಲ್‌ಗೆ 97.77 ಡಾಲರ್‌ಗೆ ತಲುಪಿದೆ. ಈ ಇಳಿಕೆಗೆ ಪ್ರಮುಖ ಕಾರಣ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ, ಜೊತೆಗೆ ಜಾಗತಿಕ ಬೇಡಿಕೆ ಇಳಿಕೆಯ ಅಂದಾಜು. ಭಾರತದ MCX ವಿನಿಮಯ ಕೇಂದ್ರದಲ್ಲೂ ಕಚ್ಚಾ ತೈಲದ ದರ ಗಣನೀಯವಾಗಿ ಇಳಿದಿದೆ..
ಭಾರತದಲ್ಲಿ ದರ ಏರಿಕೆ ಏಕೆ?
ಆದರೆ ಭಾರತದಲ್ಲಿ ನಿಯಮಿತವಾಗಿ ಪೆಟ್ರೋಲ್-ಡೀಸೆಲ್ ದರಗಳನ್ನು ಪರಿಷ್ಕರಿಸುವ ತೈಲ ಕಂಪನಿಗಳು (HPCL, BPCL, IOC) ದರ ಇಳಿಸದೆ, ಏರಿಕೆ ಮಾಡಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತೆರಿಗೆಗಳನ್ನು ಹಿಂತೆಗೆದುಕೊಳ್ಳದ ಕಾರಣ, ಅಂತಾರಾಷ್ಟ್ರೀಯ ಮಾರುಕಟ್ಟೆಯ ಇಳಿಕೆಯ ಪ್ರಯೋಜನ ಸಾಮಾನ್ಯನಿಗೆ ಸಿಗುತ್ತಿಲ್ಲ.
ಗ್ರಾಹಕರ ಮೇಲೆ ಪರಿಣಾಮ
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ವಾಹನ ಸವಾರರು, ಸಾರಿಗೆ ವಲಯ, ಕೃಷಿ ಮತ್ತು ಸಣ್ಣ ಕೈಗಾರಿಕೆಗಳಿಗೆ ತೀವ್ರ ತೊಂದರೆಯಾಗಿದೆ. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಶತಾಂಶ 110 ರೂಪಾಯಿ ದಾಟಿದ್ದು, ಡೀಸೆಲ್ ದರವೂ 95 ರೂಪಾಯಿ ಸಮೀಪದಲ್ಲಿದೆ. ಆದರೆ ಇದೇ ವೇಳೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿಯುತ್ತಿದೆ ಇದನ್ನು ‘ಟ್ವಿಸ್ಟ್’ ಎನ್ನಬಹುದು.





