ಮದುವೆ ದಿನ ಮದುಮಗನಿಗೆ ಎದೆಹಾಲು: ವಿಚಿತ್ರ ಪದ್ಧತಿ? ವಿಡಿಯೋ ವೈರಲ್​

Untitled design 2025 12 04T224237.853

ಭಾರತ ಎಂಬುದು ಸಂಪ್ರದಾಯಗಳ ಮಹಾಸಾಗರ. ರಾಜ್ಯದಿಂದ ರಾಜ್ಯಕ್ಕೆ, ಜಾತಿಯಿಂದ ಜಾತಿಗೆ, ಕೇವಲ ಕೆಲ ಮೈಲುಗಳ ದೂರದೊಳಗೆ ಪದ್ಧತಿಗಳಲ್ಲಿ ಬದಲಾವಣೆ ಕಂಡುಬರುವುದು ಸಹಜ. ವಿಶೇಷವಾಗಿ ಮದುವೆಯ ಸಂಪ್ರದಾಯಗಳ ವಿಷಯಕ್ಕೆ ಬಂದಾಗ, ಭಾರತದಷ್ಟು ವೈವಿಧ್ಯತೆ ಜಗತ್ತಿನ ಮತ್ತೊಂದು ದೇಶದಲ್ಲಿ ಕಂಡು ಬರುವುದಿಲ್ಲ. ಕೆಲವೊಮ್ಮೆ ಈ ಸಂಪ್ರದಾಯಗಳು ಅಮೂಲ್ಯ ಆಚಾರಗಳಾಗಿ ಕಂಡರೂ, ಕೆಲವೊಮ್ಮೆ ವಿಚಿತ್ರವೆನ್ನಿಸುವ ಪದ್ಧತಿಗಳು ಜನರ ಚರ್ಚೆಗೆ ಕಾರಣವಾಗುತ್ತವೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋ ಇದೇ ರೀತಿಯ ಚರ್ಚೆ ಹುಟ್ಟುಹಾಕಿದೆ. ರಾಜಸ್ಥಾನದಲ್ಲಿ ಮದುವೆಯ ದಿನ ತಾಯಿ ತನ್ನ ಮದುವೆಯಾಗುತ್ತಿರುವ ಮಗನಿಗೆ ಅಂದರೆ ಮದುಮಗನಿಗೆ ಎದೆಹಾಲು ಉಣಿಸುವ ಸಂಪ್ರದಾಯವಿದೆ ಎಂಬುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಜನಸಮೂಹದ ಮುಂದೆ ತಾಯಿ ಮಗನಿಗೆ ಎದೆಹಾಲು ನೀಡುವಂತಹ ಪದ್ದತಿ ಈಗ ದೇಶದಾದ್ಯಂತ ತೀವ್ರ ಚರ್ಚೆಗೆ ಗುರಿಯಾಗಿದೆ.

ಸಂಪ್ರದಾಯದ ಮೂಲ ಉದ್ದೇಶ ಏನು?

ಈ ವಿಚಿತ್ರವೆನಿಸುವ ಸಂಪ್ರದಾಯದ ಹಿಂದೆ ಭಾವನಾತ್ಮಕ ಕಾರಣವಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಗಂಡುಮಕ್ಕಳು ಮದುವೆಯಾದ ನಂತರ ತಾಯಿಯಿಂದ ದೂರವಿರುತ್ತಾರೆ, ಹೆಂಡತಿಯ ಪ್ರೀತಿಯಲ್ಲೇ ಮುಳುಗಿರುತ್ತಾರೆ ಎಂಬ ಸಾಮಾನ್ಯ ನಂಬಿಕೆ ಎಲ್ಲೆಡೆ ಇದೆ. ‘ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯಬೇಡ’ ಎಂಬ ಮಾತು ಈ ಸಂದರ್ಭದಲ್ಲಿ ಹೆಚ್ಚಾಗಿ ಕೇಳಿಬರುತ್ತದೆ.

ಮದುವೆಯ ದಿನ ತಾಯಿ ಮಗನಿಗೆ ಎದೆಹಾಲು ಉಣಿಸುವುದು, ಮಗನು ತನ್ನ ತಾಯಿಯ ಪ್ರೀತಿ, ಬಾಂಧವ್ಯ ಮತ್ತು ಅವಳ ಪಾತ್ರವನ್ನು ಜೀವನಪೂರ್ತಿ ಮರೆತಿರಬಾರದು ಎಂಬ ಸಂಕೇತದ ರೂಪವಾಗಿದೆ. ಮದುವೆಯಂತ ದೊಡ್ಡ ಬದಲಾವಣೆಯ ದಿನ, ಮಗ ತನ್ನ ಜೀವನದಲ್ಲಿ ಯಾರೇ ಹೊಸದಾಗಿ ಬಂದು ಸೇರ್ಪಡೆಯಾದರೂ ತಾಯಿಯ ಸ್ಥಾನ ಅಚ್ಚಳಿಯದೇ ಇರುತ್ತದೆ ಎಂಬ ಸಂದೇಶವನ್ನು ಇದರ ಮೂಲಕ ತಾಯಿ ನೀಡುತ್ತಾಳೆ ಎಂದು ಜನ ನಂಬಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು

