ಯೂಟ್ಯೂಬ್ ವೀಡಿಯೋ ನೋಡಿ ಸ್ವತಃ ತಾನೇ ಸರ್ಜರಿ ಮಾಡಿಕೊಂಡ ಭೂಪ!

Untitled design 2025 03 21t141623.183

ಯೂಟ್ಯೂಬ್ ವೀಡಿಯೊಗಳನ್ನು ನೋಡಿ ಸ್ವತಃ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಹೊರಟ ವ್ಯಕ್ತಿಯೊಬ್ಬ ಗಂಭೀರ ಸಂಕಷ್ಟದಲ್ಲಿ ಸಿಲುಕಿದ್ದು, ಮಥುರಾದಲ್ಲಿ ಆಘಾಯಕಾರಿ ಘಟನೆ ನಡೆದಿದೆ. ರಾಜಾ ಬಾಬು ಎಂಬ ವ್ಯಕ್ತಿಯು ಹಲವಾರು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹಲವಾರು ವೈದ್ಯರನ್ನು ಸಂಪರ್ಕಿಸಿದ ನಂತರವೂ ನೋವು ಕಡಿಮೆಯಾಗದಿದ್ದಾಗ, ಅವರು ಯೂಟ್ಯೂಬ್ ವೀಡಿಯೊಗಳನ್ನು ನೋಡಿ ಸ್ವಯಂ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ನಿರ್ಧರಿಸಿದರು.

ರಾಜಾ ಬಾಬು ಅವರು ಸ್ಥಳೀಯ ಔಷಧಿ ಅಂಗಡಿಯಿಂದ ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ಬ್ಲೇಡ್, ಹೊಲಿಗೆ ಸಾಮಗ್ರಿ ಮತ್ತು ಇಂಜೆಕ್ಷನ್‌ಗಳನ್ನು ಔಷಧವನ್ನು ಖರೀದಿಸಿದ್ದರು. ಬುಧವಾರ ತಮ್ಮ ಮನೆಯ ಕೋಣೆಯಲ್ಲಿ ಸ್ವತಃ ಶಸ್ತ್ರಚಿಕಿತ್ಸೆ ಪ್ರಾರಂಭಿಸಿದರು. ಆದರೆ, ಶಸ್ತ್ರಚಿಕಿತ್ಸೆ ಪರಿಣಾಮ ಕಡಿಮೆಯಾದ ನಂತರ ಅಸಹನೀಯ ನೋವು ಶುರುವಾಗಿ ಅವರು ಮತ್ತೊಬ್ಬರ ಸಹಾಯವನ್ನು ಕೋರಿದರು. ಕುಟುಂಬದ ಸದಸ್ಯರು ಅವರನ್ನು ತಕ್ಷಣ ಮಥುರಾದ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು.


ರಾಜಾ ಬಾಬು ಅವರಿಗೆ 18 ವರ್ಷಗಳ ಹಿಂದೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇತ್ತೀಚೆಗೆ ಮತ್ತೆ ಹೊಟ್ಟೆ ನೋವು ಪ್ರಾರಂಭವಾಗಿ, ವೈದ್ಯರಿಂದ ಸರಿಯಾದ ಪರಿಹಾರ ಸಿಗದಿದ್ದುದೇ ಈ ಅಪಾಯಕಾರಿ ನಿರ್ಧಾರಕ್ಕೆ ಕಾರಣವಾಯಿತು. ಸ್ಥಿತಿ ಗಂಭೀರವಾದ ನಂತರ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಗ್ರಾದ ಎಸ್.ಎನ್. ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ವೈದ್ಯಕೀಯ ತಜ್ಞರ ಎಚ್ಚರಿಕೆ:
ವೈದ್ಯರು ಸ್ವಯಂ-ಚಿಕಿತ್ಸೆ ಅಥವಾ ಸೋಷಿಯಲ್ ಮೀಡಿಯಾದ ಆಧಾರದ ಮೇಲೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವುದು ಅತ್ಯಂತ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. “ಯಾವುದೇ ವೈದ್ಯಕೀಯ ತರಬೇತಿ ಇಲ್ಲದೆ ಸರ್ಜರಿ ಪ್ರಯತ್ನಿಸುವುದು ಜೀವಕ್ಕೆ ಅಪಾಯವನ್ನು ಉಂಟುಮಾಡಬಹುದು” ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.

Exit mobile version