ಹೊಸ ದಾಖಲೆ ಬರೆಯಲಿರೋ ಹೊಸ್ತಿಲಲ್ಲಿ ವಿರಾಟ್​​ ಕೊಹ್ಲಿ!

Film (8)

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ.ಇವರು ಟಿ20 ಕ್ರಿಕೆಟ್‌‌‌‌‌ನಲ್ಲಿ ಹೊಸ ದಾಖಲೆ ಸೃಷ್ಟಿಸುವ ಹಂತದಲ್ಲಿದ್ದಾರೆ. 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ಷಣ ಗಣನೆ ಈಗಾಗಲೇ ಹೆಚ್ಚಾಗಿದೆ. ನಾಳೆ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು RCB ತಂಡಗಳು ಮುಖಾಮುಖಿಯಾಗಲಿವೆ.

ಕೊಹ್ಲಿಗೆ 114 ರನ್ ಮಾತ್ರ ಬೇಕು!

ವಿರಾಟ್​ ಕೊಹ್ಲಿ ಹೊಸ ಸಾಧನೆಗೆ ಕೇವಲ 114 ರನ್ ಸೇರಿಸ ಬೇಕಿದೆ. ಇದು ಅವರ ವೈಯಕ್ತಿಕ ಮೈಲಿಗಲ್ಲು ಮಾತ್ರವಲ್ಲ, IPL 2025ಕ್ಕೆ RCB ತಂಡದ ಪ್ರೇರಣೆಯೂ ಆಗಿದೆ. ಟಿ20 ಕ್ರಿಕೆಟ್‌‌‌‌ನಲ್ಲಿ 13,000 ರನ್ ಗಳಿಸಿದ ಮೊದಲ ಭಾರತೀಯರಾಗುತ್ತಾರೆ.

ಅಂತರರಾಷ್ಟ್ರೀಯ ಟಿ20ನಿಂದ ವಿದಾಯ

2024ರ ಟಿ20 ವಿಶ್ವಕಪ್ ಗೆದ್ದ ನಂತರ ಕೊಹ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌‌ನಿಂದ ನಿವೃತ್ತಿ ಹೇಳಿದರು. ಆದರೆ, IPL ಮಾತ್ರ ಅವರ ಕ್ರಿಕೆಟ್ ಪ್ರೇಮಕ್ಕೆ ಮುಕುಟವಾಗಿದೆ. RCB ತಂಡದ ನಾಯಕರಾಗಿ ಈ ಸೀಸನ್ ಅವರ “ದಾಖಲೆ ದಾಳಿ”ಗೆ ಸಾಕ್ಷಿಯಾಗಲಿದೆ.

ಆರ್‌ಸಿಬಿ ತಂಡಕ್ಕೆ ಸ್ಟಾರ್ ಬೌಲರ್ ಎಂಟ್ರಿ!

2025, ಮಾರ್ಚ್ 22ರಿಂದ ಐಪಿಎಲ್ ಕ್ರಿಕೆಟ್ ಪ್ರಪಂಚದ ಅತಿ ದೊಡ್ಡ ಕ್ರೇಜ್ ಶುರುವಾಗಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್‌ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಖಾಮುಖಿಯಾಗಲಿದೆ. ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡದ ಮೇಲೆ ಫ್ಯಾನ್‌ಗಳ ನಿರೀಕ್ಷೆಗಳು ಇಮ್ಮಡಿಯಾಗಿವೆ.

ಆರ್‌ಸಿಬಿ ತಂಡಕ್ಕೆ ಅಂತರರಾಷ್ಟ್ರೀಯ ಸ್ಟಾರ್ ಬೌಲರ್ ಸೇರ್ಪಡೆಯಾಗಿದೆ.ಈ ಸ್ಟಾರ್ ಬೌಲರ್ ಸೊಂಟದ ಗಾಯದಿಂದಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದರು.ಹೀಗಾಗಿ ಅವರು ಐಪಿಎಲ್ 2025ರಲ್ಲಿ ಆಡುವುದು ಡೌಟ್ ಎನ್ನಲಾಗಿತ್ತು.ಸದ್ಯ ಈ ಸ್ಟಾರ್ ಬೌಲರ್‌ ಆರ್‌‌ಸಿಬಿ ಸೇರಿರುವುದು ತಂಡದ ಬಲ ಹೆಚ್ಚಿಸಿದೆ.

ಆರ್‌‌ಸಿಬಿ ತಂಡ ಸೇರಿದ ಸ್ಟಾರ್‌‌‌ ಬೌಲರ್‌‌ ಜೋಶ್ ಹೇಜಲ್‌‌ವುಡ್. ಹೇಜಲ್‌ವುಡ್ ಆರ್‌‌ಸಿಬಿ ‌ 12.5 ಕೋಟಿ ರೂ. ಹಣಕ್ಕೆ ಖರೀದಿಸಿತ್ತು.

ವಿರಾಟ್ ಕೋಹ್ಲಿ, ಫಿಲ್ ಸಾಲ್ಟ್, ಗ್ಲೆನ್ ಮ್ಯಾಕ್ಸ್ವೆಲ್‌ ರಂತಹ ಅನುಭವಿ ಆಟಗಾರರ ಜೊತೆಗೆ, ರಜತ್ ಪಾಟಿದಾರ್ ಕ್ಯಾಪ್ಟನ್‌ಸಿಯಲ್ಲಿ ತಂಡದಲ್ಲಿ ಹೊಸ ಶಕ್ತಿ ಕಾಣಸಿಗುತ್ತಿದೆ. ತಂಡದ ಅಭ್ಯಾಸಗಳು ಪೂರ್ಣಗತಿಯಲ್ಲಿವೆ ಮತ್ತು ಸದಸ್ಯರು ಬೆಂಗಳೂರು ಕ್ಯಾಂಪ್‌ನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ಚಾಂಪಿಯನ್‌ಶಿಪ್ ತಪ್ಪಿದ ಆರ್‌ಸಿಬಿ, ಈ ಸಲ “ಕಪ್ ನಮ್ದೇ” ಎಂದು ಘೋಷಿಸಲು ಸಿದ್ಧವಾಗಿದೆ.

Exit mobile version