ಮದುವೆ ರದ್ದಾದ ಬಳಿಕ ಮೊದಲ ಬಾರಿಗೆ ಸ್ಮೃತಿ ಮಂಧಾನ ಮಾತು, ವಿಡಿಯೋ ವೈರಲ್

Web 2025 12 05T224938.208

ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟೈಲಿಶ್ ಬ್ಯಾಟರ್ ಸ್ಮೃತಿ ಮಂಧಾನ ಅವರ ಮದುವೆ ಇದ್ದಕ್ಕಿದ್ದಂತೆ ಮುಂದೂಡಿಕೆಯಾದ ಬಳಿಕ ಸಾಮಾಜಿಕ ಜಾಲತಾಣಗಳು ವದಂತಿಗಳ ಕೇಂದ್ರವಾಗಿ ಮಾರ್ಪಟ್ಟಿದ್ದವು. ನವೆಂಬರ್ 23ಕ್ಕೆ ಸಾಂಗ್ಲಿಯಲ್ಲಿ ನಡೆಯಬೇಕಿದ್ದ ಸ್ಮೃತಿ-ಪಲಾಶ್ ಮುಚ್ಚಲ್ ಮದುವೆ ತಂದೆ ಶ್ರೀನಿವಾಸ್ ಮಂಧಾನ ಅವರ ಆರೋಗ್ಯ ಸಮಸ್ಯೆಯಿಂದ ರದ್ದಾಯಿತು. ಆ ಬಳಿಕ ಸ್ಮೃತಿ ಸಂಪೂರ್ಣವಾಗಿ ಸಾರ್ವಜನಿಕ ದೃಷ್ಟಿಯಿಂದ ದೂರವೇ ಉಳಿದಿದ್ದರು. ಆದರೆ ಇಂದು ಬೆಳಗ್ಗೆ (ಡಿಸೆಂಬರ್ 5) ಸುಮಾರು 12 ದಿನಗಳ ಮೌನವನ್ನು ಮುರಿದು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ದೊಡ್ಡ ರಿಲೀಫ್ ಕೊಟ್ಟಿದ್ದಾರೆ.

ಈ ವಿಡಿಯೋ ಒಂದು ಬ್ರ್ಯಾಂಡ್ ಪ್ರಮೋಷನ್ ಆಗಿದ್ದರೂ, ಸ್ಮೃತಿ ಅವರ ನಗುಮೊಗದ ಸ್ಮೈಲ್ ಮತ್ತು ಆತ್ಮೀಯ ಮಾತುಗಳು ಕೂಡಲೇ ವೈರಲ್ ಆಗಿವೆ. ವಿಶೇಷವೆಂದರೆ, ಇದರಲ್ಲಿ ಅವರು 2025 ಮಹಿಳಾ ವಿಶ್ವಕಪ್ ಫೈನಲ್‌ನ ಟೆನ್ಷನ್ ಅನುಭವವನ್ನು ಹಂಚಿಕೊಂಡಿದ್ದಾರೆ. “ಬ್ಯಾಪ್ಟನ್ ಹಾರ್ಮನ್‌ಪ್ರೀತ್ ಮತ್ತು ಕೋಚ್ ಅಮೋಲ್ ಮುಜುಂಧಾರ್ ಹೇಳಿದ್ದಂತೆ ತಂಡಕ್ಕೆ ಬೇಕಾದ ರನ್ ಗಳಿಸುವುದೇ ನನ್ನ ಗುರಿ ಆಗಿತ್ತು. ಬ್ಯಾಟಿಂಗ್ ಮಾಡುವಾಗ ಏನೂ ಯೋಚಿಸಲಿಲ್ಲ. ಆದರೆ ಫೀಲ್ಡಿಂಗ್ ಮಾಡುವಾಗ ಪ್ರತಿ ಎಸೆತಕ್ಕೂ ಎಲ್ಲ ದೇವರುಗಳನ್ನೂ ನೆನಪಿಸಿಕೊಂಡೆ. ‘ವಿಕೆಟ್ ಬೀಳಲಿ, ವಿಕೆಟ್ ಬೀಳಲಿ’ ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ” ಎಂದು ನಗುತ್ತಾ ಹೇಳಿದ್ದಾರೆ. ಈ ಕ್ಯೂಟ್ ಕಾನ್ಫೆಷನ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಮದುವೆ ಬಗ್ಗೆ ಇನ್ನೂ ಸೈಲೆಂಟ್ ಮದುವೆ ರದ್ದಾದ ದಿನವೇ ಮಂಧಾನ ಕುಟುಂಬ ಸಣ್ಣ ಹೇಳಿಕೆ ಬಿಡುಗಡೆ ಮಾಡಿತ್ತು “ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಇರುವುದರಿಂದ ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.” ತಂದೆ ಶ್ರೀನಿವಾಸ್ ಮಂಧಾನ ಅವರನ್ನು ಮೂರು ದಿನ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಈಗ ಅವರು ಮನೆಗೆ ಮರಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಹೊಸ ಮದುವೆ ದಿನಾಂಕ ಅಥವಾ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ. ಪಲಾಶ್ ಮುಚ್ಚಲ್ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ.

ಇಬ್ಬ್ಬರ ಮೌನದಿಂದಾಗಿ “ಬ್ರೇಕಪ್ ಆಯ್ತಾ?”, “ಮದುವೆ ರದ್ದೇನಾ?”, “ತಂದೆಯ ಆರೋಗ್ಯ ಇನ್ನೂ ಗಂಭೀರವೇ?” ಎಂಬ ವದಂತಿಗಳು ತಾಂಡವವಾಡುತ್ತಿವೆ. ಆದರೆ ಸ್ಮೃತಿ ಇಂದಿನ ವಿಡಿಯೋದಲ್ಲಿ ಸಂಪೂರ್ಣ ಸ್ವಸ್ಥವಾಗಿ, ಸಂತೋಷವಾಗಿ ಕಾಣುತ್ತಿರುವುದು ಅಭಿಮಾನಿಗಳಿಗೆ ದೊಡ್ಡ ಸಮಾಧಾನ.

ಸ್ಮೃತಿ ಮುಂದೆ 2026ರ ಆಸ್ಟ್ರೇಲಿಯಾ ಸೀರೀಸ್‌ಗೆ ತಯಾರಿ ಶುರು ಮಾಡಲಿದ್ದಾರೆ. ಅಲ್ಲಿಯತನಕ ಕುಟುಂಬದ ಆರೋಗ್ಯ ಸಂಪೂರ್ಣ ಚೇತರಿಸಿಕೊಡ್ಡಿ, ಶುಭ ಸಮಯದಲ್ಲಿ ಮದುವೆಯ ಗಂಟು ಕಟ್ಟಲಿ ಎಂಬ ಆಶಯದಲ್ಲಿದ್ದಾರೆ ಅಭಿಮಾನಿಗಳು.

Exit mobile version