ಶ್ರೇಯಾಂಕಾ ಪಾಟೀಲ್‌ ಮಸ್ತ್ ಡ್ಯಾನ್ಸ್‌: ಫ್ಯಾನ್ಸ್‌ ಹೃದಯ ಗೆದ್ದ ಕನ್ನಡತಿ..!

Untitled design 2025 06 22t165208.157
ADVERTISEMENT
ADVERTISEMENT

ಕನ್ನಡತಿ ಕ್ರಿಕೆಟಿಗ ಶ್ರೇಯಾಂಕಾ ಪಾಟೀಲ್‌ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡದಿದ್ದರೂ, ಟೀಮ್ ಇಂಡಿಯಾದ ಪಂದ್ಯಗಳಿಂದ ಹೊರಗಿದ್ದರೂ, ಶ್ರೇಯಾಂಕಾ ತಮ್ಮ ಡಾನ್ಸ್‌ ವಿಡಿಯೋಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕ್ರಿಕೆಟ್ ಮೈದಾನದ ಆಲ್‌ರೌಂಡರ್ ಆಗಿ ಮಿಂಚಿರುವ ಈ ಕನ್ನಡತಿ, ಈಗ ತಮ್ಮ ಡ್ಯಾನ್ಸ್‌ ಮೂಲಕ ಫ್ಯಾನ್ಸ್‌ನನ್ನು ರಂಜಿಸುತ್ತಿದ್ದಾರೆ.

ಶ್ರೇಯಾಂಕಾ ಪಾಟೀಲ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಭಿಮಾನಿಗಳ ಪಾಲಿನ ಫೇವರಿಟ್. ಕೆಲವೇ ವರ್ಷಗಳಲ್ಲಿ ಕ್ರಿಕೆಟ್‌ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದ ಈ ಆಲ್‌ರೌಂಡರ್, ಬ್ಯಾಟಿಂಗ್, ಬೌಲಿಂಗ್, ಮತ್ತು ಫೀಲ್ಡಿಂಗ್‌ನಲ್ಲಿ ತಮ್ಮ ಕೌಶಲ್ಯವನ್ನು ತೋರಿದ್ದಾರೆ. ಆರ್‌ಸಿಬಿ ಕ್ಯಾಂಪ್‌ನಲ್ಲಿ ತಮ್ಮ ಆಟದಿಂದ ಗಮನ ಸೆಳೆದ ಶ್ರೇಯಾಂಕಾ, ಇಂಗ್ಲೆಂಡ್‌ನ ‘ದಿ ಹಂಡ್ರೆಡ್’ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಡಾನ್ಸ್‌ನಲ್ಲಿ ಧೂಳೆಬ್ಬಿಸಿದ ಕನ್ನಡತಿ

ಶ್ರೇಯಾಂಕಾ ಆನ್‌-ಫೀಲ್ಡ್‌ ಪರಾಕ್ರಮಕ್ಕಿಂತ ಆಫ್‌-ಫೀಲ್ಡ್‌ ಡಾನ್ಸ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಶ್ರೇಯಾಂಕಾ ಹಂಚಿಕೊಂಡ ‘Baby Calm Down’ ಹಾಡಿಗೆ ಆರ್‌ಸಿಬಿ ಕ್ಯಾಂಪ್‌ನಲ್ಲಿ ಹೆಜ್ಜೆಹಾಕಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಒಂದೇ ಗಂಟೆಯಲ್ಲಿ 1.3 ಮಿಲಿಯನ್‌ ವೀಕ್ಷಣೆಗಳನ್ನು ಪಡೆದ ಈ ವಿಡಿಯೋ, ಈಗ 8.6 ಮಿಲಿಯನ್‌ ವೀಕ್ಷಣೆಗಳನ್ನು ಕಂಡಿದೆ. ಶ್ರೇಯಾಂಕಾ ಯಾವ ಡಾನ್ಸ್‌ ವಿಡಿಯೋ ಅಪ್‌ಲೋಡ್‌ ಮಾಡಿದರೂ ಮಿಲಿಯನ್‌ಗಟ್ಟಲೇ ವೀಕ್ಷಣೆಗಳು ಬರುವುದು ಖಾತ್ರಿ.

ಇದಕ್ಕೂ ಮೊದಲು, ಭಾರತ ತಂಡದ ಸಹ ಆಟಗಾರರೊಂದಿಗೆ ಒಂದು ಹಾಡಿಗೆ ಡಾನ್ಸ್‌ ಮಾಡಿದ ವಿಡಿಯೋ 29.6 ಮಿಲಿಯನ್‌ ವೀಕ್ಷಣೆಗಳನ್ನು ಪಡೆಯಿತು. ಗೆಳತಿ ಕನ್ನಿಕಾ ಅಹುಜಾ ಜೊತೆ ‘ಲುಟ್‌ ಪುಟ್‌ ಗಯಾ’ ಹಾಡಿಗೆ ಹೆಜ್ಜೆಹಾಕಿದ ರೀಲ್ಸ್‌ ಕೂಡ ಭಾರಿ ವೈರಲ್‌ ಆಗಿತ್ತು. ಟ್ರೆಡಿಶನಲ್‌ ಡ್ರೆಸ್‌ನಲ್ಲಿ ‘Uyi Amma’ ಹಾಡಿಗೆ ಮಾಡಿದ ಡಾನ್ಸ್‌ ವಿಡಿಯೋ ಫ್ಯಾನ್ಸ್‌ ಮನಗೆದ್ದಿತ್ತು. ಇದೇ ರೀತಿ, ರ‍್ಯಾಪರ್‌ ಚಂದನ್‌ ಶೆಟ್ಟಿಯ ‘ಟೈಮ್‌ ಬರುತ್ತೆ’ ಕನ್ನಡ ಹಾಡಿಗೆ ಶ್ರೇಯಾಂಕಾ ಹಾಕಿದ ಸ್ಟೆಪ್ಸ್‌ 27.8 ಮಿಲಿಯನ್‌ ವೀಕ್ಷಣೆಗಳನ್ನು ಕಂಡಿವೆ.

ಇನ್‌ಸ್ಟಾಗ್ರಾಮ್‌ನಲ್ಲಿ ಶ್ರೇಯಾಂಕಾ ಪಾಟೀಲ್‌ಗೆ 4.2 ಮಿಲಿಯನ್‌ ಫಾಲೋವರ್ಸ್‌ ಇದ್ದಾರೆ. ಆದರೆ, ಡಾನ್ಸ್‌ ವಿಡಿಯೋಗಳಿಗೆ ಬರುವ ವೀಕ್ಷಣೆಗಳು ಡಬ್ಬಲ್‌, ಟ್ರಿಪಲ್‌ ಆಗಿರುತ್ತವೆ. ಇದು ಶ್ರೇಯಾಂಕಾ ಡಾನ್ಸ್‌ಗೆ ಇರುವ ವಿಶೇಷ ಫ್ಯಾನ್‌ಬೇಸ್‌ನನ್ನು ತೋರಿಸುತ್ತದೆ. ಲೈಕ್‌ಗಳು, ಕಾಮೆಂಟ್‌ಗಳ ಸುರಿಮಳೆಯೊಂದಿಗೆ ಶ್ರೇಯಾಂಕಾ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ ಸೆಟ್‌ ಮಾಡುತ್ತಿವೆ.

Exit mobile version