ಸಿಮ್ ಸ್ವಾಪ್ ವಂಚನೆಗೆ ಟೆಲಿಕಾಂ ಕಂಪನಿಗಳಿಗೆ ಚಾಟಿ: BSNLಗೆ ₹55.5 ಲಕ್ಷ ದಂಡ!

ಕರ್ನಾಟಕ ಹೈಕೋರ್ಟ್ ತೀರ್ಪು

BeFunky collage (5)

ಡಿಜಿಟಲ್ ಬ್ಯಾಂಕಿಂಗ್ ಯುಗದಲ್ಲಿ ತುಂಬಾ ಮಹತ್ವದ ತೀರ್ಪೊಂದನ್ನು ಕರ್ನಾಟಕ ಹೈಕೋರ್ಟ್ ನೀಡಿದೆ. ನಕಲಿ ಸಿಮ್ ನೀಡಿ ‘ಸಿಮ್ ಸ್ವಾಪ್’ ವಂಚನೆಗೆ ದಾರಿ ಮಾಡಿಕೊಟ್ಟರೆ, ಅದರಿಂದ ಗ್ರಾಹಕರಿಗೆ ಉಂಟಾಗುವ ಹಣಕಾಸಿನ ನಷ್ಟಕ್ಕೆ ಟೆಲಿಕಾಂ ಕಂಪನಿಗಳೇ ನೇರ ಹೊಣೆ ಹೊರಬೇಕು ಎಂದು ನ್ಯಾಯಾಲಯ ಖಡಕ್ ತೀರ್ಪು ನೀಡಿದೆ.

ಈ ಐತಿಹಾಸಿಕ ತೀರ್ಪಿನಲ್ಲಿ ಬಿಎಸ್‌ಎನ್‌ಎಲ್ (BSNL) ಕಂಪನಿಗೆ ಬರೋಬ್ಬರಿ ₹55.5 ಲಕ್ಷ ದಂಡ ವಿಧಿಸಲಾಗಿದೆ.

ಪ್ರಕರಣದ ಹಿನ್ನೆಲೆ : 2019ರಲ್ಲಿ ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್‌ನ ಮೊಬೈಲ್ ಸಂಖ್ಯೆಯನ್ನು ನಕಲಿ ಸಿಮ್ ಮೂಲಕ ಸ್ವಾಪ್ ಮಾಡಿ ವಂಚಕರು ಬ್ಯಾಂಕ್ ಖಾತೆಯಿಂದ ₹87 ಲಕ್ಷ ಕಳುವು ಮಾಡಿದ್ದರು. ಬ್ಯಾಂಕ್ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಬಿಎಸ್‌ಎನ್‌ಎಲ್ ಸೂಕ್ತ ಗುರುತು ಪರಿಶೀಲನೆ ಮಾಡದೆ ನಕಲಿ ಸಿಮ್ ನೀಡಿದ್ದರಿಂದಲೇ ಈ ವಂಚನೆ ಸಾಧ್ಯವಾಯಿತು ಎಂದು ತೀರ್ಪು ನೀಡಿದೆ.

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಈ ತೀರ್ಪು ನೀಡಿದ್ದು, “ಟೆಲಿಕಾಂ ಕಂಪನಿಗಳು ಗೇಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಬೇಕು. ಗ್ರಾಹಕರ ಆರ್ಥಿಕ ಭದ್ರತೆಗೆ ಅವರು ಹೊಣೆಗಾರರಾಗಿದ್ದಾರೆ” ಎಂದು ಒತ್ತಿ ಹೇಳಿದ್ದಾರೆ.

ಕೋರ್ಟ್‌ನ ಮುಖ್ಯ ಅಂಶಗಳು : 

ಪ್ರತಿಕ್ರಿಯೆಗಳು ಈ ತೀರ್ಪು ದೇಶಾದ್ಯಂತ ಟೆಲಿಕಾಂ ಕಂಪನಿಗಳಲ್ಲಿ ಗುರುತು ಪರಿಶೀಲನೆಯನ್ನು ಕಟ್ಟುನಿಟ್ಟಾಗಿ ಮಾಡುವಂತೆ ಒತ್ತಾಯಿಸುತ್ತಿದೆ. ಸೈಬರ್ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಪು ಗ್ರಾಹಕರಿಗೆ ದೊಡ್ಡ ರಕ್ಷಣೆಯಾಗಿದೆ ಎಂದು ಕಾನೂನು ತಜ್ಞರು ಪ್ರತಿಕ್ರಿಯಿಸಿದ್ದಾರೆ.

ಗ್ರಾಹಕರಿಗೆ ಸಲಹೆ :

ಈ ತೀರ್ಪು ಡಿಜಿಟಲ್ ಭಾರತದಲ್ಲಿ ಮೈಲುಗಲ್ಲಾಗುವ ಸಾಧ್ಯತೆ ಇದೆ.

Exit mobile version