ನೋಯ್ಡಾದ ರಸ್ತೆಗಳಲ್ಲಿ ಚಲಿಸುತ್ತಿರುವ ದ್ವಿಚಕ್ರ ವಾಹನದ ಮೇಲೆ ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ತಬ್ಬಿಕೊಂಡಿರುವ ದೃಶ್ಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಈ ಜೋಡಿಯು ಹೆಲ್ಮೆಟ್ ಧರಿಸದೆ, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ನೋಯ್ಡಾ ಟ್ರಾಫಿಕ್ ಪೊಲೀಸರು ಈ ಜೋಡಿಗೆ 53,500 ರೂಪಾಯಿಗಳ ಭಾರೀ ದಂಡ ವಿಧಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡು, ತಮಾಷೆಯ ಶೈಲಿಯಲ್ಲಿ ಗಂಭೀರ ಸಂದೇಶವನ್ನು ನೀಡಿದ್ದಾರೆ. ಅವರ ಪೋಸ್ಟ್‌ನ ಶೀರ್ಷಿಕೆಯು, “ನೋಯ್ಡಾದಲ್ಲಿ ರೋಮಿಯೋ ಅ್ಯಂಡ್ ಜೂಲಿಯೆಟ್ ಬೈಕ್ ಸೀಕ್ವೆಲ್ ಪ್ರಯತ್ನ. ಈ ಬಾರಿ ಕ್ಲೈಮ್ಯಾಕ್ಸ್ ಲವ್ ಸಾಂಗ್ ಅಲ್ಲ, ಭಾರೀ ದಂಡ! ಸುರಕ್ಷಿತವಾಗಿ ಚಲಾಯಿಸಿ, ನಿಯಮಗಳನ್ನು ಪಾಲಿಸಿ, ನಿಮ್ಮ ಪ್ರೇಮಕಥೆ ದೀರ್ಘಕಾಲ ಬಾಳಲಿ!” ಎಂದಿರುವುದು ಜನರ ಗಮನ ಸೆಳೆದಿದೆ.
ये कपल गोरखपुर में बाइक से सैर कर रहा था। एक दूसरे से फेस-टू-फेस बात करने का ये तरीका बेहतर है। फिर भी पता नहीं क्यों पुलिस ने इनका 2500 रुपए का चालान काट दिया। pic.twitter.com/tG2uaghF6i
— Bhadohi Wallah (@Mithileshdhar) August 23, 2025
ಈ ವೈರಲ್ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದ ಬಳಕೆದಾರರಿಂದ ವಿವಿಧ ಪ್ರತಿಕ್ರಿಯೆಗಳು ಬಂದಿವೆ. ಒಬ್ಬ ಬಳಕೆದಾರರು ತಮಾಷೆಯಾಗಿ, “ಈಗ ಪ್ರಶ್ನೆ ಏನೆಂದರೆ ದಂಡವನ್ನು ಯಾರು ತುಂಬುತ್ತಾರೆ? ರೋಮಿಯೋನಾ, ಜೂಲಿಯೆಟ್‌ನಾ, ಅಥವಾ ಇವರ ಪೋಷಕರಾ? ಇವರಿಗೆ ಎರಡು ಸಮಸ್ಯೆಗಳಿವೆ. ಒಂದು ದಂಡ ತುಂಬುವುದು, ಮತ್ತೊಂದು ಪೋಷಕರಿಗೆ ತಿಳಿದರೆ ಸಂಬಂಧ ಬಯಲಾಗುವುದು!” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ಉತ್ತರ ಪ್ರದೇಶ ಪೊಲೀಸರ ಈ ಸಂದೇಶ ಜನರ ಒಳಿತಿಗಾಗಿದೆ. ಎಲ್ಲರೂ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು. ಪೊಲೀಸರು ಇಂತಹ ಸಂದೇಶಗಳ ಮೂಲಕ ನಮಗೆ ಸಹಾಯ ಮಾಡುತ್ತಿದ್ದಾರೆ. ಜೈ ಹಿಂದ್!” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.