ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿದ ಮೊದಲ ದಿನವೇ ಯುವ ವೈದ್ಯೆಯೊಬ್ಬರು ರಾಜೀನಾಮೆ ನೀಡಿದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಚಂಡೀಗಢದ ನಿವಾಸಿ ಇಂಟರ್ನಲ್ ಮೆಡಿಸಿನ್ ಸ್ಪೆಷಲಿಸ್ಟ್ ಡಾ. ಪ್ರಭ್ಲೀನ್ ಕೌರ್ ಅವರು, ತಾವು ಸೇರಿದ್ದ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳನ್ನು ಅನಗತ್ಯವಾಗಿ ಸುಲಿಗೆ ಮಾಡುವುದನ್ನು ನೋಡಿ ತಕ್ಷಣವೇ ರಾಜೀನಾಮೆ ಕೊಟ್ಟಿದ್ದಾರೆ. ತಮ್ಮ ರಾಜೀನಾಮೆಗೆ ಕಾರಣವನ್ನು ವಿವರಿಸುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಈಗ ಭಾರೀ ಸಂಖ್ಯೆಯಲ್ಲಿ ವೈರಲ್ ಆಗುತ್ತಿದೆ.
ಡಾ. ಪ್ರಭ್ಲೀನ್ ಕೌರ್ ಆರೋಪಗಳು: “ರೋಗಿಗಳು ಬಂದರೆ ಸಾಕು, ಅವರನ್ನು ಅಡ್ಮಿಟ್ ಮಾಡಿ ಐಸಿಯುಗೆ ಹಾಕಿ ಎಂದು ಆಸ್ಪತ್ರೆಯವರು ಸೂಚಿಸುತ್ತಿದ್ದಾರೆ. ವೈದ್ಯಕೀಯವಾಗಿ ಅಗತ್ಯವಿದೆಯೋ ಇಲ್ಲವೋ ಎಂದು ಪರಿಶೀಲಿಸುವುದೇ ಇಲ್ಲ. ಬಿಲ್ ಹೆಚ್ಚಿಸುವುದಕ್ಕಾಗಿ ಅನಗತ್ಯವಾಗಿ ಐಸಿಯುಗೆ ಸೇರಿಸಲಾಗುತ್ತಿದೆ” ಎಂದು ಡಾ. ಪ್ರಭ್ಲೀನ್ ತಮ್ಮ ವಿಡಿಯೋದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
🚨 YOUNG DOCTOR : I am quitting my job.
“I was asked by my female boss to admit nearly every patient, even when it was not required” 😳
“ICU stays were stretched to increase hospital bills”
“No salary is bigger than ethics & patient safety” pic.twitter.com/WyF1inwCUl
— News Algebra (@NewsAlgebraIND) April 6, 2026
ಈ ಆಸ್ಪತ್ರೆಯು ಚಂಡೀಗಢದ ಹಿರಿಯ ಸ್ತ್ರೀರೋಗ ತಜ್ಞರೊಬ್ಬರ ಮಾಲೀಕತ್ವದಲ್ಲಿದೆ ಎಂದೂ ಅವರು ಹೇಳಿದ್ದಾರೆ. “ರೋಗಿಯ ಸುರಕ್ಷತೆ ಮತ್ತು ವೈದ್ಯಕೀಯ ನೈತಿಕತೆಗಿಂತ ಲಾಭವೇ ಮುಖ್ಯವಾಗಿದೆ” ಎಂದು ತೀವ್ರ ಟೀಕೆ ಮಾಡಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಡಾ. ಪ್ರಭ್ಲೀನ್ ಕೌರ್ ಅವರ ವಿಡಿಯೋ ವೈರಲ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ಆಸ್ಪತ್ರೆಗಳ ವಿರುದ್ಧ ತೀವ್ರ ಟೀಕೆಗಳು ಹರಿದುಬಂದಿವೆ. ಹಲವರು ಯುವ ವೈದ್ಯೆಯ ಧೈರ್ಯ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡಿದ್ದಾರೆ.
“ರೋಗಿಗಳನ್ನು ರಕ್ಷಿಸುವ ಪ್ರತಿಜ್ಞೆಯ ನಿಜವಾದ ಅರ್ಥವನ್ನು ನೀವು ತೋರಿಸಿದ್ದೀರಿ”, “ಖಾಸಗಿ ಆಸ್ಪತ್ರೆಗಳು ಲಾಭಕ್ಕಾಗಿ ಮನುಷ್ಯರ ಜೀವದೊಂದಿಗೆ ಆಟವಾಡುತ್ತಿವೆ” ಎಂಬಂತಹ ಕಾಮೆಂಟ್‌ಗಳು ಸಾಕಷ್ಟು ಬಂದಿವೆ. ಆದರೆ ಕೆಲವರು “ಎಲ್ಲಾ ಡಾಕ್ಟರ್‌ಗಳನ್ನು ಒಂದೇ ಬುಟ್ಟಿಗೆ ಹಾಕಬಾರದು” ಎಂದು ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಅನಗತ್ಯ ಚಿಕಿತ್ಸೆ, ಲಾಭಕ್ಕಾಗಿ ರೋಗಿಗಳನ್ನು ಸುಲಿಗೆ ಮಾಡುವ ವ್ಯವಸ್ಥೆಯ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.





