IPL 2025: RCB vs CSK ಚೆಪಾಕ್‌ನಲ್ಲಿ ಮುಖಾಮುಖಿ

Film (90)

ಐಪಿಎಲ್‌ನಲ್ಲಿಂದು ಚೆನ್ನೈನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಮುಖಾಮುಖಿಯಾಗುತ್ತಿವೆ. ಐಪಿಎಲ್​2025ರ ಪಂದ್ಯಾವಳಿಗಳಲ್ಲಿ ಮೊದಲ ಬಾರಿಗೆ ಬದ್ಧ ವೈರಿಗಳಾದ ಚೆನ್ನೈ ಮತ್ತು ಬೆಂಗಳೂರು ತಂಡಗಳು ಇಂದು ಚೆನ್ನೈನ ಚಿದಂಬರಂ (ಚೆಪಾಕ್) ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಸಂಜೆ 7:30ಕ್ಕೆ ಆರಂಭವಾಗಲಿರುವ ಈ ಹೈ-ವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ತಂಡಗಳ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಚಿದಂಬರಂ ಮೈದಾನದ ಪಿಚ್​ನ್ನು ಹಿಂದಿನ ಪಂದ್ಯಗಳಿಗೆ ಹೋಲಿಸಿ ನೋಡಿದರೆ ಇದು ಬೌಲರ್ ಸ್ನೇಹಿ ಪಿಚ್​. ಬೌಲರ್​​ಗಳು ಹೆಚ್ಚು ಮೇಲುಗೈ ಸಾಧಿಸಿದ ಉದಾಹರಣೆಗಳು ಈ ಪಿಚ್​ನಲ್ಲಿ ಕಂಡು ಬಂದಿವೆ. ಫೇಸರ್​​ಗಳು ಅಪಾಯಕಾರಿಯಾಗುವ ಸಾಧ್ಯತೆ ಇದೆ. ಈ ಪಿಚ್ ಬ್ಯಾಟರ್ಸ್​ಗಳಿಗೂ ಕೂಡ ಅಷ್ಟೇ ಅನಕೂಲಕರವಾಗಿದೆ. ಸ್ಪಿನ್ನರ್​ಗಳು ಕಣಕ್ಕಿಳಿದಾಗ ಮತ್ತು ಎರಡನೇ ಇನ್ನಿಂಗ್ಸ್​ ಆಡುವಾಗ ಪಿಚ್​​ನ ಮೇಲ್ಮೈ ಬದಲಾವಣೆಯಾಗಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್​ಗೆ ಎರಡಕ್ಕೂ ಅನುಕೂಲಕರವಾಗುವ ಸಮತೋಲನವನ್ನು ಈ ಪಿಚ್ ಹೊಂದಿದೆ.

ಚೆನ್ನೈ ಹವಾಮಾನ ಮುನ್ಸೂಚನೆ:

ಚೆನ್ನೈನಲ್ಲಿ ಇಂದು ಪಂದ್ಯದ ದಿನ ಮಳೆಯಾಗುವ ಸಾಧ್ಯತೆ ತೀರಾ ಕಡಿಮೆ ಇದೆ. ಹವಾಮಾನ ತಜ್ಞರ ಪ್ರಕಾರ, ಪಂದ್ಯಕ್ಕೆ ಅಡ್ಡಿಯಾಗುವ ವಾತಾವರಣದ ಸಾಧ್ಯತೆ ಕೇವಲ 5% ಮಾತ್ರ. ಇಂದು ಚೆನ್ನೈನ ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ ನಿಂದ 32 ಡಿಗ್ರಿ ಸೆಲ್ಸಿಯಸ್ ಒಳಗೆ ಇರಲಿದ್ದು, ಪಂದ್ಯಕ್ಕೆ ಸಂಪೂರ್ಣ ಅನುಕೂಲಕರ ವಾತಾವರಣವಿದೆ. ಹವಾಮಾನ ಇಲಾಖೆಯ ತಜ್ಞರು “ಮಳೆಯಿಂದ ಪಂದ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ” ಎಂದು ದೃಢಪಡಿಸಿದ್ದಾರೆ.

ಪಿಚ್ ರಿಪೋರ್ಟ್:

ಚೆನ್ನೈನ ಚೆಪಾಕ್ ಕ್ರೀಡಾಂಗಣದ ಸ್ಪಿನ್ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ನಿರೀಕ್ಷಿಸುವಂತಿಲ್ಲ. ಇಲ್ಲಿ ಸ್ಪಿನ್ ಬಲರ್‌ಗಳೇ ನಿರ್ಣಾಯಕ. ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸುವ ತಂಡದ ಗೆಲುವು ಸುಲಭವಾಗಲಿದೆ.

 

Exit mobile version