IPL 2026: RCB ತಂಡಕ್ಕೆ ಹೊಸದಾಗಿ ಯಾರೆಲ್ಲ ಬಂದ್ರು..?

BeFunky collage (3)

ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) IPL 2026 ಮಿನಿ ಆಕ್ಷನ್‌ನಲ್ಲಿ ಕೇವಲ 16.4 ಕೋಟಿ ಪರ್ಸ್‌ನೊಂದಿಗೆ 8 ಸ್ಲಾಟ್‌ಗಳನ್ನು ತುಂಬಿಸಿ, ಪರ್ಫೆಕ್ಟ್ ಬ್ಯಾಲೆನ್ಸ್‌ಡ್ ತಂಡವನ್ನು ಕಟ್ಟಿದೆ. ಪಕ್ಕಾ ಲೆಕ್ಕಾಚಾರದೊಂದಿಗೆ ಟಾರ್ಗೆಟ್ ಆಟಗಾರರನ್ನು ಬೇಟೆಯಾಡಿದ ಆರ್‌ಸಿಬಿ ಮ್ಯಾನೇಜ್‌ಮೆಂಟ್, ಸರ್‌ಪ್ರೈಸ್ ಪಿಕ್‌ಗಳ ಮೂಲಕ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿತು. ತಾಳ್ಮೆಯಿಂದ ಕಾಯ್ದು ‘ಚೀಪ್ ಅಂಡ್ ಬೆಸ್ಟ್’ ಖರೀದಿಗಳನ್ನು ಮಾಡಿದ ರೆಡ್ ಆರ್ಮಿ, ಚಿನ್ನಸ್ವಾಮಿ ಮೈದಾನಕ್ಕೆ ಸೂಕ್ತವಾದ ಸ್ಪೋಟಕ ಆಟಗಾರರನ್ನು ಸೇರಿಸಿಕೊಂಡಿದೆ.

ವೆಂಕಟೇಶ್ ಅಯ್ಯರ್ : ಬಿಗ್ ಫೈಟ್ ನಂತರ ರೆಡ್ ಆರ್ಮಿಗೆ, ಕಳೆದ ಮೆಗಾ ಆಕ್ಷನ್‌ನಲ್ಲಿ ವೆಂಕಟೇಶ್ ಅಯ್ಯರ್‌ಗೆ 23.75 ಕೋಟಿ ಬಿಡ್ ಮಾಡಿ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದ ಆರ್‌ಸಿಬಿ, ಈ ಬಾರಿ ಯಶಸ್ವಿಯಾಯಿತು. ಕೆಕೆಆರ್‌ ಜೊತೆ ತೀವ್ರ ಬಿಡ್ಡಿಂಗ್ ವಾರ್ ನಡೆಸಿದ ನಂತರ ಅಂತಿಮವಾಗಿ 7 ಕೋಟಿಗೆ ಈ ಆಲ್‌ರೌಂಡರ್‌ನ್ನು ಖರೀದಿಸಿತು. ಚಿನ್ನಸ್ವಾಮಿಯ ಸಣ್ಣ ಮೈದಾನದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಬಲ್ಲ ವೆಂಕಟೇಶ್, ಮಧ್ಯಮ ಕ್ರಮಾಂಕದಲ್ಲಿ ಬಲವನ್ನು ತುಂಬಲಿದ್ದಾರೆ. ಜೊತೆಗೆ 6ನೇ ಬೌಲಿಂಗ್ ಆಯ್ಕೆಯಾಗಿ ತಂಡಕ್ಕೆ ನೆರವಾಗಬಲ್ಲರು. ಕ್ಯಾಪ್ಟನ್ ರಜತ್ ಪಾಟಿದಾರ್ ಜೊತೆ ಮಧ್ಯಪ್ರದೇಶದಿಂದ ಬಂದಿರುವ ಅಯ್ಯರ್, ಡ್ರೆಸ್ಸಿಂಗ್ ರೂಮ್‌ಗೂ ಲೀಡರ್‌ಶಿಪ್ ಗುಣವನ್ನು ತರುತ್ತಾರೆ.

