ಒಂದೇ ಅಪ್ಪುಗೆಯಿಂದ ಡಿವೋರ್ಸ್..ಟೆಕ್ ಕಂಪನಿ CEO- HR ಕದ್ದುಮುಚ್ಚಿ ಸರಸ

Web 2025 07 18t161622.920

ಅಮೆರಿಕಾದ ಅಸ್ಟ್ರೋನೋಮರ್ ಕಂಪನಿಯ ಸಿಇಓ ಆ್ಯಂಡಿ ಬೈರೋನ್‌ರ ಒಂದು ಅಪ್ಪುಗೆ ಈಗ ಅವರ ದಾಂಪತ್ಯ ಜೀವನಕ್ಕೆ ಗಂಡಾಂತರವಾಗಿದೆ. ಬೋಸ್ಟನ್‌ನ ಕೋಲ್ಡ್ ಪ್ಲೇ ಮ್ಯೂಸಿಕ್ ಕನ್ಸರ್ಟ್‌ನಲ್ಲಿ ಕಂಪನಿಯ ಎಚ್‌ಆರ್ ಮತ್ತು ಚೀಫ್ ಪಬ್ಲಿಕ್ ಆಫೀಸರ್ ಕ್ರಿಸ್ಟೆನ್ ಕಬೋಟ್‌ರನ್ನು ತಬ್ಬಿಕೊಂಡ ವಿಡಿಯೋ ವೈರಲ್ ಆಗಿದ್ದು, ಆ್ಯಂಡಿ ಬೈರೋನ್‌ರ ಪತ್ನಿ ಮೇಘನ್ ಕೆರಿಗನ್‌ಗೆ ಡಿವೋರ್ಸ್ ವದಂತಿಗೆ ಕಾರಣವಾಗಿದೆ.

ಕೋಲ್ಡ್ ಪ್ಲೇ ಕನ್ಸರ್ಟ್‌ನಲ್ಲಿ ಆ್ಯಂಡಿ ಬೈರೋನ್ ಕ್ರಿಸ್ಟೆನ್ ಕಬೋಟ್‌ರ ಸೊಂಟವನ್ನು ಹಿಂದಿನಿಂದ ತಬ್ಬಿಕೊಂಡು ನಿಂತಿದ್ದರು. ಕ್ರಿಸ್ಟೆನ್ ಕೂಡ ಆ್ಯಂಡಿಯ ಕೈಯನ್ನು ಹಿಡಿದು ನಗುತ್ತಿದ್ದರು. ಈ ದೃಶ್ಯವನ್ನು ಕನ್ಸರ್ಟ್‌ನ ಕಿಸ್ ಕ್ಯಾಮ್ ಸೆರೆಹಿಡಿದು, ದೊಡ್ಡ ಪರದೆಯಲ್ಲಿ ಪ್ರದರ್ಶಿಸಿತು. ತಾವು ಕ್ಯಾಮರಾದಲ್ಲಿ ಸಿಕ್ಕಿಬಿದ್ದಿರುವುದು ತಿಳಿಯುತ್ತಿದ್ದಂತೆ, ಆ್ಯಂಡಿ ಕೆಳಗೆ ಬಗ್ಗಿಕೊಂಡು ಎಸ್ಕೇಪ್ ಆಗಲು ಯತ್ನಿಸಿದರು, ಆದರೆ ಕ್ರಿಸ್ಟೆನ್ ಮುಖ ತಿರುಗಿಸಿಕೊಂಡು ಬೆನ್ನು ತೋರಿಸಿದರು.

ADVERTISEMENT
ADVERTISEMENT

ವಿಡಿಯೋ ವೈರಲ್ ಆಗುತ್ತಿದ್ದಂತೆ, ಆ್ಯಂಡಿ ಬೈರೋನ್‌ರ ಕುಟುಂಬದಲ್ಲಿ ಗೊಂದಲ ಉಂಟಾಯಿತು. ಆತನ ಪತ್ನಿ ಮೇಘನ್ ಕೆರಿಗನ್ ತನ್ನ ಫೇಸ್‌ಬುಕ್ ಪ್ರೊಫೈಲ್‌ನಿಂದ ತನ್ನ ಉಪನಾಮವನ್ನು ತೆಗೆದುಹಾಕಿದ್ದಾರೆ, ಇದು ಡಿವೋರ್ಸ್ ವದಂತಿಗಳಿಗೆ ಇಂಬು ಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ಕ್ರಿಸ್ಟೆನ್ ಕಬೋಟ್‌ರ ಲಿಂಕ್ಡ್‌ಇನ್ ಪೋಸ್ಟ್‌ಗಳೂ ಗಮನ ಸೆಳೆಯುತ್ತಿವೆ.


ಕ್ರಿಸ್ಟೆನ್ ಕಬೋಟ್ ಯಾರು?
ಕ್ರಿಸ್ಟೆನ್ ಕಬೋಟ್ ಬೋಸ್ಟನ್‌ನಲ್ಲಿ ಹುಟ್ಟಿದವರು. ಗ್ರೇಟಯಸ್ ಬರ್ಗ್ ಕಾಲೇಜಿನಲ್ಲಿ ಪೊಲಿಟಿಕಲ್ ಸೈನ್ಸ್‌ನಲ್ಲಿ ಪದವಿ ಪಡೆದಿರುವ ಇವರು, 2000ರಲ್ಲಿ ಸ್ಕ್ರೀನ್ ಹೌಸ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದರು. 2004ರಲ್ಲಿ ಡಿಜಿಟಸ್‌ಎಲ್‌ಬಿಐ ಕಂಪನಿಯಲ್ಲಿ ಅಸೋಸಿಯೇಟ್ ಡೈರೆಕ್ಟರ್ ಮತ್ತು ನೇಮಕಾತಿ ಮುಖ್ಯಸ್ಥೆಯಾಗಿ ಕೆಲಸ ಮಾಡಿದ್ದರು. 2024ರ ನವಂಬರ್‌ನಲ್ಲಿ ಅಸ್ಟ್ರೋನೋಮರ್ ಕಂಪನಿಯನ್ನು ಸೇರಿದ್ದರು, ಆದರೆ ಈಗ ಈ ಘಟನೆಯಿಂದಾಗಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ.

ಈ ಒಂದು ಅಪ್ಪುಗೆಯಿಂದ ಆ್ಯಂಡಿ ಬೈರೋನ್‌ರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಕಂಪನಿಯ ಸಿಇಓ ಮತ್ತು ಎಚ್‌ಆರ್‌ನ ನಡುವಿನ ಈ ಘಟನೆಯಿಂದಾಗಿ, ಆ್ಯಂಡಿ ಮತ್ತು ಮೇಘನ್ ಕೆರಿಗನ್ ದಾಂಪತ್ಯದಲ್ಲಿ ಒಡಕು ಉಂಟಾಗಿದೆ ಎಂದು ಊಹಾಪೋಹಗಳು ಹರಿದಾಡುತ್ತಿವೆ. ಕ್ಯಾಮರಾದ ಕಣ್ಣಿಗೆ ಸಿಕ್ಕಿಬಿದ್ದ ಈ ಕ್ಷಣ, ಇವರ ಖಾಸಗಿ ಜೀವನವನ್ನು ಸಾರ್ವಜನಿಕ ಚರ್ಚೆಗೆ ತಂದಿದೆ.

Exit mobile version