ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ಕೆಡಿ.. ಟೈಟಲ್ ಕೇಳಿದ್ರೆ ನೆಗೆಟೀವ್ ಅನಿಸುತ್ತೆ. ಆದ್ರೆ ಒಳಗಡೆ ಕಂಟೆಂಟ್ ಮಾತ್ರ ಹಂಡ್ರೆಡ್ ಪರ್ಸೆಂಟ್ ಫ್ಯಾಮಿಲಿ ಎಂಟರ್‌ಟೈನರ್‌ದೇ ಇದೆ. ಜೋಗಿ ಪ್ರೇಮ್-ಧ್ರುವ-ಕೆವಿಎನ್ ಕಾಂಬೋನ ಈ ಮೆಗಾ ಮೂವಿ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಅದಕ್ಕೆ ಪೂರಕವಾಗಿ ಹೈ ವೋಲ್ಟೇಜ್ ಟ್ರೈಲರ್ ಕೂಡ ರಿಲೀಸ್ ಆಗಿದೆ. ಆರ್‌ಜಿವಿ ರಕ್ತಚರಿತ್ರೆಯನ್ನೇ ಮೀರಿಸುವಂತಿರೋ ಕೆಡಿ ಝಲಕ್ ಹೇಗಿದೆ..? ಯಾರ ಪರ್ಫಾಮೆನ್ಸ್ ಹೇಗಿದೆ..? ಟೀಂ ಈ ಬಗ್ಗೆ ಏನು ಹೇಳುತ್ತೆ ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ಈ ಸ್ಟೋರಿ ನೋಡಿ..
- ದಿ ವೆಯ್ಟ್ ಈಸ್ ಓವರ್.. ‘KD’ ವರ್ಲ್ಡ್ ಗೇಟ್ಸ್ ಓಪನ್
- ಬಿಟೌನ್ to ಚಂದನವನ.. ದಿಗ್ಗಜರ ನಯಾ ರಕ್ತ ಚರಿತ್ರೆ..!!
- ರೆಟ್ರೋ ಲುಕ್ಕು.. ಓಲ್ಡ್ ಮೈಸೂರ್ ಸ್ಲ್ಯಾಂಗು.. ಪ್ರೇಮ್ಸ್ ಕಿಕ್ಕು
- ಗ್ಯಾರಂಟಿ ನ್ಯೂಸ್‌ನಲ್ಲಿ ಧ್ರುವ KD ಟ್ರೈಲರ್ ರಿವ್ಯೂ ಧಮಾಕ
ಗಾಂಧಿನಗರದ ಕಾಳಿದಾಸನ ಆರ್ಭಟಕ್ಕೆ ಈಗ ಇಡೀ ಇಂಡಿಯಾ ಶೇಕ್ ಆಗಿದೆ. ಸುಮಾರು ಮೂರು ವರ್ಷಗಳ ಸುದೀರ್ಘ ಕಾಯುವಿಕೆ, ನೂರಾರು ಸವಾಲುಗಳು ಮತ್ತು ಇತ್ತೀಚಿನ ಸೆನ್ಸಾರ್ ಮಂಡಳಿಯ ಕಠಿಣ ಅಗ್ನಿಪರೀಕ್ಷೆಗಳನ್ನು ಎದುರಿಸಿ ಬಂದಿರೋ ‘ಕೆಡಿ’ ಟ್ರೈಲರ್ ಈಗ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಏಪ್ರಿಲ್ 30ರಂದು ರಿಲೀಸ್ ಗೆ ರೆಡಿ ಆಗಿರುವ ಕೆಡಿ ಸಿನಿಮಾ, ಟ್ರೈಲರ್ ಮೂಲಕ ಪ್ರಚಾರಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿದೆ. ಪಂಚತಾರಾ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇಡೀ ಕೆಡಿ ತಂಡ ಭಾಗಿಯಾಗಿದ್ದು, ಹಿರಿಯ ನಟ ದತ್ತಣ್ಣ ಕೆಡಿ ಟ್ರೈಲರ್ ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದ್ರು.
