ಬೆಂಗಳೂರಿನ ಕುಂಬಳಗೋಡು ಪ್ರದೇಶದಲ್ಲಿ ನಡೆದ ಭಯಾನಕ ಆತ್ಮಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಜಾರ್ಖಂಡ್‌ನ ರಾಜು ಪಹರಿಯಾ (Raju Pahariya) ಎಂಬ ಯುವಕ ಲಾರಿ ಬರುತ್ತಿರುವುದನ್ನು ಕಂಡು ಓಡಿ ಹೋಗಿ ಚಕ್ರಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ದೃಶ್ಯವನ್ನು ನೋಡಿದವರೆಲ್ಲರೂ ಬೆಚ್ಚಿಬೀಳುವಂತಿದೆ.
ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ರಾಜು ಪಹರಿಯಾ ಎರಡೇ ದಿನಗಳಲ್ಲಿ ಈ ಘಟನೆಗೆ ಒಳಗಾಗಿದ್ದಾನೆ. ವೈಯಕ್ತಿಕ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಿಸಿಟಿವಿ ಫುಟೇಜ್‌ನಲ್ಲಿ ಲಾರಿ ಬರುತ್ತಿರುವುದನ್ನು ಕಂಡು ಯುವಕ ಓಡಿ ಹೋಗಿ ಲಾರಿಯ ಮುಂದೆ ಹಾರಿ ಚಕ್ರಕ್ಕೆ ಸಿಲುಕುವ ಭಯಾನಕ ದೃಶ್ಯ ಸ್ಪಷ್ಟವಾಗಿ ಕಾಣುತ್ತದೆ.
ಪ್ರಕರಣದ ಬಗ್ಗೆ ಮಾಹಿತಿ ಪಡೆದ ಕುಂಬಳಗೋಡು ಪೊಲೀಸ್ ಠಾಣೆಯು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಯುವಕನ ಮೃತದೇಹವನ್ನು ಪೊಸ್ಟ್‌ಮಾರ್ಟಂಗೆ ಕಳುಹಿಸಲಾಗಿದೆ. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಾ ಬಂದ ಯುವಕನಿಗೆ ಬದುಕು ಬೇಡವಾಗಿದ್ದೇಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.





