ಪ್ರತಿಯೊಬ್ಬರೂ ತಮ್ಮ ಪ್ರೀತಿಯ ವ್ಯಕ್ತಿಗೆ ವಿಶೇಷ ರೀತಿಯಲ್ಲಿ ಪ್ರಪೋಸ್ ಮಾಡಲು ಆಸೆಪಡುತ್ತಾರೆ. ಈ ಕ್ಷಣವನ್ನು ಜೀವಮಾನದ ನೆನಪಿನಲ್ಲಿ ಇರಿಸಿಕೊಳ್ಳಲು ಜನರು ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಆದರೆ, ಇಂತಹ ಒಂದು ಪ್ರಯತ್ನದಲ್ಲಿ ದುರಂತ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಲಪಾತದ ಅಂಚಿನಲ್ಲಿ ಗೆಳತಿಗೆ ಪ್ರಪೋಸ್ ಮಾಡಲು ಹೋದ ಯುವಕನೊಬ್ಬ ಕಾಲು ಜಾರಿ ನೀರಿನ ಪ್ರವಾಹದಲ್ಲಿ ಕೊಚ್ಚಿಹೋಗಿರುವ ವಿಡಿಯೋ ಸಾವಿರಾರು ಜನರ ಗಮನ ಸೆಳೆದಿದೆ.
ವಿಡಿಯೋದಲ್ಲಿ, ಒಬ್ಬ ಯುವಕ ಜಲಪಾತದ ಮಧ್ಯದಲ್ಲಿರುವ ಬಂಡೆಯ ಮೇಲೆ ನಿಂತು ತನ್ನ ಗೆಳತಿಗೆ ಪ್ರಪೋಸ್ ಮಾಡಲು ಸಿದ್ಧನಾಗಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ, ಗೆಳತಿ ಜಲಪಾತದ ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಿದ್ದಾಳೆ. ಯುವಕ, ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ರೊಮ್ಯಾಂಟಿಕ್ ರೀತಿಯಲ್ಲಿ ಮೊಣಕಾಲಿನ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ, ಇದ್ದಕ್ಕಿದ್ದಂತೆ ಅವನ ಕಾಲು ಜಾರಿ, ಹರಿಯುವ ಜಲಪಾತದ ನೀರಿನಲ್ಲಿ ಬೀಳುತ್ತಾನೆ. ಬಲವಾದ ಪ್ರವಾಹದಲ್ಲಿ ಅವನು ಕೊಚ್ಚಿಕೊಂಡು ಹೋಗುತ್ತಾನೆ, ಆದರೆ ಗೆಳತಿ ಆ ಆಘಾತಕಾರಿ ಕ್ಷಣದಲ್ಲಿ ಏನು ಮಾಡಲು ಸಾಧ್ಯವಾಗದೆ ನೋಡುತ್ತಲೇ ಇರುತ್ತಾಳೆ.
A dude pops the question to his girl in a crazy dangerous spot…🥺 💔 pic.twitter.com/Gzdxfza5hD
— March (@MarchUnofficial) July 4, 2025
ಈ ಘಟನೆಯ ವಿಡಿಯೋವನ್ನು @MarchUnofficial ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಸಾವಿರಾರು ಜನರು ಇದನ್ನು ನೋಡಿ, ನಾನಾ ರೀತಿಯ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಈ ಘಟನೆಯನ್ನು ದುಃಖದಾಯಕ ಎಂದು ಕರೆದರೆ, ಇನ್ನು ಕೆಲವರು ಯುವಕನ ಗೆಳತಿ ಏಕೆ ತಕ್ಷಣ ರಕ್ಷಣೆಗೆ ಧಾವಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಆದರೆ, ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಳಾದ ಯುವಕನ ಹೆಸರು, ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ, ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೋ ಇಲ್ಲವೋ ಎಂಬುದು ಲಭ್ಯವಿಲ್ಲ.