ದೂರದ ಪ್ರಯಾಣ, ರೈಲು, ಬಸ್ ಅಥವಾ ಕುಗ್ರಾಮಗಳಿಗೆ ಹೋದಾಗ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಎದುರಾಗುವುದು ಸಾಮಾನ್ಯ. ಕಾಲ್ ಡ್ರಾಪ್ ಆಗುವುದು, ಇಂಟರ್ನೆಟ್ ಸ್ಥಗಿತಗೊಳ್ಳುವುದು ಅಥವಾ ಸಿಗ್ನಲ್ ಸಂಪೂರ್ಣ ಮಾಯವಾಗುವುದು ಸಂವಹನಕ್ಕೆ ದೊಡ್ಡ ಅಡ್ಡಿಯಾಗುತ್ತದೆ. ಆದರೆ ಚಿಂತೆ ಬೇಡ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಸರಳ ಸೆಟ್ಟಿಂಗ್ ಬದಲಾವಣೆಗಳು ಮತ್ತು ಟ್ರಿಕ್‌ಗಳ ಮೂಲಕ ನೆಟ್‌ವರ್ಕ್ ಸುಧಾರಿಸಬಹುದು. ತುರ್ತು ಸಂದರ್ಭಗಳಲ್ಲಿ ಭಾರತದಲ್ಲಿ 112 ಎಮರ್ಜೆನ್ಸಿ ನಂಬರ್ ಹೇಗೆ ಬಳಸಬೇಕು ಎಂಬುದನ್ನೂ ಇಲ್ಲಿ ತಿಳಿಯಿರಿ.
ನೆಟ್‌ವರ್ಕ್ ಸುಧಾರಿಸಲು ಸುಲಭ ಮತ್ತು ಪರಿಣಾಮಕಾರಿ ಮಾರ್ಗಗಳು
- ಏರ್‌ಪ್ಲೇನ್ ಮೋಡ್ ಟಾಗಲ್ ಮಾಡಿ : ನೆಟ್‌ವರ್ಕ್ ಮಾಯವಾದ ತಕ್ಷಣ ಫೋನ್‌ನ್ನು ಏರ್‌ಪ್ಲೇನ್ ಮೋಡ್ಗೆ ಆನ್ ಮಾಡಿ 15-30 ಸೆಕೆಂಡುಗಳ ಕಾಲ ಇರಿಸಿ. ನಂತರ ಆಫ್ ಮಾಡಿ. ಇದರಿಂದ ಫೋನ್ ಹೊಸದಾಗಿ ಹತ್ತಿರದ ಟವರ್‌ಗೆ ಕನೆಕ್ಟ್ ಆಗುವ ಪ್ರಯತ್ನ ಮಾಡುತ್ತದೆ. ಇದು ಅತಿ ಸರಳ ಮತ್ತು ತಕ್ಷಣ ಕೆಲಸ ಮಾಡುವ ವಿಧಾನ.
- ಫೋನ್ ರೀಸ್ಟಾರ್ಟ್ ಮಾಡಿ : ಫೋನ್ ಅನ್ನು ಸಂಪೂರ್ಣ ರೀಸ್ಟಾರ್ಟ್ ಮಾಡಿ. ಇದು ಬ್ಯಾಕ್‌ಗ್ರೌಂಡ್‌ನಲ್ಲಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸುತ್ತದೆ ಮತ್ತು ನೆಟ್‌ವರ್ಕ್ ಹುಡುಕಾಟವನ್ನು ಮತ್ತೆ ಆರಂಭಿಸುತ್ತದೆ.
- ಸಿಮ್ ಕಾರ್ಡ್ ಪರೀಕ್ಷಿಸಿ ಮತ್ತು ಸ್ವಚ್ಛಗೊಳಿಸಿ : ಮೇಲಿನ ಕ್ರಮಗಳು ಕೆಲಸ ಮಾಡದಿದ್ದರೆ, ಫೋನ್ ಆಫ್ ಮಾಡಿ ಸಿಮ್ ಕಾರ್ಡ್ ಹೊರತೆಗೆಯಿರಿ. ಮೃದುವಾದ ಬಟ್ಟೆಯಿಂದ ಸಿಮ್‌ನ ಗೋಲ್ಡನ್ ಭಾಗವನ್ನು ಸ್ವಚ್ಛಗೊಳಿಸಿ (ಧೂಳು ಅಥವಾ ಆಕ್ಸಿಡೇಶನ್ ಇದ್ದರೆ ಸಮಸ್ಯೆಯಾಗುತ್ತದೆ). ನಂತರ ಸರಿಯಾಗಿ ಮರುಜೋಡಿಸಿ ಫೋನ್ ಆನ್ ಮಾಡಿ.
