ಜಿಮ್ಗೆ ಹೋಗಲು ಸಮಯವಿಲ್ಲದವರು ಅಥವಾ ಜಿಮ್ ಮೆಂಬರ್ಶಿಪ್ಗೆ ಹಣ ಖರ್ಚು ಮಾಡಲು ಇಷ್ಟಪಡದವರಿಗೆ ಇಲ್ಲೊಂದು ಉತ್ತಮ ಸುದ್ದಿ. ಮನೆಯಲ್ಲಿಯೇ ದೊರೆಯುವ ಸಾಮಾನ್ಯ ವಸ್ತುಗಳನ್ನು ಬಳಸಿಕೊಂಡು ನೀವು ತೂಕ ಇಳಿಸುವುದರ ಜೊತೆಗೆ ಮಸಲ್ಸ್ನನ್ನು ಬಿಲ್ಡ್ ಮಾಡಿಕೊಳ್ಳಬಹುದು.
ಡಂಬಲ್ಸ್ ಅಥವಾ ಜಿಮ್ ಉಪಕರಣಗಳ ಬದಲು ಮನೆಯಲ್ಲಿ ಲಭ್ಯವಿರುವ ವಸ್ತುಗಳನ್ನು ಎತ್ತುವ ಮೂಲಕ ಸರಳವಾಗಿ ವ್ಯಾಯಾಮ ಮಾಡಬಹುದು. ಇದು ದೇಹದ ತೂಕ ಕಡಿಮೆ ಮಾಡುವುದಷ್ಟೇ ಅಲ್ಲ, ಸ್ನಾಯುಗಳನ್ನು ಬಲಪಡಿಸುವುದಕ್ಕೂ ಸಹಾಯಕವಾಗುತ್ತದೆ. ಕೇವಲ 30 ದಿನಗಳ ನಿಯಮಿತ ವ್ಯಾಯಾಮದಿಂದ ಗಮನಾರ್ಹ ಬದಲಾವಣೆಯನ್ನು ನೀವು ನೋಡಬಹುದು.
ನೀರಿನ ಬಾಟಲ್, ರೈಸ್ ಬ್ಯಾಗ್, ಸ್ಯಾಂಡ್ ಬ್ಯಾಗ್, ಬುಕ್ಗಳು, ಟಿಫಿನ್ ಬಾಕ್ಸ್ಗಳು, ವಾಟರ್ ಜಗ್ ಮತ್ತು ಇತರ ಭಾರವಾದ ವಸ್ತುಗಳನ್ನು ಬಳಸಿಕೊಂಡು ಸ್ಕ್ವಾಟ್, ಲಂಗ್ಸ್, ಶೋಲ್ಡರ್ ಪ್ರೆಸ್, ಬೈಸೆಪ್ ಕರ್ಲ್, ಟ್ರೈಸೆಪ್ ಎಕ್ಸ್ಟೆನ್ಶನ್ ಸೇರಿದಂತೆ ಹಲವು ವ್ಯಾಯಾಮಗಳನ್ನು ಮನೆಯಲ್ಲೇ ಮಾಡಬಹುದು. ಇವುಗಳು ದೇಹದ ಎಲ್ಲ ಭಾಗಗಳನ್ನು ಟಾರ್ಗೆಟ್ ಮಾಡುತ್ತವೆ ಮತ್ತು ಕ್ಯಾಲರಿಗಳನ್ನು ಸುಡುತ್ತವೆ.
ನಿಯಮಿತವಾಗಿ ಮತ್ತು ಸರಿಯಾದ ತಂತ್ರದೊಂದಿಗೆ ಈ ವ್ಯಾಯಾಮಗಳನ್ನು ಮಾಡುವುದರಿಂದ 30 ದಿನಗಳಲ್ಲಿ ಗಮನಾರ್ಹ ತೂಕ ನಷ್ಟ ಮತ್ತು ಫಿಟ್ನೆಸ್ ಸಾಧಿಸಬಹುದು ಎಂದು ಫಿಟ್ನೆಸ್ ತಜ್ಞರು ಹೇಳುತ್ತಾರೆ.





