ಭಾರತೀಯ ಪ್ರೀಮಿಯರ್ ಲೀಗ್ (IPL 2026) ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ವಿಶೇಷ ಗೌರವ ಸಂದರ್ಭವಾಗಿದೆ. ಕಳೆದ ಸೀಸನ್‌ನಲ್ಲಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡವು ಈ ಬಾರಿ ಚಿನ್ನದ ಬಣ್ಣದ ಐಪಿಎಲ್ ಲೋಗೋ (Golden IPL Logo) ಧರಿಸಿ ಕಣಕ್ಕಿಳಿಯಲಿದೆ. ಇನ್ನುಳಿದ 9 ತಂಡಗಳು ಸಾಧಾರಣ ಲೋಗೋದೊಂದಿಗೆ ಆಡಲಿವೆ.
ಚಾಂಪಿಯನ್ ಗೌರವದ ಸಂಪ್ರದಾಯ ಐಪಿಎಲ್‌ನಲ್ಲಿ ಹಿಂದಿನ ಸೀಸನ್‌ನ ಚಾಂಪಿಯನ್ ತಂಡವು ಮುಂದಿನ ಸೀಸನ್‌ನಲ್ಲಿ ಚಿನ್ನದ ಲೋಗೋ ಧರಿಸುವ ಸಂಪ್ರದಾಯವನ್ನು BCCI ಅನುಸರಿಸುತ್ತಿದೆ. ಇದು ತಂಡದ ಯಶಸ್ಸನ್ನು ಗೌರವಿಸುವ ರೀತಿಯಾಗಿದೆ. ಹಾಗಾಗಿ ಈ ಬಾರಿ ಆರ್‌ಸಿಬಿ ತಂಡದ ಜೆರ್ಸಿಯ ಮೇಲೆ ಗೋಲ್ಡನ್ ಐಪಿಎಲ್ ಲೋಗೋ ಕಾಣಿಸಿಕೊಳ್ಳಲಿದೆ.

ಚಿನ್ನದ ನಕ್ಷತ್ರ ಮೊದಲ ಟ್ರೋಫಿಯ ಸಂಕೇತ ಆರ್‌ಸಿಬಿ ಜೆರ್ಸಿಯ ಮೇಲೆ ಒಂದು ಚಿನ್ನದ ನಕ್ಷತ್ರ (Gold Star) ಸೇರಿಸಲಾಗಿದೆ. ಇದು ತಂಡದ ಮೊದಲ ಐಪಿಎಲ್ ಟ್ರೋಫಿ ಗೆಲುವನ್ನು ಸೂಚಿಸುತ್ತದೆ. ಅಂದರೆ ಇದೇ ಮೊದಲ ಬಾರಿಗೆ ಆರ್‌ಸಿಬಿ ಚಾಂಪಿಯನ್ ಬ್ಯಾಡ್ಜ್ ಮತ್ತು ಸ್ಟಾರ್‌ನೊಂದಿಗೆ ಕಣಕ್ಕಿಳಿಯುತ್ತಿದೆ. ಇದು ಬೆಂಗಳೂರು ಅಭಿಮಾನಿಗಳಿಗೆ ವಿಶೇಷ ಸಂತೋಷದ ಸಂಗತಿಯಾಗಿದೆ.
ಕಳೆದ ಸೀಸನ್‌ನ ಐತಿಹಾಸಿಕ ಗೆಲುವು ಕಳೆದ ವರ್ಷ ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ಅನ್ನು ಸೋಲಿಸಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿತು. 18 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿದ ಈ ಗೆಲುವು ಆರ್‌ಸಿಬಿ ಅಭಿಮಾನಿಗಳಿಗೆ ಮರೆಯಲಾಗದ ಕ್ಷಣವಾಗಿದೆ. ಈ ಐತಿಹಾಸಿಕ ಗೆಲುವಿನ ಸಂಭ್ರಮವನ್ನು ಗೌರವಿಸಲು ಈ ಬಾರಿ ‘ಗೋಲ್ಡನ್ ಜೆರ್ಸಿ’ ವಿನ್ಯಾಸಗೊಳಿಸಲಾಗಿದೆ.
ಐಪಿಎಲ್ 2026 ವೇಳಾಪಟ್ಟಿ ಮತ್ತು ಉದ್ಘಾಟನಾ ಪಂದ್ಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಐಪಿಎಲ್ 2026 ಮಾರ್ಚ್ 28ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿವೆ. ಚಿನ್ನದ ಜೆರ್ಸಿಯಲ್ಲಿ ಆಡುವ ಆರ್‌ಸಿಬಿಗೆ ಚಿನ್ನಸ್ವಾಮಿಯಲ್ಲಿ ಭರ್ಜರಿ ಸ್ವಾಗತ ಸಿಗುವ ನಿರೀಕ್ಷೆಯಿದೆ.
ಐಪಿಎಲ್ 2026ರಲ್ಲಿ ಆರ್‌ಸಿಬಿ ತಂಡವು ಚಾಂಪಿಯನ್ ಗೌರವದೊಂದಿಗೆ ಬ್ಯಾಕ್-ಟು-ಬ್ಯಾಕ್ ಟೈಟಲ್ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಅಭಿಮಾನಿಗಳಿಗೆ ಇದು ರೋಮಾಂಚಕ ಸೀಸನ್ ಆಗಲಿದೆ.





