ಭಾರತದ ಮೊದಲ ಪ್ರೊ ಎಲೈಟ್ ಸ್ಟೇಜ್ ಸೈಕ್ಲಿಂಗ್ ರೇಸ್‌ಗೆ ಪುಣೆ ಸಜ್ಜು

Untitled design 2025 10 30t171009.756

ಪುಣೆ, ಅಕ್ಟೋಬರ್ 29, 2025: ಭಾರತದ ಮೊದಲ ಪ್ರೊ ಎಲೈಟ್ ಸ್ಟೇಜ್ ರೇಸ್ ಯುಸಿಐ 2.2 ಅಂತರರಾಷ್ಟ್ರೀಯ ಸೈಕ್ಲಿಂಗ್ ಈವೆಂಟ್ ಪುಣೆ ಗ್ರ್ಯಾಂಡ್ ಟೂರ್ 2026 ಇಂದು ತನ್ನ ಅಧಿಕೃತ ಚಿಹ್ನೆ ಮತ್ತು ಮಸ್ಕಾಟ್‌ ಅನ್ನು ಘೋಷಿಸಿದೆ.

ಜನವರಿ 19 ರಿಂದ 23, 2026ರವರೆಗೆ ನಡೆಯಲಿರುವ ಈ ಬಹು ಹಂತದ, ಬಹು ದಿನಗಳ ರಸ್ತೆ ರೇಸ್‌ನಲ್ಲಿ ಭಾಗವಹಿಸುವ ಅಂತರರಾಷ್ಟ್ರೀಯ ಆಟಗಾರರಿಗೆ ಪ್ರಮುಖ ಪಾಯಿಂಟ್‌ಗಳನ್ನು ಗಳಿಸುವ ಅವಕಾಶ ಪಡೆಯಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮಾನ್ಯ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ ಮತ್ತು ಮಾನ್ಯ ಉಪಮುಖ್ಯಮಂತ್ರಿ ಹಾಗೂ ಪುಣೆ ಸಂರಕ್ಷಣಾ ಸಚಿವರಾದ ಶ್ರೀ ಅಜಿತ್ ಪವಾರ್ ಉಪಸ್ಥಿತರಿದ್ದರು.

ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (CFI), ಕ್ರೀಡೆ ಮತ್ತು ಯುವ ಕಲ್ಯಾಣ ಇಲಾಖೆ (ಮಹಾರಾಷ್ಟ್ರ) ಮತ್ತು ಪುಣೆ ಜಿಲ್ಲಾಡಳಿತದೊಂದಿಗೆ ಅವರು ಮಹಾರಾಷ್ಟ್ರ ಮತ್ತು ಭಾರತದ ಕ್ರೀಡಾ ಭವಿಷ್ಯಕ್ಕೆ ಹೊಸ ಸೈಕ್ಲಿಂಗ್ ಕ್ರಾಂತಿಗೆ ಬದ್ಧತೆ ವ್ಯಕ್ತಪಡಿಸಿದರು.

ಯುಸಿಐ ವಾರ್ಷಿಕ ಕ್ಯಾಲೆಂಡರ್‌ನಲ್ಲಿನ ಪ್ರಮುಖ ಈವೆಂಟ್‌ ಆಗಿರುವ ಪುಣೆ ಗ್ರ್ಯಾಂಡ್ ಟೂರ್, ಭಾರತವನ್ನು ಅಂತರರಾಷ್ಟ್ರೀಯ ವೇದಿಕೆಯತ್ತ ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಿದೆ. ಒಟ್ಟು 437 ಕಿಲೋಮೀಟರ್‌ಗಳ ಟ್ರ್ಯಾಕ್‌ನಲ್ಲಿನ ಈ ಸ್ಪರ್ಧೆ ಪುಣೆ ಜಿಲ್ಲೆಯ ನಗರ ಪ್ರದೇಶಗಳು, ಪರ್ವತ ಪ್ರದೇಶಗಳಲ್ಲಿ ನಡೆಯಲಿದೆ.

ಕಾರ್ಯಕ್ರಮದ ವೇಳೆ ಮಾತನಾಡಿದ ಮಾನ್ಯ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ “ಭಾರತದ ಮೊದಲ ಯುಸಿಐ 2.2 ಅಂತರರಾಷ್ಟ್ರೀಯ ಸೈಕ್ಲಿಂಗ್ ಈವೆಂಟ್ ಪುಣೆಯಲ್ಲಿ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ. ಪುಣೆ ಗ್ರ್ಯಾಂಡ್ ಟೂರ್ ನಮ್ಮ ರಾಜ್ಯದ ಕ್ರೀಡಾ ದೃಷ್ಟಿಯ ಪರಿವರ್ತನೆಯ ಕ್ಷಣವಾಗಿದೆ. ಪುಣೆ ಗ್ರ್ಯಾಂಡ್ ಟೂರ್ ಭಾರತದ ಸೈಕ್ಲಿಂಗ್ ಪ್ರತಿಭೆಗಳನ್ನು ಬೆಳೆಸಲಿದೆ ಎಂದರು.

ಮಾನ್ಯ ಉಪಮುಖ್ಯಮಂತ್ರಿ ಶ್ರೀ ಅಜಿತ್ ಪವಾರ್ ಮಾತನಾಡಿ ‘ಸೈಕ್ಲಿಂಗ್ ಕೇವಲ ಒಂದು ಕ್ರೀಡೆ ಅಲ್ಲ; ಇದು ಅಂತರರಾಷ್ಟ್ರೀಯ ಚಳುವಳಿ. ಭಾರತ ಇನ್ನೂ ಈ ಜಾಗತಿಕ ಸಮುದಾಯದ ಭಾಗವಾಗಿಲ್ಲ. ಇಂದು ನಾವು ಪುಣೆ, ಮಹಾರಾಷ್ಟ್ರ ಮತ್ತು ಭಾರತದ ಪರವಾಗಿ ಇತಿಹಾಸ ನಿರ್ಮಿಸುತ್ತಿದ್ದು, ಜಾಗತಿಕ ಸೈಕ್ಲಿಂಗ್ ನತ್ತ ಮೊದಲ ಹೆಜ್ಜೆ ಇಟ್ಟಿದ್ದೇವೆ ಎಂದರು.

ಪುಣೆ ಜಿಲ್ಲಾ ಆಯುಕ್ತ ಹಾಗೂ ಪುಣೆ ಗ್ರ್ಯಾಂಡ್ ಟೂರ್ ಇನ್‌ಚಾರ್ಜ್ ಶ್ರೀ ಜಿತೇಂದ್ರ ದುಡಿ ಮಾತನಾಡಿ “ಪುಣೆ ಗ್ರ್ಯಾಂಡ್ ಟೂರ್ ಮೂಲಕ ಸೈಕ್ಲಿಂಗ್ ಭಾರತ ಜಾಗತಿಕ ವೇದಿಕೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ನಮ್ಮ ಉದ್ದೇಶ ಯುವಜನರನ್ನು ವೃತ್ತಿಪರ ಸೈಕ್ಲಿಂಗ್ ಕಡೆಗೆ ಪ್ರೇರೇಪಿಸುವುದು ಎಂದರು. ಪುಣೆ ಗ್ರ್ಯಾಂಡ್ ಟೂರ್ ಆರಂಭದೊಂದಿಗೆ ಭಾರತವು ಹೊಸ ಸೈಕ್ಲಿಂಗ್ ಸಂಸ್ಕೃತಿಯನ್ನು ನಿರ್ಮಿಸಲು ಸಜ್ಜಾಗಿದೆ.

Exit mobile version