ಜೋಗಿ ಪ್ರೇಮ್ ಕೆತ್ತಿರುವ ಈ ವಿಭಿನ್ನ ಲೋಕಕ್ಕೆ ಮರುಳಾಗದವರಿಲ್ಲ. ಕೇವಲ ಒಂದು ಟ್ರೈಲರ್ ಮೂಲಕವೇ ಬಾಕ್ಸ್ ಆಫೀಸ್‌ನ ಎಲ್ಲಾ ಹಳೆಯ ದಾಖಲೆಗಳನ್ನು ಧೂಳಿಪಟ ಮಾಡುವ ಮುನ್ಸೂಚನೆಯನ್ನು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನೀಡಿದ್ದಾರೆ. ಸದ್ಯ ಟ್ರೈಲರ್ ರಿಲೀಸ್ ಇವೆಂಟ್ ನಲ್ಲಿ ಮಾತನಾಡಿದ ರಕ್ಷಿತಾ ಪ್ರೇಮ್, ಮೂರು ವರ್ಷದ ಕೆಡಿ ಜರ್ನಿ ನೆನೆದು ಭಾವುಕರಾದ್ರು. ಹಾಗೆ ನಾನು ಬಜಾರಿ ಪಾತ್ರಗಳನ್ನು ಮಾಡ್ತಿದ್ದೆ ಈಗ ರೀಷ್ಮಾ ಮಾಡ್ತಿರೋದು ಖುಷಿ ಇದೆ ಅಂದ್ರು.
ಡಿಜಿಟಲ್ ಜಗತ್ತಿನಲ್ಲಿ ಪ್ರತಿ ಸೆಕೆಂಡಿಗೂ ಸಾವಿರಾರು ವ್ಯೂಸ್ ಪಡೆಯುತ್ತಾ ಕಾಳಿದಾಸ ಅಕ್ಷರಶಃ ವಿಶ್ವರೂಪ ದರ್ಶನ ಮಾಡಿಸುತ್ತಿದ್ದಾನೆ. 2ನಿಮಿಷ 48ಸೆಕೆಂಡ್ ಇರುವ ಟ್ರೈಲರ್‌ನಲ್ಲಿ ಧ್ರುವ ಸರ್ಜಾ ಅವರ ಟ್ರಾನ್ಸ್‌ಫಾರ್ಮೇಷನ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. 70ರ ದಶಕದ ಆ ರಗಡ್ ಲುಕ್, ಕೈಯಲ್ಲಿ ರಕ್ತಸಿಕ್ತ ಲಾಂಗು, ಮತ್ತು ಮಂಡ್ಯ ಸೊಗಡಿನ ಖಡಕ್ ಸ್ಲ್ಯಾಂಗ್ ನೋಡುಗರ ಮೈಮನ ರೋಮಾಂಚನಗೊಳಿಸುತ್ತಿದೆ.
ಬದುಕುಳಿದರೆ ನಿಮ್ಮ ತಾಯಂದಿರಿಗೆ ನನ್ನ ಕ್ಷಮೆಯಿರಲಿ ಎಂಬ ಧ್ರುವ ಪವರ್‌ಫುಲ್ ಡೈಲಾಗ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ರೀಲ್ಸ್ ಲೋಕದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಪ್ರೇಮ್ ಅವರ ಮೇಕಿಂಗ್‌ನಲ್ಲಿ ಹಳೆ ಬೆಂಗಳೂರಿನ ಭೂಗತಲೋಕ ಮರುಜೀವ ಪಡೆದಂತಿದೆ. ರೆಟ್ರೋ ಶೈಲಿಯ ಈ ಮಾಸ್ ಎಂಟರ್ಟೈನರ್ ನೋಡಿ ನೆಟ್ಟಿಗರು ಇದು ಚಂದನವನದ ಅಸಲಿ ರಕ್ತ ಚರಿತ್ರೆ ಎಂದು ಕೊಂಡಾಡುತ್ತಿದ್ದಾರೆ.