ಈ ವಿಡಿಯೋ ವೈರಲ್ ಆದ ಬಳಿಕ ಜನರ ಪ್ರತಿಕ್ರಿಯೆಗಳು ಎರಡು ಭಾಗವಾಗಿದೆ. ಕೆಲವರು ಇದನ್ನು ಬೆಂಬಲಿಸುವವರು ಇದ್ದರೆ…ವಿರೋಧಿಸುವವರು ಇದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಈ ಸಂಪ್ರದಾಯವನ್ನು ಅಸಭ್ಯ, ಕಾಲಹರಣ ಮತ್ತು ಅಗತ್ಯವಿಲ್ಲದ ಪದ್ಧತಿ ಎಂದು ಟೀಕಿಸುತ್ತಿದ್ದಾರೆ. ಮದುವೆಯಂತಹ ಪವಿತ್ರ ಸಂದರ್ಭದಲ್ಲಿ ಇಂತಹ ಕ್ರಿಯೆಯನ್ನು ಸಾರ್ವಜನಿಕವಾಗಿ ಮಾಡುವುದು ಅನುಚಿತ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ತಾಯಿ-ಮಗನ ಎದೆಹಾಲಿನ ಸಂಬಂಧವು ಮಗುವಿನ ವಯಸ್ಸಿನಲ್ಲಿ ಮಾತ್ರ ಅರ್ಥಪೂರ್ಣ, ವಯಸ್ಕನಾದ ನಂತರ ಅದು ಸರಿಯಲ್ಲ ಎಂದು ವಾದಿಸುತ್ತಿದ್ದಾರೆ.

ಇನ್ನು ಕೆಲವರು ಇದು ಶತಮಾನಗಳಿಂದಲೂ ಬಂದಿರುವ ಸ್ಥಳೀಯ ಆಚರಣೆ, ಸಂಪ್ರದಾಯಗಳನ್ನೂ ಗೌರವಿಸುವುದು ನಮ್ಮ ಕರ್ತವ್ಯ ಎಂದು ಹೇಳುತ್ತಿದ್ದಾರೆ. ತಾಯಿ ಮತ್ತು ಮಗನ ಬಾಂಧವ್ಯವನ್ನು ಗೌರವಿಸುವ ಸಂಕೇತ ಎಂದು ಕೆಲವರು ಸಮರ್ಥಿಸುತ್ತಿದ್ದಾರೆ. “ನಮ್ಮ ರಾಜ್ಯದಲ್ಲಿಯೂ ಇದೆ, ಇದು ಅಸಭ್ಯತೆ ಅಲ್ಲ” ಎಂದು ಕೆಲ ಬಳಕೆದಾರರು ಹೇಳುತ್ತಿದ್ದಾರೆ.

ವಿಡಿಯೋ ಬೆಳಕಿಗೆ ಬಂದ ನಂತರ, ಕೆಲವು ಪ್ರಶ್ನೆಗಳು ಸಹ ಚರ್ಚೆಗೆ ಬಂದಿವೆ. ಸಂಪ್ರದಾಯ ಎಂಬ ಹೆಸರಿನಲ್ಲಿ ಯಾವುದನ್ನು ಬೇಕಾದರೂ ಮುಂದುವರಿಸಬೇಕಾ?. ತಾಯಿ-ಮಗನ ಬಾಂಧವ್ಯವನ್ನು ತೋರಿಸಲು ಇನ್ನೂ ಅನೇಕ ಸಾಂಸ್ಕೃತಿಕ ವಿಧಾನಗಳಿರುವಾಗ, ಈ ರೀತಿಯ ಶಾರೀರಿಕ ಕ್ರಿಯೆ ಅಗತ್ಯವೇ?..ಸಾಮಾಜಿಕ ಪರಿಸರ ಮತ್ತು ಮಾನಸಿಕ ಅರಿವು ಬದಲಾಗುತ್ತಿರುವ ಕಾಲದಲ್ಲಿ ಹಳೆಯ ಪದ್ಧತಿಗಳನ್ನೆಲ್ಲ ಯಥಾವತ್ತಾಗಿ ಮುಂದುವರಿಸುವುದು ಸರಿಯೇ? ಎಂಬ ಪ್ರಶ್ನೆಗಳು ಜನರಲ್ಲಿ ಮೂಡಿವೆ.

ಅಮ್ಮನ ಪ್ರೀತಿ–ಸಂಪ್ರದಾಯದ ನಿಜವಾದ ಅರ್ಥ

ಪದ್ಧತಿಯನ್ನು ಅನುಸರಿಸುವವರ ಪ್ರಕಾರ, ಅಮ್ಮನ ಎದೆಹಾಲು ಮಗು ಮತ್ತು ತಾಯಿಯ ಮೊದಲ ಬಂಧನ. ಮದುವೆಯ ದಿನ ಈ ಕ್ರಿಯೆಯನ್ನು ಪುನರಾವರ್ತಿಸುವುದು, ಆ ಮೂಲ ಬಾಂಧವ್ಯವನ್ನು ನೆನಪಿಸುವ ಸಂಕೇತ. ಮಗುವಿನಿಂದ ವಯಸ್ಕನಾಗುವವರೆಗೂ ತಾಯಿ ಮಾಡಿರುವ ತ್ಯಾಗ, ಪ್ರೀತಿ, ಪೋಷಣೆಯ ಬಗ್ಗೆ ಮಗನು ಮರೆಯಬಾರದು ಎಂಬ ಸಂದೇಶವೇ ಇದರ ಮೂಲಾಂಶ.

Exit mobile version