ಟೀಮ್ ಇಂಡಿಯಾದ ಒನ್ ಡೇ ಕ್ಯಾಪ್ಟನ್ ರೋಹಿತ್ ಶರ್ಮಾ ತಮ್ಮ ಕ್ರಿಕೆಟ್ ಜಗತ್ತಿನ ಜೊತೆಗೆ ಐಷಾರಾಮಿ ಜೀವನದಿಂದಲೂ ಸದ್ದು ಮಾಡುತ್ತಿದ್ದಾರೆ. ಇಂಡಿಯನ್ ಕ್ರಿಕೆಟಿಗರ ಜೀವನವು ಕೇವಲ ಕ್ರೀಡಾಂಗಣದಲ್ಲಿ ಮಾತ್ರವಲ್ಲ, ಐಷಾರಾಮಿ ಜಗತ್ತಿನಲ್ಲೂ ರಾಯಲ್ ಆಗಿದೆ. ದುಬಾರಿ ವಾಚ್‌ಗಳಿಂದ ಹಿಡಿದು ಕೋಟಿ ಬೆಲೆಯ ಕಾರುಗಳವರೆಗೆ, ರೋಹಿತ್ ಶರ್ಮಾ ಅವರ ಜೀವನ ಶೈಲಿ ಎಲ್ಲರ ಗಮನ ಸೆಳೆಯುತ್ತದೆ. ಇದೀಗ, ರೋಹಿತ್ ಶರ್ಮಾ ಅವರ ಗ್ಯಾರೇಜ್‌ಗೆ ಹೊಸ ಅತಿಥಿಯ ಆಗಮನವಾಗಿದೆ.
ರೋಹಿತ್ ಗ್ಯಾರೇಜ್‌ಗೆ ಲ್ಯಾಂಬೋರ್ಗಿನಿ ಉರುಸ್
IPL ಮುಗಿದ ಬಳಿಕ ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ರೋಹಿತ್ ಶರ್ಮಾ, ಕುಟುಂಬದೊಂದಿಗೆ ಇಂಗ್ಲೆಂಡ್‌ನಲ್ಲಿ ಕೆಲವು ವಾರಗಳನ್ನು ಕಳೆದು ಭಾರತಕ್ಕೆ ವಾಪಸ್ಸಾಗಿದ್ದಾರೆ. ಮನೆಗೆ ಬಂದ ಬೆನ್ನಲ್ಲೇ, ರೋಹಿತ್ ತಮ್ಮ ಗ್ಯಾರೇಜ್‌ಗೆ ಐಷಾರಾಮಿ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಸೇರಿಸಿದ್ದಾರೆ.
ಕೇಸರಿ ಬಣ್ಣದ ಈ ಕಾರು ಅತ್ಯಾಧುನಿಕ ವೈಶಿಷ್ಟ್ಯಗಳಿಂದ ಕೂಡಿದೆ. 4.0 ಲೀಟರ್ ಟ್ವಿನ್-ಟರ್ಬೋ V8 ಪೆಟ್ರೋಲ್ ಇಂಜಿನ್, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, ಆಲ್-ವೀಲ್ ಡ್ರೈವ್ ಸಿಸ್ಟಮ್‌ನೊಂದಿಗೆ 657 ಹಾರ್ಸ್‌ಪವರ್ ಶಕ್ತಿಯನ್ನು ಹೊಂದಿದೆ. ಈ ಕಾರಿನ ಟಾಪ್ ಸ್ಪೀಡ್ ಗಂಟೆಗೆ 305 ಕಿ.ಮೀ. ಒಟ್ಟು ಏಳು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರುವ ಈ ಕಾರಿನ ಬೆಲೆ ಕೋಟಿಗಳ ಲೆಕ್ಕದಲ್ಲಿದೆ.
ರೋಹಿತ್‌ನ ಹೊಸ ಲ್ಯಾಂಬೋರ್ಗಿನಿಯ ನಂಬರ್ ಪ್ಲೇಟ್ ‘3015’ ಎಲ್ಲರ ಗಮನ ಸೆಳೆದಿದೆ. ಈ ಸಂಖ್ಯೆಯ ಹಿಂದಿನ ಕಥೆ ಇಂಟರೆಸ್ಟಿಂಗ್ ಆಗಿದೆ. ಮೊದಲ ಎರಡು ಅಂಕಿಗಳು (30) ರೋಹಿತ್‌ರ ಮಗಳ ಹುಟ್ಟಿದ ದಿನಾಂಕವನ್ನು ಸೂಚಿಸಿದರೆ, ಕೊನೆಯ ಎರಡು ಅಂಕಿಗಳು (15) ಅವರ ಮಗನ ಹುಟ್ಟಿದ ದಿನಾಂಕವನ್ನು ಸೂಚಿಸುತ್ತವೆ. ಈ ಎರಡೂ ಸಂಖ್ಯೆಗಳನ್ನು ಕೂಡಿಸಿದರೆ 30+15=45 ಆಗುತ್ತದೆ, ಇದು ರೋಹಿತ್ ಅವರ ಜೆರ್ಸಿ ನಂಬರ್ ಆಗಿದೆ. ಈ ಆಯ್ಕೆಯಿಂದ ಫ್ಯಾನ್ಸ್ ಫಿದಾ ಆಗಿದ್ದಾರೆ.
ರೋಹಿತ್‌ಗೆ ಕಾರುಗಳ ಬಗ್ಗೆ ವಿಶೇಷ ಕ್ರೇಜ್ ಇದೆ. ಈ ಹಿಂದೆಯೂ ಲ್ಯಾಂಬೋರ್ಗಿನಿ ಕಾರನ್ನು ಹೊಂದಿದ್ದ ರೋಹಿತ್, ಕಳೆದ ಮೇ ತಿಂಗಳಲ್ಲಿ ಅದನ್ನು ಸ್ಪರ್ಧೆಯ ವಿಜೇತರಿಗೆ ಬಹುಮಾನವಾಗಿ ನೀಡಿದ್ದರು. ಆ ಕಾರಿನ ನಂಬರ್ 264, ರೋಹಿತ್ ಅವರ ಏಕದಿನ ಕ್ರಿಕೆಟ್‌ನ ಹೈಯೆಸ್ಟ್ ಸ್ಕೋರ್‌ಗೆ ಸಂಬಂಧಿಸಿದೆ. ಇದರ ಜೊತೆಗೆ, ರೋಹಿತ್ ಅವರ ಗ್ಯಾರೇಜ್‌ನಲ್ಲಿ ರೇಂಜ್ ರೋವರ್ (ನಂಬರ್ 264), ಮರ್ಸಿಡಿಸ್ ಬೆನ್ಜ್ ಎಸ್ ಕ್ಲಾಸ್, ಮರ್ಸಿಡಿಸ್ ಜಿಎಲ್ಎಸ್ 400 ಡಿ, ಬಿಎಂಡಬ್ಲ್ಯೂ ಎಂ5, ರೇಂಜ್ ರೋವರ್ ಎಚ್‌ಎಸ್‌ಇ ಎಲ್‌ಡಬ್ಲ್ಯೂಬಿ ಕಾರುಗಳಿವೆ. ಒಟ್ಟು ಕಾರುಗಳ ಮೌಲ್ಯ 30 ಕೋಟಿಗೂ ಅಧಿಕ ಎಂದು ಮೂಲಗಳು ತಿಳಿಸಿವೆ.