ಸದ್ಯ ಧ್ರುವ ಕನ್ನಡಿಗರಲ್ಲಿ ಒಂದು ಮನವಿ ಮಾಡಿದ್ದಾರೆ. ನಿಮ್ಮ 2 ಗಂಟೆ 20 ನಿಮಿಷದ ಸಮಯ ಬಿಡುವು ಮಾಡಿಕೊಂಡು ಕೆಡಿ ಸಿನಿಮಾ ನೋಡಿ. ಸ್ವಲ್ಪ ವಯಲೆನ್ಸ್ ಇದೆ. ಆದ್ರೆ ಮಕ್ಕಳು ಸಹ ನೋಡಬಹುದು ಅಂದಿದ್ದಾರೆ.
- ವೈರಲ್ ಆಗ್ತಿದೆ ರೀಷ್ಮಾ ನಾಣಯ್ಯ ರಾ & ರಗಡ್ ಡೈಲಾಗ್
- 3 ವರ್ಷದ ಕಾಯುವಿಕೆ.. ಅಗ್ನಿಪರೀಕ್ಷೆ ದಾಟಿ ಬಂದ ಪ್ರೇಮ್
- ಈ ಕೆಡಿ ವರ್ಲ್ಡ್ ನ ಅಸಲಿ ಆಟಗಾರ ಯಾರು ಗೊತ್ತಾ..?!
- ಧರ್ಮನಾಗಿ ದಶ ದಿಕ್ಕುಗಳಲ್ಲೂ ಸದ್ದು ಮಾಡ್ತಾರಾ ರಮ್ಮಿ?
ಕೆಡಿ ಟ್ರೈಲರ್‌ನಲ್ಲಿ ನಾಯಕಿ ರೀಷ್ಮಾ ನಾಣಯ್ಯ ಅವರ ಎಂಟ್ರಿ ಮತ್ತು ಡೈಲಾಗ್ ಡೆಲಿವರಿ ಪ್ರೇಕ್ಷಕರಲ್ಲಿ ಹೊಸ ಕುತೂಹಲ ಮೂಡಿಸಿದೆ. ಸೇರಿಸ್ಲಾ ಜನನಾ.. ಏಳಿಸ್ಲಾ ದೊಂಬಿನಾ.. ಹಾಕಿಸ್ಲಾ ಬೆಂಕಿನಾ ಎಂದು ಗದರಿಸುವ ಮಚ್ಚು ಲಕ್ಷ್ಮಿ ಕೇವಲ ಗ್ಲಾಮರ್ ಬೊಂಬೆಯಾಗಷ್ಟೇ ಉಳಿಯದೆ, 70ರ ದಶಕದ ಹಳ್ಳಿ ಹುಡುಗಿಯ ಖದರ್ ಹಾಗೂ ಮಂಡ್ಯ ಶೈಲಿಯ ಮಾತುಗಾರಿಕೆಯಲ್ಲಿ ಮಿಂಚು ಹರಿಸಿದ್ದಾರೆ. ರಗಡ್ ಆಗಿ ಕಾಣಿಸಿಕೊಂಡಿರುವ ಧ್ರುವ ಸರ್ಜಾ ಎದುರು ಅಷ್ಟೇ ಮಾಸ್ ಆಗಿ ರೀಷ್ಮಾ ಈ ಡೈಲಾಗ್ ಹೊಡೆದಿರುವುದು ಚಿತ್ರ ಪ್ರೇಮಿಗಳಿಗೆ ಫುಲ್ ಕಿಕ್ ಕೊಟ್ಟಿದೆ.
