ಆಗಸ್ಟ್‌ನಲ್ಲೇ ದೆಹಲಿ ಸ್ಫೋಟ ಭವಿಷ್ಯ ನುಡಿದ ಜ್ಯೋತಿಷಿ, ಆಪರೇಶನ್ ಸಿಂದೂರ್2 ಸುಳಿವು

Web (43)

ದೆಹಲಿಯ ಐತಿಹಾಸಿಕ ಕೆಂಪು ಕೋಟೆ (ರೆಡ್ ಫೋರ್ಟ್) ಬಳಿ ನಡೆದ ಭಯಂಕರ ಕಾರು ಸ್ಫೋಟ ದೇಶಾದ್ಯಂತ ಆಂತರಿಕ ಭದ್ರತೆ ಬಗ್ಗೆ ಚಿಂತೆಯನ್ನುಂಟುಮಾಡಿದೆ. ನವೆಂಬರ್ 10ರ ಸಂಜೆ 6:55ರ ಸುಮಾರು ರೆಡ್ ಫೋರ್ಟ್ ಮೆಟ್ರೋ ಸ್ಟೇಷನ್ ಬಳಿ ಹೈಯುಂಡೈ i20 ಕಾರಿನಲ್ಲಿ ನಡೆದ ಸ್ಫೋಟದಲ್ಲಿ 8 ಮಂದಿ ಸತ್ತು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದು ಭಯೋತ್ಪಾದಕ ಕೃತ್ಯವೇ ಎಂದು ಎನ್‌ಐಎ (NIA) ಮತ್ತು ದೆಹಲಿ ಪೊಲೀಸ್ ತನಿಖೆ ನಡೆಸುತ್ತಿದ್ದಾರೆ. ಇಂತಹ ಘಟನೆಯ ಬಗ್ಗೆ ಆಗಸ್ಟ್ ತಿಂಗಳಲ್ಲೇ ಭವಿಷ್ಯ ನುಡಿದ್ದಾರೆ ಭಾರತದ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ. ಹೆಚ್ಚುವರಿಯಾಗಿ, 2025ರ ಡಿಸೆಂಬರ್‌ನಲ್ಲಿ ಭಾರತ-ಪಾಕಿಸ್ತಾನ ನಡುವೆ ಯುದ್ಧದ ಸಾಧ್ಯತೆ ಮತ್ತು ‘ಆಪರೇಶನ್ ಸಿಂದೂರ್ 2’ ಕಾರ್ಯಾಚರಣೆಯ ಸುಳಿವು ನೀಡಿದ್ದಾರೆ. ಈ ಭವಿಷ್ಯಗಳು ಈಗ ವೈರಲ್ ಆಗಿವೆ.

ದೆಹಲಿ ಸ್ಫೋಟದ ಹಿನ್ನೆಲೆ: ಉಗ್ರರ ಕೈವಾಡವೇ?

ರೆಡ್ ಫೋರ್ಟ್ ಬಳಿ ಟ್ರಾಫಿಕ್ ಸಿಗ್ನಲ್ ಬಳಿ ನಿಂತ ಕಾರಿನಲ್ಲಿ ನಡೆದ ಸ್ಫೋಟದಿಂದ ಸುತ್ತಮುತ್ತಲಿನ ವಾಹನಗಳು ಧ್ವಂಸಗೊಂಡವು. ದೆಹಲಿ ಪೊಲೀಸ್ ಕಮಿಷನರ್ ಸತೀಶ್ ಗೋಲ್ಚಾ ಪ್ರಕಾರ, “ಸಾವು-ನೋವುಗಳನ್ನುಂಟುಮಾಡಿದ ಈ ಸ್ಫೋಟಕ್ಕೆ ಭದ್ರತಾ ಸಂಸ್ಥೆಗಳು ತೀವ್ರ ತನಿಖೆ ನಡೆಸುತ್ತಿವೆ.

ಎನ್‌ಐಎ ತನಿಖೆಯಲ್ಲಿ ಜೈಷ್-ಎ-ಮೊಹಮ್ಮದ್ ಜೆಇಎಂ ಸಂಘಟನೆಯ ಸ್ಲೀಪರ್ ಸೆಲ್ ಸಂಬಂಧವಿರುವುದು ಬಹಿರಂಗವಾಗಿದೆ. ಸ್ಫೋಟಕ್ಕೆ ಕೆಲವೇ ಗಂಟೆಗಳ ಮುನ್ನ ಹರಿಯಾಣದ ಫರೀದಾಬಾ ನಲ್ಲಿ 2,900 ಕೆಜಿ ಸ್ಫೋಟಕ ಸಾಮಗ್ರಿ ವಶಪಡಿಸಿಕೊಳ್ಳಲಾಗಿತ್ತು. ದೇಶಾದ್ಯಂತ ಏರ್‌ಪೋರ್ಟ್‌ಗಳು, ರೈಲು ನಿಲ್ದಾಣಗಳು ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಹೈ ಅಲರ್ಟ್ ಜಾರಿಯಾಗಿದೆ. ಯುಎಸ್ ರಾಯಭಾರಿ ಕಚೇರಿ ಸಹ ಎಚ್ಚರಿಕೆ ಹೊರಡಿಸಿದೆ.


