ಪ್ರೊ ಕಬಡ್ಡಿ ಲೀಗ್ 2025 ಸೀಸನ್ 12 ಆಗಸ್ಟ್ 29, 2025 ರಿಂದ ಆರಂಭವಾಗಲಿದೆ ಎಂದು ಲೀಗ್‌ನ ಆಯೋಜಕರಾದ ಮಾಶಲ್ ಸ್ಪೋರ್ಟ್ಸ್ ಘೋಷಿಸಿದೆ. 12 ತಂಡಗಳು ಒಟ್ಟು 137 ಪಂದ್ಯಗಳಲ್ಲಿ, ಲೀಗ್ ಹಂತ ಮತ್ತು ಪ್ಲೇಆಫ್ ಸೇರಿದಂತೆ, ಕಣಕ್ಕಿಳಿಯಲಿವೆ. ಶೀಘ್ರದಲ್ಲೇ ಸಂಪೂರ್ಣ ವೇಳಾಪಟ್ಟಿ ಮತ್ತು ಕ್ರೀಡಾಂಗಣಗಳ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಕಬಡ್ಡಿ ಲೀಗ್ 2025 ರ 12ನೇ ಆವೃತ್ತಿಯು ದೇಶಾದ್ಯಂತ 12 ನಗರಗಳಲ್ಲಿ ನಡೆಯುವ ಸಾಧ್ಯತೆಯಿದೆ. ಕಳೆದ ಸೀಸನ್‌ನಲ್ಲಿ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣ, ನೋಯ್ಡಾ ಒಳಾಂಗಣ ಕ್ರೀಡಾಂಗಣ ಮತ್ತು ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದಿದ್ದವು. ಆದರೆ ಈ ಬಾರಿ, ಎಲ್ಲಾ ತಂಡಗಳ ಹೋಮ್ ಟೌನ್‌ಗಳಲ್ಲಿ ಪಂದ್ಯಗಳನ್ನು ಆಯೋಜಿಸುವ ಚರ್ಚೆ ನಡೆದಿದೆ. ಅದರಂತೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಬುಲ್ಸ್ ತಂಡದ ಪಂದ್ಯಗಳು ನಡೆಯುವ ನಿರೀಕ್ಷೆಯಿದೆ, ಇದರಿಂದ ಅಭಿಮಾನಿಗಳಿಗೆ ಗ್ಯಾಲರಿಯಲ್ಲಿ ಕೂತು ರೋಮಾಂಚಕ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಸಿಗಲಿದೆ.
ಬೆಂಗಳೂರು ಬುಲ್ಸ್‌ನ ಚಾಂಪಿಯನ್ ಕನಸು
ಬೆಂಗಳೂರು ಬುಲ್ಸ್ ತಂಡವು ಈ ಬಾರಿ ಬಲಿಷ್ಠ ತಂಡವನ್ನು ರೂಪಿಸಿದ್ದು, ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಗುರಿಯನ್ನು ಹೊಂದಿದೆ. ಸೀಸನ್ 6 ರಲ್ಲಿ ಚಾಂಪಿಯನ್ ಆಗಿದ್ದ ಬಳಿಕ ಬುಲ್ಸ್‌ಗೆ ಮತ್ತೊಮ್ಮೆ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ಕೋಚ್ ಬಿ.ಸಿ. ರಮೇಶ್ ಅವರ ಮಾರ್ಗದರ್ಶನದಲ್ಲಿ ಈ ಬಾರಿ ತಂಡವು ಹಳೆಯ ಯಶಸ್ಸನ್ನು ಮರಳಿ ಪಡೆಯುವ ವಿಶ್ವಾಸದಲ್ಲಿದೆ.
ಬೆಂಗಳೂರು ಬುಲ್ಸ್ ತಂಡ
ಆಕಾಶ್ ಶಿಂಧೆ, ಮಹಿಪಾಲ್, ಶುಭಂ ಬಿಟಕೆ, ಮಂಜೀತ್, ಪಂಕಜ್, ಗಣೇಶ ಬಿ, ಪಿರಟಿ ಶ್ರೀಶಿವತೇಜೇಶ್, ಆಶಿಶ್ ಮಲಿಕ್, ಯೋಗೇಶ್ ದಹಿಯಾ, ಸಂಜಯ್ ಧುಲ್, ಅಂಕುಶ್ ರಾಠಿ, ಸತ್ಯಪ್ಪ ಮಟ್ಟಿ, ಮನೀಶ್, ಶುಭಂ ರಹಾಟೆ, ಲಕ್ಕಿ ಕುಮಾರ್, ದೀಪಕ್ ಎಸ್.ಧೀರಜ್, ಅಲಿರೇಝ ಮಿಝೈರ್ಯಾನ್, ಅಹ್ಮದ್‌ರೆಝ ಅಸ್ಗರಿ, ಅಮಿತ್ ಸಿಂಗ್ ಠಾಕೂರ್, ಸಾಹಿಲ್ ಸುಹಾಸ್ ರಾಣೆ, ಸಚಿನ್, ಚಂದ್ರನಾಯಕ್ ಎಂ.
ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯು ಡಬಲ್ ರೌಂಡ್-ರಾಬಿನ್ ಫಾರ್ಮ್ಯಾಟ್‌ನಲ್ಲಿ ನಡೆಯಲಿದ್ದು, 12 ತಂಡಗಳು ತಲಾ ಎರಡು ಬಾರಿ ಪರಸ್ಪರ ಎದುರಿಸಲಿವೆ. ಒಟ್ಟು 137 ಪಂದ್ಯಗಳು ಲೀಗ್ ಹಂತ ಮತ್ತು ಪ್ಲೇಆಫ್‌ಗಳನ್ನು ಒಳಗೊಂಡಿರುತ್ತವೆ. ಮೇ 31 ಮತ್ತು ಜೂನ್ 1 ರಂದು ಮುಂಬೈನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ 121 ಆಟಗಾರರನ್ನು 12 ತಂಡಗಳು ಖರೀದಿಸಿವೆ. ಈ ಬಾರಿಯ ಹರಾಜಿನಲ್ಲಿ ಗುಜರಾತ್ ಜೈಂಟ್ಸ್‌ಗೆ ಖರೀದಾದ ಇರಾನ್‌ನ ಮೊಹಮ್ಮದ್‌ರೆಝ ಶಾದ್‌ಲೂಯಿ 2.23 ಕೋಟಿ ರೂಪಾಯಿಗಳೊಂದಿಗೆ ಅತ್ಯಂತ ದುಬಾರಿ ಆಟಗಾರನಾಗಿದ್ದಾರೆ, ಆದರೆ ದೇವಾಂಕ್ ದಲಾಲ್ 2.205 ಕೋಟಿ ರೂಪಾಯಿಗಳೊಂದಿಗೆ ಅತ್ಯಂತ ದುಬಾರಿ ಭಾರತೀಯ ಆಟಗಾರನಾಗಿದ್ದಾರೆ.