ಕಳೆದ ಮೂರು ವರ್ಷಗಳಲ್ಲಿ ಕೆಡಿ ಚಿತ್ರತಂಡ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಕೊರೋನಾ ನಂತರದ ಬದಲಾವಣೆಗಳು, ಅದ್ದೂರಿ ಸೆಟ್‌ಗಳ ನಿರ್ಮಾಣ, ಮತ್ತು ಇತ್ತೀಚೆಗೆ ಸೆನ್ಸಾರ್ ಮಂಡಳಿಯು ಸಿನಿಮಾದ ಕೆಲವು ಹಿಂಸಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿದಾಗ ತಂಡ ಸಾಕಷ್ಟು ಆತಂಕ ಎದುರಿಸಿತ್ತು. ಆದ್ರೆ ಸೋಲೊಪ್ಪದ ಶೋಮ್ಯಾನ್ ಪ್ರೇಮ್ ಮತ್ತು ನಿರ್ಮಾಪಕ ವೆಂಕಟ್ ಕೆ ನಾರಾಯಣ್ ಕಲಾತ್ಮಕತೆಗೆ ಧಕ್ಕೆ ಬಾರದಂತೆ ಹೋರಾಟ ನಡೆಸಿ, ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಈ ಸುದೀರ್ಘ ಹೋರಾಟದ ಪ್ರತಿಫಲವೇ ಈಗ ಟ್ರೈಲರ್ ರೂಪದಲ್ಲಿ ಸಿಕ್ಕಿರುವ ಅಭೂತಪೂರ್ವ ಯಶಸ್ಸು.
ಯಾವಾಗಲೂ ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ರಮೇಶ್ ಅರವಿಂದ್, ಈ ಚಿತ್ರದಲ್ಲಿ ‘ಧರ್ಮ’ ಎಂಬ ವಿಭಿನ್ನ ಪಾತ್ರದ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಟ್ರೈಲರ್‌ನ ಝಲಕ್‌ನಲ್ಲಿ ಅವರು ಬಹಳ ಇಂಟೆನ್ಸ್ ಆಗಿ ಮತ್ತು ಸಸ್ಪೆನ್ಸ್ ಉಳಿಸಿಕೊಳ್ಳುವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಧರ್ಮ ಮತ್ತು ಕಾಳಿದಾಸನ ನಡುವಿನ ಸಂಬಂಧವೇನು..? ಇವರು ಸಮಾಜದ ಧರ್ಮವನ್ನು ರಕ್ಷಿಸುವವರೋ ಅಥವಾ ಕಥೆಯಲ್ಲಿ ದೊಡ್ಡ ಟ್ವಿಸ್ಟ್ ಕೊಡುವವರೋ ಎಂಬ ಕುತೂಹಲ ಮೂಡಿದೆ.
ಸದ್ಯ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರಮೇಶ್ ಅರವಿಂದ್, ಸಿನಿಮಾದಲ್ಲಿನ ಪ್ರತಿ ಕ್ಯಾರೆಕ್ಟರ್ ಬಗ್ಗೆ ಪಂಚಿಂಗ್ ಡೈಲಾಗ್ ಮೂಲಕ ಏನು ಹೇಳಿದ್ರು ನೀವೇ ನೋಡಿ. ಅಷ್ಟೇ ಅಲ್ಲ ಕೆಡಿ ಪದದ ಹುಟ್ಟು, ಬೆಳವಣಿಗೆಯನ್ನ ಮಿಸ್ಟರ್ ಪರ್ಫೆಕ್ಟ್ ಬಾಯಿಂದ್ಲೇ ಕೇಳಿ.
ಕನ್ನಡಿಗರು ಮಾತ್ರವಲ್ಲದೆ, ತಮಿಳು, ತೆಲುಗು ಮತ್ತು ಹಿಂದಿ ಪ್ರೇಕ್ಷಕರು ಕೂಡ ಧ್ರುವ ಸರ್ಜಾ ಅವರ ಎನರ್ಜಿ ಮ್ಯಾಚ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಮೆಂಟ್ ಮಾಡುತ್ತಿರುವುದು ಇಂಟರೆಸ್ಟಿಂಗ್.





