ಏರ್ಟೆಲ್ ಗ್ರಾಹಕರಿಗೆ ಶಾಕ್! ಅನ್ಲಿಮಿಟೆಡ್ 5Gಗೂ ಹೊಸ ಲಿಮಿಟ್..?

Untitled design 2026 07 18T124709.057

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಏರ್ಟೆಲ್ (Airtel) ತನ್ನ ಅನ್ಲಿಮಿಟೆಡ್ 5G ಡೇಟಾ ಸೇವೆಗಾಗಿ ಲಕ್ಷಾಂತರ ಗ್ರಾಹಕರನ್ನು ಹೊಂದಿದೆ. ವೇಗವಾದ ಇಂಟರ್ನೆಟ್ ಹಾಗೂ ಮಿತಿಯಿಲ್ಲದ ಡೇಟಾ ಬಳಕೆ ಎಂಬ ಭರವಸೆಯೊಂದಿಗೆ ಸೇವೆಯನ್ನು ಬಳಸುತ್ತಿರುವ ಗ್ರಾಹಕರಲ್ಲಿ ಇದೀಗ ಹೊಸ ಆತಂಕ ಮೂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಏರ್ಟೆಲ್ ತನ್ನ ಅನ್ಲಿಮಿಟೆಡ್ 5G ಡೇಟಾ ಸೇವೆಗೆ ಸಂಬಂಧಿಸಿದಂತೆ ಮೊಬೈಲ್ ಹಾಟ್ಸ್ಪಾಟ್ ಬಳಕೆಯ ಮೇಲೆ ನಿರ್ಬಂಧ ಹೇರಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೆಲವು ಗ್ರಾಹಕರು ಕಳೆದ ಕೆಲವು ದಿನಗಳಿಂದ ತಮ್ಮ 5G ಡೇಟಾವನ್ನು ಮೊಬೈಲ್ ಹಾಟ್ಸ್ಪಾಟ್ ಮೂಲಕ ಲ್ಯಾಪ್ಟಾಪ್ ಅಥವಾ ಇತರ ಸಾಧನಗಳಿಗೆ ಹಂಚಿಕೊಂಡಾಗ ಅನ್ಲಿಮಿಟೆಡ್ ಡೇಟಾ ಪ್ರಯೋಜನ ಸಿಗುತ್ತಿಲ್ಲ ಎಂದು ದೂರಿದ್ದಾರೆ. ಹಾಟ್ಸ್ಪಾಟ್ ಮೂಲಕ ಬಳಸುವ ಡೇಟಾವನ್ನು ಅನ್ಲಿಮಿಟೆಡ್ 5G ಕೋಟಾದ ಬದಲಿಗೆ ಸಾಮಾನ್ಯ ದೈನಂದಿನ ಡೇಟಾ ಮಿತಿಯಿಂದ ಕಡಿತ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿರುವ ಕೆಲವು ಸ್ಕ್ರೀನ್ಶಾಟ್ಗಳಲ್ಲಿ, “ಅನ್ಲಿಮಿಟೆಡ್ 5G ಡೇಟಾ ಪ್ರಯೋಜನವು ಮೊಬೈಲ್ ಹಾಟ್ಸ್ಪಾಟ್ ಮೂಲಕ ಹಂಚಿಕೊಳ್ಳುವ ಬಳಕೆಗೆ ಅನ್ವಯಿಸುವುದಿಲ್ಲಎಂಬ ಷರತ್ತು ಉಲ್ಲೇಖಿಸಲಾಗಿದೆ. ಆದರೆ ಬಗ್ಗೆ ಏರ್ಟೆಲ್ ಅಧಿಕೃತ ವೆಬ್ಸೈಟ್ನಲ್ಲಿ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

ಬೆಳವಣಿಗೆ ಅನೇಕ ಬಳಕೆದಾರರಲ್ಲಿ ಅಸಮಾಧಾನ ಉಂಟುಮಾಡಿದೆ. ವಿಶೇಷವಾಗಿ ಮನೆಯಿಂದ ಕೆಲಸ ಮಾಡುವವರು, ವಿದ್ಯಾರ್ಥಿಗಳು ಹಾಗೂ ಲ್ಯಾಪ್‌ಟಾಪ್ ಬಳಕೆದಾರರು ಮೊಬೈಲ್ ಹಾಟ್ಸ್ಪಾಟ್ ಮೇಲೆ ಅವಲಂಬಿತರಾಗಿರುವುದರಿಂದ ನಿರ್ಬಂಧ ಅವರಿಗೆ ತೊಂದರೆ ಉಂಟುಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಲವರು ಜಿಯೋ (Jio) ಅಥವಾ ವಿ (Vi) ನೆಟ್ವರ್ಕ್ಗೆ ಪೋರ್ಟ್ ಆಗುವ ವಿಚಾರವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜಿಯೋ ತನ್ನ ಅನ್ಲಿಮಿಟೆಡ್ 5G ಸೇವೆಯಲ್ಲಿ ಹಾಟ್ಸ್ಪಾಟ್ ಬಳಕೆಗೆ ಪ್ರತ್ಯೇಕ ನಿರ್ಬಂಧ ವಿಧಿಸಿಲ್ಲ ಎಂದು ಗ್ರಾಹಕರು ಹೇಳುತ್ತಿದ್ದಾರೆ. ವಿ ಸಂಸ್ಥೆಯ ನಿಯಮಗಳಲ್ಲಿಯೂ ಇಂತಹ ನಿರ್ಬಂಧಗಳ ಉಲ್ಲೇಖ ಕಂಡುಬಂದಿಲ್ಲ.

ತಾಂತ್ರಿಕ ತಜ್ಞರ ಪ್ರಕಾರ, ಟೆಲಿಕಾಂ ಕಂಪನಿಗಳು ನೆಟ್ವರ್ಕ್ ಮಟ್ಟದಲ್ಲಿ ಡೇಟಾ ಬಳಕೆಯ ಸ್ವರೂಪವನ್ನು ಗುರುತಿಸುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಡೇಟಾ ನೇರವಾಗಿ ಮೊಬೈಲ್ನಲ್ಲಿ ಬಳಸಲಾಗುತ್ತಿದೆಯೇ ಅಥವಾ ಹಾಟ್ಸ್ಪಾಟ್ ಮೂಲಕ ಇತರ ಸಾಧನಗಳಿಗೆ ಹಂಚಲಾಗುತ್ತಿದೆಯೇ ಎಂಬುದನ್ನು ಪತ್ತೆಹಚ್ಚುವುದು ಸಾಧ್ಯ.

ಆದರೆ ಏರ್ಟೆಲ್ನಿಂದ ಕುರಿತು ಅಧಿಕೃತ ಸ್ಪಷ್ಟನೆ ಇನ್ನೂ ಹೊರಬಿದ್ದಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಸತ್ಯಾಸತ್ಯತೆ ಬಗ್ಗೆ ಗ್ರಾಹಕರು ಅಧಿಕೃತ ಪ್ರಕಟಣೆಯ ನಿರೀಕ್ಷೆಯಲ್ಲಿದ್ದಾರೆ.

Exit mobile version