ಮಾಲೀಕನ ಹಾಡು ಕೇಳುತ್ತಿದ್ದಂತೆ ಆನೆಗಳು ಕೊಟ್ಟ ರಿಯಾಕ್ಷನ್ ಹೇಗಿತ್ತು ಗೊತ್ತಾ..?

Add a heading (13)

ಆನೆಗಳು ತಮ್ಮ ದೈತ್ಯಾಕಾರದ ಗಾತ್ರದ ಹೊರತಾಗಿಯೂ ಸೌಮ್ಯ ಸ್ವಭಾವದಿಂದ ಎಲ್ಲರ ಮನಗೆದ್ದಿವೆ. ತಮ್ಮನ್ನು ಆರೈಕೆ ಮಾಡುವವರೊಂದಿಗೆ ಆತ್ಮೀಯ ಸಂಬಂಧವನ್ನು ಬೆಳೆಸಿಕೊಳ್ಳುವ ಈ ಜೀವಿಗಳು, ತಮ್ಮ ತುಂಟಾಟ, ಒಗ್ಗಟ್ಟು ಮತ್ತು ಭಾವನಾತ್ಮಕ ವರ್ತನೆಯಿಂದ ಎಲ್ಲರ ಗಮನ ಸೆಳೆಯುತ್ತವೆ. ಇದೀಗ, ತಮ್ಮ ಮಾಲೀಕ ಹಾಡು ಹಾಡುತ್ತಿದ್ದಂತೆ ಆನೆಗಳು ತೋರಿದ ಮುಗ್ಧ ಪ್ರತಿಕ್ರಿಯೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಆನೆಗಳ ಬುದ್ಧಿವಂತಿಕೆ, ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಶಾಂತ ಸ್ವಭಾವವು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ಥೈಲ್ಯಾಂಡ್‌ನ ಸೇವ್ ಎಲಿಫೆಂಟ್ ಫೌಂಡೇಶನ್ನ ಸಂಸ್ಥಾಪಕ ಲೆಕ್ ಚೈಲರ್ಟ್ ತಮ್ಮ lek chailert ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಚೈಲರ್ಟ್ ಮಣ್ಣಿನ ರಾಶಿಯ ಮೇಲೆ ಕುಳಿತು ಹಾಡು ಹಾಡುತ್ತಿದ್ದಾರೆ, ಜೊತೆಗೆ ಎರಡು ಆನೆಗಳು ಅವರ ಪಕ್ಕದಲ್ಲಿ ಇವೆ. ಒಂದು ಆನೆ ತನ್ನ ಸೊಂಡಿಲನ್ನು ನಿಧಾನವಾಗಿ ಚಾಚುತ್ತಿದ್ದರೆ, ಮತ್ತೊಂದು ಆನೆ ಚೈಲರ್ಟ್‌ರ ಕಾಲಿನ ಬೆರಳುಗಳೊಂದಿಗೆ ತುಂಟಾಟ ಆಡುತ್ತಿದೆ. ಚೈಲರ್ಟ್ ಹಾಡಲು ಪ್ರಾರಂಭಿಸಿದಾಗ, ಆನೆಗಳು ಸಂಗೀತಕ್ಕೆ ತಕ್ಕಂತೆ ಧ್ವನಿಗಳನ್ನು ಮಾಡುವ ಮೂಲಕ ಮುದ್ದಾಗಿ ಪ್ರತಿಕ್ರಿಯಿಸಿವೆ. ಈ ದೃಶ್ಯವು ಮನುಷ್ಯ ಮತ್ತು ಆನೆಗಳ ನಡುವಿನ ಆತ್ಮೀಯ ಬಾಂಧವ್ಯವನ್ನು ತೋರಿಸುತ್ತದೆ.

ADVERTISEMENT
ADVERTISEMENT
ಚೈಲರ್ಟ್ ತಮ್ಮ ಪೋಸ್ಟ್‌ನಲ್ಲಿ ಏನಂತ ಬರೆದಿದ್ದಾರೆ?

“ಆನೆಗಳಿಗೆ ಏನು ಬೇಕು ಎಂದು ನನಗೆ ಹೇಗೆ ಗೊತ್ತು ಎಂದು ಜನ ಕೇಳುತ್ತಿರುತ್ತಾರೆ. ನಿಮ್ಮ ಹೃದಯವನ್ನು ಆಲಿಸಿ ಎಂಬುದು ನನ್ನ ಉತ್ತರ. ಆನೆಗಳ ಮೂಲಭೂತ ಅಗತ್ಯಗಳು ನಮ್ಮದಕ್ಕಿಂತ ಭಿನ್ನವಲ್ಲ. ಅವು ಸುರಕ್ಷಿತವಾಗಿರಲು, ಚೆನ್ನಾಗಿ ತಿನ್ನಲು ಮತ್ತು ಸಂತೋಷವಾಗಿರಲು ಬಯಸುತ್ತವೆ. ನಾವು ಪ್ರಾಣಿಗಳಿಗಿಂತ ಶ್ರೇಷ್ಠರೆಂದು ಭಾವಿಸುವ ಗೋಡೆಯನ್ನು ಮುರಿದರೆ, ಶಾಂತಿಯುತವಾಗಿ ಒಟ್ಟಿಗೆ ವಾಸಿಸಲು ಆರಂಭಿಸುತ್ತೇವೆ. ಆನೆಗಳು ಸಂಗೀತವನ್ನು ಆನಂದಿಸುತ್ತವೆ, ಸಂತೋಷ ಮತ್ತು ನಿರಾಳತೆಯನ್ನು ಅನುಭವಿಸುತ್ತವೆ. ಕೆಲವೊಮ್ಮೆ ಅವು ಜೊತೆಯಲ್ಲಿ ಹಾಡುತ್ತವೆ. ಆನೆಗಳ ಜೊತೆ ಕಳೆಯುವ ಕ್ಷಣಗಳು ನನ್ನ ಜೀವನದ ಅತ್ಯುತ್ತಮ ಕ್ಷಣಗಳು” ಎಂದು ಚೈಲರ್ಟ್‌ ತಿಳಿಸಿದ್ದಾರೆ.

ಈ ವಿಡಿಯೋ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ಬಳಕೆದಾರರು ಈ ದೃಶ್ಯವನ್ನು ಹಾಡಿನ ಸಾಥಿಯಲ್ಲಿ ಆನೆಗಳ ಭಾವನಾತ್ಮಕ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, “ಈ ಜೀವಿಗಳು ನಿಮ್ಮೊಂದಿಗೆ ಎಷ್ಟು ಆತ್ಮೀಯವಾಗಿ ಬೆರೆಯುತ್ತವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ” ಎಂದಿದ್ದಾರೆ. ಮತ್ತೊಬ್ಬರು, “ಆನೆಗಳ ಕಣ್ಣುಗಳೇ ಅವು ಎಷ್ಟು ಮುಗ್ಧವಾಗಿವೆ ಎಂದು ಹೇಳುತ್ತವೆ” ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು “ಇದು ಅತ್ಯಂತ ಸುಂದರವಾದ ಸಂಗೀತ” ಎಂದು ಬಣ್ಣಿಸಿದ್ದಾರೆ, ಇನ್ನೂ ಕೆಲವರು ಹೃದಯದ ಸಿಂಬಲ್‌ಗಳ ಮೂಲಕ ತಮ್ಮ ಪ್ರೀತಿಯನ್ನು ತೋರಿದ್ದಾರೆ.

Exit mobile version