ಯುಎಇನ ಭರ್ಜರಿ ಚೇಸಿಂಗ್
206 ರನ್ಗಳ ಕಠಿಣ ಗುರಿಯನ್ನು ಚೇಸ್ ಮಾಡಿದ ಯುಎಇ ತಂಡಕ್ಕೆ ನಾಯಕ ಮೊಹಮ್ಮದ್ ವಸೀಮ್ ಸ್ಪೋಟಕ ಆರಂಭ ನೀಡಿದರು. ಮೊಹಮ್ಮದ್ ಝೊಹೈಬ್ ಜೊತೆಗೆ ಇನಿಂಗ್ಸ್ ಆರಂಭಿಸಿದ ವಸೀಮ್, ಮೊದಲ ಓವರ್ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. 10 ಓವರ್ಗಳಲ್ಲಿ ತಂಡದ ಮೊತ್ತ 100 ರನ್ಗಳ ಗಡಿಯನ್ನು ದಾಟಿತು. ವಸೀಮ್ 42 ಎಸೆತಗಳಲ್ಲಿ 5 ಸಿಕ್ಸ್ ಮತ್ತು 9 ಫೋರ್ಗಳೊಂದಿಗೆ 82 ರನ್ ಬಾರಿಸಿ ಔಟಾದರು, ಆದರೆ ಝೊಹೈಬ್ 38 ರನ್ಗಳ ಕೊಡುಗೆ ನೀಡಿದರು.
UAE vs Bangladesh, 2nd T20I – Sharjah:
Relive the last over drama that unfolded at the iconic Sharjah Cricket Stadium as UAE stunned Bangladesh pic.twitter.com/IrkFvSN1Xz— UAE Cricket Official (@EmiratesCricket) May 19, 2025
ನಂತರ ಆಸೀಫ್ ಖಾನ್ (19 ರನ್) ಮತ್ತು ಹೈದರ್ ಅಲಿ (15 ರನ್) ತಂಡವನ್ನು ಗೆಲುವಿನ ಹಾದಿಯಲ್ಲಿ ಇರಿಸಿದರು. ಕೊನೆಯ ಓವರ್ನಲ್ಲಿ 12 ರನ್ಗಳ ಅಗತ್ಯವಿತ್ತು. ಬಾಂಗ್ಲಾದೇಶದ ತಂಝಿಮ್ ಹಸನ್ ಸಾಕಿಬ್ ಎಸೆದ ಕೊನೆಯ ಓವರ್ನಲ್ಲಿ ವೈಡ್, ಸಿಕ್ಸ್, ಮತ್ತು ನೋ ಬಾಲ್ನಿಂದ ಯುಎಇ ತಂಡವು ರೋಚಕವಾಗಿ 2 ವಿಕೆಟ್ಗಳ ಗೆಲುವು ಸಾಧಿಸಿತು. ಧ್ರುವ್ ಪರಾಶರ್ (11 ರನ್) ಕೊನೆಯ ಕ್ಷಣದಲ್ಲಿ ಭರ್ಜರಿ ಸಿಕ್ಸ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಹೊಸ ಇತಿಹಾಸ ಸೃಷ್ಟಿ
ಈ ಗೆಲುವು ಯುಎಇ ತಂಡಕ್ಕೆ ಟಿ20 ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಬಾಂಗ್ಲಾದೇಶ ವಿರುದ್ಧ ಜಯ ತಂದಿದೆ. ಇದು ಟೆಸ್ಟ್ ರಾಷ್ಟ್ರವೊಂದರ ವಿರುದ್ಧ ಯುಎಇನ ಮೊದಲ ಗೆಲುವಾಗಿದೆ. ಜೊತೆಗೆ, ಐಸಿಸಿ ಶ್ರೇಯಾಂಕದ ಟಾಪ್-10 ತಂಡದ ವಿರುದ್ಧ 200+ ರನ್ಗಳ ಗುರಿಯನ್ನು ಚೇಸ್ ಮಾಡಿ ಯುಎಇ ಐತಿಹಾಸಿಕ ದಾಖಲೆ ಸೃಷ್ಟಿಸಿದೆ.