ಫಾರ್ಮ್ ನಲ್ಲಿದ್ದಾಗಲೇ ಅವಳ ತಂದೆಯ ಮೇಲೆ ಮತಾಂತರ ಆರೋಪ ಹೊರಿಸಿ ಮುಂಬೈನ ಪ್ರಸಿದ್ಧ ಕ್ಲಬ್ ಒಂದಕ್ಕೆ ಸದಸ್ಯತ್ವ ಮತ್ತು ಪ್ರವೇಶವನ್ನು ನಿರಾಕರಿಸಲಾಗಿತು. ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವದ ರೇಸ್ ನಲ್ಲಿರುವಾಗಲೇ ಈ ಸಮಸ್ಯೆ ಅವಳನ್ನು ಕಾಡಿತು. ಮತ್ತೆ ಸಾಲು ಸಾಲು ಫೆಲ್ಯೂರ್ಗಳು. ತಂಡವನ್ನು ಹಲವಾರು ಪಂದ್ಯ ಗೆಲ್ಲಿಸಿಕೊಟ್ಟಿದ್ದರೂ ಅವಳಿಗೆ ವಿಶ್ವಕಪ್ ಪ್ಲೇಯಿಂಗ್ ಇಲೆವನಿನಲ್ಲಿ ಅವಕಾಶ ನಿರಾಕರಿಸಲಾಯಿತು.ಮಾನಸಿಕವಾಗಿ ಕುಗ್ಗಿ ಹೋಗಿ ಹತಾಶಳಾಗಿದ್ದ ಜೇಮಿಮಾಗೆ ಅದು ಅತ್ಯಂತ ನೋವಿನ ಸಂಗತಿಯಾಗಿತ್ತು.
ಭಾರತೀಯ ಮಹಿಳಾ ತಂಡ ಮೊದಲೇ ಸೇನಾ ತಂಡಗಳ ವಿರುದ್ಧ ಗೆಲ್ಲುವ ಮಾನಸಿಕ ಸಿದ್ಧತೆಯನ್ನು ಇದುವರೆಗೂ ಮಾಡಿಕೊಂಡಿರಲಿಲ್ಲ. ಅಂತಹ ಸಂಧಿಗ್ಧತೆಯಲ್ಲಿ ತಂಡದಲ್ಲಿ ಆಲ್ ರೌಂಡರ್ಗಳಿಗೆ ಮಣೆ ಹಾಕಬೇಕೆನ್ನುವ ಒತ್ತಡ ಆಯ್ಕೆ ಸಮಿತಿಯವರಿಗೆ ಇದ್ದುದರಿಂದಾಗಿ ಅತೀ ಪ್ರಮುಖ ಪಂದ್ಯವಾಗಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜಮೀಮಾಗೆ ಅವಕಾಶ ಸಿಕ್ಕಿರಲಿಲ್ಲ.
ಆಸ್ಟ್ರೇಲಿಯಾದ ಲೆಗಿ ಕಿಂಗ್ ಎಸೆತವನ್ನು ಸ್ವೀಪ್ ಮಾಡಲು ಪ್ರಯತ್ನಿಸಿದಾಗ ಬ್ಯಾಟನ್ನು ವಂಚಿಸಿದ ಚೆಂಡು ಕಾಲಿಗೆ ಬಡಿದಾಗ ಇಡೀ ಆಸ್ಟ್ರೇಲಿಯಾ ತಂಡದವೇ ಕುಣಿದು ಕುಪ್ಪಳಿಸಿತ್ತು. ಆದರೆ ಅಂಪೈರ್ ತೀರ್ಪನ್ನು ಪುರಸ್ಕರಿಸಿರಲಿಲ್ಲ. ಆಸಿಸ್ ತೀರ್ಪನ್ನು ಚಾಲೆಂಜ್ ಮಾಡಿತು. ಪರಿಣಾಮ ಚೆಂಡು ವಿಕೆಟ್ ಗಿಂತಲೂ ಹೆಚ್ಚು ಎತ್ತರಕ್ಕೆ ಪುಟಿದದ್ದು ಸ್ಪಷ್ಟವಾಗಿತ್ತು. ಜೆಮೀಮಾಗೆ ಹೋದ ಜೀವ ಬಂದಂತಾಯಿತು. ಮುಂದೆ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟುತ್ತಲೇ ಹೋದಳು. ಒಂದು ಕಡೆ ಅನುಭವಿ ಆಟಗಾರರು ವಿಕೆಟ್ ಒಪ್ಪಿಸುತ್ತಲೇ ಇದ್ದರು.
ಜೆಮೀಮಾ ನಿರ್ಣಾಯಕ ಪಂದ್ಯದಲ್ಲಿ ಶತಕ ಬಾರಿಸಿ ತನ್ನ ಸ್ಥಿರತೆ ಮತ್ತು ಮನೋಧಾರ್ಡ್ಯವನ್ನು ಪ್ರದರ್ಶಿಸಿದಳು. ಸತತ ಹತ್ತಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದು ಈ ಬಾರಿಯ ಕಪ್ ಗೆಲ್ಲುವ ಫೇವರಿಟ್ ಆಗಿದ್ದ ಕಾಂಗರೂ, ಚಿಟ್ಟೆಯಂತಹ ಈ ಹುಡುಗಿಯ ಮುಂದೆ ಮಂಡಿಯೂರಿ ಕುಳಿತಿತು. ಇಡೀ ಮುಂಬೈ ತನ್ನ ಹುಡುಗಿಯನ್ನು ಹೊಗಳಿ ಕೊಂಡಾಡುವಾಗ ದೇಶದ ಕಣ್ಣಲ್ಲಿ ಆನಂದ ಭಾಷ್ಪದ ಮಳೆಯೇ ಸುರಿಯುತ್ತಿತ್ತು.