ಆಗಸ್ಟ್‌ನಲ್ಲೇ ದೆಹಲಿ ಸ್ಫೋಟದ ಸುಳಿವು: ಪ್ರಶಾಂತ್ ಕಿಣಿಯ ಭವಿಷ್ಯ

ಭಾರತದ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ, ಆಗಸ್ಟ್ 20ರಂದು X (ಟ್ವಿಟರ್)ನಲ್ಲಿ ಟ್ವೀಟ್ ಮಾಡಿ, “ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಪಹಲ್ಗಾಂ-ರೀತಿಯ ಭಯೋತ್ಪಾದಕ ದಾಳಿ ಸಂಭವಿಸಲಿದೆ” ಎಂದು ಭವಿಷ್ಯ ನುಡಿದಿದ್ದರು. ದೆಹಲಿ ಕಾರು ಸ್ಫೋಟವನ್ನು ನೇರವಾಗಿ ಹೇಳದಿದ್ದರೂ, “ಪಹಲ್ಗಾಂ 2” ಎಂದು ಸೂಚಿಸಿ ಉಗ್ರ ದಾಳಿಯ ಸಾಧ್ಯತೆಯನ್ನು ಎಚ್ಚರಿಸಿದ್ದರು. ಈಗ ಈ ಭವಿಷ್ಯ ನಿಜವಾಗಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿಣಿ ಹೇಳುತ್ತಾರೆ: “ಇದು ಸ್ಪಷ್ಟವಾಗಿ ಭಯೋತ್ಪಾದಕ ಕೃತ್ಯ. CNG ಸ್ಫೋಟ ಎಂದು ಕರೆಯುವುದು ತಪ್ಪು. ಭಾರತ ಅತೀವ ಎಚ್ಚರಿಕೆ ವಹಿಸಬೇಕು.”

ಪ್ರಶಾಂತ್ ಕಿಣಿ, ಹಿಂದೆ ಬಾಂಗ್ಲಾದೇಶದ ಶೇಖ್ ಹಸೀನಾ ಅವರ ರಾಜೀನಾಮೆಯನ್ನು (ಆಗಸ್ಟ್ 2024) ಮುಂಚಿತವಾಗಿ ಭವಿಷ್ಯ ನುಡಿದ್ದರು. ಅವರ ಭವಿಷ್ಯಗಳು ಯುದ್ಧ, ರಾಜಕೀಯ ಘಟನೆಗಳು ಮತ್ತು ನೈಸರ್ಗಿಕ ವಿಪತ್ತುಗಳನ್ನು ಒಳಗೊಂಡಿವೆ.

ಆಪರೇಶನ್ ಸಿಂದೂರ್ 2: ಡಿಸೆಂಬರ್‌ನಲ್ಲಿ ಭಾರತ-ಪಾಕ್ ಯುದ್ಧ?

ಆಗಸ್ಟ್ 13ರಂದು ಕಿಣಿ ಮತ್ತೊಂದು ಭವಿಷ್ಯ ನುಡಿದಿದ್ದರು: “2025ರ ಡಿಸೆಂಬರ್‌ನ 3ನೇ ವಾರದಲ್ಲಿ ಭಾರತ-ಪಾಕಿಸ್ತಾನ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಲಿದೆ. ಆಪರೇಶನ್ ಸಿಂದೂರ್ 2 ನಡೆಯಲಿದ್ದು, ಪಾಕಿಸ್ತಾನ ಮೇಲೆ ಭಾರತ ದಾಳಿ ನಡೆಸಲಿದೆ.” ಹಿನ್ನೆಲೆಯಲ್ಲಿ, ಏಪ್ರಿಲ್ 2025ರ ಪಹಲ್ಗಾಂ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ನಡೆಸಿದ ‘ಆಪರೇಶನ್ ಸಿಂದೂರ್’ನಲ್ಲಿ ಜೆಇಎಂನ ಬಹಾವಲ್‌ಪುರ್ ಶಿಬಿರ ಧ್ವಂಸಗೊಂಡಿತ್ತು. ಈಗ ಈ ದೆಹಲಿ ಸ್ಫೋಟ ಅದರ ಪ್ರತೀಕಾರವೇ ಎಂದು ಚರ್ಚೆಯಿದೆ.

ಕಿಣಿ ಹೇಳುತ್ತಾರೆ: “ಪಹಲ್ಗಾಂ 2 ರೀತಿಯ ದಾಳಿಗಳಿಗೆ ಭಾರಿ ತಯಾರಿಗಳು ನಡೆದಿವೆ. ಡಿಸೆಂಬರ್‌ನಲ್ಲಿ ಘಟನೆಗಳು ಪಾಕಿಸ್ತಾನವನ್ನು ಯುದ್ಧಕ್ಕೆ ಒತ್ತಾಯಿಸಲಿವೆ.” ಈ ಭವಿಷ್ಯಗಳು ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ಇದು ಎಷ್ಟು ನಿಜವಾಗುತ್ತದೆ ಎಂಬುದು ಕಾಲವೇ ಹೇಳುತ್ತದೆ.

ಈ ಸ್ಫೋಟದಿಂದ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಭದ್ರತೆಯನ್ನು ಬಲಪಡಿಸಲಾಗಿದೆ. ಭಾರತೀಯ ವಾಯುಸೇನೆ ಮತ್ತು NSG ತಂಡಗಳು ತಯಾರಿಯಲ್ಲಿವೆ. ಕಿಣಿಯ ಭವಿಷ್ಯಗಳು ಆಶ್ಚರ್ಯ ಮೂಡಿಸಿದ್ದರೂ, ದೇಶದ ಭದ್ರತೆಗೆ ಈಗ ಮೀಸಲಾದ ಗಮನವೇ ಮುಖ್ಯ.

Exit mobile version