- ಮ್ಯಾನುವಲ್ ನೆಟ್‌ವರ್ಕ್ ಸೆಲೆಕ್ಷನ್ ಮಾಡಿ: ಸೆಟ್ಟಿಂಗ್ಸ್, ಮೊಬೈಲ್ ನೆಟ್‌ವರ್ಕ್, ನೆಟ್‌ವರ್ಕ್ ಆಪರೇಟರ್‌ಗೆ ಹೋಗಿ ‘ಆಟೋಮ್ಯಾಟಿಕ್’ ಬದಲು ಮ್ಯಾನುವಲ್ ಆಯ್ಕೆ ಮಾಡಿ. ಫೋನ್ ಲಭ್ಯವಿರುವ ನೆಟ್‌ವರ್ಕ್‌ಗಳನ್ನು ಸ್ಕ್ಯಾನ್ ಮಾಡಿ ತೋರಿಸುತ್ತದೆ . ಅತಿ ಬಲವಾದದ್ದನ್ನು ಆಯ್ಕೆ ಮಾಡಿ. ಇದು ರೋಮಿಂಗ್ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಉಪಯುಕ್ತ.
- ಕಿಟಕಿಯ ಹತ್ತಿರದ ಸೀಟು ಆಯ್ಕೆ ಮಾಡಿ: ರೈಲು ಅಥವಾ ಬಸ್‌ನಲ್ಲಿ ಪ್ರಯಾಣಿಸುವಾಗ ಸಾಧ್ಯವಾದಷ್ಟು ಕಿಟಕಿಯ ಬಳಿ ಕುಳಿತುಕೊಳ್ಳಿ. ಲೋಹದ ದೇಹ ಅಥವಾ ಗೋಡೆಗಳು ಸಿಗ್ನಲ್ ಅಡ್ಡಿಪಡಿಸುತ್ತವೆ. ಕಿಟಕಿಯಿಂದ ಸಿಗ್ನಲ್ ಸುಲಭವಾಗಿ ಬರುತ್ತದೆ.
- ವೈ-ಫೈ ಕಾಲಿಂಗ್ ಬಳಸಿ : ರೈಲು ನಿಲ್ದಾಣ, ಬಸ್ ಸ್ಟಾಪ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈ-ಫೈ ಲಭ್ಯವಿದ್ದರೆ, ಸೆಟ್ಟಿಂಗ್ಸ್‌ನಲ್ಲಿ ವೈ-ಫೈ ಕಾಲಿಂಗ್ ಆನ್ ಮಾಡಿ. ಇದರಿಂದ ವೈ-ಫೈ ಮೂಲಕ ಕಾಲ್ ಮಾಡಬಹುದು.
ತುರ್ತು ಸಂದರ್ಭದಲ್ಲಿ 112 ಎಮರ್ಜೆನ್ಸಿ ನಂಬರ್ ಹೇಗೆ ಬಳಸಿ?
ನೆಟ್‌ವರ್ಕ್ ಸಿಗದಿದ್ದರೂ ಭಾರತದಲ್ಲಿ 112 ಎಮರ್ಜೆನ್ಸಿ ನಂಬರ್ ಕೆಲಸ ಮಾಡುತ್ತದೆ.
- ಫೋನ್ನಿಂದ ನೇರವಾಗಿ 112 ಡಯಲ್ ಮಾಡಿ.
- ಸ್ಮಾರ್ಟ್‌ಫೋನ್‌ನಲ್ಲಿ ಪವರ್ ಬಟನ್ ಅನ್ನು 3 ಬಾರಿ ತ್ವರಿತವಾಗಿ ಒತ್ತಿ ಪ್ಯಾನಿಕ್ ಕಾಲ್ ಆಕ್ಟಿವೇಟ್ ಮಾಡಿ.
- ಫೀಚರ್ ಫೋನ್ನಲ್ಲಿ ‘5’ ಅಥವಾ ಬಟನ್ ಅನ್ನು ದೀರ್ಘಕಾಲ ಒತ್ತಿರಿ.
- 112 ಇಂಡಿಯಾ ಆಪ್ ಡೌನ್ಲೋಡ್ ಮಾಡಿ ಬಳಸಿ (ಪ್ಯಾನಿಕ್ ಬಟನ್ ಲಭ್ಯ). ಈ ನಂಬರ್ ಯಾವುದೇ ಸಿಮ್ ಅಥವಾ ನೆಟ್‌ವರ್ಕ್ ಇಲ್ಲದಿದ್ದರೂ ಕೆಲಸ ಮಾಡುತ್ತದೆ.
ಈ ಸರಳ ಟಿಪ್ಸ್‌ಗಳನ್ನು ಅನುಸರಿಸಿ ಪ್ರಯಾಣದ ಸಮಯದಲ್ಲಿ ನೆಟ್‌ವರ್ಕ್ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಿ.
