ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಪುತ್ರ 19 ವರ್ಷದ ಬ್ಯಾರನ್ ಟ್ರಂಪ್ ಮತ್ತು ಉತ್ತರ ಕೊರಿಯಾ ನಾಯಕ ಕಿಮ್ ಜೊಂಗ್ ಉನ್ ಅವರ ಪುತ್ರಿ ಕಿಮ್ ಜು ಏ ನಡುವೆ “ಮದುವೆ ಫಿಕ್ಸ್” ಆಗಿದೆ ಎಂಬಂತಹ ವೈರಲ್ ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ. ಎಐ (AI) ಮೂಲಕ ಸೃಷ್ಟಿಸಲಾದ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಹಾರ್ಟ್ ಶೇಪ್ ಮಾಡುತ್ತಾ, ಅಮೆರಿಕಾ ಮತ್ತು ಉತ್ತರ ಕೊರಿಯಾ ಧ್ವಜಗಳ ಹಿನ್ನೆಲೆಯಲ್ಲಿ ನಿಂತಿರುವುದನ್ನು ತೋರಿಸಲಾಗಿದೆ.
ಮೀಮ್‌ಗಳಲ್ಲಿ “ವರ್ಲ್ಡ್ ಪೀಸ್‌ಗಾಗಿ ಬ್ಯಾರನ್ ಟ್ರಂಪ್ ಕಿಮ್ ಜು ಏಯನ್ನು ಮದುವೆಯಾಗಬೇಕು”, “ಜಗತ್ತಿನ ಎರಡು ಬದ್ಧ ವೈರಿ ರಾಷ್ಟ್ರಗಳನ್ನು ಈ ಪ್ರೇಮಕಥೆ ಒಂದು ಮಾಡಬಹುದು” ಎಂಬ ಹಾಸ್ಯದ ಸಾಲುಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇಸ್ರೇಲ್-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಈ ಮೀಮ್‌ಗಳು ಹೆಚ್ಚು ಗಮನ ಸೆಳೆದಿವೆ. ಕೆಲವರು “ಟ್ರಂಪ್ ಉತ್ತರ ಕೊರಿಯಾ ಬೆಂಬಲಕ್ಕಾಗಿ ಈ ಸಂಬಂಧ ಬೆಳೆಸಿದ್ದಾರೆ” ಎಂದು ತಮಾಷೆ ಮಾಡುತ್ತಿದ್ದಾರೆ.
ಆದರೆ ಇದು ಕೇವಲ ಇಂಟರ್ನೆಟ್‌ನ ಹಾಸ್ಯ ಮತ್ತು ಕಲ್ಪನೆ ಮಾತ್ರ. ಇಬ್ಬರ ನಡುವೆ ಯಾವುದೇ ವೈಯಕ್ತಿಕ ಸಂಬಂಧ, ಪರಿಚಯ ಅಥವಾ ಮದುವೆಯ ಯೋಜನೆ ಇಲ್ಲ. ಬ್ಯಾರನ್ ಟ್ರಂಪ್ ಅಮೆರಿಕಾದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರೆ, ಕಿಮ್ ಜು ಏ ಉತ್ತರ ಕೊರಿಯಾದಲ್ಲಿ ತಂದೆಯ ಉತ್ತರಾಧಿಕಾರಿಯಾಗಿ ಸಿದ್ಧಗೊಳ್ಳುತ್ತಿದ್ದಾರೆ ಎಂದು ವರದಿಗಳಿವೆ. ಈ ಮೀಮ್‌ಗಳು X (ಟ್ವಿಟರ್), ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ರೆಡ್ಡಿಟ್‌ನಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿವೆ.
ಈ ಟ್ರೆಂಡ್ ಟ್ರಂಪ್-ಕಿಮ್ ರಾಜತಾಂತ್ರಿಕ ಸಂಬಂಧಗಳ ಹಾಸ್ಯಾಸ್ಪದ ರೂಪವಾಗಿ ಕಾಣುತ್ತಿದ್ದು, “ರೋಮಿಯೋ-ಜೂಲಿಯೆಟ್” ಮಾದರಿಯ ರಾಜಕೀಯ ಪ್ರೇಮಕಥೆಯಂತೆ ನೆಟ್ಟಿಗರು ಆನಂದಿಸುತ್ತಿದ್ದಾರೆ. ಆದರೆ ಇದು ಯಾವುದೇ ನಿಜವಾದ ಸುದ್ದಿಯಲ್ಲ ಕೇವಲ ಡಿಜಿಟಲ್ ತಮಾಷೆ .
