ವಿಜಯ್ ಹಜಾರೆ ಟ್ರೋಫಿ: ಮೈಕಲ್ ಬೆವನ್‌ ವಿಶ್ವ ದಾಖಲೆ ಪುಡಿಪುಡಿ ಮಾಡಿದ ಕಿಂಗ್‌ ಕೊಹ್ಲಿ

Untitled design 2025 12 26T221227.498

ಬೆಂಗಳೂರು: ಭಾರತೀಯ ಕ್ರಿಕೆಟ್‌ನ ದಿಗ್ಗಜ ವಿರಾಟ್ ಕೊಹ್ಲಿ ಅವರು ಮತ್ತೊಂದು ಅಪೂರ್ವ ಸಾಧನೆ ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ 2025–26ರ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಗುಜರಾತ್ ವಿರುದ್ಧ ಆಡಿದ ಅದ್ಭುತ ಇನಿಂಗ್ಸ್ ಮೂಲಕ ಕೊಹ್ಲಿ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

 ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 77 ರನ್‌ಗಳನ್ನು ಸಿಡಿಸಿ, ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದರು. ಈ ಇನಿಂಗ್ಸ್ ಕೇವಲ ತಂಡದ ಗೆಲುವಿನ ಜೊತೆಗೆ ಕೊಹ್ಲಿಯ ಹೆಸರಿನ ಮುಂದೆ ಮತ್ತೊಂದು ಚಿನ್ನದ ಅಕ್ಷರದ ಸಾಧನೆಯನ್ನು ಸೇರಿಸಿದೆ.

ಮೈಕೆಲ್ ಬೆವನ್ ದಾಖಲೆ ಭಂಗ

ಈ ಇನಿಂಗ್ಸ್‌ನೊಂದಿಗೆ ವಿರಾಟ್ ಕೊಹ್ಲಿಯ ಲಿಸ್ಟ್ ಎ ಕ್ರಿಕೆಟ್ ವೃತ್ತಿಜೀವನದ ಸರಾಸರಿ 57.87ಕ್ಕೆ ಏರಿದೆ. ಇದರೊಂದಿಗೆ ಅವರು ಆಸ್ಟ್ರೇಲಿಯಾದ ದಂತಕಥೆ ಬ್ಯಾಟ್ಸ್‌ಮನ್ ಮೈಕೆಲ್ ಬೆವನ್ ಅವರ 57.86ರ ವಿಶ್ವ ದಾಖಲೆಯನ್ನು ಮುರಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಉನ್ನತ ಸರಾಸರಿ ಕಾಯ್ದುಕೊಂಡಿರುವ ಬ್ಯಾಟ್ಸ್‌ಮನ್ ಇತಿಹಾಸದಲ್ಲೇ ವಿರಾಟ್ ಕೊಹ್ಲಿಯೇ ಮೊದಲಿಗರಾಗಿದ್ದಾರೆ.

ಲಿಸ್ಟ್ ಎ ಕ್ರಿಕೆಟ್-ಅಗ್ರ ಸರಾಸರಿ ಪಟ್ಟಿಯಲ್ಲಿ ಕೊಹ್ಲಿ ನಂಬರ್ 1

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಧಿಕ ಸರಾಸರಿ ಹೊಂದಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಈಗ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರದ ಬ್ಯಾಟ್ಸ್‌ಮನ್‌ಗಳು

 ಪಾಕಿಸ್ತಾನದ ಬಾಬರ್ ಆಝಮ್ (53.82) ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (53.46) ಕೂಡ ಈ ಗೌರವಾನ್ವಿತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕೊನೆಯ 6 ಪಂದ್ಯಗಳಲ್ಲಿ ಅಸಾಧಾರಣ ಫಾರ್ಮ್

ಕೊಹ್ಲಿಯ ಇತ್ತೀಚಿನ ಫಾರ್ಮ್ ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿ ಮೂಡಿಸಿದೆ. ಕಳೆದ 6 ಏಕದಿನ ಪಂದ್ಯಗಳಲ್ಲಿ ಅವರು 146.00ರ ಸರಾಸರಿಯಲ್ಲಿ 584 ರನ್‌ಗಳನ್ನು ಗಳಿಸಿದ್ದಾರೆ.
ಈ ಅವಧಿಯಲ್ಲಿ ಅವರ ಪ್ರಮುಖ ಇನಿಂಗ್ಸ್‌ಗಳು

ಸಚಿನ್ ದಾಖಲೆ ಹಿಂದಿಕ್ಕಿದ ಕೊಹ್ಲಿ

2025ರಲ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಕೊಹ್ಲಿಯ ಸ್ಟ್ರೈಕ್ ರೇಟ್ 110ಕ್ಕಿಂತ ಹೆಚ್ಚಾಗಿದೆ. ಇದು ಇಂದಿನ ವೇಗದ ವೈಟ್ ಬಾಲ್ ಕ್ರಿಕೆಟ್‌ಗೆ ಅವರು ಸಂಪೂರ್ಣವಾಗಿ ಹೊಂದಿಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ. ಈ ವರ್ಷ ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16,000 ರನ್‌ಗಳನ್ನು ಅತ್ಯಂತ ವೇಗವಾಗಿ ಪೂರೈಸಿದ ಆಟಗಾರ ಎಂಬ ದಾಖಲೆ ಬರೆದಿದ್ದು, ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

Exit mobile version