ನವದೆಹಲಿ: ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಹಾಗೂ ಪತ್ನಿ ಆರತಿ ಅಹ್ಲಾವತ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಯೊಂದು ಈ ಹಿಂದೊಮ್ಮೆ ಹರಿದಾಡಿತ್ತು. ಈ ಸುದ್ದಿ ಬೆನ್ನಲ್ಲೇ ಇಬ್ಬರು ಪತ್ಯೇಕವಾಗಿ ವಾಸಿಸುತ್ತಿರುವ ವಿಚಾರ ಕೂಡ ಬಹಿರಂಗವಾಗಿತ್ತು. ಅಲ್ಲದೆ ಸೆಹ್ವಾಗ್ ವೈವಾಹಿಕ ಜೀವನಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿಗಳು ಕೂಡ ಕೇಳಿ ಬಂದಿದ್ದವು. ಆದರೆ ಇದಕ್ಕೇನು ಕಾರಣ ಎಂಬುದು ಮಾತ್ರ ಬಹಿರಂಗವಾಗಿರಲಿಲ್ಲ.
ವೀರೇಂದ್ರ ಸೆಹ್ವಾಗ್ ಮತ್ತು ಮಿಥುನ್ ಮನ್ಹಾಸ್ ದೀರ್ಘಕಾಲದ ಸ್ನೇಹಿತರು ಮತ್ತು ಒಂದೇ ಸಮಯದಲ್ಲಿ ದೆಹಲಿ ತಂಡದಲ್ಲಿ ಜೊತೆಯಾಗಿ ಆಡಿದ್ದವರು. ಆದರೆ ಇತ್ತೀಚೆಗೆ, ಸೆಹ್ವಾಗ್ ಪತ್ನಿ ಆರತಿ ಮತ್ತು ಮಿಥುನ್ ಮನ್ಹಾಸ್ ಜೊತೆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಗಳು ಹರಿದಾಡಿದ ನಂತರ, ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಇದೇ ಕಾರಣದಿಂದಾಗಿ ಸೆಹ್ವಾಗ್ ಪತ್ನಿಯಿಂದ ದೂರವಾಗಿದ್ದಾರೆ ಎಂಬ ಆರೋಪಗಳು ಹೊರಹೊಮ್ಮಿವೆ.
ಅವರು 2009ರಲ್ಲಿ ನಡೆದ ಮುರಳಿ ವಿಜಯ್ ಮತ್ತು ದಿನೇಶ್ ಕಾರ್ತಿಕ್ ಅವರ ವಿವಾದವನ್ನು ಉಲ್ಲೇಖಿಸಿ, ಕ್ರಿಕೆಟ್ ಲೋಕದಲ್ಲಿ ಇದೇ ರೀತಿಯ ಪರಿಸ್ಥಿತಿ ಮತ್ತೆ ಸಂಭವಿಸಬಹುದು ಎಂದು ಸೂಚಿಸಿದ್ದರು. ದಿನೇಶ್ ಕಾರ್ತಿಕ್ ಅವರ ಮಾಜಿ ಪತ್ನಿಯೊಂದಿಗೆ ಮುರಳಿ ವಿಜಯ್‌ಗೆ ಇದ್ದ ಅಕ್ರಮ ಸಂಬಂಧವೇ ಅವರ ಲಗ್ನವಿಚ್ಛೇದನಕ್ಕೆ ಕಾರಣವಾಗಿತ್ತು.
ವೀರೇಂದ್ರ ಸೆಹ್ವಾಗ್ ಮತ್ತು ಆರತಿ 2004ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿವಾಸದಲ್ಲಿ ವಿವಾಹವಾಗಿತ್ತು.ಆದರೆ, 20 ವರ್ಷಗಳ ದಾಂಪತ್ಯದ ನಂತರ ಇತ್ತೀಚೆಗೆ ಅವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಸೆಹ್ವಾಗ್ ಮತ್ತು ಆರತಿ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ. ಸೆಹ್ವಾಗ್ ಅವರ ದೀಪಾವಳಿ ಆಚರಣೆಯ ಫೋಟೋದಲ್ಲಿ ತಾಯಿ ಮತ್ತು ಮಕ್ಕಳು ಇದ್ದರೂ, ಪತ್ನಿ ಆರತಿಯ ಫೋಟೋ ಇರಲಿಲ್ಲ.
2019ರಲ್ಲಿ, ಆರತಿ ಅಹ್ಲಾವತ್ ತಮ್ಮ ಸಹಿಯ ನಕಲಿ ಮಾಡಿ ತಮ್ಮ ಅರಿವಿಲ್ಲದೆ 4.5 ಕೋಟಿ ರೂಪಾಯಿ ಸಾಲ ತೆಗೆದುಕೊಂಡಿದ್ದಾರೆ ಎಂಬ ಆರೋಪಿಸಿ ತಮ್ಮ ವ್ಯಾಪಾರ ಪಾಲುದಾರರ ವಿರುದ್ಧ ವಂಚನೆ ದೂರು ದಾಖಲಿಸಿದ್ದರು.
ವೀರೇಂದ್ರ ಸೆಹ್ವಾಗ್ 1999ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 2015ರಲ್ಲಿ ನಿವೃತ್ತಿ ಘೋಷಿಸಿದ ಅವರು 104 ಟೆಸ್ಟ್, 251 ಏಕದಿನ ಮತ್ತು 19 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ 17,000 ರನ್ನಿಗೂ ಹೆಚ್ಚು ರನ್ ಗಳಿಸಿದ್ದಾರೆ. ನಿವೃತ್ತಿಯ ನಂತರ ಅವರು ರಾಷ್ಟ್ರೀಯ ಡೋಪಿಂಗ್ ವಿರೋಧಿ ಏಜೆನ್ಸಿ ಮತ್ತು ವಿವಿಧ ಟೆಲಿವಿಷನ್ ಚಾನೆಲ್‌ಗಳಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ.