ಕುಂಭಮೇಳದ ಮೊನಾಲಿಸಾ ಬದುಕು ಮೂರಾಬಟ್ಟೆ: ಸುಂದರಿಯ ಬದುಕು ಸಂಕಷ್ಟದಲ್ಲಿ!

Film 2025 04 07t120235.882

ಉತ್ತರ ಪ್ರದೇಶದ ಮಹಾಕುಂಭದಲ್ಲಿ ಸಂಚಲನ ಸೃಷ್ಟಿಸಿದ 17 ವರ್ಷದ ಮೊನಾಲಿಸಾ ಇದೀಗ ತನ್ನ ಜೀವನದ ಕಷ್ಟಕರ ಕತೆಯೊಂದಿಗೆ ಸುದ್ದಿಯಲ್ಲಿದ್ದಾಳೆ. ಸಾಮಾಜಿಕ ಮಾಧ್ಯಮದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಿ ಮಿಂಚಿದ ಯುವತಿಯ ಬದುಕು ಈಗ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ಬಾಲಿವುಡ್ನಲ್ಲಿ ಅವಕಾಶದ ಭರವಸೆಯೊಂದಿಗೆ ಆಕರ್ಷಿತಳಾದ ಮೊನಾಲಿಸಾ, ಆದರೆ ಭರವಸೆ ಸುಳ್ಳಾಗಿ ಆಕೆಯ ಕನಸು ಭಗ್ನಗೊಂಡಿದೆ.

ಮೊನಾಲಿಸಾಗೆಮಣಿಪುರ ಡೈರಿಚಿತ್ರದಲ್ಲಿ ಪಾತ್ರ ನೀಡುವುದಾಗಿ ನಿರ್ದೇಶಕ ಸನೋಜ್ ಮಿಶ್ರಾ ಭರವಸೆ ನೀಡಿದ್ದರು. ಆದರೆ ಆಫರ್ ಆಕೆಗೆ ಅದೃಷ್ಟ ತಂದಿಲ್ಲ. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೊದಲೇ ಆಕೆಯನ್ನುಬಲೀ ಕಾ ಬಕರಾಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಸನೋಜ್ ಮಿಶ್ರಾ ಅವರನ್ನು ಅತ್ಯಾಚಾರ ಆರೋಪದಡಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ತನ್ನನ್ನು ಸಿನಿಮಾ ತಾರೆಯನ್ನಾಗಿ ಮಾಡುವ ಭರವಸೆಯೊಂದಿಗೆ ಸನೋಜ್ ಶೋಷಣೆ ಮಾಡಿದ್ದಾರೆ ಎಂದು ಯುವತಿಯೊಬ್ಬಳು ದೂರು ನೀಡಿದ್ದಾಳೆ.

2020ರಲ್ಲಿ ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಮೊನಾಲಿಸಾ ರೀಲ್ಸ್ ಮಾಡುತ್ತಿರುವುದನ್ನು ನೋಡಿ ಸನೋಜ್ ಮಿಶ್ರಾ ಆಕೆಯನ್ನು ಸಂಪರ್ಕಿಸಿದ್ದರು. 2021 ಜೂನ್ನಲ್ಲಿ ಭೇಟಿಗೆ ಕರೆದ ಅವರು, ಒಪ್ಪದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಬೆದರಿಕೆಗೆ ಭಯಗೊಂಡು ಆಕೆ ಭೇಟಿಗೆ ಒಪ್ಪಿಗೆ ನೀಡಿದ್ದರು. ಆದರೆ, ಸನೋಜ್ ಆಕೆಯನ್ನು ರೆಸಾರ್ಟ್ಗೆ ಕರೆದೊಯ್ದು ಮಾದಕ ದ್ರವ್ಯ ನೀಡಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ, ಆಕೆಯ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ, ಬರದಿದ್ದರೆ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೊನಾಲಿಸಾ ಮಹಾಕುಂಭದಲ್ಲಿ ಸಂಚಲನ ಸೃಷ್ಟಿಸಿದ ಬಳಿಕ ಯೂಟ್ಯೂಬರ್ಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ಹೆಸರಲ್ಲಿ ದೊಡ್ಡ ಮಟ್ಟದಲ್ಲಿ ದುಡ್ಡು ಮಾಡಿಕೊಂಡಿದ್ದಾರೆ. ಆದರೆ, ಇದರಿಂದ ಆಕೆಯ ಬದುಕು ಸರ್ವನಾಶವಾಯಿತು ಎಂದು ಮೊನಾಲಿಸಾ ಕಣ್ಣೀರು ಹಾಕಿದ್ದಾಳೆ. ಇದರ ನಡುವೆ ಆಕೆಗೆ ಮಾಡೆಲಿಂಗ್ ಮತ್ತು ಚಿತ್ರರಂಗದ ಆಫರ್ಗಳು ಬಂದಿದ್ದವು. ಆದರೆ, ಆಫರ್ಗಳು ಆಕೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿವೆ ಎಂದು ಆಕೆಯ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಕೇರಳದ ಒಂದು ಜ್ಯುವೆಲ್ಲರಿ ಶಾಪ್ ಉದ್ಘಾಟನೆಗೆ ಮೊನಾಲಿಸಾಳನ್ನು ಕರೆಸಿ, ಸನೋಜ್ ಮಿಶ್ರಾ ಕೋಟಿ ಬೆಲೆಯ ಹಾರಗಳನ್ನು ಆಕೆಗೆ ತೊಡಿಸಿದ್ದರು. ಇದು ಭಾರೀ ಅನುಮಾನಕ್ಕೆ ಕಾರಣವಾಗಿತ್ತು. ಇದೀಗ ಸನೋಜ್ ಬಂಧನದ ಬಳಿಕ ಮೊನಾಲಿಸಾಳ ಕನಸುಗಳು ಒಡದು ಹೋಗಿವೆ. ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ಅಳುವ ವಿಡಿಯೋಗಳು ವೈರಲ್ ಆಗುತ್ತಿದ್ದು, ಆಕೆಯ ಭವಿಷ್ಯದ ದಿಕ್ಕು ಅಸ್ಪಷ್ಟವಾಗಿದೆ.

ಒಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಪಡೆದು ರಾತ್ರೋರಾತ್ರಿ ಸ್ಟಾರ್ ಆಗಿದ್ದ ಮೊನಾಲಿಸಾ, ಈಗ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಆಫರ್ಗಳು ಆಕೆಗೆ ಕ್ಷಣಿಕ ಖುಷಿ ತಂದರೂ, ಈಗ ಎಲ್ಲವೂ ಕೈ ತಪ್ಪಿ ಹೋಗಿದೆ. ಜನರು ಆಕೆಯನ್ನು ಮರೆಯುತ್ತಿದ್ದಾರೆ, ಮಾಡೆಲಿಂಗ್ ಆಫರ್ಗಳು ಕಡಿಮೆಯಾಗುತ್ತಿವೆ. ಒಟ್ಟಾರೆ, ಮೊನಾಲಿಸಾಳ ಬದುಕು ಮೂರಾಬಟ್ಟೆಯಾಗಿದೆ.

Exit mobile version