ದೇಶದ ಸರ್ಕಾರಿ ಟೆಲಿಕಾಂ ದೈತ್ಯವಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಿಹಿ ಸುದ್ದಿ ನೀಡಿದೆ. ಇಂದಿನ ಡೇಟಾ ಯುಗದಲ್ಲಿ ಎಲ್ಲರೂ ಹೆಚ್ಚು ವೇಗದ ಮತ್ತು ಕಡಿಮೆ ದರದ ಇಂಟರ್ನೆಟ್‌ಗಾಗಿ ಕಾಯುತ್ತಿರುವಾಗ, ಬಿಎಸ್‌ಎನ್‌ಎಲ್ ಹೊಸ ಗ್ರಾಹಕರಿಗೆ ನಂಬಲಾರದಷ್ಟು ಆಕರ್ಷಕ ಆಫರ್‌ನ್ನು ನೀಡಿದೆ. ಕೇವಲ ₹1 ಟೋಕನ್ ಮೊತ್ತಕ್ಕೆ ಒಂದು ತಿಂಗಳ 4G ಫ್ರೀ ಮೊಬೈಲ್ ಸೇವೆ ನೀಡಿದೆ
ಈ ದೀಪಾವಳಿ ಬೋನಸ್ ಆಫರ್ ಅಕ್ಟೋಬರ್ 15ರಿಂದ ನವೆಂಬರ್ 15, 2025ರವರೆಗೆ ಲಭ್ಯವಿರಲಿದೆ. ಈ ಅವಧಿಯಲ್ಲಿ ಹೊಸ ಗ್ರಾಹಕರು ಬಿಎಸ್‌ಎನ್‌ಎಲ್‌ನ ಯಾವುದೇ ಶಾಖೆಗೆ ಭೇಟಿ ನೀಡಿ ಅಥವಾ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬಹುದು.
ಈ ಆಫರ್‌ನಲ್ಲಿ ಏನು ಸಿಗಲಿದೆ?
ಬಿಎಸ್‌ಎನ್‌ಎಲ್‌ನ ಈ ವಿಶೇಷ ಪ್ಲ್ಯಾನ್‌ವು ಕೆಳಗಿನ ಸೌಲಭ್ಯಗಳನ್ನು ಒಳಗೊಂಡಿದೆ.
-
ಪ್ರತಿದಿನ ಅನಿಯಮಿತ ಧ್ವನಿ ಕರೆಗಳು
-
ದಿನಕ್ಕೆ 2GB ಹೈ-ಸ್ಪೀಡ್ ಡೇಟಾ
-
ದಿನಕ್ಕೆ 100 SMS ಸಂದೇಶಗಳು
-
ಉಚಿತ ಸಿಮ್ ಕಾರ್ಡ್, ಕೇವಲ KYC ಪ್ರಕ್ರಿಯೆ ಪೂರ್ಣಗೊಳಿಸುವ ಅಗತ್ಯವಿದೆ
ಕಂಪನಿಯು ಸ್ಪಷ್ಟಪಡಿಸಿರುವಂತೆ, ₹1 ಪಾವತಿ ಕೇವಲ ಟೋಕನ್ ಮೊತ್ತವಾಗಿದ್ದು, ಇದು ಗ್ರಾಹಕರ ದಾಖಲೆ ದೃಢೀಕರಣಕ್ಕಾಗಿ ಮಾತ್ರ ಬಳಸಲಾಗುತ್ತದೆ.
ಕಂಪನಿ ಮುಖ್ಯಸ್ಥರ ಹೇಳಿಕೆ
ಬಿಎಸ್‌ಎನ್‌ಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎ. ರಾಬರ್ಟ್ ಜೆ. ರವಿ ಮಾತನಾಡಿ, “ನಮ್ಮ ಸೇವೆಗಳ ಗುಣಮಟ್ಟ ಮತ್ತು ನೆಟ್‌ವರ್ಕ್ ವ್ಯಾಪ್ತಿಯು ಉಚಿತ ಅವಧಿ ಮುಗಿದ ನಂತರವೂ ಗ್ರಾಹಕರನ್ನು ನಮ್ಮೊಂದಿಗೆ ಉಳಿಸಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ. ಈ ದೀಪಾವಳಿ ಬೋನಸ್ ಗ್ರಾಹಕರಿಗೆ ನಮ್ಮ 4G ನೆಟ್‌ವರ್ಕ್ ಅನ್ನು ಉಚಿತವಾಗಿ ಅನುಭವಿಸುವ ಅವಕಾಶ ನೀಡುತ್ತದೆ” ಎಂದರು.