ಜೇಕಬ್ ಡಫಿ:  ಬಾರ್ಗೇನ್ ಖರೀದಿ, ಜೋಷ್ ಹೇಜಲ್‌ವುಡ್‌ಗೆ ಪರ್ಫೆಕ್ಟ್ ಬ್ಯಾಕ್‌ಅಪ್ ಹುಡುಕುತ್ತಿದ್ದ ಆರ್‌ಸಿಬಿ, ನ್ಯೂಜಿಲೆಂಡ್‌ನ ಪೇಸರ್ ಜೇಕಬ್ ಡಫಿಯನ್ನು ಕೇವಲ 2 ಕೋಟಿಗೆ ಬುಟ್ಟಿಗೆ ಹಾಕಿಕೊಂಡಿತು. 2025ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿರುವ ಡಫಿ (72 ವಿಕೆಟ್‌ಗಳು), ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಪವರ್‌ಫುಲ್ ಸ್ವಿಂಗ್ ಬೌಲಿಂಗ್ ಮಾಡಬಲ್ಲರು. ಆರ್‌ಸಿಬಿ ಡೈರೆಕ್ಟರ್ ಆಫ್ ಕ್ರಿಕೆಟ್ ಮೋ ಬಾಬಟ್ ಅವರು ಇದನ್ನು ‘ಬಾರ್ಗೇನ್’ ಎಂದು ಕರೆದಿದ್ದಾರೆ.

ಮಂಗೇಶ್ ಯಾದವ್:  ಲೆಫ್ಟ್ ಆರ್ಮ್ ಪೇಸ್ ಬಲ, ಮಧ್ಯಪ್ರದೇಶದ ಯುವ ಆಲ್‌ರೌಂಡರ್ ಮಂಗೇಶ್ ಯಾದವ್‌ಗೆ ಸನ್‌ರೈಸರ್ಸ್ ಹೈದರಾಬಾದ್ ಜೊತೆ ಬಿಡ್ಡಿಂಗ್ ವಾರ್ ನಡೆಸಿ 5.20 ಕೋಟಿಗೆ ಖರೀದಿಸಿತು. 23 ವರ್ಷದ ಲೆಫ್ಟ್ ಆರ್ಮ್ ಪೇಸರ್, ಎಂಪಿ ಪ್ರೀಮಿಯರ್ ಲೀಗ್‌ನಲ್ಲಿ 6 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಯಶ್ ದಯಾಳ್‌ಗೆ ಬ್ಯಾಕ್‌ಅಪ್ ಆಗಿ ಸೇರ್ಪಡೆಯಾಗುತ್ತಿರುವ ಮಂಗೇಶ್, ಮಧ್ಯಪ್ರದೇಶದಿಂದ ರಜತ್ ಪಾಟಿದಾರ್ ಜೊತೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಲಿದ್ದಾರೆ.

ಸರ್‌ಪ್ರೈಸ್ ಪಿಕ್‌ಗಳು:

ಕೊನೆಯ ಹಂತದ ಯುವ ಖರೀದಿಗಳು: ಆಕ್ಷನ್‌ನ ಅಂತಿಮ ಹಂತದಲ್ಲಿ ಆರ್‌ಸಿಬಿ ಯುವ ಪ್ರತಿಭೆಗಳ ಮೇಲೆ ಬಿಡ್ ಮಾಡಿತು:

ಒಟ್ಟು 8 ಆಟಗಾರರನ್ನು ಸೇರಿಸಿಕೊಂಡ ಆರ್‌ಸಿಬಿ, ಪರ್ಸ್‌ನಲ್ಲಿ 25 ಲಕ್ಷ ಬಾಕಿ ಉಳಿಸಿಕೊಂಡಿದೆ. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಜೋಷ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಸೇರಿದಂತೆ ಟೈಟಲ್ ಗೆದ್ದ ಕೋರ್ ತಂಡವನ್ನು ಉಳಿಸಿಕೊಂಡು ಬಲಪಡಿಸಿದ ಆರ್‌ಸಿಬಿ, IPL 2026ರಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಡಿಫೆಂಡ್ ಮಾಡಲು ಸಿದ್ಧವಾಗಿದೆ. ಹೊಸ ಆಟಗಾರರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುತ್ತಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Exit mobile version