“ಬಿಎಸ್‌ಎನ್‌ಎಲ್ ಕಳೆದ ಕೆಲವು ವರ್ಷಗಳಲ್ಲಿ ತನ್ನ ಸೇವೆಗಳನ್ನು ತಂತ್ರಜ್ಞಾನ ದೃಷ್ಠಿಯಿಂದ ಸಂಪೂರ್ಣವಾಗಿ ನವೀಕರಿಸಿದೆ. ನಮ್ಮ ದೇಶೀಯ ಟೆಲಿಕಾಂ ಮೂಲಸೌಕರ್ಯವು ಇದೀಗ ಖಾಸಗಿ ಕಂಪನಿಗಳಿಗಿಂತ ಕಡಿಮೆ ಏನೂ ಅಲ್ಲ” ಎಂದು ಹೇಳಿದರು.
ಬಿಎಸ್‌ಎನ್‌ಎಲ್‌ನ ಚಂದಾದಾರರ ಸಂಖ್ಯೆ ಏರಿಕೆ
ಆಗಸ್ಟ್ 2025ರಲ್ಲಿ ಬಿಎಸ್‌ಎನ್‌ಎಲ್ ನೀಡಿದ್ದ ಹಿಂದಿನ ವಿಶೇಷ ಪ್ಲ್ಯಾನ್ ಕಂಪನಿಗೆ ದೊಡ್ಡ ಉತ್ಸಾಹವನ್ನು ನೀಡಿತ್ತು. ಆ ಅವಧಿಯಲ್ಲಿ 1.38 ಲಕ್ಷಕ್ಕೂ ಹೆಚ್ಚು ಹೊಸ ಬಳಕೆದಾರರು ಸೇರಿಕೊಂಡಿದ್ದರು. ಇದರ ಫಲವಾಗಿ ಬಿಎಸ್‌ಎನ್‌ಎಲ್ ಏರ್‌ಟೆಲ್‌ನನ್ನೂ ಹಿಂದಿಕ್ಕಿ, ದೇಶದ ಎರಡನೇ ಅತಿದೊಡ್ಡ ಚಂದಾದಾರರ ನೆಟ್‌ವರ್ಕ್ ಆಗಿ ಹೊರಹೊಮ್ಮಿತ್ತು.
ಈ ಯಶಸ್ಸಿನ ಮೆಚ್ಚಿನೊಂದಿಗೆ, ಕಂಪನಿಯು ಈಗ ದೀಪಾವಳಿ ಹಬ್ಬದ ಸಮಯದಲ್ಲಿ ಇನ್ನಷ್ಟು ಗ್ರಾಹಕರನ್ನು ಸೆಳೆಯಲು ಈ ವಿಶೇಷ ಆಫರ್‌ನ್ನು ಬಿಡುಗಡೆ ಮಾಡಿದೆ.
ದೀಪಾವಳಿ ಹಬ್ಬಕ್ಕೆ ಸ್ಮಾರ್ಟ್ ಗಿಫ್ಟ್!
ಕೇವಲ ₹1ರಲ್ಲಿ 30 ದಿನಗಳ ಉಚಿತ ಇಂಟರ್ನೆಟ್ ಪಡೆಯುವ ಅವಕಾಶವು ಗ್ರಾಹಕರಿಗೆ ಹಬ್ಬದ ಉಡುಗೊರೆಯಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಬಿಎಸ್‌ಎನ್‌ಎಲ್ 4G ವ್ಯಾಪ್ತಿಯನ್ನು ವಿಸ್ತರಿಸಲು ಈ ಯೋಜನೆ ನೆರವಾಗಲಿದೆ.